Site icon Vistara News

ಹರಿ ಕಥೆ ಅಲ್ಲ ಗಿರಿ ಕಥೆ | ಟ್ರೇಲರ್‌ ರಿಲೀಸ್‌, ಭಾರಿ ನಗಿಸ್ತಾ ಇದ್ದಾರೆ ಶೆಟ್ರು

ಹರಿ ಕಥೆ ಅಲ್ಲ ಗಿರಿ ಕಥೆ

ಬೆಂಗಳೂರು : ರಿಷಭ್‌ ಶೆಟ್ಟಿ ನಟನೆಯ ಹರಿ ಕಥೆ ಅಲ್ಲ ಗಿರಿ ಕಥೆ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಆರಂಭದಿಂದ ಅಂತ್ಯದವರೆಗೂ ಕಾಮಿಡಿ ಸನ್ನಿವೇಶಗಳೊಂದಿಗೆ ನಗೆಯಲ್ಲಿ ತೇಲಾಡುವಂತೆ ರಂಜಿಸುತ್ತಿದೆ ಟ್ರೇಲರ್‌.

ನಿರ್ದೇಶಕನಾಗಬೇಕೆಂಬ ಗುರಿ ಹೊಂದಿದವನು ಏನೆಲ್ಲಾ ಕಷ್ಟಗಳನ್ನು ಫೇಸ್‌ ಮಾಡುತ್ತಾನೆ ಎಂದು ಮತ್ತು ಅವನು ಎದುರಿಸುವ ಸಂಕಷ್ಟಗಳ ಪ್ರತೀ ಸನ್ನಿವೇಶವನ್ನು ತೋರಿಸಿ ಕೊಟ್ಟಿದ್ದಾರೆ. ಪ್ರಮೋದ್‌ ಶೆಟ್ಟಿ ಅವರು ಪೊಲೀಸ್‌ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ರಿಷಭ್‌ ಮತ್ತು ಅವರ ಜೋಡಿ ತೆರೆಯ ಮೇಲೆ ಸಿನಿಪ್ರಿಯರನ್ನು ರಂಜಿಸುವುದರಲ್ಲಿ ಸಂಶಯವೇ ಇಲ್ಲ.

ಇದನ್ನೂ ಓದಿ | ಹರಿ ಕಥೆ ಅಲ್ಲ ಗಿರಿ ಕಥೆ | ಶೆಟ್ರು ಹೇಳಲಿದ್ದಾರೆ ಡೈರೆಕ್ಟ್ರ ಕಥೆ!

ಟ್ರೇಲರ್‌ನಲ್ಲಿ ಪಂಚ್‌ ಡೈಲಾಗ್‌ಗಳಿದ್ದು, ಪ್ರತೀ ಪಾತ್ರಕ್ಕೂ ಪ್ರಾಮುಖ್ಯ ನೀಡುವಂತೆ ಇದೆ. ಯೋಗರಾಜ್‌ ಭಟ್‌ ಅವರು ಕಾಮಿಡಿ ಪಂಚ್‌ ಡೈಲಾಗ್‌ಗೆ ಆಗಾಗ ಎಂಟ್ರಿ ಕೊಡುತ್ತಾ, ಸಾಥ್‌ ನೀಡಿದ್ದಾರೆ.

ಚಿತ್ರ ಇದೇ ಜೂನ್ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ರಿಷಭ್ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕೆ ಕರಣ್ ಅನಂತ್ ಮತ್ತು ಅನಿರುದ್ಧ ಇಬ್ಬರೂ ನಿರ್ದೇಶನ ಮಾಡಿದ್ದಾರೆ.  

ಕೆಲ ದಿನಗಳ ಹಿಂದೆ ಕಾಂತಾರ ಚಿತ್ರದ ಬಿಡುಗಡೆ ದಿನಾಂಕವನ್ನೂ ಚಿತ್ರತಂಡ ತಿಳಿಸಿದ್ದು, ಚಿತ್ರವು ಸೆಪ್ಟೆಂಬರ್ 30ರಂದು ಅಂದರೆ ದಸರಾ ಸಮಯದಲ್ಲಿ ಬಿಡುಗಡೆ ಮಾಡಲಿದೆ. ಈ ಚಿತ್ರದಲ್ಲಿ ರಿಷಭ್​ ಶೆಟ್ಟಿ ಜೊತೆ ಅಚ್ಯುತ್ ಕುಮಾರ್, ಪ್ರಮೋದ್​ ಶಟ್ಟಿ ಮುಂತಾದವರು ನಟಿಸುತ್ತಿದ್ದು, ರಿಷ‌ಭ್‌ ಅವರ ಬಹುತೇಕ ಚಿತ್ರಗಳಿಗೆ ಸಂಗೀತ ನೀಡಿರುವ ಅಜನೀಶ್​ ಲೋಕ್​ನಾಥ್​ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ | ದಸರಾ ಹಬ್ಬಕ್ಕೆ ಬರಲಿದೆ ರಿಷಭ್‌ ಶೆಟ್ಟಿಯ ಕಾಂತಾರ, ಕಥೆ ಏನಿರಬಹುದು?

Exit mobile version