Site icon Vistara News

Harshika Poonacha : ಮದುವೆಗೆ ಮುನ್ನವೇ ಭುವನ್‌ ಹೊಸ ಮನೆ ಪ್ರವೇಶ ಮಾಡಿದ ಹರ್ಷಿಕಾ ಪೂಣಚ್ಚ

Harshika Poonacha

ಬೆಂಗಳೂರು: ಸ್ಯಾಂಡಲ್‌ವುಡ್‌ನ ಕ್ಯೂಟ್‌ ಜೋಡಿ ಹರ್ಷಿಕಾ ಪೂಣಚ್ಚ (Harshika poonacha) ಮತ್ತು ಭುವನ್‌ ಪೊನ್ನಪ್ಪ (Bhuvan Ponnappa) ಅವರ ಮದುವೆ ಆಗಸ್ಟ್‌ 24ರಂದು ವಿರಾಜಪೇಟೆಯಲ್ಲಿ ನಡೆಯಲಿದೆ. ಇಂಟ್ರೆಸ್ಟಿಂಗ್‌ ಸಂಗತಿ ಎಂದರೆ ಹರ್ಷಿಕಾ ಪೂಣಚ್ಚ ಅವರು ಆಗಲೇ ಭುವನ್‌ ಪೂಣಚ್ಚ ಅವರ ಗೃಹ ಪ್ರವೇಶ (House Warming Ceremony) ಮಾಡಿದ್ದಾರೆ.

ದೀಪ ಹಿಡಿದು ಭುವನ್‌ ಮನೆ ಪ್ರವೇಶ ಮಾಡುತ್ತಿರುವ ಹರ್ಷಿಕಾ ಪೂಣಚ್ಚ

ಭುವನ್‌ ಪೊನ್ನಪ್ಪ ಅವರು ವಿರಾಜಪೇಟೆಯ ಕಾಫಿ ತೋಟದಲ್ಲಿ ಒಂದು ಹೊಸ ಮನೆಯನ್ನು ಕಟ್ಟಿಸಿದ್ದಾರೆ. ಕಾಫಿ ತೋಟದ ನಡುವೆ ಮೈದಳೆದು ನಿಂತಿರುವ ಇದು ಗೆಳತಿ ಹರ್ಷಿಕಾ ಪೂಣಚ್ಚ ಅವರಿಗಾಗಿಯೇ ಭುವನ್‌ ಕಟ್ಟಿಸಿದ ಹೊಸ ಮನೆ. ಮಂಗಳವಾರ ಇದರ ಗೃಹ ಪ್ರವೇಶ ಕಾರ್ಯಕ್ರಮ ಕುಟುಂಬಿಕರ ಸಮ್ಮುಖದಲ್ಲಿ ಸರಳವಾಗಿ ಆದರೆ, ಸಂಭ್ರಮದಿಂದ ಜರುಗಿತು.

ಮದುವೆಗೆ ಮೊದಲೇ ಮನೆಯ ಗೃಹ ಪ್ರವೇಶ ಹಮ್ಮಿಕೊಳ್ಳಲಾಗಿದ್ದು, ಇದರ ಸಾಂಪ್ರದಾಯಿಕ ಆಚರಣೆಗಳಲ್ಲಿ ಹರ್ಷಿಕಾ ಪೂಣಚ್ಚ ಅವರು ಪಾಲ್ಗೊಂಡರು. ಪಕ್ಕದ್ಮನೆ ಹುಡುಗಿಯಂತೆ ಸೀದಾಸಾದಾ ದಿರಸು ತೊಟ್ಟಿದ್ದ ಹರ್ಷಿಕಾ ಅವರು ಸಂಪ್ರದಾಯದಂತೆ ದೀಪ ಹಿಡಿದು ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಹಿಂದೆ ಮನೆಯ ಇತರೇ ಸಾಮಗ್ರಿಗಳನ್ನು ಹಿಡಿದು ಇತರರು ಹಿಂಬಾಲಿಸಿದರು.

ಸಾಮಾನ್ಯವಾಗಿ ಈ ಆಚರಣೆಯಲ್ಲಿ ಪಾಲ್ಗೊಳ್ಳುವುದು ಮನೆಯ ಯಜಮಾನಿ. ಅಂದರೆ ಮನೆ ಕಟ್ಟಿಸಿದವರ ಪತ್ನಿ. ಇಲ್ಲಿ ಭುವನ್‌ಗೂ ಹರ್ಷಿಕಾ ಪೂಣಚ್ಚ ಅವರಿಗೆ ಇನ್ನೂ ಮದುವೆಯಾಗಿಲ್ಲವಾದರೂ ಹರ್ಷಿಕಾ ಭಾವಿ ಪತ್ನಿ ಎಂಬ ನೆಲೆಯಲ್ಲಿ ಸಂಪ್ರದಾಯ ನೆರವೇರಿಸಿದರು.

ಗುಂಡು ಹಾರಿಸಿ ಶುಭ ಕಾರ್ಯಕ್ಕೆ ಚಾಲನೆ ಕೊಟ್ಟ ಭುವನ್‌

ಕೊಡಗಿನಲ್ಲಿ ಯಾವುದೇ ಶುಭ ಕಾರ್ಯ ಆರಂಭವಾಗಬೇಕಾದರೂ ಗುಂಡು ಹಾರಿಸಿ ಘೋಷಿಸಬೇಕು. ಇಲ್ಲಿ ಮನೆಯ ಗೃಹ ಪ್ರವೇಶದ ಆರಂಭವನ್ನು ಸ್ವತಃ ಭುವನ್‌ ಅವರೇ ಗುಂಡು ಹಾರಿಸಿ ಘೋಷಿಸಿದರು. ಕೋವಿಯನ್ನು ಎತ್ತಿ ಹಿಡಿದು ಗುಂಡು ಹಾರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಇದನ್ನೂ ಓದಿ: Harshika Poonacha : ಹರ್ಷಿಕಾ ಪೂಣಚ್ಚಗೆ ಮದುವೆಗೆ ಮುನ್ನವೇ ಭರ್ಜರಿ ಗಿಫ್ಟ್‌; ಜಯಮಾಲಾಗೆ ಚಿಟ್ಟೆ ಮೇಲೆ ಯಾಕಿಷ್ಟು ಪ್ರೀತಿ?

ಭರದಿಂದ ಸಾಗುತ್ತಿದೆ ಮದುವೆ ಸಿದ್ಧತೆ

ಆಗಸ್ಟ್‌ 24ರಂದು ವಿರಾಜಪೇಟೆಯ ‘ಅಮ್ಮತಿ ಕೊಡವ ಸಮಾಜ’ದ ಸಭಾಂಗಣದಲ್ಲಿ ಈ ಸ್ಟಾರ್‌ ಜೋಡಿಯ ಮದುವೆ (Harshika Poonacha Bhuvan Ponnappa Marriage) ಕೊಡವ ಶೈಲಿಯಲ್ಲಿ ಅದ್ಧೂರಿಯಾಗಿ (Marriage in Kodava style) ನಡೆಯಲಿದೆ. ಈ ಜೋಡಿ ಈಗಾಗಲೇ ಇಡೀ ಸ್ಯಾಂಡಲ್‌ವುಡ್‌ ಮತ್ತು ಹಲವು ರಾಜಕಾರಣಿಗಳಿಗೆ ವೈಯಕ್ತಿಕವಾಗಿ ಆಹ್ವಾನ ನೀಡಿ ಸ್ವಾಗತ ನೀಡಲಾಗಿದೆ. ಇದಲ್ಲದೆ ಕೊಡಗಿನಲ್ಲಿ ಇವರ ಕುಟುಂಬ ಕೂಡಾ ಜನಪ್ರಿಯವಾಗಿದೆ. ಹೀಗಾಗಿ ಭಾರಿ ಸಂಖ್ಯೆಯಲ್ಲಿ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹರ್ಷಿಕಾ ಪೂಣಚ್ಚ ಮತ್ತು ಭುವನ್‌ ಇಬ್ಬರಿಗೂ ದೊಡ್ಡ ಮಟ್ಟದ ಅಭಿಮಾನಿಗಳಿದ್ದಾರೆ. ಹೀಗಾಗಿ ಅವರೂ ಅಲ್ಲಿಗೆ ಹೋಗುವ ಸಾಧ್ಯತೆ ಇದೆ.

ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದಾರೆ. ಇಬ್ಬರ ಗೆಳೆಯರು, ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಗಳ ಸಹಕಾರದೊಂದಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಅಂತೂ ಮದುವೆಯ ದಿನ ಎಲ್ಲ ಕಡೆಯಿಂದ ವಿರಾಜಪೇಟೆಯ ಕಡೆಗೆ ಚಿತ್ರರಂಗ, ರಾಜಕಾರಣಿಗಳ ದೌಡು ಇರಲಿದೆ.

Exit mobile version