Harshika Poonacha: ಹರ್ಷಿಕಾ-ಭುವನ್ ಮದುವೆ ಸಂಭ್ರಮದ ಫೋಟೊಗಳು Yashaswi Devadiga 1 ವರ್ಷ ago ಹರ್ಷಿಕಾ ಪೂಣಚ್ಚ (Harshika Poonacha) ಭುವನ್ ಪೊನ್ನಣ್ಣ (Bhuvann Ponnannaa) ಆಗಸ್ಟ್ 24ರಂದು ಕೊಡವ ಶೈಲಿಯಂತೆ ವಿವಾಹ ನಡೆದಿದೆ. ಎರಡನೇ ದಿನ ಬೆಳಿಗ್ಗೆ ಹರ್ಷಿಕಾಗೆ ಬಳೆ ಶಾಸ್ತ್ರ ತೊಡಿಸುವ ಕಾರ್ಯಕ್ರಮ ಆಯಿತು. ಬಳಿಕ ಪೊಂಬಣ ಪೂಜೆ ಮಾಡಿಸಲಾಯಿತು. ಕೊಡಗಿನ ವಿರಾಟ್‌ಪೇಟೆಯಲ್ಲಿ ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ಜರುಗಿದೆ. ಕೊಡವ ಲುಕ್‌ನಲ್ಲಿ ನವಜೋಡಿ ಮಿಂಚಿದ್ದಾರೆ. ಹರ್ಷಿಕಾ ದಂಪತಿಯ ಮದುವೆಗೆ ಗೋಲ್ಡನ್ ಸ್ಟಾರ್ ಗಣೇಶ್, ದೊಡ್ಡಣ್ಣ, ತಬಲಾ ನಾಣಿ, ಮಾಜಿ ಸಿಎಂ ಯಡಿಯೂರಪ್ಪ, ಮುರುಗೇಶ್ ನಿರಾಣಿ, ಪೂಜಾ ಗಾಂಧಿ ಸೇರಿದಂತೆ ಹಲವರು ಭಾಗಿಯಾಗಿ ಶುಭ ಹಾರೈಸಿದರು. 6 ವರ್ಷದಿಂದ ಭುವನ್ ಹಾಗೂ ಹರ್ಷಿತಾ ಪೂಣಚ್ಚ ಪ್ರೀತಿಯಲ್ಲಿದ್ದರು. ಇದೀಗ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ ಜೋಡಿ. ಪಿ.ಯು.ಸಿ ಚಿತ್ರದ ಮೂಲಕ ನಾಯಕಿಯಾಗಿ ಹರ್ಷಿಕಾ ಹೊರಹೊಮ್ಮಿದ್ದರು. ಮೊದಲ ಬಾರಿಗೆ ಪುನೀತ್ ಅಭಿನಯದ ಜಾಕಿ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ ಬಳಿಕ ಅವರು ಹಿಂದಿರುಗಿ ನೋಡಿಲ್ಲ.