Harshika Poonacha: ಹರ್ಷಿಕಾ-ಭುವನ್‌ ಮದುವೆ ಸಂಭ್ರಮದ ಫೋಟೊಗಳು - Vistara News

South Cinema

Harshika Poonacha: ಹರ್ಷಿಕಾ-ಭುವನ್‌ ಮದುವೆ ಸಂಭ್ರಮದ ಫೋಟೊಗಳು

Harshika Poonacha: ಹರ್ಷಿಕಾ ದಂಪತಿಯ ಮದುವೆಗೆ ಗೋಲ್ಡನ್ ಸ್ಟಾರ್ ಗಣೇಶ್, ದೊಡ್ಡಣ್ಣ, ತಬಲಾ ನಾಣಿ, ಮಾಜಿ ಸಿಎಂ ಯಡಿಯೂರಪ್ಪ, ಮುರುಗೇಶ್ ನಿರಾಣಿ, ಪೂಜಾ ಗಾಂಧಿ ಸೇರಿದಂತೆ ಹಲವರು ಭಾಗಿಯಾಗಿ ಶುಭ ಹಾರೈಸಿದರು.

VISTARANEWS.COM


on

Harshika Poonacha And Bhuvan Ponappa
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Harshika Poonacha
ಹರ್ಷಿಕಾ ಪೂಣಚ್ಚ (Harshika Poonacha) ಭುವನ್ ಪೊನ್ನಣ್ಣ (Bhuvann Ponnannaa) ಆಗಸ್ಟ್ 24ರಂದು ಕೊಡವ ಶೈಲಿಯಂತೆ ವಿವಾಹ ನಡೆದಿದೆ. 
Harshika Poonacha
ಎರಡನೇ ದಿನ ಬೆಳಿಗ್ಗೆ ಹರ್ಷಿಕಾಗೆ ಬಳೆ ಶಾಸ್ತ್ರ ತೊಡಿಸುವ ಕಾರ್ಯಕ್ರಮ ಆಯಿತು. ಬಳಿಕ ಪೊಂಬಣ ಪೂಜೆ ಮಾಡಿಸಲಾಯಿತು.
Harshika Poonacha
ಕೊಡಗಿನ ವಿರಾಟ್‌ಪೇಟೆಯಲ್ಲಿ ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ಜರುಗಿದೆ. ಕೊಡವ ಲುಕ್‌ನಲ್ಲಿ ನವಜೋಡಿ ಮಿಂಚಿದ್ದಾರೆ.
Harshika Poonacha
ಹರ್ಷಿಕಾ ದಂಪತಿಯ ಮದುವೆಗೆ ಗೋಲ್ಡನ್ ಸ್ಟಾರ್ ಗಣೇಶ್, ದೊಡ್ಡಣ್ಣ, ತಬಲಾ ನಾಣಿ, ಮಾಜಿ ಸಿಎಂ ಯಡಿಯೂರಪ್ಪ, ಮುರುಗೇಶ್ ನಿರಾಣಿ, ಪೂಜಾ ಗಾಂಧಿ ಸೇರಿದಂತೆ ಹಲವರು ಭಾಗಿಯಾಗಿ ಶುಭ ಹಾರೈಸಿದರು.
Harshika Poonacha
6 ವರ್ಷದಿಂದ ಭುವನ್ ಹಾಗೂ ಹರ್ಷಿತಾ ಪೂಣಚ್ಚ ಪ್ರೀತಿಯಲ್ಲಿದ್ದರು. ಇದೀಗ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ ಜೋಡಿ.
Harshika Poonacha
ಪಿ.ಯು.ಸಿ ಚಿತ್ರದ ಮೂಲಕ ನಾಯಕಿಯಾಗಿ ಹರ್ಷಿಕಾ ಹೊರಹೊಮ್ಮಿದ್ದರು. ಮೊದಲ ಬಾರಿಗೆ ಪುನೀತ್ ಅಭಿನಯದ ಜಾಕಿ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ ಬಳಿಕ ಅವರು ಹಿಂದಿರುಗಿ ನೋಡಿಲ್ಲ.
ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕಾಲಿವುಡ್

Uma Ramanan: ಖ್ಯಾತ ಹಿನ್ನೆಲೆ ಗಾಯಕಿ ಉಮಾ ರಮಣನ್ ಇನ್ನಿಲ್ಲ

Uma Ramanan: ಉಮಾ ರಮಣನ್ ತರಬೇತಿ ಪಡೆದ ಶಾಸ್ತ್ರೀಯ ಗಾಯಕಿಯಾಗಿದ್ದು. 35 ವರ್ಷಗಳಲ್ಲಿ 6,000 ಕ್ಕೂ ಹೆಚ್ಚು ಸಂಗೀತ ಕಛೇರಿಗಳಲ್ಲಿ ಕಾಣಿಸಿಕೊಂಡರು. ಉಮಾ ಅವರು ತಮ್ಮ ಪತಿಗಾಗಿ ಹಲವಾರು ಹಾಡುಗಳನ್ನು ಹಾಡಿದ್ದರೂ, ಇಳಯರಾಜ ಅವರೊಂದಿಗಿನ ಅವರ ಒಡನಾಟವೇ ಅವರನ್ನು ಖ್ಯಾತಿಗೆ ತಂದಿತ್ತು.

VISTARANEWS.COM


on

Uma Ramanan dies in Chennai
Koo

ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕಿ ಉಮಾ ರಮಣನ್ (Uma Ramanan) ಅವರು ಬುಧವಾರ (ಮೇ.1) ನಿಧನರಾದರು. ಉಮಾ ರಮಣನ್ ಅವರಿಗೆ 72 ವರ್ಷ ವಯಸ್ಸಾಗಿತ್ತು. ತಮಿಳು ಚಿತ್ರರಂಗದಲ್ಲಿ ಅನೇಕ ಹಿಟ್‌ ಹಾಡುಗಳನ್ನು ಹಾಡಿದ್ದರು. ಸಾವಿನ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ. ಅಂತ್ಯಕ್ರಿಯೆಯ ಕುರಿತು ಕುಟುಂಬ ಮಾಹಿತಿ ಹಂಚಿಕೊಂಡಿಲ್ಲ.

ಉಮಾ ರಮಣನ್ ತರಬೇತಿ ಪಡೆದ ಶಾಸ್ತ್ರೀಯ ಗಾಯಕಿಯಾಗಿದ್ದು. 35 ವರ್ಷಗಳಲ್ಲಿ 6,000 ಕ್ಕೂ ಹೆಚ್ಚು ಸಂಗೀತ ಕಛೇರಿಗಳಲ್ಲಿ ಕಾಣಿಸಿಕೊಂಡರು. ಉಮಾ ಅವರು ತಮ್ಮ ಪತಿಗಾಗಿ ಹಲವಾರು ಹಾಡುಗಳನ್ನು ಹಾಡಿದ್ದರೂ, ಇಳಯರಾಜ ಅವರೊಂದಿಗಿನ ಅವರ ಒಡನಾಟವೇ ಅವರನ್ನು ಖ್ಯಾತಿಗೆ ತಂದಿತ್ತು.

ತಮಿಳು ಚಲನಚಿತ್ರ ‘ಪೂಂಗಾತವೆ ತಾಳ್ ತಿರವೈ’, ‘ನಿಜಲ್ಗಲ್’ನಲ್ಲಿ ಅವರ ಹಾಡಿಗೆ ಹೆಚ್ಚು ಜನಮನ್ನಣೆ ಸಿಕ್ಕಿತು. ಇಳಯರಾಜರೊಂದಿಗೆ 100ಕ್ಕೂ ಹೆಚ್ಚು ಹಾಡುಗಳಲ್ಲಿ ಕೆಲಸ ಮಾಡಿದರು. ಇಳಯರಾಜರಲ್ಲದೆ, ಅವರು ಸಂಗೀತ ಸಂಯೋಜಕರು, ವಿದ್ಯಾಸಾಗರ್, ಮಣಿ ಶರ್ಮಾ ಮತ್ತು ದೇವಾ ಜತೆಗೂ ಹಾಡುಗಳನ್ನು ಹಾಡಿದ್ದಾರೆ.

ಇದನ್ನೂ ಓದಿ: Lok Sabha Election : ತಮಿಳುನಾಡಿನಲ್ಲಿ ಕತ್ತೆಗಳ ಮೂಲಕ ಹಳ್ಳಿಗಳಿಗೆ ಇವಿಎಂ ತಲುಪಿಸಿದ ಅಧಿಕಾರಿಗಳು!

ಇಳಯರಾಜ ಅವರ ಕೆಲವು ಪ್ರಸಿದ್ಧ ಹಾಡುಗಳಲ್ಲಿ ‘ತೂರಲ್ ನಿನ್ನ ಪೊಚ್ಚು’ ಚಿತ್ರದ ‘ಭೂಪಾಲಂ ಇಸೈಕ್ಕುಮ್’, ‘ಆನಂದ ರಾಗಂ’ ‘ಪನ್ನರ್ ಪುಷ್ಪಂಗಳ’ ‘ಕಣ್ಮಣಿ ನೀ ವರ’ ‘ತೆಂಡ್ರಾಲೆ ಎನ್ನೈ ತೋಡು’, ‘ಒರು ಕೈದಿಯಿನ್ ದೈರ್ ಕೈದಿ’ಯ ‘ಪೊನ್ ಮಾನೇ’. , ‘ಅರಂಗೇತ್ರ ವೇಲೈ’ ಚಿತ್ರದ ‘ಆಗಾಯ ವೆನ್ನಿಲವೆ’ ಮತ್ತು ‘ಮಹಾನದಿ’ಯಿಂದ ‘ಶ್ರೀ ರಂಗ ರಂಗನಾಥನಿನ್’ ಸೇರಿವೆ. 1977 ರಲ್ಲಿ ‘ಶ್ರೀ ಕೃಷ್ಣ ಲೀಲಾ’ ಚಿತ್ರದ ಹಾಡಿನ ಮೂಲಕ ಗಾಯಕಿಯಾಗಿ ಪದಾರ್ಪಣೆ ಮಾಡಿದರು. ಈ ಹಾಡನ್ನು ಪತಿ ಎವಿ ರಮಣನ್ ಅವರೊಂದಿಗೆ ಹಾಡಿದರು.

ಉಮಾ ರಮಣನ್ ಅವರ ಕೊನೆಯ ಹಾಡು ವಿಜಯ್ ಅವರ ‘ತಿರುಪಾಚಿ’ ಗಾಗಿ ‘ಕಣ್ಣುಂ ಕಣ್ಣುಮ್ತನ್ ಕಳಂದಾಚು’ ಹಾಡು. ಮಣಿ ಶರ್ಮಾ ಸಂಯೋಜಿಸಿದ ಈ ಹಾಡನ್ನು ಹರೀಶ್ ರಾಘವೇಂದ್ರ ಮತ್ತು ಪ್ರೇಮ್‌ಜಿ ಅಮರೇನ್ ಅವರೊಂದಿಗೆ ಹಾಡಿದ್ದಾರೆ.

Continue Reading

ಟಾಲಿವುಡ್

Pushpa 2: ‘ಪುಷ್ಪ 2’ ಟೈಟಲ್​ ಸಾಂಗ್ ಔಟ್‌: ಸ್ಟೈಲಿಶ್‌ ಆಗಿ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್!

Pushpa 2: ಪುಷ್ಪ ಪುಷ್ಪʼ ಎಂದು ಶುರುವಾಗುವ ಹಾಡಿಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ಒದಗಿಸಿದ್ದಾರೆ. ತೆಲುಗು ಹಾಡಿಗೆ ಚಂದ್ರಬೋಸ್ ಸಾಹಿತ್ಯ ಬರೆದಿದ್ದು, ನಕಾಶ್ ಅಜೀಜ್, ದೀಪಕ್ ಬ್ಲೂ ಧ್ವನಿಯಾಗಿದ್ದಾರೆ. ಇದು ಪ್ಯಾನ್​ ಇಂಡಿಯಾ ಸಿನಿಮಾ. ತೆಲುಗು, ಹಿಂದಿ, ಕನ್ನಡ, ತಮಿಳು, ಮಲಯಾಳ, ಬೆಂಗಾಲಿ ಭಾಷೆಗಳಲ್ಲಿ ‘ಪುಷ್ಪ 2’ ಬಿಡುಗಡೆ ಆಗಲಿದೆ. ಈಗ ಈ ಎಲ್ಲ ಭಾಷೆಗಳಲ್ಲೂ ‘ಪುಷ್ಪ ಪುಷ್ಪ..’ ಹಾಡನ್ನು ಬಿಡುಗಡೆ ಮಾಡಲಾಗಿದೆ.

VISTARANEWS.COM


on

Pushpa 2 The Rule Title track out
Koo

ಬೆಂಗಳೂರು: ಟೀಸರ್ ಮೂಲಕ ನಿರೀಕ್ಷೆ ದುಪ್ಪಟ್ಟು ಮಾಡಿರುವ ʻಪುಷ್ಪ 2ʼ (Pushpa 2) ಸಿನಿಮಾದ ಮೊದಲ ಹಾಡು ಕಾರ್ಮಿಕರ ದಿನದ ಅಂಗವಾಗಿ ಬಿಡುಗಡೆ ಮಾಡಲಾಗಿದೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಬೆಂಗಾಲಿ ಸೇರಿ 6 ಭಾಷೆಯಲ್ಲಿ ಟೈಟಲ್ ಟ್ರ್ಯಾಕ್ ರಿಲೀಸ್ ಆಗಿದೆ. ಸಾಮಾನ್ಯ ಕಾರ್ಮಿಕ ಪುಷ್ಪರಾಜ್ ಶ್ರೀಮಂತನಾಗಿ ಬೆಳೆದ ರೀತಿಯನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದೆ.

ʻಪುಷ್ಪ ಪುಷ್ಪʼ ಎಂದು ಶುರುವಾಗುವ ಹಾಡಿಗೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ಒದಗಿಸಿದ್ದಾರೆ. ತೆಲುಗು ಹಾಡಿಗೆ ಚಂದ್ರಬೋಸ್ ಸಾಹಿತ್ಯ ಬರೆದಿದ್ದು, ನಕಾಶ್ ಅಜೀಜ್, ದೀಪಕ್ ಬ್ಲೂ ಧ್ವನಿಯಾಗಿದ್ದಾರೆ. ಕನ್ನಡ ಹಾಡಿಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಹಾಡಿದ್ದಾರೆ. ಪುಷ್ಪನಿಗೆ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದು, ಅಲ್ಲು ಅರ್ಜುನ್ ಜಭರ್ದಸ್ತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಅಲ್ಲು ಹೊಸ ಸ್ಟೈಲ್ ತಗ್ಗೋದೇ ಇಲ್ಲ ಎಂಬ ಡೈಲಾಗ್ ಫ್ಯಾನ್ಸ್ ಗೆ ಕಿಕ್ ಕೊಡ್ತಿದೆ. ಮೈತ್ರಿ ಮೂವೀ‌ ಮೇಕರ್ಸ್ ದುಬಾರಿ ಬಜೆಟ್ ನಲ್ಲಿ ಚಿತ್ರ ನಿರ್ಮಾಣ ಮಾಡಿದೆ.

ಇದು ಪ್ಯಾನ್​ ಇಂಡಿಯಾ ಸಿನಿಮಾ. ತೆಲುಗು, ಹಿಂದಿ, ಕನ್ನಡ, ತಮಿಳು, ಮಲಯಾಳ, ಬೆಂಗಾಲಿ ಭಾಷೆಗಳಲ್ಲಿ ‘ಪುಷ್ಪ 2’ ಬಿಡುಗಡೆ ಆಗಲಿದೆ. ಈಗ ಈ ಎಲ್ಲ ಭಾಷೆಗಳಲ್ಲೂ ‘ಪುಷ್ಪ ಪುಷ್ಪ..’ ಹಾಡನ್ನು ಬಿಡುಗಡೆ ಮಾಡಲಾಗಿದೆ. ಆಸ್ಕರ್​ ಪ್ರಶಸ್ತಿ ಪುರಸ್ಕೃತ ಚಂದ್ರಬೋಸ್​ ಅವರು ತೆಲುಗಿನಲ್ಲಿ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಕನ್ನಡ ವರ್ಷನ್​ಗೆ ವರದರಾಜ್​ ಚಿಕ್ಕಬಳ್ಳಾಪುರ ಅವರ ಸಾಹಿತ್ಯವಿದೆ. ಅಲ್ಲು ಅರ್ಜುನ್ ಗೆ ಜೊತೆಯಾಗಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹದ್ ಫಾಸಿಲ್ , ಡಾಲಿ ಧನಂಜಯ್ ಸೇರಿದಂತೆ ಹಲವರು ತಾರಾ ಬಳಗದಲ್ಲಿದ್ದಾರೆ. ಪ್ಯಾನ್ ಇಂಡಿಯಾ ಮಾತ್ರವಲ್ಲದೆ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಪುಷ್ಪ 2: ದಿ ರೂಲ್ ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Pushpa The Rule: ಬಿಗ್‌ ಅಪ್‌ಡೇಟ್‌ ಹಂಚಿಕೊಂಡ ʻಪುಷ್ಪ 2ʼ: ಮೇ 1ಕ್ಕೆ ತಂಡದಿಂದ ಗುಡ್‌ ನ್ಯೂಸ್‌!

ಭೂಷಣ್ ಕುಮಾರ್ ಸಂಸ್ಥೆಯು ಎಲ್ಲಾ ಭಾಷೆಗಳ ಸಂಗೀತ ಹಕ್ಕುಗಳಿಗಾಗಿ ಸುಮಾರು 60 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ವರದಿಯಾಗಿದೆ. ಈಗ ಚಿತ್ರದ ಆಡಿಯೊ ಹಕ್ಕುಗಳು ಬರೋಬ್ಬರಿ 60 ಕೋಟಿ ರೂ . ಮಾರಟವಾಗಿದೆ ಎಂದು ವರದಿಯಾಗಿದೆ.

ತೆಲುಗಿನ ಜತೆ ಕನ್ನಡ, ತಮಿಳು, ಹಿಂದಿ ಮುಂತಾದ ಭಾಷೆಗಳಲ್ಲೂ ಹಾಡುಗಳು ಸಿದ್ಧವಾಗುತ್ತಿವೆ. ಈ ಎಲ್ಲ ಭಾಷೆಯ ಆಡಿಯೊ ಹಕ್ಕುಗಳನ್ನು ಟಿ-ಸಿರೀಸ್​ ಸಂಸ್ಥೆ ಪಡೆದುಕೊಂಡಿದೆ. ದೇವಿ ಶ್ರೀ ಪ್ರಸಾದ್​ ಅವರು ‘ಪುಷ್ಪ 2’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. 2021ರಲ್ಲಿ ಬಿಡುಗಡೆ ಆದ ‘ಪುಷ್ಪ 1’ ಸಿನಿಮಾದ ಎಲ್ಲ ಹಾಡುಗಳು ಸೂಪರ್​ ಹಿಟ್​ ಆಗಿದ್ದವು.

`ಪುಷ್ಪ 2′ ಸಿನಿಮಾದ ಈ ಒಂದು ದೃಶ್ಯಕ್ಕೆ 50 ಕೋಟಿ ರೂ. ಖರ್ಚು!

ಪುಷ್ಪ 2 ಸಿನಿಮಾ ಕಂಡು ಸಿನಿಪ್ರಿಯರು ಬೆರಗಾಗಿದ್ದಾರೆ. ಟೀಸರ್‌ನಲ್ಲಿ ಹೆಚ್ಚು ಹೈಲೈಟ್‌ ಆಗಿದ್ದು, ಗಂಗಮ್ಮ ಜಾತ್ರೆ. ಈ ಜಾತ್ರೆಯಲ್ಲಿ ಅಲ್ಲು ಅರ್ಜುನ್ ಸೀರೆ ಧರಿಸಿ ಸಖತ್‌ ರಗಡ್‌ ಲುಕ್‌ನಲ್ಲಿ ಕಂಡಿದ್ದರು. ಈ ಸೆಟ್‌ಗೆ ಚಿತ್ರತಂಡ ಖರ್ಚು ಮಾಡಿದ್ದು ಐವತ್ತು ಕೋಟಿ ರೂ. ಎಂದು ವರದಿಯಾಗಿದೆ.

ಹೈದಬಾರಾದ್‌ನ ಗಂದಿಪೇಟ್‌ನಲ್ಲಿರುವ ಅಲ್ಲು ಸ್ಟುಡಿಯೋಸ್‌ನಲ್ಲಿ ಹಾಕಲಾದ ಈ ಸೆಟ್ ನಲ್ಲಿ ಪ್ರತಿ ದಿನ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಕಲಾವಿದರು ಕಂಡು ಬರುತ್ತಿದ್ದರು ಎಂದು ವರದಿಯಾಗಿದೆ. ಮುಂಬೈನಿಂದ ಮೋಕೊಬೋಟ್ ಕ್ಯಾಮೆರಾವನ್ನು ಸುಕುಮಾರ್ ತರಿಸಿಕೊಂಡಿದ್ದರು. ಇದೆಲ್ಲದಕ್ಕೂ ಖರ್ಚಾಗಿದ್ದು ಮೂವತ್ತು ಕೋಟಿ ರೂ. ಎನ್ನಲಾಗಿದೆ. ವಿಶೇಷ ಏನೆಂದರೆ, ನಿರ್ದೇಶಕ ಸುಕುಮಾರ್ ಅವರು ಈ ಜಾತ್ರೆಯ ಸನ್ನಿವೇಶವನ್ನು ಸುಮಾರು 30ಕ್ಕೂ ಅಧಿಕ ದಿನಗಳ ಕಾಲ ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡಿದ್ದಾರೆ.

ಸೆಟ್‌ ಅಲ್ಲದೇ ಕಲಾವಿದರ ಸಂಭಾವನೆ, ಮೇಕಪ್‌, ನೂರಾರು ಕಲಾವಿದರ ಸಂಭಾವನೆ, ವಿಶುವಲ್ ಎಫೆಕ್ಟ್ಸ್, ಪೋಸ್ಟ್ ಪ್ರೊಡಕ್ಷನ್ ವರ್ಕ್‌, ಸೌಂಡ್ ಡಿಸೈನ್ ಹೀಗೆ ಎಲ್ಲವೂ ಸೇರಿ ಬರೋಬ್ಬರಿ 50 ಕೋಟಿ ರೂ. ಖರ್ಚಾಗಿದೆ ಎಂದು ವರದಿಯಾಗಿದೆ.

Continue Reading

ಸ್ಯಾಂಡಲ್ ವುಡ್

Karthik Jayaram: ʻಅಶ್ವಿನಿ ನಕ್ಷತ್ರʼ ಖ್ಯಾತಿಯ ʻಜೆಕೆʼ ಹುಟ್ಟುಹಬ್ಬಕ್ಕೆ ಬಿಡುಗಡೆ ಆಯ್ತು ‘ದಿ ವೀರ್​’ ಫಸ್ಟ್​ ಲುಕ್​ ಪೋಸ್ಟರ್​!

Karthik Jayaram: ಜೆಕೆ ಹೊಸ ಸಿನಿಮಾಗೆ ʻವೀರ್ʼ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಯುವ ಪ್ರತಿಭೆ ಲೋಹಿತ್ ಆರ್ ನಾಯ್ಕ್ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೇ ಲೋಹಿತ್ ಅವರಿಗಿದು ಚೊಚ್ಚಲ ಪ್ರಯತ್ನ. ʻವೀರ್ ಸಿನಿಮಾ ಮೂಲಕ ಲೋಹಿತ್ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.

VISTARANEWS.COM


on

Karthik Jayaram The first look of The Veer motion Poster
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ಕಾರ್ತಿಕ್​ ಜಯರಾಮ್ (Karthik Jayaram)​ ಅಲಿಯಾಸ್​ ಜೆಕೆ ಮೇ.1ರಂದು ಜನುಮದಿನ ಆಚರಿಸಿಕೊಂಡರು. ʻಅಶ್ವಿನಿ ನಕ್ಷತ್ರʼ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ಜೆಕೆ ಆ ಬಳಿಕ ಬೆಳ್ಳಿತೆರೆಯತ್ತ ಮುಖ ಮಾಡಿದ್ದರು. ಹಲವು ಸಿನಿಮಾಗಳ ಮೂಲಕ ಕನ್ನಡ ಸಿನಿರಸಿಕರಿಂದಲೂ ಪ್ರೀತಿ ಪಡೆದಿರುವ ಜಯರಾಮ್ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

ಜೆಕೆ ಹೊಸ ಸಿನಿಮಾಗೆ ʻವೀರ್ʼ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಯುವ ಪ್ರತಿಭೆ ಲೋಹಿತ್ ಆರ್ ನಾಯ್ಕ್ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೇ ಲೋಹಿತ್ ಅವರಿಗಿದು ಚೊಚ್ಚಲ ಪ್ರಯತ್ನ. ʻವೀರ್ ಸಿನಿಮಾ ಮೂಲಕ ಲೋಹಿತ್ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಹರಿ ಸಂತು ಗರಡಿಯಲ್ಲಿ ಒಂದಷ್ಟು ವರ್ಷಗಳ ಕಾಲ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ದುಡಿದಿರುವ ಲೋಹಿತ್ ವೀರ್ ಚಿತ್ರದ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಇದನ್ನೂ ಓದಿ: Karthik Jayram: ಬಣ್ಣದಲೋಕಕ್ಕೆ ಗುಡ್ ಬೈ ಹೇಳ್ತಾರಾ ಜೆಕೆ? ಗೌರವ ಇಲ್ಲದ ಕಡೆ ಇರಲ್ಲ ಅಂದಿದ್ಯಾಕೆ?

ʻವೀರ್ʼ ಸಿನಿಮಾದಲ್ಲಿ ಜೆಕೆಗೆ ಜೋಡಿಯಾಗಿ ಪ್ರಣತಿ ನಾಯಕಿಯಾಗಿ ನಟಿಸಿದ್ದು, ರೋಚಿತ್, ಮಂಜು ಪಾವಗಡ ತಾರಾಬಳಗದಲ್ಲಿದ್ದಾರೆ. ಚಿತ್ರದಲ್ಲಿ ಜೆಕೆ ಮೂಗನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವೀರ್ ಸಿನಿಮಾವನ್ನು ರಾಜರಾಜೇಶ್ವರಿ ಪ್ರೊಡಕ್ಷನ್ ನಡಿ ಗೀತಾ ಜಯಶ್ರೀನಿವಾಸನ್ ಬಂಡವಾಳ ಹೂಡುತ್ತಿದ್ದಾರೆ. ಆರ್ ದೇವೇಂದ್ರ ಛಾಯಾಗ್ರಹಣ, ಧ್ರುವ ಎಂ ಬಿ ಸಂಗೀತ , ಆರ್ಯನ್ ಗೌಡ ಸಂಕಲನ, ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆ, ಹರಿ ಸಂತು ಸಾಹಿತ್ಯ ಹಾಡುಗಳಿವೆ. ಸದ್ಯ ವೀರ್ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.

ನಟ ಜೆಕೆಗೆ, ಕನ್ನಡ- ಹಿಂದಿ ಕಿರುತೆರೆಯಲ್ಲಿ ಯಶಸ್ಸು ಸಿಕ್ಕ ಹಾಗೇ ಸಿನಿಮಾದಲ್ಲಿ ಸಿಗಲಿಲ್ಲ. ಆದರೆ, ಜೆಕೆ ಅವರು ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.

ಬಣ್ಣದಲೋಕಕ್ಕೆ ಗುಡ್ ಬೈ ಎಂದಿದ್ದ ಜೆಕೆ

ʻʻನನಗೆ ಬರುವ ಸಿನಿಮಾ ಅವಕಾಶಗಳನ್ನು ತಪ್ಪಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕಿತ್ತು ಅದಕ್ಕೂ ಕಲ್ಲು ಹಾಕಿದರು. ದುಷ್ಟರಿಂದ ನಾನು ದೂರ ಇರುತ್ತೇನೆ. ಹಾಗಾಗಿ ಸಿನಿಮಾ ಇಂಡಸ್ಟ್ರಿ ನನಗೆ ಬೇಡ. ನನಗೆ ನೆಮ್ಮದಿ ಮುಖ್ಯ. ನನ್ನ ಮಾತು ಯಾರಿಗೆ ಅರ್ಥವಾಗಬೇಕು ಅವರಿಗೆ ಅರ್ಥ ಆದರೆ ಸಾಕು. ಇಂಡಸ್ಟ್ರಿಯಲ್ಲಿ 14ವರ್ಷದಿಂದ ಇದ್ದೇನೆ. ನಟನೆ ನನ್ನ ಫ್ಯಾಶನ್​​. ಈ ವೃತ್ತಿ ಇಲ್ಲ ಅಂದರೆ ಬೇರೆ ಇದೆ. ನಾನು ವಿದ್ಯಾವಂತʼʼ ಎಂದಿದ್ದರು. ‘ಗೌರವ ಇಲ್ಲದ ಕಡೆ ನಾನು ಇರಲ್ಲ. ಜನರಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ. ಚೆನ್ನಾಗಿದ್ದಾಗಲೇ ಸಿನಿಮಾ ಇಂಡಸ್ಟ್ರಿ ಬಿಡುತ್ತಿದ್ದೇನೆ’ ಎಂದಿದ್ದರು.

ಇತೀಚೆಗೆ ನಟ ಜೆಕೆ ತಮ್ಮ ಮದುವೆ ವಿಚಾರಕ್ಕೆ ಸಾಕಷ್ಟು ಸುದ್ದಿಯಾಗಿದ್ದರು. ಜೆಕೆ ಅವರು ಫ್ಯಾಷನ್ ಡಿಸೈನರ್ ಅಪರ್ಣಾ ಸಮಂತಾ ಜತೆಗಿನ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಕಳೆದ ಒಂದು ವರ್ಷದಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ. ಈ ಬಗ್ಗೆ ಅಪರ್ಣಾ, ಜೆಕೆ ಬರ್ತ್‌ಡೇ (ಮೇ1)ರಂದು ವಿಶ್ ಮಾಡುವ ಮೂಲಕ ಎಂಗೇಜ್ ಆಗಿರುವ ಬಗ್ಗೆ ಸುಳಿವು ನೀಡಿದ್ದರು.

Continue Reading

ಸ್ಯಾಂಡಲ್ ವುಡ್

Kantara Movie: ರಾಮೋಜಿ ಫಿಲ್ಮ್‌ ಸಿಟಿ ಮೀರಿಸುವಂತಿದೆಯಂತೆ ʻಕಾಂತಾರ ಚಾಪ್ಟರ್​ 1ʼ ಸೆಟ್‌!

Kantara Movie: ‘ಕಾಂತಾರ: ಚಾಪ್ಟರ್ 1’ ಚಿತ್ರೀಕರಣಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಇತ್ತೀಚಿನ ವರದಿಗಳ ಪ್ರಕಾರ ಕುಂದಾಪುರದ ಕರಾವಳಿ ಪ್ರದೇಶದಲ್ಲಿ ಅದ್ಧೂರಿ ಸೆಟ್​ ನಿರ್ಮಿಸಲಾಗಿದೆ. 20 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ವರದಿಯಾಗಿದೆ. ಚಿತ್ರದ ಹೆಚ್ಚಿನ ಭಾಗವನ್ನು ಕಾಡಿನಲ್ಲಿ ಚಿತ್ರೀಕರಿಸಲಿದ್ದರೆ, ಬೃಹತ್ ಸೆಟ್ ಡಬ್ಬಿಂಗ್ ಸ್ಟುಡಿಯೊ ಮತ್ತು ಎಡಿಟಿಂಗ್ ಸೂಟ್ ಒಳಗೊಂಡಿರುತ್ತದೆ ಎಂದು ವರದಿಯಾಗಿದೆ.

VISTARANEWS.COM


on

Kantara Movie Massive Set Constructed In Kundapura
Koo

ಬೆಂಗಳೂರು: ʼಕಾಂತಾರʼ ಪ್ಯಾನ್‌ (Kantara Movie) ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಹೀಗಾಗಿ ಪ್ರೀಕ್ವೆಲ್ ಕೂಡ ಕನ್ನಡದ ಜತೆಗೆ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. ಕೆಲವು ದಿನಗಳ ಹಿಂದೆ ಹೊರ ಬಿದ್ದ ಫಸ್ಟ್‌ ಲುಕ್‌ ಪೋಸ್ಟರ್‌ ದೇಶದ ಗಮನ ಸೆಳೆದಿತ್ತು. ಇದನ್ನೂ ಹೊಂಬಾಳೆ ಫಿಲ್ಮ್ಸ್‌ (Hombale Films) ನಿರ್ಮಿಸಲಿದ್ದು, ಅಂದಾಜು 125 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗುತ್ತಿದೆ ಎನ್ನಲಾಗಿದೆ. ‘ಕಾಂತಾರ: ಚಾಪ್ಟರ್ 1’ ಚಿತ್ರೀಕರಣಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಇತ್ತೀಚಿನ ವರದಿಗಳ ಪ್ರಕಾರ ಕುಂದಾಪುರದ ಕರಾವಳಿ ಪ್ರದೇಶದಲ್ಲಿ ಅದ್ಧೂರಿ ಸೆಟ್​ ನಿರ್ಮಿಸಲಾಗಿದೆ. 200×200 ಅಡಿಯ ಬೃಹತ್ ಸೆಟ್ ನಿರ್ಮಿಸಲಾಗಿದೆ.

ಒಂದು ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆ ಇದ್ದು, 20 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ವರದಿಯಾಗಿದೆ. ಚಿತ್ರದ ಹೆಚ್ಚಿನ ಭಾಗವನ್ನು ಕಾಡಿನಲ್ಲಿ ಚಿತ್ರೀಕರಿಸಲಿದ್ದರೆ, ಬೃಹತ್ ಸೆಟ್ ಡಬ್ಬಿಂಗ್ ಸ್ಟುಡಿಯೊ ಮತ್ತು ಎಡಿಟಿಂಗ್ ಸೂಟ್ ಒಳಗೊಂಡಿರುತ್ತದೆ ಎಂದು ವರದಿಯಾಗಿದೆ.

ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ ಸ್ಥಳಗಳಿಂದ ಸೆಟ್ ನಿರ್ಮಾಣಕ್ಕಾಗಿ 600 ನುರಿತ ಬಡಗಿಗಳು ಮತ್ತು ಸ್ಟಂಟ್ ಮಾಸ್ಟರ್‌ಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ರಾಮೋಜಿ ಫಿಲ್ಮ್‌ ಸಿಟಿಯ ನಂತರ ದೇಶದಲ್ಲೇ ಅತಿ ದೊಡ್ಡ ಸೆಟ್‌ ಇದಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Kantara Movie: ‘ಕಾಂತಾರ 2’ ಸಿನಿಮಾದಲ್ಲಿ ಇರಲಿದ್ದಾರಾ ಮೋಹನ್​ಲಾಲ್?

ಕಾಂತಾರʼ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್‌ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಕ್ರಿ.ಶ. 301-400ರ ಕಾಲಘಟ್ಟದ ಕಥೆ ತೆರೆ ಮೇಲೆ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಿನಿಮಾ ಪಂಜುರ್ಲಿ ದೈವ ಮತ್ತು ಗುಳಿಗ ದೈವಗಳ ಮೂಲದ ಕಥೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ.

ಕಾಂತಾರ ಒಂದು ದಂತಕಥೆʼ ಎಂದರೆ ಮೊದಲ ಭಾಗ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಇದೀಗ ಪ್ರೀಕ್ವೆಲ್ ರೈಟ್ಸ್ ಕೂಡ ಅಮೇಜಾನ್ ಪ್ರೈಂ ವಿಡಿಯೋ ಪಾಲಾಗಿದೆ. ಕೆಲವು ಮೂಲಗಳ ಪ್ರಕಾರ ಚಿತ್ರದಲ್ಲಿ ಒಂದಕ್ಕಿಂತ ಹೆಚ್ಚು ನಾಯಕಿಯ ಪಾತ್ರ ಇರಲಿದೆ ಎನ್ನಲಾಗಿದೆ. ಇನ್ನು ಕೆಲವು ವರದಿಗಳು ನಾಯಕಿಯಾಗಿ ರುಕ್ಮಿಣಿ ವಸಂತ್‌ ಆಯ್ಕೆಯಾಗಿದ್ದಾರೆ ಎಂದಿವೆ. ಚಿತ್ರತಂಡ ಇನ್ನೂ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿಲ್ಲ.

ಕಾಂತಾರʼವನ್ನು ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಿ ವಿಶ್ವಾದ್ಯಂತ 400 ಕೋಟಿ ರೂ.ಗಳನ್ನು ಗಳಿಸಿತು. ಕಾಂತಾರ ಸಿನಿಮಾ ಸಾರ್ವಕಾಲಿಕವಾಗಿ ಕನ್ನಡದ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತು. ವರದಿಗಳ ಪ್ರಕಾರ ಕಾಂತಾರ 2 ಸಿನಿಮಾ ಬರೋಬ್ಬರಿ 125 ಕೋಟಿ ರೂ. ಬಜೆಟ್‌ನಲ್ಲಿ (budget of 125 crores) ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

Continue Reading
Advertisement
MS Dhoni
ಕ್ರೀಡೆ1 min ago

MS Dhoni: ರನ್​ ಓಡದೆ ಸ್ವಾರ್ಥ ತೋರಿದ ಧೋನಿ; ನೆಟ್ಟಿಗರಿಂದ ಭಾರೀ ಟೀಕೆ

Google Layoff
ವಿದೇಶ3 mins ago

Google Layoff: ಮತ್ತಷ್ಟು ಉದ್ಯೋಗ ಕಡಿತಗೊಳಿಸಿದ ಗೂಗಲ್‌; ಕಾರಣವೇನು?

Tobacco use
ಆರೋಗ್ಯ4 mins ago

Tobacco Use: ತಂಬಾಕು ಸೇವನೆ; ವಿಶ್ವದಲ್ಲೇ ಭಾರತಕ್ಕೆ ಎರಡನೇ ಸ್ಥಾನ

Jammu Tour
ಪ್ರವಾಸ12 mins ago

Jammu Tour: ಜಮ್ಮುವಿಗೆ ಭೇಟಿ ನೀಡುವವರು ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ!

Uma Ramanan dies in Chennai
ಕಾಲಿವುಡ್21 mins ago

Uma Ramanan: ಖ್ಯಾತ ಹಿನ್ನೆಲೆ ಗಾಯಕಿ ಉಮಾ ರಮಣನ್ ಇನ್ನಿಲ್ಲ

CoWin Certificates
ದೇಶ36 mins ago

CoWIN Certificates: ಕೋವಿಡ್‌ ಲಸಿಕೆ ಪ್ರಮಾಣಪತ್ರದಲ್ಲಿ ಮೋದಿ ಫೋಟೋ ಔಟ್‌; ಕೇಂದ್ರ ಹೇಳೋದೇನು?

PBKS vs CSK
ಕ್ರೀಡೆ39 mins ago

PBKS vs CSK: ಕೆಕೆಆರ್​ ದಾಖಲೆ ಹಿಂದಿಕ್ಕಿದ ಪಂಜಾಬ್​ ಕಿಂಗ್ಸ್

Parineeti Chopra husband Raghav Chadha doing well after eye surgery
ಬಾಲಿವುಡ್48 mins ago

Parineeti Chopra: ಪರಿಣಿತಿ ಚೋಪ್ರಾ ಪತಿ ಕಣ್ಣು ಕಳೆದುಕೊಳ್ಳುವ ಸಾಧ್ಯತೆ: ವೈದ್ಯರು ಹೇಳೋದೇನು?

Rahul Gandhi
ಪ್ರಮುಖ ಸುದ್ದಿ55 mins ago

Rahul Gandhi: ಇಂದು ಶಿವಮೊಗ್ಗದಲ್ಲಿ ರಾಹುಲ್‌ ಗಾಂಧಿ ಪ್ರಚಾರ; ಪ್ರಜ್ವಲ್‌ ರೇವಣ್ಣ ವಿಚಾರ ತೆಗೀತಾರಾ?

Job Alert
ಉದ್ಯೋಗ59 mins ago

Job Alert: ಗಮನಿಸಿ; ಹಟ್ಟಿ ಚಿನ್ನದ ಗಣಿ ಕಂಪನಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಾಳೆಯೇ ಕೊನೆಯ ದಿನ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ5 hours ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ2 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20243 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20243 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20244 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20244 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20244 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20244 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest4 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

ಟ್ರೆಂಡಿಂಗ್‌