Site icon Vistara News

Year Ender 2023: ಈ ವರ್ಷ ಹೀನಾಯವಾಗಿ ಸೋತ ಸ್ಟಾರ್‌ ನಟರ ಚಿತ್ರಗಳಿವು!

Cinema failed This 2023

ಬೆಂಗಳೂರು: ಈ ವರ್ಷ ಹಲವು ಸಿನಿಮಾಗಳು (Rewind 2023) ಗೆದ್ದು ಬೀಗಿದರೆ, ಕೆಲವು ಸ್ಟಾರ್‌ ನಟರುಗಳ ಸಿನಿಮಾಗಳು ಮಕಾಡೆ ಮಲಗಿದ್ದೂ ಇದೆ. ಈ ವರ್ಷ ಸಾಕಷ್ಟು ಸಿನಿಮಾಗಳು ತೆರೆ ಕಂಡಿವೆ. ಅದರಲ್ಲಿ ಹಲವು ಗೆದ್ದಿದ್ದರೆ ಸೋತಿರುವುದು ಕೆಲವೇ ಸಿನಿಮಾಗಳು. ಬಹು ನಿರೀಕ್ಷೆಯ ಸಿನಿಮಾಗಳು (Year Ender 2023) ನಿರೀಕ್ಷೆಯನ್ನೇ ಹುಸಿ ಮಾಡಿದರೆ, ಸದ್ದಿಲ್ಲದೆ ಬಂದ ಸಿನಿಮಾಗಳು ದೊಡ್ಡ ಮಟ್ಟದ ಸುದ್ದಿಯನ್ನು ಮಾಡಿಬಿಟ್ಟಿವೆ.  ಅದರಲ್ಲಿ ಪ್ರಭಾಸ್‌, ಸಮಂತಾ, ಅಕ್ಷಯ್‌ ಕುಮಾರ್‌, ಅಖಿಲ್ ಅಕ್ಕಿನೇನಿ, ನಾಗ ಚೈತನ್ಯ, ಚಿರಂಜೀವಿ. ಕಂಗನಾ ಸಿನಿಮಾಗಳು ಸೋತಿವೆ. ಇಲ್ಲಿವೆ ಸಿನಿಮಾಗಳ ವಿವರ.

ಸೆಲ್ಫೀ

ಅಕ್ಷಯ್ ಕುಮಾರ್ (Akshay Kumar) ಮತ್ತು ಇಮ್ರಾನ್ ಹಶ್ಮಿ (Emraan Hashmi) ಒಟ್ಟಿಗೆ ನಟಿಸಿರುವ ʼಸೆಲ್ಫಿʼ ಸಿನಿಮಾ ಫೆ.24ರಂದು ಬಿಡುಗಡೆಯಾಗಿದ್ದು, ಮೊದಲ ದಿನವೇ ಅಷ್ಟಾಗಿ ಗಳಿಕೆ ಕಂಡಿಲ್ಲ. ರಾಜ್ ಮೆಹ್ತಾ ನಿರ್ದೇಶಿಸಿದ ʼಸೆಲ್ಫಿʼ ಮಲಯಾಳಂನ ʻಡ್ರೈವಿಂಗ್ ಲೈಸೆನ್ಸ್ʼ ಚಿತ್ರದ ರಿಮೇಕ್ ಆಗಿದೆ. ಪೃಥ್ವಿರಾಜ್ ಸುಕುಮಾರನ್ ಮತ್ತು ಸುರಾಜ್ ವೆಂಜರಮೂಡು ಅವರ ʼಡ್ರೈವಿಂಗ್ ಲೈಸೆನ್ಸ್‌ʼನಲ್ಲಿ ನಟಿಸಿದ್ದಾರೆ. ಅವರ ಪಾತ್ರಗಳನ್ನು ಅಕ್ಷಯ್ ಮತ್ತು ಇಮ್ರಾನ್ ಅಭಿನಯಿಸಿದ್ದರು. ಸಿನಿಮಾವನ್ನು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್, ಅಕ್ಷಯ್ ಕುಮಾರ್ ಅವರ ಕೇಪ್ ಆಫ್ ಗುಡ್ ಫಿಲ್ಮ್ಸ್ ಮತ್ತು ಸುಕುಮಾರನ್ ಅವರ ಪೃಥ್ವಿರಾಜ್ ಪ್ರೊಡಕ್ಷನ್ಸ್ ಮತ್ತು ಮ್ಯಾಜಿಕ್ ಫ್ರೇಮ್ಸ್ ಸಹ-ನಿರ್ಮಾಣ ಮಾಡಿದೆ.

ಆದಿ ಪುರುಷ್‌

ರಾಮಾಯಣ ಮಹಾಕಾವ್ಯ ಆಧರಿಸಿದ ʼಆದಿ ಪುರುಷ್‌ʼ ಸಿನಿಮಾ ಟೀಸರ್‌ ಬಿಡುಗಡೆಯಾಗುತ್ತಿದ್ದಂತೆ ಸಾಕಷ್ಟು ವಿವಾದ ಹುಟ್ಟುಹಾಕಿತ್ತು. ಓಂ ರಾವುತ್ ನಿರ್ದೇಶನದ ಈ ಸಿನಿಮಾದ ಟೀಸರ್‌ನಲ್ಲಿ ಕಳಪೆ ವಿಎಫ್‌ಎಕ್ಸ್‌ಗಾಗಿ ತೀವ್ರ ಟೀಕೆಗಳನ್ನು ಎದುರಿಸಿತ್ತು. ರಾಮಾಯಣದ ಕಥೆಯನ್ನು ತಿರುಚಲಾಗಿದೆ ಎಂದು ಅನೇಕರು ಆರೋಪಿಸಿದರು. ಈ ಚಿತ್ರದಿಂದ ಪ್ರಭಾಸ್ ಅವರು ದೊಡ್ಡ ಸೋಲು ಕಂಡರು. ʼಆದಿಪುರುಷʼವನ್ನು 700 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಇದುವರೆಗೆ ನಿರ್ಮಿಸಲಾದ ಅತ್ಯಂತ ದುಬಾರಿ ಭಾರತೀಯ ಚಿತ್ರ ಎಂದು ಹೇಳಲಾಗಿದೆ. ಆದಿಪುರುಷವನ್ನು ಟಿ-ಸೀರೀಸ್‌ನ ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್, ಓಂ, ಪ್ರಸಾದ್ ಸುತಾರ್ ಮತ್ತು ರೆಟ್ರೋಫೈಲ್ಸ್‌ನ ರಾಜೇಶ್ ನಾಯರ್ ನಿರ್ಮಿಸಿದ್ದಾರೆ.

ಇದನ್ನೂ ಓದಿ; Thalaivar 170 Title: ʼತಲೈವರ್ 170ʼ ಸಿನಿಮಾ ಟೈಟಲ್‌ ರಿವೀಲ್; ಮತ್ತೊಮ್ಮೆ ಪೊಲೀಸ್‌ ಗೆಟಪ್‌ನಲ್ಲಿ ರಜನಿಕಾಂತ್

ಓ ಮೈ ಗಾಡ್‌

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರ ʼಓ ಮೈ ಗಾಡ್‌ʼ ಸಿನಿಮಾ ಸೋಲುಂಡಿದೆ. ಈ ಚಿತ್ರ ಈ ವರ್ಷದ ಆ.11ರಂದು ಬಿಡುಗಡೆಯಾದ ʼಓ ಮೈ ಗಾಡ್‌ʼನ ಮುಂದುವರಿದ ಭಾಗವಾಗಿದೆ. ಸೆನ್ಸಾರ್‌ ಮಂಡಳಿ ಈ ಚಿತ್ರಕ್ಕೆ ʼಎʼ ಪ್ರಮಾಣಪತ್ರ ನೀಡಿತ್ತು. ಅದಕ್ಕೂ ಮುನ್ನ ಚಿತ್ರ 12 ನಿಮಿಷಗಳನ್ನು ಕಾಲದ ಫೂಟೇಜ್‌ ಅನ್ನು ಕತ್ತರಿಸಲು ನಿರ್ದೇಶಿಸಿತ್ತು. ಅಮಿತ್ ರೈ ನಿರ್ದೇಶನ ಈ ಸಿನಿಮಾಕ್ಕಿದೆ. ಸನ್ನಿ ಡಿಯೋಲ್ ಅವರ ಸೂಪರ್ ಹಿಟ್ ಗದರ್ 2 ಜತೆಗೆ OMG 2 ಆಗಸ್ಟ್ 11ರಂದು ಬಿಡುಗಡೆಯಾಗಿತ್ತು.

ಮಿಷನ್ ರಾಣಿಗಂಜ್

ಈ ಮೊದಲು ಈ ಸಿನಿಮಾಗೆ ʻದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ ʼಎಂಬ ಟೈಟಲ್‌ ಫಿಕ್ಸ್‌ ಆಗಿತ್ತು. ʻಭಾರತʼ ಎಂದು ಬದಲಾಯಿಸುವ ಬಗ್ಗೆ ಜೋರು ಚರ್ಚೆಗಳು ನಡೆಯುತ್ತಿರುವುದರಿಂದ ಈ ಸಿನಿಮಾಗೆ ʻಮಿಷನ್​ ರಾಣಿಗಂಜ್ʼ ಶೀರ್ಷಿಕೆ ಫಿಕ್ಸ್‌ ಆಗಿತ್ತು. ರಾಣಿಗಂಜ್ ಪ್ರದೇಶದಲ್ಲಿನ ಗಣಿಯೊಂದರಲ್ಲಿ ಸಿಲುಕಿದ್ದ 65 ಕಾರ್ಮಿಕರನ್ನು ಎಂಜಿನಿಯರ್ ಜಸ್ವಂತ್ ಸಿಂಗ್ ಗಿಲ್ (Jaswant Singh Gill) ರಕ್ಷಣೆ ಮಾಡಿದ ನಿಜ ಘಟನೆಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಜಸ್ವಂತ್ ಸಿಂಗ್ ಗಿಲ್ ಪಾತ್ರದಲ್ಲಿ ನಟಿಸಿದ್ದಾರೆ. ಜನರು ಚಿತ್ರವನ್ನು ಇಷ್ಟಪಟ್ಟಿಲ್ಲ. ಈ ಸಿನಿಮಾ ಸಾಧಾರಣ ಗಳಿಕೆ ಮಾಡಿದೆ.

‘ಶೆಹಜಾದ’

‘ಅಲಾ ವೈಕುಂಟಪುರಮಲೋ’ ಚಿತ್ರವನ್ನು ಹಿಂದಿಗೆ ‘ಶೆಹಜಾದ’ ಎಂದು ರಿಮೇಕ್ ಮಾಡಲಾಯಿತು. ಆದರೆ, ಈ ಚಿತ್ರ ಸೋಲು ಕಂಡಿತು.

ಚಂದ್ರಮುಖಿ 2

ತಮಿಳಿನ ಚಂದ್ರಮುಖಿ ಸಿನಿಮಾದ ಎರಡನೇ ಭಾಗವಾದ ಚಂದ್ರಮುಖಿ 2 (Chandramukhi 2) ಸಿನಿಮಾ  ಹೀನಾಯವಾಗಿ ಸೋಲಿತು. ಪಿ ವಾಸು ಅವರು ನಿರ್ದೇಶನ ಮಾಡಿರುವ ಚಂದ್ರಮುಖಿ 2 ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಚಂದ್ರಮುಖಿ ಸಿನಿಮಾದಲ್ಲಿ ರಜನಿಕಾಂತ್‌ ಮತ್ತು ನಟಿ ಜ್ಯೋತಿಕಾ ಅವರು ನಟಿಸಿದ್ದರು. ಕನ್ನಡದ ʼಆಪ್ತಮಿತ್ರʼ ಸಿನಿಮಾವನ್ನೇ ಚಂದ್ರಮುಖಿ 2 ಸಿನಿಮಾವನ್ನಾಗಿ ರಿಮೇಕ್‌ ಮಾಡಲಾಗಿತ್ತು. ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡಿನ ಮೂಲಕ ಆಸ್ಕರ್‌ ಪ್ರಶಸ್ತಿಯನ್ನು ಪಡೆದುಕೊಂಡಿರುವ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಅವರು ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಶಾಕುಂತಲಂ

ಟಾಲಿವುಡ್‌ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅಭಿನಯದ `ಶಾಕುಂತಲಂ’ ಸಿನಿಮಾ ಅಷ್ಟಾಗಿ ಯಶಸ್ಸು ಕಂಡಿಲ್ಲ. ಪ್ರೇಕ್ಷಕರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿತ್ತು. ಏಪ್ರಿಲ್ 14ರಂದು ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಿತ್ತು. ಶಾಕುಂತಲಂ’ ಸಿನಿಮಾಗೆ ಮೊದಲ ದಿನ ಹೇಳಿಕೊಳ್ಳುವಷ್ಟು ಜನರು ಬಂದಿರಲಿಲ್ಲ. ಪೌರಾಣಿಕ ಕಥೆ ಆಗಿರುವುದರಿಂದ ಒಂದು ವರ್ಗದ ಜನರಿಗೆ ಈ ಸಿನಿಮಾ ಇಷ್ಟವಾಗಿರಲಿಲ್ಲ. ಕೆಲವರಿಂದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಎಲ್ಲ ಕಾರಣದಿಂದ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿರಲಿಲ್ಲ

ಏಜೆಂಟ್

ಟಾಲಿವುಡ್ ನಟ ಅಖಿಲ್ ಅಕ್ಕಿನೇನಿ (Akhil Akkineni) ಹಾಗೂ ಸ್ಟೈಲಿಶ್ ಮೇಕರ್ ಸುರೇಂದರ್ ರೆಡ್ಡಿ ಕಾಂಬಿನೇಶನ್‌ ಸಿನಿಮಾ ‘ಏಜೆಂಟ್’ ನೋಡಿದವರು ಚಿತ್ರವನ್ನು ತೆಗಳಿದರು. ಸೆನ್ಸೇಷನಲ್ ಮ್ಯೂಸಿಕ್ ಕಂಪೋಸರ್ ಹಿಪ್ ಹಾಪ್ ತಮಿಝಾ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ವಕ್ಕನಾಥಂ ವಂಶಿ ಕಥೆ ಬರೆದಿದ್ದು, ರಸೂಲ್ ಎಲ್ಲೂರು ಛಾಯಾಗ್ರಹಣ ಮಾಡಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ನವೀನ್ ನೂಲಿ ಸಂಕಲನ, ಅವಿನಾಶ್ ಕೊಲ್ಲಾ ಕಲಾ ನಿರ್ದೇಶನ ಚಿತ್ರಕ್ಕಿದೆ. 

ಕಸ್ಟಡಿ

ನಾಗ ಚೈತನ್ಯ (Naga Chaitanya) ಅವರ ‘ಕಸ್ಟಡಿ’ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ಹೋಪ್ ಹೊಂದಿದ್ದರು. ಈ ಚಿತ್ರದಿಂದ ಅವರು ಗೆಲ್ಲಬಹುದು ಎಂಬುದು ಫ್ಯಾನ್ಸ್ ನಿರೀಕ್ಷೆ ಆಗಿತ್ತು. ಆದರೆ, ನಿರೀಕ್ಷೆ ಸುಳ್ಳಾಯಿತು. ಪೊಲೀಸ್‌ ಪಾತ್ರದಲ್ಲಿ ನಾಗ ಚೈತನ್ಯ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಅರವಿಂದ್ ಸ್ವಾಮಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಶರತ್‌ಕುಮಾರ್, ಸಂಪತ್ ರಾಜ್, ಪ್ರೇಮ್‌ಜಿ, ವೆನ್ನೆಲ ಕಿಶೋರ್ ಮತ್ತು ಪ್ರೇಮಿ ವಿಶ್ವನಾಥ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಮಾಂತ್ರಿಕ ಇಳಯರಾಜ ಮತ್ತು ಯುವನ್ ಶಂಕರ್ ರಾಜ ಸಂಗೀತ ನಿರ್ದೇಶಕರಾಗಿದ್ದಾರೆ. ಈ ವರ್ಷ ನಾಗಚೈತನ್ಯ ನಟನೆಯ ʻʻಥ್ಯಾಂಕ್ ಯೂʼʼ ಹೀನಾಯ ಸೋಲು ಕಂಡಿತು. ನಾಗಚೈತನ್ಯ ಈ ವರ್ಷ ಬಾಲಿವುಡ್ ಚಿತ್ರರಂಗಕ್ಕೆ ಆಮಿರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಮೂಲಕ ಪದಾರ್ಪಣೆ ಮಾಡಿದ್ದರು‌. ಆದರೆ ಈ ಚಿತ್ರ ಸಹ ಸೋಲನ್ನು ಅನುಭವಿಸಿತು.

ಭೋಲಾ ಶಂಕರ್‌

ಚಿರಂಜೀವಿ ಅವರು ಈ ವರ್ಷ ತಮಿಳಿನ ವೇದಲಂ ಚಿತ್ರದ ತೆಲುಗು ರಿಮೇಕ್ ‘ಭೋಲಾ ಶಂಕರ್‌’ ಹೀನಾಯ ಸೋಲು ಕಂಡಿತು. ಈ ಸಿನಿಮಾ ಅವರ ಅಭಿಮಾನಿಗಳನ್ನು ನಿರಾಸೆಗೊಳಿಸಿತ್ತು. ‘ಭೋಲಾ ಶಂಕರ’ ಚಿತ್ರವನ್ನು ಅನಿಲ್ ಸುಂಕರ, ಕೆ.ವೈ. ರಾಮರಾವ್ ಜಂಟಿಯಾಗಿ ನಿರ್ಮಿಸಿದ್ದರು.

ದಿ ವ್ಯಾಕ್ಸಿನ್ ವಾರ್‌

ವಿವೇಕ್ ಅಗ್ನಿಹೋತ್ರಿ ( Vivek Ranjan Agnihotri ) ನಿರ್ದೇಶನದ ಚಿತ್ರ ʻದಿ ವ್ಯಾಕ್ಸಿನ್ ವಾರ್‌ʼ (The Vaccine War) ಕೂಡ ನಿರೀಕ್ಷಿತ ಮಟ್ಟದಲ್ಲಿ ಗಳಿಕೆ ಕಂಡಿಲ್ಲ. ʼದಿ ವ್ಯಾಕ್ಸಿನ್ ವಾರ್‌ʼ ಪಾತ್ರವರ್ಗದಲ್ಲಿ ಅನುಪಮ್ ಖೇರ್, ವಿವೇಕ್ ಅವರ ಪತ್ನಿ ಪಲ್ಲವಿ ಜೋಶಿ, ನಾನಾ ಪಾಟೇಕರ್, ಸಪ್ತಮಿ ಗೌಡ (Sapthami Gowda) ಮತ್ತು ರೈಮಾ ಸೇನ್ ಇದ್ದಾರೆ. ಕನ್ನಡದ ನಟಿ ಸಪ್ತಮಿ ಗೌಡ ಸಹ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿದ್ದರು.

ಇದನ್ನೂ ಓದಿ: Year in Search: ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ಸಿನಿಮಾ, ವೆಬ್‌ ಸೀರೀಸ್ ಯಾವುವು?

ತು ಜೂಟಿ ಮೇ ಮಕ್ಕರ್‌, ಜರಾ ಹಟ್ಕೆ ಜರಾ ಬಚ್ಕೆ, ಸತ್ಯಪ್ರೇಮ್‌ ಕಿ ಕಥಾದಂತಹ ಕೆಲವು ಸಿನಿಮಾಗಳು ಸ್ವಲ್ಪ ಮಟ್ಟಿನ ಯಶಸ್ಸನ್ನು ಕಾಣಿಸಿಕೊಂಡವು. ಆದರೆ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿದ್ದ ಸಲ್ಮಾನ್‌ ಖಾನ್‌ ಅವರ ʼಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌ʼ, ಅಕ್ಷಯ್‌ ಕುಮಾರ್‌ ಅವರ ʼಸೆಲ್ಫೀʼ, ಅಜಯ್‌ ದೇವಗನ್‌ ಅವರ ʼಭೋಲಾ ಶಂಕರʼ , ಕಾರ್ತಿಕ್‌ ಆರ್ಯನ್‌ ಅವರ ʼಶೆಹ್ಜಾದಾʼ, ಪ್ರಭಾದ್‌ ಮತ್ತು ಕೃತಿ ಸೆನೂನ್‌ ನಟನೆಯ ʼಆದಿಪುರುಷʼದಂತಹ ಸಿನಿಮಾಗಳು ದೊಡ್ಡ ಮಟ್ಟದ ಸೋಲನ್ನು ಕಂಡವು.

ಸೋಲನ್ನು ಕಂಡ ಸಿನಿಮಾಗಳು ಮತ್ತು ಅವುಗಳ ಗಳಿಕೆ
ಶೆಹ್ಜಾದಾ: 30 ಕೋಟಿ ರೂ.
ಕಿಸಿ ಕಾ ಭಾಯ್‌ ಕಿಸಿ ಕಿ ಜಾನ್‌: 101 ಕೋಟಿ ರೂ.
ಸೆಲ್ಫೀ: 17 ಕೋಟಿ ರೂ.
ಆದಿಪುರುಷ: 270 ಕೋಟಿ ರೂ.
ಕುತ್ತೆ: 4 ಕೋಟಿ ರೂ.

Exit mobile version