Site icon Vistara News

Rishab Shetty: ವಿಶ್ವಸಂಸ್ಥೆಯಲ್ಲಿ ಕನ್ನಡ ಕಹಳೆ ಮೊಳಗಿಸಿದ ಕಾಂತಾರ ನಟ ರಿಷಬ್ ಶೆಟ್ಟಿ! ಇಲ್ಲಿದೆ ವಿಡಿಯೊ

Rishab Shetty

ಬೆಂಗಳೂರು: ವಿಶ್ವಸಂಸ್ಥೆಯ ವಾರ್ಷಿಕ ಸಭೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದು, ವಿಶ್ವಸಂಸ್ಥೆಯ ಮಾನವ ಮಾನವ ಹಕ್ಕುಗಳ ಮಂಡಳಿ(UNHRC) ವಾರ್ಷಿಕ ಸಭೆಯಲ್ಲಿ ನಟ, ನಿರ್ಮಾಪಕ ರಿಷಬ್ ಶೆಟ್ಟಿ (Rishab Shetty) ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲದೇ ಸಭೆಯಲ್ಲಿ ಕನ್ನಡದಲ್ಲಿಯೇ ಮಾತನಾಡಿದ್ದಾರೆ ರಿಷಬ್‌. ಸಭೆಯಲ್ಲಿ ಕನ್ನಡದಲ್ಲಿಯೇ ರಿಷಬ್‌ ಅವರು ಪರಿಸರ ಸಂರಕ್ಷಣೆ ಕುರಿತು ವಿಚಾರ ಮಂಡಿಸಿರುವ ಸಣ್ಣ ವಿಡಿಯೊ ತುಣುಕು ವೈರಲ್‌ ಆಗಿದೆ.

ಈ ಹಿಂದೆ ಅಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕಾಡಂಚಿನ ಜನರ ಸಮಸ್ಯೆಗಳ ಬಗ್ಗೆ ನಟ ಚರ್ಚಿಸಿದ್ದರು. ಬಸವರಾಜ ಬೊಮ್ಮಾಯಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸೋಷಿಯಲ್‌ ಮೀಡಿಯಾ ಮೂಲಕ ಹೇಳಿಕೊಂಡಿದ್ದರು. ಅಡವಿ ಅಂಚಿನ ಜನರ ಜತೆ ಮಾತಾಡಿ, ಅರಣ್ಯ ಇಲಾಖೆ ಸಿಬ್ಬಂದಿ ಜತೆ ಚರ್ಚಿಸಿ ಕಲೆಹಾಕಿದ ಅಂಶಗಳನ್ನು ಮುಖ್ಯಮಂತ್ರಿಗಳ ಮುಂದೆ ಇಟ್ಟಿದ್ದು, ಪರಿಹರಿಸುವುದಾಗಿ ಹೇಳಿದ್ದಾರೆ ಎಂದು ಬರೆದುಕೊಂಡಿದ್ದರು. ಇದೀಗ ಮತ್ತೆ ವಿಶ್ವಸಂಸ್ಥೆಯಲ್ಲಿ ಪರಿಸರಸಂರಕ್ಷಣೆ ಕುರಿತು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Rishab Shetty: ವಿಶ್ವಸಂಸ್ಥೆಯ ವೇದಿಕೆಯಲ್ಲಿ ರಿಷಬ್‌ ಕನ್ನಡ ಭಾಷಣ: ವಿಡಿಯೊ ವೈರಲ್‌

ವಿಡಿಯೊ ಇಲ್ಲಿದೆ

ವಿಡಿಯೊ ವೈರಲ್‌ ಆಗುತ್ತಿದ್ದಂತೆ ʻʻವೇದಿಕೆಯಲ್ಲಿ ರಿಷಬ್‌ ಅವರು ಕನ್ನಡ ಮಾತನಾಡಿರುವುದು ಸಂತಸದ ವಿಚಾರ.
ಕನ್ನಡದಲ್ಲೇ ಮಾತನಾಡುವ ಹಂಬಲದಿಂದ ಹೋಗಿದ್ದ ರಿಷಬ್ ಅವರಿಗೆ ಈ ಅವಕಾಶ ಸಿಕ್ಕಿದ್ದು ನಿಜಕ್ಕೂ ಸಂತಸ ತಂದಿದೆ. ರಿಷಬ್ ಕನ್ನಡ ಭಾಷೆಯತ್ತ ತಮ್ಮ ಪ್ರೀತಿ ಅಭಿಮಾನ ಗೌರವವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡ ಮಾತನಾಡುವ ಮೂಲಕ ಅಭಿವ್ಯಕ್ತಿಸಿದ್ದಾರೆʼʼಎಂದು ಅವರ ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಸೆಂಟರ್ ಫಾರ್ ಗ್ಲೋಬಲ್ ಅಫೇರ್ಸ್ ಮತ್ತು ಪಬ್ಲಿಕ್ ಪೊಲಿಸಿ ಟ್ವೀಟ್‌

ಸೆಂಟರ್ ಫಾರ್ ಗ್ಲೋಬಲ್ ಅಫೇರ್ಸ್ ಮತ್ತು ಪಬ್ಲಿಕ್ ಪೊಲಿಸಿ ಟ್ವೀಟ್‌ನಲ್ಲಿ ʻʻಜಿನೀವಾದಲ್ಲಿ, UNHRC ಅಧಿವೇಶನದಲ್ಲಿ, ಪರಿಸರ, ಹವಾಮಾನ ಮತ್ತು ಸಂರಕ್ಷಣೆಯ ಕುರಿತು ಮತ್ತು ಭಾರತೀಯ ಸಿನಿಮಾ ಕುರಿತು ರಿಷಬ್‌ ಮಾತನಾಡಲಿದ್ದಾರೆ. CGAPP ನಿರ್ದೇಶಕ ಅನಿಂದ್ಯಾ ಸೇನ್‌ಗುಪ್ತ ಅವರನ್ನು ಭೇಟಿಯಾದ ಕ್ಷಣʼʼಎಂದು ಹಂಚಿಕೊಂಡಿದೆ.

Exit mobile version