Site icon Vistara News

Pathaan Movie: ‘ಹೈ ವೋಲ್ಟೇಜ್ ಆ್ಯಕ್ಷನ್ ಡ್ರಾಮಾʼ: ʻಪಠಾಣ್ʼ ಬಗ್ಗೆ ಪ್ರೇಕ್ಷಕರ ಮೆಚ್ಚುಗೆ, ಇಲ್ಲಿದೆ ಟ್ವೀಟ್‌ ವಿಮರ್ಶೆ

High Voltage Action Drama' Audience Appreciation for Pathaan Movie Here's the Tweet Review

ಬೆಂಗಳೂರು : ಶಾರುಖ್‌, ದೀಪಿಕಾ ಪಡುಕೋಣೆ ಹಾಗೂ ಜಾನ್‌ ಅಬ್ರಹಾಂ ನಟನೆಯ ಬಹು ನಿರೀಕ್ಷಿತ ಚಿತ್ರ ʻಪಠಾಣ್‌ʼ (Pathaan Movie) ವಿಶ್ವಾದ್ಯಂತ ಬಿಡುಗಡೆಯಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಶೋ ಪ್ರಾರಂಭಗೊಂಡಿದ್ದು, ಪ್ರೇಕ್ಷಕರು ಸೋಷಿಯಲ್‌ ಮೀಡಿಯಾ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಾಲ್ಕು ವರ್ಷಗಳ ನಂತರ ಶಾರುಖ್‌ ತೆರೆ ಮೇಲೆ ನೋಡುತ್ತಿದ್ದಂತೆ ಅವರ ಅಭಿಮಾನಿಗಳು ಥಿಯೇಟರ್‌ ಮುಂದೆ ಹುಚ್ಚೆದ್ದು ಕುಣಿದಿದ್ದಾರೆ. ಟ್ವೀಟರ್‌ನಲ್ಲಿ ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ಪಠಾಣ್‌ ಸಿನಿಮಾವನ್ನು ನೋಡುಗರು ಪ್ರಶಂಸಿಸಿದ್ದಾರೆ.

ಪ್ರೇಕ್ಷಕರ ಗುಂಪೊಂದು ಪಠಾಣ್ ಬಗ್ಗೆ ತಮ್ಮ ತೀರ್ಪು (Pathaan movie review) ನೀಡಿದ್ದು ಹೀಗಿದೆ. ಒಬ್ಬರು ʻಪಠಾಣ್‌ ಒಂದು ʻʻಹೈವೋಲ್ಟೇಜ್ ಆ್ಯಕ್ಷನ್ ಸಿನಿಮಾ ಆಗಿದ್ದು, ಮನವೊಲಿಸುವ ಕಥೆಯನ್ನು ಹೊಂದಿದೆ. ನಾವು ಬಯಸಿದಂತೆ ಸಿದ್ಧಾರ್ಥ್‌ ಆನಂದ್‌ ಕಥೆ ಹೇಳುವ ಶೈಲಿ ಅದ್ಭುತವಾಗಿದೆ. ಶಾರುಖ್ ಖಾನ್ ಅವರ ಅಭಿನಯವು ಅತ್ಯುತ್ತಮವಾಗಿದೆ. ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಅವರ ಅಭಿನಯ ಕೂಡ ಉತ್ತಮವಾಗಿದೆ. ಹಲವಾರು ಆಶ್ಚರ್ಯ ಸಂಗತಿಗೊಳೊಂದಿಗೆ ಟ್ವಿಸ್ಟ್‌ ಒಳಗೊಂಡಿದೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Pathaan Movie : ʼಪಠಾಣ್‌ʼ ಸಿನಿಮಾ ಪ್ರದರ್ಶನಕ್ಕೆ ಅಡ್ಡಿ ಮಾಡಲ್ಲ ಎಂದ ಗುಜರಾತ್ ಬಜರಂಗದಳ, ವಿಶ್ವ ಹಿಂದೂ ಪರಿಷತ್‌

ಇನ್ನೊಬ್ಬರು ʻʻಪಠಾಣ್‌ ಒಂದು ಅದ್ಭುತ ಚಿತ್ರ ಇದು ಸೂಪರ್ ಡೂಪರ್ ಹಿಟ್” ಎಂದು ಬರೆದುಕೊಂಡಿದ್ದಾರೆ. ಗುಲ್ನಾಜ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ʻʻಪಠಾಣ್‌ನಲ್ಲಿ ಚಿತ್ರಕಥೆ, ಮನರಂಜನೆಯ ಸಂಗತಿಗಳು, ಟ್ವಿಸ್ಟ್ ಮತ್ತು ಸಸ್ಪೆನ್ಸ್‌ ಅದ್ಭುತವಾಗಿದೆ. ಬ್ಲಾಕ್‌ಬಸ್ಟರ್ ಆಗುವುದು ಗ್ಯಾರೆಂಟಿʼʼಎಂದು ಬರೆದುಕೊಂಡಿದ್ದಾರೆ. ಮೂಲಗಳ ಪ್ರಕಾರ ಮೊದಲ ದಿನವೇ ಪಠಾಣ್‌ 40 ಕೋಟಿ ರೂ.ಗಳಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: Pathaan Movie : ಬಿಡುಗಡೆಗೂ ಮೊದಲೇ 58 ಕೋಟಿ ರೂ. ಬಾಚಿಕೊಂಡ ʼಪಠಾಣ್‌ʼ; 100 ದೇಶಗಳಲ್ಲಿ ಸಿನಿಮಾ ಬಿಡುಗಡೆ

ಯಶ್‌ರಾಜ್​ ಬ್ಯಾನರ್​ನಡಿ ನಿರ್ಮಾಣವಾಗುತ್ತಿರುವ ಪಠಾಣ್​ ಸಿನಿಮಾವನ್ನು ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮೊದಲ ಬಾರಿಗೆ ಪಠಾಣ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ನವೆಂಬರ್​ನಲ್ಲಿ ಟೀಸರ್​ ಬಿಡುಗಡೆಯಾಗಿದೆ.

Exit mobile version