ಬೆಂಗಳೂರು: ನಟಿ ಕಾಜಲ್ ಅಗರ್ವಾಲ್ (Kajal Aggarwal) ಕೆಲವು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ನಟಿ ಹೆಚ್ಚಾಗಿ ಸಕ್ಸೆಸ್ ಕಂಡದ್ದು ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ಕಾಜಲ್ ಅವರು ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯನ್ನು ಫ್ರೆಂಡ್ಲಿ ಎಂದು ಹೇಳಿಕೊಂಡಿದ್ದಾರೆ. ಹಾಗೇಯೇ ಹಿಂದಿ ಚಿತ್ರರಂಗದಲ್ಲಿ ‘ನೈತಿಕತೆ, ಮೌಲ್ಯಗಳು, ಶಿಸ್ತು’ ಇಲ್ಲವೆಂದು ಬೋಲ್ಡ್ ಆಗಿ ಹೇಳಿಕೆ ನೀಡಿದ್ದಾರೆ.
ರೈಸಿಂಗ್ ಇಂಡಿಯಾ ಶೋನಲ್ಲಿ ಮಾತನಾಡಿದ ಕಾಜಲ್, “ಹಿಂದಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವ ಬಹಳಷ್ಟು ಜನರಿದ್ದಾರೆ. ಏಕೆಂದರೆ ಅದು ಹೆಚ್ಚು ರಾಷ್ಟ್ರವ್ಯಾಪಿ ಮಾನ್ಯತೆ ಪಡೆದ ಭಾಷೆಯಾಗಿದೆ. ಆದರೆ ದಕ್ಷಿಣ ಭಾರತ ಸಿನಿರಂಗ ತುಂಬ ಸ್ನೇಹಪರ ಉದ್ಯಮವಾಗಿದೆ. ಸ್ವೀಕಾರಾರ್ಹಯುತವಾದಂತಹ ಉದ್ಯಮ ಕೂಡ. ದಕ್ಷಿಣ ಭಾರತದ ಸಿನಿರಂಗದಲ್ಲಿ ಉನ್ನತ ಮಟ್ಟದ ತಂತ್ರಜ್ಞರು, ಅದ್ಭುತ ನಿರ್ದೇಶಕರು ಇದ್ದಾರೆ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ನಾಲ್ಕು ಭಾಷೆಗಳಲ್ಲಿಯೂ ಸೇರಿʼʼಎಂದಿದ್ದಾರೆ.
“ಹಿಂದಿ ನನ್ನ ಮಾತೃಭಾಷೆಯಾಗಿದೆ. ನಾವೆಲ್ಲ ಹಿಂದಿ ಸಿನಿಮಾ ನೋಡುತ್ತ ಬೆಳೆದಿದ್ದೇವೆ. ಆದರೆ ನಾನು ಇಕೋ ಸಿಸ್ಟಮ್‌ಗೆ ಆದ್ಯತೆ ನೀಡುತ್ತೇನೆ., ನೈತಿಕತೆ, ಮೌಲ್ಯಗಳು, ಶಿಸ್ತು ಇರುವುದು ದಕ್ಷಿಣ ಭಾರತದ ನಿನಿರಂಗದಲ್ಲಿ ಆದರೆ ಹಿಂದಿ ಚಿತ್ರರಂಗದಲ್ಲಿ ಇದೆಲ್ಲದರ ಕೊರತೆಯಿದೆ ಎಂದು ನಾನು ಭಾವಿಸುತ್ತೇನೆʼʼಎಂದರು.
ʻʻನಾನು ಮುಂಬೈನಲ್ಲಿ ಹಿಂದಿ ಮಾತನಾಡುತ್ತ ಬೆಳೆದೆ. ಆದರೆ ನನಗೆ ಮನೆಯ ಭಾವನೆ ಬಂದಿದ್ದು ಹೈದರಾಬಾದ್ ಮತ್ತು ಚೆನ್ನೈನಲ್ಲಿ. ನಾನು ಬಾಂಬೆ ಹುಡುಗಿ. ಅಲ್ಲೆ ಹುಟಿ, ಬೆಳೆದೆ. ನಾನು ಹೈದರಾಬಾದ್ (ತೆಲುಗು) ಚಲನಚಿತ್ರೋದ್ಯಮದಲ್ಲಿ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದೆ. ನನ್ನ ಕೆಲಸದ ಮುಖ್ಯ ಭಾಗವೆಂದರೆ ತಮಿಳು ಮತ್ತು ತೆಲುಗು ಚಲನಚಿತ್ರಗಳು. ನಾನು ಕೆಲವು ಹಿಂದಿ ಚಿತ್ರಗಳನ್ನು ಮಾಡಿದ್ದೇನೆ ಆದರೆ ನನಗೆ, ಹೈದರಾಬಾದ್ ಮತ್ತು ಚೆನ್ನೈ ನನ್ನ ಮನೆ ಎಂಬ ಭಾವನೆ. ಅದು ಎಂದಿಗೂ ಹೋಗುವುದಿಲ್ಲʼʼ ಎಂದರು.
ಇದನ್ನೂ ಓದಿ: Kajal Aggarwal: ಇಲ್ಲಿವೆ ಕಾಜಲ್ ಅಗರ್ವಾಲ್ ಲೇಟೆಸ್ಟ್ ಔಟ್‌ಫಿಟ್‌ಗಳು
ಕಾಜಲ್ ಮಾತನಾಡಿದ ಸಂದರ್ಶನದ ವಿಡಿಯೊ
ಕಾಜಲ್ 2007ರ ʻಲಕ್ಷ್ಮಿ ಕಲ್ಯಾಣಂʼ ಚಿತ್ರದ ಮೂಲಕ ತೆಲುಗು ಚಲನಚಿತ್ರಕ್ಕೆ ಪದಾರ್ಪಣೆ ಮಾಡಿದರು. ಮಗಧೀರ, ಆರ್ಯ-2 ನಂತಹ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಳು. ಹಿಂದಿಯಲ್ಲಿ, ಅಜಯ್ ದೇವಗನ್ ಜತೆಗೆ ರೋಹಿತ್ ಶೆಟ್ಟಿ ಅವರ ಸಿಂಗಮ್‌ನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಹೆಚ್ಚು ಖ್ಯಾತಿ ಗಳಿಸಿದರು. ಕಾಜಲ್ ಮುಂದೆ ಕಮಲ್ ಹಾಸನ್ ಜತೆ ಇಂಡಿಯನ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.