Hindi cinema lacks ‘ethics, values, discipline statement By Kajal Aggarwal Kajal Aggarwal: ಹಿಂದಿ ಚಿತ್ರರಂಗದಲ್ಲಿ ‘ನೈತಿಕತೆ, ಮೌಲ್ಯಗಳು, ಶಿಸ್ತು’ ಇಲ್ಲ ಎಂದು ಕಾಜಲ್ ಅಗರ್ವಾಲ್ ಹೇಳಿದ್ದೇಕೆ? - Vistara News

South Cinema

Kajal Aggarwal: ಹಿಂದಿ ಚಿತ್ರರಂಗದಲ್ಲಿ ‘ನೈತಿಕತೆ, ಮೌಲ್ಯಗಳು, ಶಿಸ್ತು’ ಇಲ್ಲ ಎಂದು ಕಾಜಲ್ ಅಗರ್ವಾಲ್ ಹೇಳಿದ್ದೇಕೆ?

ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ಕಾಜಲ್ (Kajal Aggarwal) ಅವರು ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯನ್ನು ಫ್ರೆಂಡ್ಲಿ ಎಂದು ಹೇಳಿಕೊಂಡಿದ್ದಾರೆ. ಹಾಗೇಯೇ ಹಿಂದಿ ಚಿತ್ರರಂಗದಲ್ಲಿ ‘ನೈತಿಕತೆ, ಮೌಲ್ಯಗಳು, ಶಿಸ್ತು’ ಇಲ್ಲವೆಂದು ಬೋಲ್ಡ್‌ ಆಗಿ ಹೇಳಿಕೆ ನೀಡಿದ್ದಾರೆ.

VISTARANEWS.COM


on

Hindi cinema lacks ‘ethics, values, discipline statement By Kajal Aggarwal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಟಿ ಕಾಜಲ್ ಅಗರ್ವಾಲ್ (Kajal Aggarwal) ಕೆಲವು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ನಟಿ ಹೆಚ್ಚಾಗಿ ಸಕ್ಸೆಸ್‌ ಕಂಡದ್ದು ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ಕಾಜಲ್ ಅವರು ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯನ್ನು ಫ್ರೆಂಡ್ಲಿ ಎಂದು ಹೇಳಿಕೊಂಡಿದ್ದಾರೆ. ಹಾಗೇಯೇ ಹಿಂದಿ ಚಿತ್ರರಂಗದಲ್ಲಿ ‘ನೈತಿಕತೆ, ಮೌಲ್ಯಗಳು, ಶಿಸ್ತು’ ಇಲ್ಲವೆಂದು ಬೋಲ್ಡ್‌ ಆಗಿ ಹೇಳಿಕೆ ನೀಡಿದ್ದಾರೆ.

ರೈಸಿಂಗ್ ಇಂಡಿಯಾ ಶೋನಲ್ಲಿ ಮಾತನಾಡಿದ ಕಾಜಲ್, “ಹಿಂದಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವ ಬಹಳಷ್ಟು ಜನರಿದ್ದಾರೆ. ಏಕೆಂದರೆ ಅದು ಹೆಚ್ಚು ರಾಷ್ಟ್ರವ್ಯಾಪಿ ಮಾನ್ಯತೆ ಪಡೆದ ಭಾಷೆಯಾಗಿದೆ. ಆದರೆ ದಕ್ಷಿಣ ಭಾರತ ಸಿನಿರಂಗ ತುಂಬ ಸ್ನೇಹಪರ ಉದ್ಯಮವಾಗಿದೆ. ಸ್ವೀಕಾರಾರ್ಹಯುತವಾದಂತಹ ಉದ್ಯಮ ಕೂಡ. ದಕ್ಷಿಣ ಭಾರತದ ಸಿನಿರಂಗದಲ್ಲಿ ಉನ್ನತ ಮಟ್ಟದ ತಂತ್ರಜ್ಞರು, ಅದ್ಭುತ ನಿರ್ದೇಶಕರು ಇದ್ದಾರೆ. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ನಾಲ್ಕು ಭಾಷೆಗಳಲ್ಲಿಯೂ ಸೇರಿʼʼಎಂದಿದ್ದಾರೆ.

“ಹಿಂದಿ ನನ್ನ ಮಾತೃಭಾಷೆಯಾಗಿದೆ. ನಾವೆಲ್ಲ ಹಿಂದಿ ಸಿನಿಮಾ ನೋಡುತ್ತ ಬೆಳೆದಿದ್ದೇವೆ. ಆದರೆ ನಾನು ಇಕೋ ಸಿಸ್ಟಮ್‌ಗೆ ಆದ್ಯತೆ ನೀಡುತ್ತೇನೆ., ನೈತಿಕತೆ, ಮೌಲ್ಯಗಳು, ಶಿಸ್ತು ಇರುವುದು ದಕ್ಷಿಣ ಭಾರತದ ನಿನಿರಂಗದಲ್ಲಿ ಆದರೆ ಹಿಂದಿ ಚಿತ್ರರಂಗದಲ್ಲಿ ಇದೆಲ್ಲದರ ಕೊರತೆಯಿದೆ ಎಂದು ನಾನು ಭಾವಿಸುತ್ತೇನೆʼʼಎಂದರು.

ʻʻನಾನು ಮುಂಬೈನಲ್ಲಿ ಹಿಂದಿ ಮಾತನಾಡುತ್ತ ಬೆಳೆದೆ. ಆದರೆ ನನಗೆ ಮನೆಯ ಭಾವನೆ ಬಂದಿದ್ದು ಹೈದರಾಬಾದ್ ಮತ್ತು ಚೆನ್ನೈನಲ್ಲಿ. ನಾನು ಬಾಂಬೆ ಹುಡುಗಿ. ಅಲ್ಲೆ ಹುಟಿ, ಬೆಳೆದೆ. ನಾನು ಹೈದರಾಬಾದ್ (ತೆಲುಗು) ಚಲನಚಿತ್ರೋದ್ಯಮದಲ್ಲಿ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದೆ. ನನ್ನ ಕೆಲಸದ ಮುಖ್ಯ ಭಾಗವೆಂದರೆ ತಮಿಳು ಮತ್ತು ತೆಲುಗು ಚಲನಚಿತ್ರಗಳು. ನಾನು ಕೆಲವು ಹಿಂದಿ ಚಿತ್ರಗಳನ್ನು ಮಾಡಿದ್ದೇನೆ ಆದರೆ ನನಗೆ, ಹೈದರಾಬಾದ್ ಮತ್ತು ಚೆನ್ನೈ ನನ್ನ ಮನೆ ಎಂಬ ಭಾವನೆ. ಅದು ಎಂದಿಗೂ ಹೋಗುವುದಿಲ್ಲʼʼ ಎಂದರು.

ಇದನ್ನೂ ಓದಿ: Kajal Aggarwal: ಇಲ್ಲಿವೆ ಕಾಜಲ್ ಅಗರ್ವಾಲ್ ಲೇಟೆಸ್ಟ್‌ ಔಟ್‌ಫಿಟ್‌ಗಳು

ಕಾಜಲ್‌ ಮಾತನಾಡಿದ ಸಂದರ್ಶನದ ವಿಡಿಯೊ

ಕಾಜಲ್ 2007ರ ʻಲಕ್ಷ್ಮಿ ಕಲ್ಯಾಣಂʼ ಚಿತ್ರದ ಮೂಲಕ ತೆಲುಗು ಚಲನಚಿತ್ರಕ್ಕೆ ಪದಾರ್ಪಣೆ ಮಾಡಿದರು. ಮಗಧೀರ, ಆರ್ಯ-2 ನಂತಹ ಹಿಟ್‌ ಸಿನಿಮಾಗಳಲ್ಲಿ ಕಾಣಿಸಿಕೊಂಡಳು. ಹಿಂದಿಯಲ್ಲಿ, ಅಜಯ್ ದೇವಗನ್ ಜತೆಗೆ ರೋಹಿತ್ ಶೆಟ್ಟಿ ಅವರ ಸಿಂಗಮ್‌ನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಹೆಚ್ಚು ಖ್ಯಾತಿ ಗಳಿಸಿದರು. ಕಾಜಲ್ ಮುಂದೆ ಕಮಲ್‌ ಹಾಸನ್‌ ಜತೆ ಇಂಡಿಯನ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಸ್ಯಾಂಡಲ್ ವುಡ್

Kannada New Movie:ʻದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್’ಗೆ ಆಯ್ಕೆಯಾದ ಕನ್ನಡದ ʻಕೆಂಡʼ ಸಿನಿಮಾ!

Kannada New Movie: ಬೆಂಗಳೂರು ಮಹಾ ನಗರಿಯಲ್ಲಿ ನಾನಾ ನಿರಾಸೆಗೊಳಗಾದ ಯುವ ಸಮೂಹ, ರಾಜಕೀಯ, ಅಪರಾಧ ಸೇರಿದಂತೆ ಒಂದಷ್ಟು ಸಾಮಾಜಿಕ ಅಂಶಗಳನ್ನಿಟ್ಟುಕೊಂಡು ಈ ಚಿತ್ರ ತಯಾರುಗೊಂಡಿದೆ. ಫೌಂಡ್ರಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಹೇಗೆ ಈ ವ್ಯವಸ್ಥೆಯ ವಿಷವ್ಯೂಹಕ್ಕೆ ಸಿಲುಕುತ್ತಾನೆ, ಆತನನ್ನು ಪಟ್ಟಭದ್ರರು ಹೇಗೆಲ್ಲ ಬಳಸಿಕೊಳ್ಳುತ್ತಾರೆ, ಆ ಕ್ಷಣದೊಂದು ನಿರ್ಧಾರ ಆತನ ಬದುಕನ್ನು ಯಾವ ದಿಕ್ಕಿನತ್ತ ಮುನ್ನಡೆಸುತ್ತದೆ ಎಂಬಿತ್ಯಾದಿ ಕುತೂಹಲಕರ ತಿರುವುಗಳೊಂದಿಗೆ ಸಿನಿಮಾ ಮೂಡಿ ಬರುತ್ತಿದೆ.

VISTARANEWS.COM


on

Kannada New Movie Dadasaheb Phalke Film Festival Kenda Movie
Koo

ಬೆಂಗಳೂರು: ಈ ಹಿಂದೆ ʻಗಂಟುಮೂಟೆ’ (gantumoote) ಎಂಬ ವಿಶಿಷ್ಟ ಸಿನಿಮಾ ಕೊಟ್ಟಿದ್ದ ತಂಡ `ಕೆಂಡ’ ಸಿನಿಮಾ (Kannada New Movie) ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗುತ್ತಿದೆ. ಸಹದೇವ್ ಕೆಲವಡಿ ಅವರು ನಿರ್ದೇಶನ ಮಾಡಿರುವ ‘ಕೆಂಡ’ ಸಿನಿಮಾವನ್ನು ರೂಪಾ ರಾವ್ (Roopa Rao) ಅವರು ನಿರ್ಮಾಣ ಮಾಡಿದ್ದಾರೆ. ಇದೀಗ ‘ಕೆಂಡ’ ಚಿತ್ರವು ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್​ ಫೆಸ್ಟಿವಲ್’ಗೆ (Dadasaheb Phalke Film Festival) ಆಯ್ಕೆ ಆಗಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

14ನೇ ಸಾಲಿನ ‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್​ ಫೆಸ್ಟಿವಲ್-2024’ ದೆಹಲಿಯಲ್ಲಿ ನಡೆಯಲಿದ್ದು, ಈ ಚಿತ್ರೋತ್ಸವಕ್ಕೆ ‘ಕೆಂಡ’ ಸಿನಿಮಾ ಪ್ರವೇಶ ಪಡೆದುಕೊಂಡಿದೆ. ಹಲವು ಮಾನದಂಡಗಳನ್ನು ದಾಟಿಕೊಂಡು ‘ದಾದಾ ಸಾಹೇಬ್ ಫಾಲ್ಕೆ ಫಿಲ್ಮ್​ ಫೆಸ್ಟಿವಲ್’ಗೆ ‘ಕೆಂಡ’ ಸಿನಿಮಾ ಆಯ್ಕೆ ಆಗಿದೆ ಎಂದು ಚಿತ್ರತಂಡದವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಚಿತ್ರ ಜೂನ್ ತಿಂಗಳಲ್ಲಿ ತೆರೆಗೆ ಬರಲಿದೆ.

ಬೆಂಗಳೂರು ಮಹಾ ನಗರಿಯಲ್ಲಿ ನಾನಾ ನಿರಾಸೆಗೊಳಗಾದ ಯುವ ಸಮೂಹ, ರಾಜಕೀಯ, ಅಪರಾಧ ಸೇರಿದಂತೆ ಒಂದಷ್ಟು ಸಾಮಾಜಿಕ ಅಂಶಗಳನ್ನಿಟ್ಟುಕೊಂಡು ಈ ಚಿತ್ರ ತಯಾರುಗೊಂಡಿದೆ. ಫೌಂಡ್ರಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಹೇಗೆ ಈ ವ್ಯವಸ್ಥೆಯ ವಿಷವ್ಯೂಹಕ್ಕೆ ಸಿಲುಕುತ್ತಾನೆ, ಆತನನ್ನು ಪಟ್ಟಭದ್ರರು ಹೇಗೆಲ್ಲ ಬಳಸಿಕೊಳ್ಳುತ್ತಾರೆ, ಆ ಕ್ಷಣದೊಂದು ನಿರ್ಧಾರ ಆತನ ಬದುಕನ್ನು ಯಾವ ದಿಕ್ಕಿನತ್ತ ಮುನ್ನಡೆಸುತ್ತದೆ ಎಂಬಿತ್ಯಾದಿ ಕುತೂಹಲಕರ ತಿರುವುಗಳೊಂದಿಗೆ ಸಿನಿಮಾ ಮೂಡಿ ಬರುತ್ತಿದೆ.

ಇದನ್ನೂ ಓದಿ: ಚೀನಾದಿಂದ ಜಗತ್ತಿನ ಅತ್ಯಂತ ವೇಗದ ಇಂಟರ್ನೆಟ್! 1 ಸೆಕೆಂಡ್‌ನಲ್ಲಿ 150 ಸಿನಿಮಾ ಸೆಂಡ್ ಮಾಡಬಹುದು!

ವಿದೇಶಗಳಲ್ಲಿ ಸಿನಿಮಾ ಬಗ್ಗೆ ಅಧ್ಯಯನ ನಡೆಸಿ ಬಂದು, ತನ್ನ ಮಾತೃ ಭಾಷೆಯಲ್ಲಿಯೇ ಸಿನಿಮಾ ಮಾಡಬೇಕೆಂಬ ಬಯಕೆ ಹೊಂದಿದ್ದವರು ಸಹದೇವ್ ಕೆಲವಡಿ. ಅದರ ಆರಂಭಿಕ ಹೆಜ್ಜೆಯಾಗಿ ರೂಪಾ ರಾವ್ ಅವರ ಜತೆಗೂಡಿ ನಿರ್ಮಾಣ ಸಂಸ್ಥೆಗೆ ಚಾಲನೆ ನೀಡಿದ್ದರು. ಇದೀಗ ಅವರೇ ಕೆಂಡದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್, ಗೋಪಾಲ್ ಕೃಷ್ಣ ದೇಶಪಾಂಡೆ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಎರಡು ಹಾಡುಗಳಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಲಿಫೆಂಟ್ ವಿಸ್ಪರ್ಸ್ ಚಿತ್ರದ ಭಾಗವಾಗಿದ್ದ ಶ್ರೇಯಾಂಕ್ ನಂಜಪ್ಪ ಕೆಂಡ ಚಿತ್ರಕ್ಕೆ ಶಬ್ಧ ಸಂಯೋಜನೆ ಮಾಡಿದ್ದಾರೆ.

Continue Reading

ಟಾಲಿವುಡ್

Naga Chaitanya: ವಕೇಶನ್‌ ಮೂಡ್‌ನಲ್ಲಿ ಸಮಂತಾ ಮಾಜಿ ಪತಿ! ಶೋಭಿತಾ ಜತೆ ಕಾಡಿನಲ್ಲಿ ಸುತ್ತಾಟ?

Naga Chaitanya: ಇತ್ತೀಚೆಗೆ, ಶೋಭಿತಾ ಧೂಳಿಪಾಲ ಅವರು ಜಂಗಲ್ ಸಫಾರಿಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ನಾಗ ಚೈತನ್ಯ ಕೂಡ ಒಂದು ಫೋಟೋ ಪೋಸ್ಟ್ ಮಾಡಿದ್ದು, ಕಾಡಿನ ರೀತಿಯ ಬ್ಯಾಕ್​ಗ್ರೌಂಡ್ ಇದೆ.ಈ ಕಾರಣದಿಂದ ಇಬ್ಬರೂ ಒಂದೇ ಕಡೆಯಲ್ಲಿ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ನಟಿ ಸಮಂತಾ (samantha) ಮಾಜಿ ಪತಿ ನಟ ನಾಗ ಚೈತನ್ಯ (Naga Chaitanya) ಎರಡನೇ ಮದುವೆಯಾಗಲು ಮುಂದಾಗಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು.

VISTARANEWS.COM


on

Naga Chaitanya and Sobhita Dhulipala holidaying together
Koo

ಬೆಂಗಳೂರು: ನಟಿ ಸಮಂತಾ (samantha) ಮಾಜಿ ಪತಿ ನಟ ನಾಗ ಚೈತನ್ಯ (Naga Chaitanya) ಎರಡನೇ ಮದುವೆಯಾಗಲು ಮುಂದಾಗಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಪೂರಕ ಎಂಬಂತೆ ನಾಗ ಚೈತನ್ಯ ಮತ್ತು ಶೋಭಿತಾ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಜೋಡಿ ವಕೇಶನ್‌ ಮೂಡ್‌ನಲ್ಲಿದೆ ಎಂದು ವರದಿಯಾಗಿದೆ. ಈಗ ಜೋಡಿ ಪೋಸ್ಟ್ ಮಾಡಿರುವ ಫೋಟೋ ಒಂದು ವೈರಲ್ ಆಗಿದೆ. ಇಬ್ಬರೂ ಒಂದೇ ಲೊಕೇಷನ್​ನಿಂದ ಫೋಟೊ ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಇತ್ತೀಚೆಗೆ, ಶೋಭಿತಾ ಧೂಳಿಪಾಲ ಅವರು ಜಂಗಲ್ ಸಫಾರಿಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ನಾಗ ಚೈತನ್ಯ ಕೂಡ ಒಂದು ಫೋಟೋ ಪೋಸ್ಟ್ ಮಾಡಿದ್ದು, ಕಾಡಿನ ರೀತಿಯ ಬ್ಯಾಕ್​ಗ್ರೌಂಡ್ ಇದೆ.ಈ ಕಾರಣದಿಂದ ಇಬ್ಬರೂ ಒಂದೇ ಕಡೆಯಲ್ಲಿ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ಜೋಡಿ ಲಂಡನ್‌ನಲ್ಲಿ ಕಾಣಿಸಿಕೊಂಡಿತ್ತು. ಕೆಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರೂ, ಇಬ್ಬರು ತಮ್ಮ ಸಂಬಂಧದ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿಲ್ಲ.

ಇದನ್ನೂ ಓದಿ: Naga Chaitanya: ನಟಿ ಶೋಭಿತಾ ಜತೆ ನಾಗ ಚೈತನ್ಯ ಡೇಟಿಂಗ್; 2ನೇ ಮದುವೆ ಫಿಕ್ಸ್?

ನಟಿ ಶೋಭಿತಾ ಜತೆ ನಾಗ ಚೈತನ್ಯ ಡೇಟಿಂಗ್

ನಟಿ ಸಮಂತಾ (samantha) ಮಾಜಿ ಪತಿ ನಟ ನಾಗ ಚೈತನ್ಯ (Naga Chaitanya) ಎರಡನೇ ಮದುವೆಯಾಗಲು ಮುಂದಾಗಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ನಟ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಆದರೂ ನಾಗ ಚೈತನ್ಯ ತಂದೆ ನಾಗುರ್ಜನ ಮಗನ ಎರಡನೇ ಮದುವೆಗೆ ತಯಾರಿ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು. ಅಷ್ಟೇ ಅಲ್ಲದೇ ನಾಗ ಚೈತನ್ಯ ಮದುವೆ ಮಾಡಲು ಅಕ್ಕಿನೇನಿ ನಾಗಾರ್ಜುನ ಅವರು ಆಸಕ್ತಿ ತೋರಿ ನಾಗ ಚೈತನ್ಯಗೆ ಉದ್ಯಮಿ ಕುಟುಂಬದಿಂದ ಹೆಣ್ಣನ್ನು ತರಲು ಸಿದ್ಧತೆ ನಡೆದಿದ್ದು, ಈ ವರ್ಷವೇ ವಿವಾಹ ನಡೆಯಲಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ವಿಚಾರದಲ್ಲಿ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಇದೀಗ ಮೂಲಗಳ ಪ್ರಕಾರ ಇದ್ಯಾವುದೂ ಸತ್ಯವಲ್ಲ. ನಾಗ ಚೈತನ್ಯ ಗೆಳತಿಯೂ ಆದ ನಟಿ ಶೋಭಿತಾ ಧೂಳಿಪಾಲ (shobhita dhulipala) ಜತೆ ನಟ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನಲಾಗಿದೆ.

ಸಿನಿಮಾ ವಿಚಾರಕ್ಕೆ ಬಂದರೆ ನಾಗ ಚೈತನ್ಯ ಸದ್ಯ ಸಾಯಿ ಪಲ್ಲವಿಯೊಂದಿಗೆ ‘ತಾಂಡೇಲ್’ ಚಿತ್ರೀಕರಣದಲ್ಲಿದ್ದಾರೆ. ಈ ಚಿತ್ರವನ್ನು ಚಂದೂ ಮೊಂಡೇಟಿ ನಿರ್ದೇಶಿಸುತ್ತಿದ್ದಾರೆ. ಶೋಭಿತಾ ಧೂಳಿಪಾಲ ಇತ್ತೀಚೆಗೆ ದೇವ್ ಪಟೇಲ್ ನಿರ್ದೇಶನದ ‘ಮಂಕಿ ಮ್ಯಾನ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಿದ್ದರೂ, ಸೆನ್ಸಾರ್ ಸಮಸ್ಯೆಗಳಿಂದಾಗಿ ಇದು ಭಾರತದಲ್ಲಿ ಬಿಡುಗಡೆಯಾಗಲು ಇನ್ನೂ ಸಾಧ್ಯವಾಗಿಲ್ಲ.

Continue Reading

ಸಿನಿಮಾ

Rajkumar Birth Anniversary: ವರನಟ ಡಾ. ರಾಜ್​ಕುಮಾರ್ ಅವರ ಟಾಪ್‌ 10 ಸಿನಿಮಾಗಳಿವು!

Rajkumar Birth Anniversary:  ತಾವು ಮಾಡುವ ಪಾತ್ರಗಳು ಸಮಾಜಕ್ಕೆ ಕೆಟ್ಟ ಸಂದೇಶ ನೀಡಬಾರದು ಅನ್ನೋ ಕಾಳಜಿ ರಾಜ್ ಕುಮಾರ್ ಅವರಿಗೆ ಇತ್ತು. ಹೀಗಾಗಿಯೇ ಸಿನಿಮಾಗಳಲ್ಲಿ ರಾಜ್ ಕುಡಿದಿಲ್ಲ, ಸಿಗರೇಟ್ ಸೇದಿಲ್ಲ, ರೇಪ್ ಸೀನ್, ಕಿಸ್ಸಿಂಗ್ ಸೀನ್ ಗಳಲ್ಲಿ ನಟಿಸಿಲ್ಲ. ಅದಷ್ಟೇ ಸಂಭಾವನೆ ಕೊಟ್ಟರೂ ನಾನು ಇಂತಹ ಪಾತ್ರಗಳಲ್ಲಿ ನಟಿಸಲ್ಲ ಎಂದು ಅವರು ಕಡ್ಡಿ ಮುರಿದಂತೆ ಹೇಳಿದ್ದರು. ಪಾತ್ರಗಳಿಗೆ ಜೀವ ತುಂಬುವ ರಾಜ್ ಅದಕ್ಕಾಗಿ ಕಠಿಣ ನಿಯಮಗಳನ್ನು ಪಾಲಿಸುತ್ತಿದ್ದರು. ‘ಮಂತ್ರಾಲಯ ಮಹಾತ್ಮೆ’ ಸಿನಿಮಾಕ್ಕಾಗಿ ಅವರು ಬಾಡೂಟವನ್ನೇ ಬಿಟ್ಟಿದ್ದರು.

VISTARANEWS.COM


on

Rajkumar Birth Anniversary TOP 10 Movies
Koo

ಇಂದು ದಿವಂಗತ ಡಾ. ರಾಜ್ ಕುಮಾರ್ (Rajkumar Birth Anniversary) ಅವರ ಜಯಂತ್ಯೋತ್ಸವ. ಕನ್ನಡ (Kannada) ಕಲಾರಸಿಕರ ಹೃದಯ ಸಾಮ್ರಾಟ. ಕನ್ನಡಿಗರಿಗೆಲ್ಲರಿಗೂ ಅವರೊಂದು ಶಕ್ತಿ. ಅವರು ಕನ್ನಡ ಭಾಷೆಯ ಅಸ್ಮಿತೆ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದರು. ನಗಿಸಿ, ಅಳಿಸಿ, ಆಲೋಚನೆಗೆ ಹಚ್ಚಿ, ಛಲ ತುಂಬಿ, ಮಾರ್ಗದರ್ಶನ ನೀಡಿದರು. 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಅಪ್ರತಿಮ ಸೂಪರ್‌ಸ್ಟಾರ್. 1954ರಲ್ಲಿ ತೆರೆಕಂಡ ‘ಬೇಡರ ಕಣ್ಣಪ್ಪ’ ಚಿತ್ರದಿಂದ ಮುತ್ತುರಾಜ್ ಕನ್ನಡ ಸಿನಿರಸಿಕರಿಗೆ ಪರಿಚಿತರಾದರು. ಇದೀಗ ರಾಜ್‌ ಅವರ ಟಾಪ್‌ 10 ಸಿನಿಮಾಗಳ ಮಾಹಿತಿ ತಿಳಿಯೋಣ.

ಕಸ್ತೂರಿ ನಿವಾಸ (KASTHURI NIVAAS)

ಕಸ್ತೂರಿ ನಿವಾಸ ಕನ್ನಡದ ಕ್ಲಾಸಿಕ್ ಸಿನಿಮಾಗಳಲ್ಲೊಂದು. ರಾಜ್ಯದ ಹಲವಾರು ಚಿತ್ರಮಂದಿರಗಳಲ್ಲಿ ಚಿತ್ರ 175 ದಿನ ಪೂರೈಸಿದರೆ, 16 ಚಿತ್ರಮಂದಿರಗಳಲ್ಲಿ 100 ವಾರ ಪೂರೈಸಿ ದಾಖಲೆಯನ್ನ ಬರೆಯಿತು. ಕಸ್ತೂರಿ ನಿವಾಸ’ ಚಿತ್ರಕ್ಕೆ ಜಿಕೆ ವೆಂಕಟೇಶ್ ಸಂಗೀತ ನೀಡಿದ್ದರು. ವಿಶೇಷ ಅಂದರೆ ಚಿತ್ರದ ಆರಕ್ಕೆ ಆರು ಹಾಡು ಕೂಡ ಸೂಪರ್ ಹಿಟ್. ಚಿತ್ರದಲ್ಲಿನ ‘ಆಡಿಸಿ ನೋಡು ಬೀಳಿಸಿ ನೋಡು’.. ಹಾಡು ಸಂಗೀತ ಪ್ರಿಯರ ಮೇಲೆ ತನ್ನ ಹಿಡಿತ ಸಾಧಿಸಿದೆ ಅಂದರೆ ಎಂತಹವರಿಗೆ ಆದರೂ ಅದು ಅಚ್ಚರಿಯ ಸಂಗತಿಯೇ ಸರಿ. ದೊರೈ-ಭಗವಾನ್ ನಿರ್ದೇಶನ ಈ ಸಿನಿಮಾಗಿದೆ. ಶಿವಾಜಿ ಗಣೇಶನ್ ತಮಿಳಿನಲ್ಲಿ ಚಿತ್ರವನ್ನ ರಿಮೇಕ್ ಮಾಡಿದರು. ಹಿಂದಿಯಲ್ಲಿ ಸಂಜೀವ್ ಕುಮಾರ್ ಡಾ.ರಾಜ್ ಕುಮಾರ್ ಅವರ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನವನ್ನ ಶಾಂದಾರ್ ಚಿತ್ರದಲ್ಲಿ ಮಾಡಿದರು.

ಬಂಗಾರದ ಮನುಷ್ಯ (1972) (Bangarada Manushya)

ಬಂಗಾರದ ಮನುಷ್ಯ T. K. ರಾಮರಾವ್ ಅವರ ಕಾದಂಬರಿಯನ್ನು ಆಧರಿಸಿದ 1972ರ ಕನ್ನಡ ಭಾಷೆಯ ಚಲನಚಿತ್ರವಾಗಿದೆ. ಶ್ರೀನಿಧಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿದ್ದಲಿಂಗಯ್ಯ ನಿರ್ದೇಶಿಸಿದ್ದರು. ಈ ಮೊದಲು ಸಿದ್ದಲಿಂಗಯ್ಯ ಅವರು ʻಮೇಯರ್ ಮುತ್ತಣ್ಣʼ ಸಿನಿಮಾಗೂ ನಿರ್ದೇಶಿಸಿದ್ದರು. ರಾಜೀವನಾಗಿ ಡಾ ರಾಜ್‌ಕುಮಾರ್, ಲಕ್ಷ್ಮಿಯಾಗಿ ಭಾರತಿ, ರಾಚುತಪ್ಪನಾಗಿ ಬಾಲಕೃಷ್ಣ, ಶರಾವತಿಯಾಗಿ ಆರತಿ, ಗ್ರಾಮದ ಮುಖಂಡನ ಮಗನಾಗಿ ದ್ವಾರಕೀಶ್ ನಟಿಸಿದ್ದರು. ಆರ್.ಲಕ್ಷ್ಮಣ್ ನಿರ್ಮಾಣ ಇದ್ದರೆ, ಜಿ ಕೆ ವೆಂಕಟೇಶ್ ಸಂಗೀತ ನಿರ್ದೇಶಕರಾಗಿದ್ದರು.

ಬರೋಬ್ಬರಿ 2 ವರ್ಷ ಪ್ರದರ್ಶನ ಕಂಡ ಸಿನಿಮಾ ಇದು. ಡಾ. ರಾಜ್‌ಕುಮಾರ್ ಹಾಗೂ ಭಾರತೀ ವಿಷ್ಣುವರ್ಧನ್ ನಟನೆಯ ಈ ಚಿತ್ರ ಬೆಂಗಳೂರಿನ ಸ್ಟೇಟ್ಸ್ ಥಿಯೇಟರ್‌ನಲ್ಲಿ (ಈಗಿನ ಭೂಮಿಕಾ ಥಿಯೇಟರ್) ಎರಡು ವರ್ಷ, ಮೈಸೂರಿನ ಚಾಮುಂಡೇಶ್ವರಿ ಥಿಯೇಟರ್‌ನಲ್ಲಿ 60 ವಾರಗಳ ಕಾಲ ಪ್ರದರ್ಶನಗೊಂಡಿತ್ತು. ಇನ್ನು ಕೆಲವೆಡೆ 1 ವರ್ಷ, ಮತ್ತೆ ಕೆಲವೆಡೆ 25 ವಾರ ಓಡಿತ್ತು.ಪಟ್ಟಣದಿಂದ ಹಳ್ಳಿ ಸೇರಿ ರಾಜೀವ(ಡಾ. ರಾಜ್‌ಕುಮಾರ್) ಬರಡು ಭೂಮಿಯಲ್ಲಿ ಕೃಷಿ ಮಾಡಿ ಗೆಲ್ಲುವ ಕಥೆ ಅನೇಕರಿಗೆ ಸ್ಫೂರ್ತಿಯಾಗಿತ್ತು.ಅಂದಾಜು 13 ಲಕ್ಷ ರೂಪಾಯಿ ಖರ್ಚು ಮಾಡಿ ಸಿನಿಮಾ ನಿರ್ಮಿಸಲಾಗಿತ್ತು. ಆದರೆ ಹಲವು ಪಟ್ಟು ಸಿನಿಮಾ ಲಾಭ ಮಾಡಿತ್ತು. ಬರೋಬ್ಬರಿ 2.5 ಕೋಟಿ ರೂ. ಗಳಿಕೆ ಕಂಡಿತ್ತು ಎನ್ನುವ ಅಂದಾಜಿದೆ. ಇವತ್ತಿನ ಲೆಕ್ಕದಲ್ಲಿ ಕಲೆಕ್ಷನ್ 100 ಕೋಟಿ ರೂ.ಗೂ ಹೆಚ್ಚು ಎನ್ನಬಹುದು.

ಇದನ್ನೂ ಓದಿ: Jai Sriram Slogan: ಜೈ ಶ್ರೀರಾಮ್‌ ಹೇಳಿದ್ದಕ್ಕೆ ಮುಸ್ಲಿಂ ಯುವಕರಿಂದ ಹಲ್ಲೆ; ಇನ್ನೊಂದು ಘಟನೆ

ಗಂಧದಗುಡಿ ( GANDHADA GUDI)

ಕನ್ನಡ ನಾಡಿನ ಹಚ್ಚ ಹಸಿರು, ವನ್ಯಜೀವಿಗಳ ಲೋಕ, ಅರಣ್ಯ ಸಂರಕ್ಷಣೆಯ ಮಹತ್ವವನ್ನು ಸಾರಿದ ಗಂಧದಗುಡಿ 1973ರ ಸೆಪ್ಟಂಬರ್‌ನಲ್ಲಿ ಬಿಡುಗಡೆಯಾಗಿತ್ತು. ಕನ್ನಡ ಚಿತ್ರರಂಗದಲ್ಲಿ ನಟರಾಗಿ ನಂತರ ನಿರ್ಮಾಪಕರಾಗಿ ಬೆಳೆದವರು ಮೈಸೂರಿನವೇ ಆದ ಎಂ.ಪಿ.ಶಂಕರ್‌. ಅವರಿಗೂ ಕಾಡಿನ ಕುರಿತು ಏನಾದರೂ ಸಿನೆಮಾ ಮಾಡಬೇಕು ಎನ್ನುವ ಬಯಕೆ. ಅದಕ್ಕಾಗಿ 1969ರಲ್ಲಿ ಕಾಡಿನ ರಹಸ್ಯ ಎನ್ನುವ ಚಿತ್ರ ಮಾಡಿದ್ದರು. 1972ರಲ್ಲಿಯೇ ಮೈಸೂರು ಜಿಲ್ಲೆಯ ನಾಗರಹೊಳೆ, ಬಂಡೀಪುರ ಪ್ರದೇಶದಲ್ಲಿ ಶೂಟಿಂಗ್‌. ರಾಜಕುಮಾರ್‌ ಜತೆಗೆ ವಿಷ್ಣುವರ್ಧನ್‌ ಕೂಡ ಇದ್ದರು. ದೊಡ್ಡ ತಾರಾಗಣದ ಚಿತ್ರ. ವಿಜಯ್‌ ನಿರ್ದೇಶನ. ಡಿ.ವಿ.ರಾಜಾರಾಂ ಅವರ ಕ್ಯಾಮರಾ. ರಾಜನ್‌ ನಾಗೇಂದ್ರ ಅವರ ಸಂಗೀತವಿದ್ದ ಚಿತ್ರ.

ಭಕ್ತ ಕುಂಬಾರ

ಹುಣಸೂರು ಕೃಷ್ಣಮೂರ್ತಿ ನಿರ್ದೇಶಿಸಿದ 1974 ರ ಕನ್ನಡ ಚಲನಚಿತ್ರವಾಗಿದೆ. ಚಿತ್ರದಲ್ಲಿ ರಾಜಕುಮಾರ್ ಮತ್ತು ಲೀಲಾವತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಿ ಕೆ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕರ್ನಾಟಕದಲ್ಲಿ ಅದ್ಭುತ ಯಶಸ್ಸಿನ ನಂತರ ಈ ಚಿತ್ರವನ್ನು ನಂತರ ತೆಲುಗಿನಲ್ಲಿ ವಿ. ಮಧುಸೂಧನ್ ರಾವ್ ಅವರು ʻಚಕ್ರಧಾರಿʼ ಎಂದು ಸಿನಿಮಾ ಮಾಡಿದರು. 1977ರಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್ ನಟಿಸಿದರು.
ಗೋರಾ ಪಾತ್ರದಲ್ಲಿ ಡಾ ರಾಜ್‌ಕುಮಾರ್, ಗೋರ ಪತ್ನಿಯಾಗಿ ಲೀಲಾವತಿ, ಸಂತ ಜ್ಞಾನದೇವನಾಗಿ ರಾಜಶಂಕರ್,
ಗೋರನ ನೆರೆಯವನಾಗಿ ಬಾಲಕೃಷ್ಣ, ಕೃಷ್ಣನಾಗಿ ವಜ್ರಮುನಿ ಪಾತ್ರ ನಿಭಾಯಿಸಿದ್ದರು.
ನಿರ್ದೇಶಕ: ಹುಣಸೂರು ಕೃಷ್ಣಮೂರ್ತಿ
ನಿರ್ಮಾಪಕ: ಲಕ್ಷ್ಮಿ ಫಿಲ್ಮ್ಸ್ ಕಂಬೈನ್ಸ್
ಸಂಗೀತ ನಿರ್ದೇಶಕ: ಜಿ ಕೆ ವೆಂಕಟೇಶ್

ಮಯೂರ (Mayura)

ಮಯೂರ 975 ರ ಕನ್ನಡ ಐತಿಹಾಸಿಕ ನಾಟಕ ಚಲನಚಿತ್ರವಾಗಿದೆ. ಇಂದಿನ ಆಧುನಿಕ ಕರ್ನಾಟಕ ರಾಜ್ಯವನ್ನು ಆಳುವ ಸಾಮ್ರಾಜ್ಯವಾದ ಕದಂಬ ರಾಜವಂಶದ ರಾಜಕುಮಾರ ಮಯೂರಶರ್ಮಾ ಪಾತ್ರವನ್ನು ನಿರ್ವಹಿಸಿದ್ದರು ರಾಜ್‌. ರಾಜ್‌ಕುಮಾರ್ ಅವರ ಅತ್ಯಂತ ಜನಪ್ರಿಯ ಚಲನಚಿತ್ರಗಳಲ್ಲಿ ಇದು ಒಂದಾಗಿದೆ. ಈ ಚಿತ್ರವು ಬ್ರಾಹ್ಮಣ ಯುವಕನಾದ ಮಯೂರನ ಜೀವನವನ್ನು ಚಿತ್ರಿಸುತ್ತದೆ. ಮಯೂರನಾಗಿ ರಾಜಕುಮಾರ್, ಪಲ್ಲವರ ಯುವರಾಜನಾಗಿ ಶ್ರೀನಾಥ್, ರಾಜಕುಮಾರ ವಿಷ್ಣುಗೋಪನಾಗಿ ವಜ್ರಮುನಿ ಪಾತ್ರ ನಿಭಾಯಿಸಿದ್ದರು.
ನಿರ್ದೇಶಕ: ವಿಜಯ್
ನಿರ್ಮಾಪಕ: ಟಿ.ಪಿ. ವೇಣುಗೋಪಾಲ್
ಸಂಗೀತ ನಿರ್ದೇಶಕ: ಜಿ ಕೆ ವೆಂಕಟೇಶ್

ಸನಾದಿ ಅಪ್ಪಣ್ಣ (1977) (sanaadi appanna)

ಸನಾದಿ ಅಪ್ಪಣ್ಣ (ಸನಾದಿ ಅಪ್ಪಣ್ಣ) ವಿಜಯ್ ನಿರ್ದೇಶಿಸಿದ 1977ರ ಭಾರತೀಯ ಕನ್ನಡ ಚಲನಚಿತ್ರವಾಗಿದ್ದು, ಕೃಷ್ಣಮೂರ್ತಿ ಪುರಾಣಿಕ್ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ‘ಸನಾದಿ ಅಪ್ಪಣ್ಣ’ ಚಿತ್ರವು ಕೃಷ್ಣಮೂರ್ತಿ ಪುರಾಣಿಕ್ ಅವರ ‘ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ’ ಕಾದಂಬರಿಯನ್ನು ಆಧರಿಸಿದ್ದು. ಈ ಕಥೆಯ ಹಂದರ ಬಾಗಲಕೋಟೆಯ ಶಹನಾಯಿ ವಾದಕ ಅಪ್ಪಣ್ಣನವರ ಜೀವನ ವೃತ್ತಾಂತವನ್ನು ಒಳಗೊಂಡಿರುವಂತಹುದು. ವಿಜಯ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಜಿ.ಕೆ.ವೆಂಕಟೇಶ್ ಅವರ ಸಂಗೀತ ನಿರ್ದೇಶನವಿದೆ. ಶಹನಾಯಿ ವಾದಕ ಅಪ್ಪಣ್ಣನ ಪಾತ್ರದಲ್ಲಿ ರಾಜಕುಮಾರ್ ಅವರು ತೆರೆಯನ್ನು ಆವರಿಸಿಕೊಂಡರೆ, ಚಿತ್ರದುದ್ದಕ್ಕೂ ಶಹನಾಯಿಯ ವಾದನವನ್ನು ಹಿನ್ನೆಲೆಯಲ್ಲಿ ಮಾಡಿರುವವರು ಬಿಸ್ಮಿಲ್ಲಾ ಖಾನ್.

ಇದನ್ನೂ ಓದಿ: Actor Rajinikanth: ಲೋಕೇಶ್ ಕನಕರಾಜ್-ರಜನಿ ಸಿನಿಮಾಗೆ ಟಾಲಿವುಡ್‌ ಖ್ಯಾತ ನಟ ಭರ್ಜರಿ ಎಂಟ್ರಿ?

ಪಾತ್ರವರ್ಗ ಮತ್ತು ಸಿಬ್ಬಂದಿ:
ಅಪ್ಪಣ್ಣನಾಗಿ ರಾಜ್‌ಕುಮಾರ್, ಬಸಂತಿಯಾಗಿ ಜಯಪ್ರದಾ, ರಾವ್ ಅಪ್ಪಣ್ಣನ ಮಗನಾಗಿ ಅಶೋಕ್, ಅಪಶ್ರುತಿ ಅಯ್ಯಣ್ಣನಾಗಿ ಬಾಲಕೃಷ್ಣ, ಯುವಕ ಅಶೋಕ್ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್
ನಿರ್ದೇಶಕ: ಎಚ್.ಆರ್.ಭಾರ್ಗವ
ನಿರ್ಮಾಪಕ: ದ್ವಾರಕೀಶ್
ಸಂಗೀತ ನಿರ್ದೇಶಕ: ರಾಜನ್-ನಾಗೇಂದ್ರ

ಬಬ್ರುವಾಹನ (Babruvahana )

ಬಬ್ರುವಾಹನ 1977 ರಲ್ಲಿ ಬಿಡುಗಡೆಯಾದ ಪೌರಾಣಿಕ ಕನ್ನಡ ಚಲನಚಿತ್ರ. ಮೇಕಿಂಗ್ ಮತ್ತು ಸಂಗೀತಕ್ಕೆ ಹೆಸರುವಾಸಿಯಾದ ಸಿನಿಮಾ. ರಾಜ್‌ಕುಮಾರ್ ಅವರೇ ಹಾಡಿರುವ ‘ಈ ಸಮಯ ಆನಂದಮಯ’, ‘ಆರಾಧಿಸುವೆ ಮದನಾರಿ’ ಮತ್ತು ‘ಬರಸಿಡಿಲು ಬಡಿದನಾಥೆ’ ನಂತಹ ಕೆಲವು ಹಾಡುಗಳು ಸಖತ್‌ ಹಿಟ್‌ ಕಂಡವು. ಅರ್ಜುನ ಮತ್ತು ಮಗ ಬಬ್ರುವಾಹನ ಪಾತ್ರದಲ್ಲಿ ರಾಜ್‌ಕುಮಾರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಿ ಸರೋಜಾದೇವಿ ಚಿತ್ರಾಂಗದೆಯಾಗಿ ಕಾಣಿಸಿಕೊಂಡಿದ್ದರು. ಹುಣಸೂರು ಕೃಷ್ಣಮೂರ್ತಿ ಅವರ ನಿರ್ದೇಶನ ಮತ್ತು ಚಿತ್ರಕಥೆಯನ್ನು ಒಳಗೊಂಡಿರುವ ಈ ಚಿತ್ರವನ್ನು ಕೆಸಿಎನ್ ಚಂದ್ರಶೇಖರ್ ನಿರ್ಮಿಸಿದ್ದಾರೆ.

ಪಾತ್ರವರ್ಗ ಮತ್ತು ಸಿಬ್ಬಂದಿ:
ರಾಜಕುಮಾರ್, ಬಿ.ಸರೋಜಾದೇವಿ, ಕಾಂಚನಾ, ಜಯಮಾಲಾ, ವಜ್ರಮುನಿ, ರಾಮಕೃಷ್ಣ, ತೂಗುದೀಪ ಶ್ರೀನಿವಾಸ್.
ನಿರ್ದೇಶಕ: ಹುಣಸೂರು ಕೃಷ್ಣ ಮೂರ್ತಿ
ನಿರ್ಮಾಪಕ: ರಾಜಕಮಲ್ ಆರ್ಟ್ಸ್
ಸಂಗೀತ ನಿರ್ದೇಶಕ: ಟಿ.ಜಿ. ಲಿಂಗಪ್ಪ

ಕವಿರತ್ನ ಕಾಳಿದಾಸ (1983)

ಕವಿರತ್ನ ಕಾಳಿದಾಸ 1983ರ ಕನ್ನಡ ಐತಿಹಾಸಿಕ ಚಲನಚಿತ್ರ. 4 ನೇ ಶತಮಾನದ ಶಾಸ್ತ್ರೀಯ ಸಂಸ್ಕೃತ ಬರಹಗಾರ ಕಾಳಿದಾಸನ ಜೀವನವನ್ನು ಆಧರಿಸಿದೆ. ತ್ತು. ಈ ಚಿತ್ರವನ್ನು ರೇಣುಕಾ ಶರ್ಮಾ ಬರೆದು ನಿರ್ದೇಶಿಸಿದ್ದಾರೆ. ವಿ ಎಸ್ ಗೋವಿಂದ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಾಜ್‌ಕುಮಾರ್ ಅವರು ಕಾಳಿದಾಸನ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಜಯಪ್ರದಾ ಅವರು ವಿದ್ಯಾಧರೆಯಾಗಿ ಮತ್ತು ಶ್ರೀನಿವಾಸ ಮೂರ್ತಿ ರಾಜ ಭೋಜ ಪಾತ್ರದಲ್ಲಿ ನಟಿಸಿದ್ದರು. ‘ವಜ್ರೇಶ್ವರಿ ಕಂಬೈನ್ಸ್’ ಬ್ಯಾನರ್ ಅಡಿಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ವಿತರಿಸಿದ್ದರು.

ಪಾತ್ರವರ್ಗ ಮತ್ತು ಸಿಬ್ಬಂದಿ: ಕಾಳಿದಾಸನಾಗಿ ರಾಜ್‌ಕುಮಾರ್, ವಿಧ್ಯಾಧಾರೆಯಾಗಿ ಜಯಪ್ರದ, ರಾಜ ಭೋಜನಾಗಿ ಶ್ರೀನಿವಾಸ ಮೂರ್ತಿ. ನಿರ್ದೇಶಕರು: ರೇಣುಕಾ ಶರ್ಮಾ ನಿರ್ಮಾಪಕ: ವಿ ಎಸ್ ಗೋವಿಂದ ಸಂಗೀತ ನಿರ್ದೇಶಕ: ಎಂ.ರಂಗರಾವ್

ಜೀವನ ಚೈತ್ರ (1992) (Jeevana Chaitra)

ಜೀವನ ಚೈತ್ರ 1992ರಲ್ಲಿ ಬಿಡುಗಡೆಯಾದ ಸಿನಿಮಾ. ದೊರೈ- ಭಗವಾನ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಚಿತ್ರದಲ್ಲಿ ಸಾಮಾಜಿಕ ಕಳಕಳಿಯ ಸಂದೇಶವಿದೆ. ಮದ್ಯಸೇವನೆಯ ವಿರುದ್ಧ ಹೋರಾಡುವ ಪಾತ್ರದಲ್ಲಿ ಡಾ ರಾಜ್‌ಕುಮಾರ್ ಅಭಿನಯಿಸಿದ್ದಾರೆ. ಮಾಧವಿ ಈ ಚಿತ್ರದ ನಾಯಕಿ. ಇದು ಒಂದು ರೀತಿಯಲ್ಲಿ ಅಣ್ಣಾವ್ರ ಕಂಬ್ಯಾಕ್‌ ಸಿನಿಮಾವೂ ಆಗಿತ್ತು.ಇದು ಕಾದಂಬರಿ ಆಧರಿತ ಸಿನಿಮಾ. ವಿಶಾಲಾಕ್ಷಿ ದಕ್ಷಿಣಾಮೂರ್ತಿಯವರ ಜೀವನಚೈತ್ರ ಕಾದಂಬರಿಯೇ ಸಿನಿಮಾವಾಗಿತ್ತು.

ಪಾತ್ರವರ್ಗ ಮತ್ತು ಸಿಬ್ಬಂದಿ:
ಡಾ ರಾಜಕುಮಾರ್, ಮಾಧವಿ, ಕೆ.ಎಸ್.ಅಶ್ವಥ್, ಪಂಡರಿ ಬಾಯಿ
ನಿರ್ದೇಶಕ: ದೊರೈ – ಭಗವಾನ್
ನಿರ್ಮಾಪಕಿ: ಪಾರ್ವತಮ್ಮ ರಾಜ್‌ಕುಮಾರ್
ಸಂಗೀತ ನಿರ್ದೇಶಕ: ಉಪೇಂದ್ರ ಕುಮಾರ್

ಆಕಸ್ಮಿಕ (1993) Aakasmika

1993 ರ ಕನ್ನಡ ಆಕ್ಷನ್-ಡ್ರಾಮಾ ಚಲನಚಿತ್ರವಾಗಿದ್ದು, ಇದನ್ನು ನಾಗಾಭರಣ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಾಜಕುಮಾರ್, ಗೀತಾ ಮತ್ತು ಮಾಧವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಂಸಲೇಖ ಸಂಗೀತ ಜತೆಗೆ ಸಾಹಿತ್ಯವನ್ನು ಬರೆದಿದ್ದಾರೆ. ʻಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು..’ ಹಾಡು ಕೇಳಿದರೆ ಎಂಥವರಿಗಾದರೂ ಒಮ್ಮೆ ರೋಮಾಂಚನ ಆಗುತ್ತದೆ. ಈ ಹಾಡಿಗೆ ಇರುವ ತಾಕತ್ತು ಅಂಥದ್ದು. ಹಾಡಿನ ಪ್ರತಿ ಸಾಲುಗಳು ಕನ್ನಡ ನಾಡಿನ ಬಗ್ಗೆ ಇರುವುದು ಒಂದು ವಿಶೇಷವಾದರೆ, ರಾಜ್​ಕುಮಾರ್ ಅವರ ಕಂಠದಲ್ಲಿ ಈ ಸಾಂಗ್ ಮೂಡಿ ಬಂದಿದೆ ಅನ್ನೋದು ಮತ್ತೊಂದು ವಿಶೇಷ. ಈ ಸಿನಿಮಾದ ಹಿಟ್‌ ಸಾಂಗ್‌ ಇದು.

ರಾಜ್​ಕುಮಾರ್ ರಿಯಲ್ ಹೀರೊ

ತಾವು ಮಾಡುವ ಪಾತ್ರಗಳು ಸಮಾಜಕ್ಕೆ ಕೆಟ್ಟ ಸಂದೇಶ ನೀಡಬಾರದು ಅನ್ನೋ ಕಾಳಜಿ ರಾಜ್ ಕುಮಾರ್ ಅವರಿಗೆ ಇತ್ತು. ಹೀಗಾಗಿಯೇ ಸಿನಿಮಾಗಳಲ್ಲಿ ರಾಜ್ ಕುಡಿದಿಲ್ಲ, ಸಿಗರೇಟ್ ಸೇದಿಲ್ಲ, ರೇಪ್ ಸೀನ್, ಕಿಸ್ಸಿಂಗ್ ಸೀನ್ ಗಳಲ್ಲಿ ನಟಿಸಿಲ್ಲ. ಅದಷ್ಟೇ ಸಂಭಾವನೆ ಕೊಟ್ಟರೂ ನಾನು ಇಂತ ಪಾತ್ರಗಳಲ್ಲಿ ನಟಿಸಲ್ಲ ಎಂದು ಅವರು ಕಡ್ಡಿ ಮುರಿದಂತೆ ಹೇಳಿದ್ದರು. ಪಾತ್ರಗಳಿಗೆ ಜೀವ ತುಂಬುವ ರಾಜ್ ಅದಕ್ಕಾಗಿ ಕಠಿಣ ನಿಯಮಗಳನ್ನು ಪಾಲಿಸುತ್ತಿದ್ದರು. ‘ಮಂತ್ರಾಲಯ ಮಹಾತ್ಮೆ’ ಸಿನಿಮಾಕ್ಕಾಗಿ ಅವರು ಬಾಡೂಟವನ್ನೇ ಬಿಟ್ಟಿದ್ದರು.

Continue Reading

ಸಿನಿಮಾ

Kanguva Budget: ಭಾರಿ ಸದ್ದು ಮಾಡುತ್ತಿರುವ ಕಂಗುವ ಚಿತ್ರದ ಬಜೆಟ್ ಎಷ್ಟು ಗೊತ್ತೇ?

Kanguva Budget: ಭಾರತೀಯ ಚಿತ್ರರಂಗದಲ್ಲಿ ಅತೀ ದೊಡ್ಡ ಬಜೆಟ್ ನ ಚಿತ್ರ ಕಂಗುವ ವರ್ಷಾಂತ್ಯಕ್ಕೆ ತೆರೆಗೆ ಬರಲು ಸಜ್ಜಾಗುತ್ತಿದೆ. ತಮಿಳು ನಟ ಸೂರ್ಯ ಶಿವಕುಮಾರ್ ಹಾಗೂ ಬಾಲಿವುಡ್ ಸ್ಟಾರ್ ಬಾಬಿ ಡಿ’ಯೋಲ್‌ ಅಭಿನಯದ ಈ ಚಿತ್ರ ಈಗಾಗಲೇ ಸಿನಿ ರಸಿಕರನ್ನು ಮೋಡಿ ಮಾಡಿದೆ.

VISTARANEWS.COM


on

By

Kanguva Budget
Koo

ಚೆನ್ನೈ: ಹೊಸ ವರ್ಷದಂದು (new year) ಪೋಸ್ಟರ್ (poster) ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ (social media) ಸಾಕಷ್ಟು ಸದ್ದು ಮಾಡುತ್ತಿರುವ ಚಿತ್ರ ಕಂಗುವ (Kanguva). ತಮಿಳು (tamil) ನಟ (actor) ಸೂರ್ಯ (surya), ದಿಶಾ ಪಟಾನಿ (disha patani) ಅಭಿನಯದ ಈ ಚಿತ್ರ ಬಿಡುಗಡೆಗೆ ಮುನ್ನವೇ ಸಾಕಷ್ಟು ಮಂದಿಯ ಗಮನ ಸೆಳೆದಿದ್ದು, ಚಿತ್ರದ ಕುರಿತು ಹೊಸಹೊಸ ಮಾಹಿತಿಗಾಗಿ ವೀಕ್ಷಕರು ಕಾಯುವಂತೆ ಮಾಡಿದೆ.

ವರ್ಷದ ಅತಿ ದೊಡ್ಡ ಮತ್ತು ದುಬಾರಿ ಚಿತ್ರಗಳಲ್ಲಿ ಒಂದು ಎಂದು ಊಹಿಸಲಾಗಿರುವ ಕಂಗುವವನ್ನು (Kanguva Budget) ಸುಮಾರು 300 ಕೋಟಿಗೂ ಹೆಚ್ಚು ಬಜೆಟ್‌ ನಲ್ಲಿ ನಿರ್ಮಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಚಿತ್ರವೂ ಚಿತ್ರರಂಗದಲ್ಲಿ ಬಹು ದಾಖಲೆಗಳನ್ನು ಮುರಿಯಲಿದೆ ಎಂದು ಊಹಿಸಲಾಗಿದೆ.

ಕಂಗುವ ಬಗ್ಗೆ ಭಾರಿ ಚರ್ಚೆ

ಸ್ಟುಡಿಯೋ ಗ್ರೀನ್ ಮತ್ತು ಸೂರ್ಯ ಶಿವಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ “ಕಂಗುವ” ದ ಟೀಸರ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಣ್ಣಿಗೆ ಹಬ್ಬದಂತಿರುವ ಚಿತ್ರದ ದೃಶ್ಯಗಳು, ಬೆರಗುಗೊಳಿಸುವ ವಿನ್ಯಾಸ, ವಿಶಿಷ್ಟ ಪರಿಕಲ್ಪನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದ್ದು, ಅದ್ಬುತ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ದೇಶದಾದ್ಯಂತ ಸಾಕಷ್ಟು ಮಂದಿ ಇದನ್ನು ನೋಡಲು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ: Uttarakaanda Movie: ʼಉತ್ತರಕಾಂಡʼ ಚಿತ್ರಕ್ಕೆ ನಾಯಕಿ ಎಂಟ್ರಿ; ಮೋಹಕ ತಾರೆ ರಮ್ಯಾ ಜಾಗಕ್ಕೆ ಕಾಲಿವುಡ್‌ ನಟಿ


ಶಕ್ತಿಶಾಲಿ ನಾಯಕನಾಗಿ ಸೂರ್ಯ ಮತ್ತು ಖಳನಾಯಕನಾಗಿ ಬಾಬಿ ಡಿ’ಯೋಲ್‌ ಚಿತ್ರದ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ. ಟೀಸರ್ ಬಿಡುಗಡೆಯಾದಾಗಿನಿಂದ ಆನ್‌ಲೈನ್ ಚರ್ಚೆಯನ್ನು ಹುಟ್ಟುಹಾಕಿದೆ, ಎಲ್ಲರೂ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ದುಬಾರಿ ಚಿತ್ರ

ಕಂಗುವವರ ಮಹತ್ವಾಕಾಂಕ್ಷೆಯ ಕಥೆಯ ಹಂದರವನ್ನು ಒಳಗೊಂಡಿರುವ ಈ ಚಿತ್ರದ ಬಜೆಟ್ 350 ಕೋಟಿಗೂ ಮೀರಿದೆ ಎನ್ನಲಾಗಿದೆ. ಇದು ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಗಲಿದೆ.


ಚಿತ್ರದ ಪ್ಯಾನ್-ವರ್ಲ್ಡ್ ಪ್ರಾಜೆಕ್ಟ್ ಎಲ್ಲರನ್ನೂ ಬೆರಗುಗೊಳಿಸುವಂತಿದೆ. ಸುಂದರ ದೃಶ್ಯಗಳು, ಭವ್ಯವಾದ ಛಾಯಾಗ್ರಹಣ ಮತ್ತು ವಿಸ್ತಾರವಾದ ಈ ಚಿತ್ರ ಚಲನಚಿತ್ರ ನಿರ್ಮಾಪಕರು ಅದರ ಸೃಷ್ಟಿಗೆ ಸುರಿದ ಅಪಾರ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ.

ವೆಟ್ರಿ ಪಳನಿಸಾಮಿ ಅವರ ಅದ್ಭುತ ಛಾಯಾಗ್ರಹಣ ಮತ್ತು ಗಾಯಕ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆಯಲ್ಲಿ ಈ ಚಿತ್ರವು ಹೆಚ್ಚು ಪ್ರದರ್ಶನವನ್ನು ಕಾಣುವ ನಿರೀಕ್ಷೆಯಿದೆ.

ಸ್ಟುಡಿಯೋ ಗ್ರೀನ್‌ ಬೆಂಬಲದಿಂದ ನಿರ್ದೇಶಕ ಶಿವ ಅವರ ವಿಶಿಷ್ಟ ಕಲ್ಪನೆಗೆ ಜೀವ ತುಂಬಿದೆ. ಹಾಲಿವುಡ್ ಶೈಲಿಯಲ್ಲಿ ಮೂಡಿ ಬಂದಿರುವ ಚಿತ್ರ ಸಿನಿರಸಿಕರ ಮನ ಗೆಲ್ಲುವುದರಲ್ಲಿ ಸಂದೇಹವಿಲ್ಲ.

ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಪ್ರಮುಖರಾಗಿರುವ ಸ್ಟುಡಿಯೋ ಗ್ರೀನ್ ಮಾಲಕ ಕೆ.ಇ. ಜ್ಞಾನವೇಲ್ ರಾಜಾ ಅವರು ಕಳೆದ 16 ವರ್ಷಗಳಲ್ಲಿ ಸತತವಾಗಿ “ಸಿಂಗಂ” ಸರಣಿ, “ಪರುತಿ ವೀರನ್,” “ಸಿರುತೈ,” “ಕೊಂಬನ್,” “ನಾನ್ ಮಹನ್ ಅಲ್ಲಾ,” “ಮದ್ರಾಸ್,” “ಟೆಡ್ಡಿ,” ಮತ್ತು ತೀರಾ ಇತ್ತೀಚೆಗೆ ಬ್ಲಾಕ್ಬಸ್ಟರ್ ಹಿಟ್ ಗಳನ್ನು ನೀಡಿದ್ದಾರೆ.

“ಪಾತು ತಾಲಾ.” ಅವರು “ಬಾಹುಬಲಿ: ದಿ ಬಿಗಿನಿಂಗ್” ನಂತಹ ಪ್ರಮುಖ ಬ್ಲಾಕ್‌ಬಸ್ಟರ್‌ಗಳನ್ನು ವಿತರಿಸಿದ ಕಾರಣ ಅವರಿಂದಲೇ ಚಿತ್ರ ಬಿಡುಗಡೆ ಮಾಡಿಸಬೇಕು ಎಂದು ಹಲವಾರು ಮಂದಿ ನಿರ್ದೇಶಕರು ಕಾಯುವಂತಾಗಿದೆ.
ಸ್ಟುಡಿಯೋ ಗ್ರೀನ್ ಕಂಗುವಕ್ಕಾಗಿ ವಿಶ್ವದಾದ್ಯಂತ ಇರುವ ಪ್ರಮುಖ ವಿತರಕರೊಂದಿಗೆ ಕೈಜೋಡಿಸಿದೆ. 2024 ರ ಕೊನೆಯಲ್ಲಿ ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

Continue Reading
Advertisement
board exam tension viral news
ವೈರಲ್ ನ್ಯೂಸ್10 mins ago

Board Exam Result: 93.5% ಫಲಿತಾಂಶ ನೋಡಿ ಮೂರ್ಛೆ ಹೋದ ವಿದ್ಯಾರ್ಥಿ! ಐಸಿಯುಗೆ ದಾಖಲು

Kannada New Movie Dadasaheb Phalke Film Festival Kenda Movie
ಸ್ಯಾಂಡಲ್ ವುಡ್23 mins ago

Kannada New Movie:ʻದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್’ಗೆ ಆಯ್ಕೆಯಾದ ಕನ್ನಡದ ʻಕೆಂಡʼ ಸಿನಿಮಾ!

Naga Chaitanya and Sobhita Dhulipala holidaying together
ಟಾಲಿವುಡ್45 mins ago

Naga Chaitanya: ವಕೇಶನ್‌ ಮೂಡ್‌ನಲ್ಲಿ ಸಮಂತಾ ಮಾಜಿ ಪತಿ! ಶೋಭಿತಾ ಜತೆ ಕಾಡಿನಲ್ಲಿ ಸುತ್ತಾಟ?

Rajkumar Birth Anniversary TOP 10 Movies
ಸಿನಿಮಾ1 hour ago

Rajkumar Birth Anniversary: ವರನಟ ಡಾ. ರಾಜ್​ಕುಮಾರ್ ಅವರ ಟಾಪ್‌ 10 ಸಿನಿಮಾಗಳಿವು!

jai sriram slogan koppal crime news
ಕ್ರೈಂ2 hours ago

Jai Sriram Slogan: ಜೈ ಶ್ರೀರಾಮ್‌ ಹೇಳಿದ್ದಕ್ಕೆ ಮುಸ್ಲಿಂ ಯುವಕರಿಂದ ಹಲ್ಲೆ; ಇನ್ನೊಂದು ಘಟನೆ

ಪ್ರಮುಖ ಸುದ್ದಿ2 hours ago

Rajkumar Birthday: ಸೋತಾಗ ಧೈರ್ಯ ತುಂಬುವ ಅಣ್ಣಾವ್ರ 7 ಹಾಡುಗಳು!

bhagavanth khuba poster lok sabha election 2024
ಬೀದರ್‌2 hours ago

Lok Sabha Election 2024: ಪೋಸ್ಟರ್‌ ಮೂಲಕ ಸಚಿವ ಭಗವಂತ ಖೂಬಾ ಅವಹೇಳನ, ದೂರು

dashamukha column madness
ಅಂಕಣ3 hours ago

ದಶಮುಖ ಅಂಕಣ: ಮರುಳಿಗೆ ಅರಳುವ ಅರ್ಥಗಳನ್ನು ಹುಡುಕುತ್ತಾ…

bengaluru karaga in darga
ಬೆಂಗಳೂರು3 hours ago

Bengaluru Karaga: ವೈಭವದ ಕರಗ ಮಹೋತ್ಸವ ಸಂಪನ್ನ; ಲಕ್ಷಾಂತರ ಭಕ್ತರ ನಡುವೆ ಮಸ್ತಾನ್ ಸಾಬ್ ದರ್ಗಾಗೆ ಭೇಟಿ

gukesh dommaraju rajamarga column
ಅಂಕಣ3 hours ago

ರಾಜಮಾರ್ಗ ಅಂಕಣ: ವಿಶ್ವವಿಜೇತನಾಗುವ ತವಕದಲ್ಲಿರುವ ಚೆಸ್ ಆಟಗಾರ ದೊಮ್ಮರಾಜು ಗುಕೇಶ್

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ5 hours ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು2 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ2 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು2 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು2 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ2 days ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ3 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ4 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20244 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

ಟ್ರೆಂಡಿಂಗ್‌