Site icon Vistara News

ಕಿರುತೆರೆ ನಟಿ ವೈಭವಿ ಉಪಾಧ್ಯಾಯ ಸಾವು; ಭಾವಿ ಪತಿ ಜತೆ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Hindi TV Actress Vaibhavi Upadhyay Passes Away

#image_title

ಮುಂಬಯಿ: ಹಿಂದಿ ಚಿತ್ರರಂಗದ (Bollywood) ಜನಪ್ರಿಯ ಕಿರುತೆರೆ ನಟಿ, ಸಾರಾಭಾಯ್​ VS ಸಾರಾಭಾಯ್​ ಟಿವಿ ಶೋದಲ್ಲಿ ಜಾಸ್ಮಿನ್ ಪಾತ್ರದ ಮೂಲಕ ಮನೆಮಾತಾಗಿದ್ದ ವೈಭವಿ ಉಪಾಧ್ಯಾಯ (Vaibhavi Upadhyay Passes Away) ಇನ್ನಿಲ್ಲ. ಇನ್ನೂ 32ವರ್ಷ ವಯಸ್ಸಿನ ಅವರು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದರು. ವೈಭವಿ ತಮ್ಮ ಬಾವಿ ಪತಿಯೊಟ್ಟಿಗೆ ಹಿಮಾಚಲ ಪ್ರದೇಶದಲ್ಲಿ, ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅಪಘಾತದಲ್ಲಿ ನಿಧನರಾಗಿದ್ದಾರೆ. ಈ ಬಗ್ಗೆ ಹಿಂದಿ ಮತ್ತು ಗುಜರಾತಿ ನಿರ್ಮಾಪಕ ಜೆ.ಡಿ. ಮುಜೇತಿಯಾ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿಕೊಂಡಿದ್ದಾರೆ. ‘ಜೀವನ ಹೇಗೆ ಎಂಬುದು ಊಹೆಗೆ ನಿಲುಕದ್ದು. ಎಷ್ಟು ಒಳ್ಳೆ ನಟಿಯಾಗಿದ್ದಳು, ನನ್ನ ಪ್ರೀತಿಯ ಸ್ನೇಹಿತೆ ವೈಭವಿ ಉಪಾಧ್ಯಾಯ ನಿಧನರಾಗಿದ್ದಾರೆ. ಅವರ ಮೃತದೇಹವನ್ನು ಮುಂಬಯಿಗೆ ತಂದು, ಗುರುವಾರ ಬೆಳಗ್ಗೆ 11ರ ಹೊತ್ತಿಗೆ ಅಂತ್ಯಕ್ರಿಯೆ ನಡೆಯಲಿದೆ’ ಎಂದು ತಿಳಿಸಿದ್ದಾರೆ.

ವೈಭವಿ ಕುಟುಂಬದವರು ಸದ್ಯ ಚಂಡಿಗಢ್​​ನಲ್ಲಿ ಇದ್ದಾರೆ. ಈಕೆಗೆ ನಟನೆಯ ಜತೆ ಪ್ರಯಾಣದ ಹುಚ್ಚು ಸಿಕ್ಕಾಪಟೆ ಇತ್ತು. ಆಗಾಗ ಪ್ರವಾಸಕ್ಕೆ ಹೋಗುತ್ತಿದ್ದರು. ಈ ಬಾರಿಯೂ ಅಷ್ಟೇ ತಮ್ಮ ಫಿಯಾನ್ಸೆಯೊಂದಿಗೆ ಹಿಮಾಚಲ ಪ್ರದೇಶದ ಕಡೆಗೆ ಪ್ರವಾಸಕ್ಕೆ ಹೋಗಿದ್ದರು. ಆದರೆ ಅವರು ಪ್ರಯಾಣ ಮಾಡುತ್ತಿದ್ದ ಕಾರು ಕಣಿವೆಗೆ ಬಿದ್ದು ಅಪಘಾತಕ್ಕೀಡಾಗಿದೆ. ಕಿರುತೆರೆಯ ಹಲವು ಕಲಾವಿದರು ವೈಭವಿ ಫೋಟೋವನ್ನು ಶೇರ್ ಮಾಡಿಕೊಂಡು, ದುಃಖ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Actress Chandrika Saha: 15 ತಿಂಗಳ ಮಗನನ್ನು ನೆಲಕ್ಕೆ ಬಡಿದು ಗಾಯಗೊಳಿಸಿದ ಪಾಪಿ ತಂದೆ: ದೂರು ದಾಖಲಿಸಿದ ಕಿರುತೆರೆ ನಟಿ

ಹಲವು ವರ್ಷಗಳಿಂದಲೂ ವೈಭವಿ ಉಪಾಧ್ಯಾಯ ಅವರು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಸಿಐಡಿ, ಅದಾಲತ್​ ಮತ್ತಿತರ ಶೋಗಳಲ್ಲಿ ನಟಿಸಿದ್ದರು. ಆದರೆ ಅವರಿಗೆ ಅತ್ಯಂತ ಜನಪ್ರಿಯತೆ ತಂದುಕೊಟ್ಟಿದ್ದು ಸಾರಾಭಾಯ್ ವರ್ಸಸ್​ ಸಾರಾಭಾಯ್​. ಇದರಾಚೆ ಅವರು Kya Qasoor Hai Amla Ka ಟಿವಿ ಶೋದಲ್ಲಿ ನಟಿಸಿದ್ದರು. ದೀಪಿಕಾ ಪಡುಕೋಣೆ ಅವರ ಛಪಾಕ್​​ನಲ್ಲಿ ಕೂಡ ಕೆಲಸ ಮಾಡಿದ್ದರು. ಇದರಾಚೆ ಗುಜರಾತ್​ ಕಿರುತೆರೆಯಲ್ಲೂ ಹೆಸರು ಗಳಿಸಿದ್ದರು.

Exit mobile version