Site icon Vistara News

Viral News : 83ನೇ ವಯಸ್ಸಿನಲ್ಲಿ ತಂದೆಯಾಗುತ್ತಿದ್ದಾರೆ ಈ ಹಾಲಿವುಡ್‌ ನಟ!

#image_title

ವಾಷಿಂಗ್ಟನ್‌: ಹಾಲಿವುಡ್‌ನ ಹಿರಿಯ ನಟ ಅಲ್‌ ಪಸಿನೊ ಅವರಿಗೆ ಈಗಾಗಲೇ ಮೂವರು ಮಕ್ಕಳಿದ್ದಾರೆ. 83ನೇ ವಯಸ್ಸಿನಲ್ಲಿರುವ ಅವರು ಇದೀಗ ನಾಲ್ಕನೇ ಬಾರಿಗೆ ತಂದೆಯಾಗುತ್ತಿದ್ದಾರೆ. ಅವರ ಪ್ರಿಯತಮೆ ನೂರ್‌ ಅಲ್ಫಲ್ಲಾ ಗರ್ಭಿಣಿಯಾಗಿದ್ದಾರೆ ಎಂದು ಹಾಲಿವುಡ್‌ನ ಟಿಎಂಜೆಡ್‌ ಮಾಧ್ಯಮ ವರದಿ (Viral News) ಮಾಡಿದೆ.

ಹೌದು. ನೂರ್‌ ಅಲ್ಫಲ್ಲಾ (29) ತುಂಬು ಗರ್ಭಿಣಿಯಂತೆ. ಇನ್ನೊಂದು ತಿಂಗಳಲ್ಲಿ ಅವರು ಮಗುವಿಗೆ ಜನ್ಮ ನೀಡಲಿದ್ದಾರಂತೆ. ಈ ಕುರಿತಾಗಿ ಅನೇಕ ಮೂಲಗಳು ತಮಗೆ ಮಾಹಿತಿ ನೀಡಿವೆ ಎಂದು ಟಿಎಂಜೆಡ್‌ ವರದಿಯಲ್ಲಿ ಹೇಳಿದೆ.

ಇದನ್ನೂ ಓದಿ: Viral News : ಪ್ರತಿಭಟನೆಯ ಬಿಸಿ, ಕಾರು ಬಿಟ್ಟು ಬೈಕ್‌ನಲ್ಲಿ ಮದುವೆ ಮಂಟಪಕ್ಕೆ ತೆರಳಿದ ವರ!
ಅಲ್‌ ಪಸಿನೊ ಮತ್ತು ನೂರ್‌ ಕಳೆದ ವರ್ಷ ಏಪ್ರಿಲ್‌ನಿಂದ ಪ್ರೀತಿ ಮಾಡುತ್ತಿರುವುದಾಗಿ ವರದಿಯಾಗಿತ್ತು. ಇಬ್ಬರೂ ಒಟ್ಟಾಗಿ ರಾತ್ರಿಯ ಊಟ ಮಾಡಿದ್ದ ಫೋಟೋ ಹರಿದಾಡಿತ್ತು.

ಅಲ್‌ ಪಸಿನೊ ಅವರು ಈ ಹಿಂದೆ ಆಕ್ಟಿಂಗ್‌ ಕೋಚ್‌ ಜಾನ್‌ ಟರ್ರಂಟ್‌ ಅವರೊಂದಿಗೆ ಪ್ರೀತಿಯಲ್ಲಿದ್ದರು. ಅವರಿಬ್ಬರಿಗೆ ಜೂಲಿ ಮೇರಿ(33) ಹೆಸರಿನ ಮಗಳಿದ್ದಾಳೆ. ಹಾಗೆಯೇ ಅಲ್‌ ಪಸಿನೊ ಅವರು ಬೆವೆರ್ಲಿ ಡಿ ಏಂಜಲೋ ಜತೆಯಲ್ಲಿ 1997ರಿಂದ 2003ರವರೆಗೆ ಪ್ರೀತಿಯಲ್ಲಿದ್ದರು. ಆಗ ಅವರಿಗೆ ಆಂಟನ್‌ ಮತ್ತು ಒಲಿವಿಯಾ ಹೆಸರಿನ ಅವಳಿ ಮಕ್ಕಳು ಹುಟ್ಟಿದ್ದರು. ಇದೀಗ ಈ ಮಕ್ಕಳಿಗೆ 22 ವರ್ಷ ವಯಸ್ಸು. ಈಗ ಮತ್ತೊಮ್ಮೆ ಅಲ್‌ ಪಸಿನೊ ತಂದೆಯಾಗುವ ಸಂಭ್ರಮದಲ್ಲಿದ್ದಾರೆ.

ಇದನ್ನೂ ಓದಿ: Viral Video : ನಟ ಸಲ್ಮಾನ್‌ ಖಾನ್‌ಗೆ ಪ್ರೊಪೋಸ್‌ ಮಾಡಿದ ಫಾರಿನ್‌ ಬೆಡಗಿ ಯಾರು? ಏನು ಆಕೆಯ ಕೆಲಸ?
ಅಲ್‌ ಪಸಿನೊ ಅವರ ಹಾಲಿ ಪ್ರಿಯತಮೆ ನೂರ್‌ ಅಲ್ಫಲ್ಲಾ ಕೂಡ ಈ ಹಿಂದೆ ಹಲವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದರು. ನಿರ್ದೇಶಕಿಯಾಗಿರುವ ಅವರು ಹಿರಿಯ ಗಾಯಕ ಮಿಕ್‌ ಜಾಗ್ಗರ್‌, ಕೋಟ್ಯಧಿಪತಿ ನಿಕೋಲಸ್ ಬರ್ಗ್ರುಯೆನ್ ಅವರೊಂದಿಗೆ ಪ್ರೀತಿಯಲ್ಲಿದ್ದರು.

ಅಂದ ಹಾಗೆ ಅಲ್‌ ಪಸಿನೊ ಅವರೊಂದಿಗೆ ಗಾಡ್‌ಫಾದರ್‌ 2ನಲ್ಲಿ ನಟಿಸಿದ್ದ ನಟ ರಾಬರ್ಟ್‌ ಡಿ ನಿರೊ(79)ರ ಪ್ರಿಯತಮೆ ಟಿಫ್ಫನಿ ಛೆನ್‌ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದರು. ಇದು ರಾಬರ್ಟ್‌ ಅವರ ಏಳನೇ ಮಗುವಾಗಿದೆ.

Exit mobile version