Site icon Vistara News

Hombale Films: ಸಿಂಗಲ್ ಸುಂದರನ ಮದುವೆ ಆಮಂತ್ರಣ ಬಂದಾಯ್ತು: ರಾಘವೇಂದ್ರ ಸ್ಟೋರ್ಸ್‌ ಟ್ರೈಲರ್‌ ಔಟ್‌!

Hombale Films Raghavendra Stores Trailer Out

ಬೆಂಗಳೂರು: ನವರಸ ನಾಯಕ ಜಗ್ಗೇಶ್‌ (Actor Jaggesh) ಅವರು ತಮ್ಮ ನಟನೆಯ ಮೂಲಕವೇ ವೀಕ್ಷಕರಿಗೆ ನಗುವಿನ ಕಚಗುಳಿ ಇಡುವವರು. ತೋತಾಪುರಿ ಸಿನಿಮಾ ಮೂಲಕ ನಗೆ ಹಬ್ಬ ಮಾಡಿದ್ದ ನಟ ಇದೀಗ, ಹೊಂಬಾಳೆ ಸಂಸ್ಥೆ (Hombale Films) ನಿರ್ಮಾಣದ ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ಮೂಲಕ ವೀಕ್ಷಕ ಮಹಾಪ್ರಭುಗಳಿಗೆ ಮನೋರಂಜನೆ ನೀಡಲು ಸಿದ್ಧರಾಗಿದ್ದಾರೆ. ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ಟ್ರೈಲರ್‌ ಬಿಡುಗಡೆಗೊಂಡಿದೆ. ಅತ್ಯಂತ ಹಾಸ್ಯಮಯಯುಕ್ತವಾದ ಈ ಟ್ರೈಲರ್‌ ನೋಡಿ ನೋಡುಗರು ಮೆಚ್ಚುಗೆ ಸೂಚಿಸಿದ್ದಾರೆ.

ಹೊಂಬಾಳೆ ಬ್ಯಾನರ್‌ ಅಡಿಯಲ್ಲಿ ಸಿದ್ಧವಾಗಿರುವ ಸಿನಿಮಾಕ್ಕೆ ರಾಜಕುಮಾರ ಸಿನಿಮಾ ಖ್ಯಾತಿಯ ಸಂತೋಷ್‌ ಆನಂದ್‌ ರಾಮ್‌ ಅವರು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಹಾಸ್ಯಭರಿತವಾಗಿರುವ ಈ ಸಿನಿಮಾದಲ್ಲಿ ಜಗ್ಗೇಶ್‌ ಅವರು 40 ವರ್ಷ ದಾಟಿದರೂ ಇನ್ನೂ ಮದುವೆಯಾಗದ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕಾಮಿಡಿ ಕಿಂಗ್ ಜಗೇಶ್, ರವಿಶಂಕರ್‌ ಗೌಡ ಮತ್ತು ನಟಿ ಶ್ವೇತಾ ಶ್ರೀವಾಸ್ತವ್‌ ಅಭಿನಯಿಸುತ್ತಿದ್ದಾರೆ.

ಹೊಂಬಾಳೆ ಫಿಲ್ಮ್ಸ್‌ ಟ್ವೀಟ್‌ನಲ್ಲಿ ʻʻಇಡ್ಲಿ, ವಡೆ, ಖಾರಬಾತ್, ಕೇಸರಿಬಾತ್, ಪೂರಿ, ರವೆ ಇಡ್ಲಿ, ರೈಸ್ ಬಾತ್, ಮೈಸೂರ್ ಪಾಕ್, ಬೆಣ್ಣೆ-ಖಾಲಿ ಸೆಟ್, ಕಾಫಿ, ಟೀ, ಕಷಾಯ ದೊರೆಯುತ್ತದೆ. ರಾಘವೇಂದ್ರ ಸ್ಟೋರ್ಸ್‌ ರಸಬಾಳೆʼʼಎಂದು ಬರೆದುಕೊಂಡಿದೆ.

ಇದನ್ನೂ ಓದಿ: Actor Jaggesh : ಬಿಡುಗಡೆಯಾಯ್ತು ಜಗ್ಗೇಶ್‌ ನಟನೆಯ ರಾಘವೇಂದ್ರ ಸ್ಟೋರ್ಸ್‌ ಹಾಡು; ಇದು ಪಕ್ಕಾ ಸಿಂಗಲ್‌ ಮೀನಿಂಗ್‌ ಸಾಂಗ್‌

ಹೊಂಬಾಳೆ ಫಿಲ್ಮ್ಸ್‌ ಟ್ವೀಟ್‌

ರಿಷಬ್‌ ಶೆಟ್ಟಿ ಸಾಥ್‌

ರಿಷಬ್‌ ಶೆಟ್ಟಿ ಕೂಡ ಟ್ವೀಟ್‌ ಮಾಡಿ ʻʻಸಿಂಗಲ್ ಸುಂದರನ ಮದುವೆ ಆಮಂತ್ರಣವನ್ನ ಬಿಡುಗಡೆ ಮಾಡೋದಕ್ಕೆ ಬಹಳ ಖುಷಿ ಇದೆ, ಮದುವೆ ಪತ್ರಿಕೆ ತುಂಬಾ ಚೆನ್ನಾಗಿ ಮೂಡಿಬಂದಿದೆ. 28th ಏಪ್ರಿಲ್ ರಂದು ಮದುವೆಗೆ, ಕುಟುಂಬ ಸಮೇತರಾಗಿ ಬಂದು ಆಶೀರ್ವಾದ ಮಾಡಬೇಕು ಎಂದು ವಿನಂತಿʼʼಎಂದು ಬರೆದುಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ನಟ ರವಿಶಂಕರ್‌ ಸಿನಿಮಾ ಕುರಿತು ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ರಾಘವೇಂದ್ರ ಸ್ಟೋರ್ಸ್ ಎಂದು ಹೆಸರಿಡಲು ಕಾರಣ ಜಗಣ್ಣ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತ ಆದ ಕಾರಣವಂತೆʼʼಎಂದರು.

ಈ ಸಿನಿಮಾ ಕಳೆದ ವರ್ಷ ಆಗಸ್ಟ್‌ 5ರಂದೇ ಬಿಡುಗಡೆಯಾಗಬೇಕಿತ್ತು. ವರಮಹಾಲಕ್ಷ್ಮೀ ಹಬ್ಬವಾದ ಅಂದೇ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದ ಸಿನಿ ತಂಡ ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿತು. ಇದೀಗ ಸಿನಿಮಾ ಏಪ್ರಿಲ್‌ 28ರಂದು ತೆರೆ ಕಾಣುತ್ತಿದೆ.

Exit mobile version