Actor Jaggesh : ಬಿಡುಗಡೆಯಾಯ್ತು ಜಗ್ಗೇಶ್‌ ನಟನೆಯ ರಾಘವೇಂದ್ರ ಸ್ಟೋರ್ಸ್‌ ಹಾಡು; ಇದು ಪಕ್ಕಾ ಸಿಂಗಲ್‌ ಮೀನಿಂಗ್‌ ಸಾಂಗ್‌ Vistara News

ಸಿನಿಮಾ

Actor Jaggesh : ಬಿಡುಗಡೆಯಾಯ್ತು ಜಗ್ಗೇಶ್‌ ನಟನೆಯ ರಾಘವೇಂದ್ರ ಸ್ಟೋರ್ಸ್‌ ಹಾಡು; ಇದು ಪಕ್ಕಾ ಸಿಂಗಲ್‌ ಮೀನಿಂಗ್‌ ಸಾಂಗ್‌

ನವರಸ ನಾಯಕ ಜಗ್ಗೇಶ್‌ (Actor Jaggesh) ನಟನೆಯ ರಾಘವೇಂದ್ರ ಸ್ಟೋರ್ಸ್‌ ಸಿನಿಮಾದ ಸಿಂಗಲ್‌ ಸುಂದರ ಹಾಡು ಬಿಡುಗಡೆಯಾಗಿದೆ. ಈ ಹಾಡು ಇದೀಗ ಎಲ್ಲ ಕಡೆ ಹರಿದಾಡಿದ್ದು, ವೈರಲ್‌ ಆಗುತ್ತಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನವರಸ ನಾಯಕ ಜಗ್ಗೇಶ್‌ (Actor Jaggesh) ಅವರು ತಮ್ಮ ನಟನೆಯ ಮೂಲಕವೇ ವೀಕ್ಷಕರಿಗೆ ನಗುವಿನ ಕಚಗುಳಿ ಇಡುವವರು. ತೋತಾಪುರಿ ಸಿನಿಮಾ ಮೂಲಕ ನಗೆ ಹಬ್ಬ ಮಾಡಿದ್ದ ನಟ ಇದೀಗ, ಹೊಂಬಾಳೆ ಸಂಸ್ಥೆ ನಿರ್ಮಾಣದ ರಾಘವೇಂದ್ರ ಸ್ಟೋರ್ಸ್‌ ಸಿನಿಮಾ ಮೂಲಕ ವೀಕ್ಷಕ ಮಹಾಪ್ರಭುಗಳಿಗೆ ಮನೋರಂಜನೆ ನೀಡಲು ಸಿದ್ಧರಾಗಿದ್ದಾರೆ. ಅವರ ಈ ಹೊಸ ಸಿನಿಮಾದ ಹಾಡು ಇದೀಗ ಬಿಡುಗಡೆಯಾಗಿದೆ.

ಇದನ್ನೂ ಓದಿ: Narendra Modi: ಪ್ರಧಾನಿ ನರೇಂದ್ರ ಮೋದಿಗೆ ಗುರು ರಾಘವೇಂದ್ರರ ವಿಗ್ರಹ ಉಡುಗೊರೆ ಕೊಟ್ಟ ಜಗ್ಗೇಶ್‌
ಜಗ್ಗೇಶ್‌ ಅವರ ಸಿನಿಮಾ ಹಾಗೂ ಹಾಡುಗಳಲ್ಲಿ ಡಬಲ್‌ ಮೀನಿಂಗ್‌ ಹೆಚ್ಚಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದೀಗ ಬಿಡುಗಡೆಯಾಗಿರುವ ಹಾಡು ಪಕ್ಕಾ ಸಿಂಗಲ್‌ ಮೀನಿಂಗ್‌ ಇರುವುದಾಗಿದೆ. ಸಿಂಗಲ್‌ ಸುಂದರ ಹೆಸರಿನ ಈ ಹಾಡನ್ನು ಕರ್ನಾಟಕದ ಎಲ್ಲ ಸಿಂಗಲ್ಸ್‌ಗೆ ಅರ್ಪಿಸಿದ್ದೇವೆ ಎನ್ನುತ್ತಿದೆ ಚಿತ್ರತಂಡ.‌


ಮಂಜುನಾಥ ಸ್ಟೋರ್ಸ್‌ ಸಿನಿಮಾಕ್ಕೆ ಅಜನೀಶ್‌ ಲೋಕನಾಥ ಅವರ ಸಂಗೀತವಿದೆ. ಈ ಸಿಂಗಲ್‌ ಸುಂದರ ಹಾಡನ್ನು ವಿಜಯ ಪ್ರಕಾಶ್‌ ಹಾಗೂ ನವೀನ್‌ ಸಜ್ಜು ಅವರು ಹಾಡಿದ್ದಾರೆ. ಹೊಂಬಾಳೆ ಬ್ಯಾನರ್‌ ಅಡಿಯಲ್ಲಿ ಸಿದ್ಧವಾಗಿರುವ ಸಿನಿಮಾಕ್ಕೆ ರಾಜಕುಮಾರ ಸಿನಿಮಾ ಖ್ಯಾತಿಯ ಸಂತೋಷ್‌ ಆನಂದ್‌ ರಾಮ್‌ ಅವರು ಆಕ್ಷನ್‌ ಕಟ್‌ ಹೇಳಿದ್ದಾರೆ.

ಹಾಸ್ಯಭರಿತವಾಗಿರುವ ಈ ಸಿನಿಮಾದಲ್ಲಿ ಜಗ್ಗೇಶ್‌ ಅವರು 40 ವರ್ಷ ದಾಟಿದರೂ ಇನ್ನೂ ಮದುವೆಯಾಗದ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಕಳೆದ ವರ್ಷ ಆಗಸ್ಟ್‌ 5ರಂದೇ ಬಿಡುಗಡೆಯಾಗಬೇಕಿತ್ತು. ವರಮಹಾಲಕ್ಷ್ಮೀ ಹಬ್ಬವಾದ ಅಂದೇ ಸಿನಿಮಾ ಬಿಡುಗಡೆ ಮಾಡಲು ಮುಂದಾಗಿದ್ದ ಸಿನಿ ತಂಡ ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿತು. ಈ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಅಂದ ಹಾಗೆ ಇದು ಹೊಂಬಾಳೆ ಫಿಲ್ಮ್ಸ್‌ ಅವರ 12ನೇ ಸಿನಿಮಾವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Pooja Gandhi: ಮಳೆ ಹುಡುಗಿಗೆ ಮಂತ್ರ ಮಾಂಗಲ್ಯ; ಹೊಸ ಬಾಳಿಗೆ ಕಾಲಿಟ್ಟ ಪೂಜಾ ಗಾಂಧಿ

Pooja Gandhi: ಬೆಂಗಳೂರಿನ ಉದ್ಯಮಿ ವಿಜಯ್ ಘೋರ್ಪಡೆ ಅವರೊಂದಿಗೆ ನಟಿ ಪೂಜಾ ಗಾಂಧಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಿತ್ರ ರಂಗದ ಗಣ್ಯರು, ಅಭಿಮಾನಿಗಳು ನವದಂಪತಿಗೆ ಶುಭ ಹಾರೈಸಿದ್ದಾರೆ.

VISTARANEWS.COM


on

Pooja Gandhi and Vijay Ghorpade
Koo

ಬೆಂಗಳೂರು: ನಟಿ ಪೂಜಾ ಗಾಂಧಿ (Pooja Gandhi) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದ್ಯಮಿ ಹಾಗೂ ಬಹುಕಾಲದ ಗೆಳೆಯ ವಿಜಯ್ ಘೋರ್ಪಡೆ ಅವರನ್ನು ಮಳೆ ಹುಡುಗಿ ಮದುವೆಯಾಗಿದ್ದು, ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಬಂಧು-ಮಿತ್ರರು, ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಸರಳವಾಗಿ ಬುಧವಾರ ವಿವಾಹವಾಗಿದ್ದಾರೆ.

ವಿವಾಹ ಸಮಾರಂಭದಲ್ಲಿ ನಿರ್ದೇಶಕ ಯೋಗರಾಜ್ ಭಟ್, ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್, ಸಾಹಿತಿ ಜಯಂತ್ ಕಾಯ್ಕಿಣಿ, ನಟಿ ಸುಧಾರಣಿ, ಶುಭಾ ಪೂಂಜಾ, ನಿರ್ದೇಶಕಿ ಸುಮನಾ ಕಿತ್ತೂರು ಮತ್ತಿತರರು ಭಾಗವಹಿಸಿ, ನವ ದಂಪತಿಗೆ ಶುಭ ಕೋರಿದರು.

ಮೂಲತಃ ಉತ್ತರ ಪ್ರದೇಶದವರಾದ ಪೂಜಾ ಗಾಂಧಿ ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತ ಬೆಂಗಳೂರಿನಲ್ಲೇ ಕೆಲವು ಸಮಯದಿಂದ ನೆಲೆಸಿದ್ದಾರೆ. ತಮ್ಮ ಕನ್ನಡ ಪ್ರೀತಿಯಿಂದಲೇ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಕನ್ನಡ ಮಾತನಾಡಲು ಅಷ್ಟೇ ಅಲ್ಲ ಓದಲು ಮತ್ತು ಬರೆಯಲು ಅವರು ಕಲಿತಿದ್ದು, ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯ್ ಅವರೇ ಪೂಜಾ ಗಾಂಧಿಯವರಿಗೆ ಕನ್ನಡ ಕಲಿಸಿರುವುದಾಗಿ ಮಾಹಿತಿ ಇದೆ. ಪೂಜಾ ಗಾಂಧಿ ಹಾಗೂ ವಿಜಯ್ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದರು. ಕನ್ನಡ ಕಲಿತು ಕನ್ನಡಿಗನನ್ನು ಮದುವೆಯಾಗುವ ಮೂಲಕ ಇದೀಗ ಕರ್ನಾಟಕದ ಸೊಸೆಯಾಗಿದ್ದಾರೆ. ಪೂಜಾ ಗಾಂಧಿ ಕನ್ನಡ ಕಲಿತಿರುವುದು ಮಾತ್ರವಲ್ಲ ಅವರ ತಾಯಿಗೂ ಕನ್ನಡ ಹೇಳಿ ಕೊಟ್ಟಿದ್ದಾರೆ ಎನ್ನುವುದು ವಿಶೇಷ. 2012ರಲ್ಲಿ ಪೂಜಾ ಗಾಂಧಿ ಅವರಿಗೆ ಉದ್ಯಮಿ ಆನಂದ್ ಗೌಡ ಜತೆ ನಿಶ್ಚಿತಾರ್ಥವಾಗಿತ್ತು. ನಂತರ ಅದು ಮುರಿದು ಬಿದ್ದಿತ್ತು. ಈಗ ವಿಜಯ್ ಘೋರ್ಪಡೆ ಜತೆ ವಿವಾಹವಾಗಿದೆ.

ಇದನ್ನೂ ಓದಿ | Actress Ramya: ಹುಟ್ಟುಹಬ್ಬದಂದು ನಾಯಿಮರಿಗಳೊಂದಿಗೆ ಕಾಲಕಳೆದ ಮೋಹಕ ತಾರೆ ರಮ್ಯಾ

ಹಿಂದಿ, ಬಂಗಾಳಿ ಚಿತ್ರಗಳಲ್ಲಿ ನಟಿಸುತ್ತಿದ್ದ ಪೂಜಾ ಗಾಂಧಿ 2006ರಲ್ಲಿ ತೆರೆಕಂಡ ʼಮುಂಗಾರು ಮಳೆʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಯೋಗರಾಜ್‌ ಭಟ್‌ ನಿರ್ದೇಶನದ ಈ ಚಿತ್ರ ಕನ್ನಡದಲ್ಲಿ ದಾಖಲೆಯ ಕಲೆಕ್ಷನ್‌ ಮಾಡಿತ್ತು. ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ಪೂಜಾ ಗಾಂಧಿ ಈ ಚಿತ್ರದ ಮೂಲಕ ಸ್ಟಾರ್‌ ಆಗಿ ಹೊರ ಹೊಮ್ಮಿದ್ದರು. ಬಳಿಕ ಪೂಜಾ ಗಾಂಧಿ ಪುನೀತ್‌ ರಾಜ್‌ ಕುಮಾರ್‌, ಯಶ್‌, ಉಪೇಂದ್ರ ಮುಂತಾದವರ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಜತೆಗೆ ತಮಿಳು, ತೆಲುಗು, ಮಲೆಯಾಳಂ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Actress Ramya: ಹುಟ್ಟುಹಬ್ಬದಂದು ನಾಯಿಮರಿಗಳೊಂದಿಗೆ ಕಾಲಕಳೆದ ಮೋಹಕ ತಾರೆ ರಮ್ಯಾ

Actress Ramya: ಸ್ಯಾಂಡಲ್‌ವುಡ್‌ ಕ್ವೀನ್ ನಟಿ ರಮ್ಯಾ ಅವರು 41ನೇ ವಸಂತಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ್ಮದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ.

VISTARANEWS.COM


on

Actress Ramya
Koo

ಬೆಂಗಳೂರು: ಮೋಹಕ ತಾರೆ, ಸ್ಯಾಂಡಲ್‌ವುಡ್‌ ಕ್ವೀನ್ ನಟಿ ರಮ್ಯಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 41ನೇ ವಸಂತಕ್ಕೆ ಕಾಲಿಟ್ಟಿರುವ ತಮ್ಮ ನೆಚ್ಚಿನ ನಟಿಗೆ (Actress Ramya) ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರುತ್ತಿದ್ದಾರೆ. ಮತ್ತೊಂದೆಡೆ ರಮ್ಯಾ ಜನುಮದಿನವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದು, ತಮಗೆ ಇಷ್ಟವಾದವರ ಜತೆ ಕಾಲ ಕಳೆದ ವಿಡಿಯೊವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ನಟಿ ರಮ್ಯಾ ಅವರಿಗೆ ಶ್ವಾನಗಳೆಂದರೆ ಬಹಳ ಪ್ರೀತಿ. ಮನೆಯಲ್ಲಿ ಹಲವು ನಾಯಿಗಳನ್ನು ಅವರು ಸಾಕಿದ್ದಾರೆ. ಹೀಗಾಗಿ ಬರ್ತ್‌ಡೇ ದಿನ ಮುದ್ದಾದ ನಾಯಿ ಮರಿಗಳ ಜತೆ ಅವರು ಕಾಲಕಳೆದಿದ್ದು, ಆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ನಿಮ್ಮ ಶುಭಾಶಯಗಳು ನನ್ನ ಮನಸ್ಸಿಗೆ ಸಂತೋಷ ನೀಡಿದಂತೆ ಈ ವಿಡಿಯೊ ನಿಮ್ಮ ಮನಸ್ಸಿಗೆ ಮುದ ನೀಡುವ ಭರವಸೆ ಇದೆ” ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.

ಶ್ವಾನ ಪ್ರೇಮಿಯಾಗಿರುವ ರಮ್ಯಾ ಅವರು ಬೀದಿ ನಾಯಿಗಳ ಸಂರಕ್ಷಣೆಗಾಗಿ ಕೆಲಸ ಮಾಡುವ ಸಂಘ-ಸಂಸ್ಥೆಗಳ ಜತೆಗೂ ಗುರುತಿಸಿಕೊಂಡಿದ್ದಾರೆ. ಇವರ ಶ್ವಾನಗಳೆಂದರೆ ಅದೆಷ್ಟು ಇಷ್ಟವೆಂದರೆ, ಒಮ್ಮೆ ತಮ್ಮ ಮುದ್ದಿನ ನಾಯಿ ನಾಪತ್ತೆಯಾಗಿದ್ದರಿಂದ ಉತ್ತರ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್‌ ಆಗಿದ್ದರು. ನಂತರ ನಾಯಿ ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರೆ. ಆದರೆ, ಕಾಣೆಯಾಗಿದ್ದ ನಾಯಿ ʼಚಾಂಪ್‌ʼ ಮೃತಪಟ್ಟಿತ್ತು. ಇದರಿಂದ ಅವರು ಬಹಳ ಬೇಸರಗೊಂಡಿದ್ದರು.

ಇದನ್ನೂ ಓದಿ | Darshan: ದರ್ಶನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ‘ಕಾಟೇರ’ ಬಿಡುಗಡೆ ದಿನಾಂಕ ಘೋಷಣೆ

ರಾಜಕೀಯಕ್ಕೆ ಎಂಟ್ರಿ ನೀಡಿದ್ದರಿಂದ ಚಿತ್ರರಂಗದಿಂದ ದೂರವಾಗಿದ್ದ ನಟಿ ರಮ್ಯಾ ಅವರು ಈಗ ಮತ್ತೆ ಚಿತ್ರರಂಗಕ್ಕೆ ಮರಳಿ ಎರಡನೇ ಇನಿಂಗ್ಸ್‌ ಆರಂಭಿಸಿದ್ದಾರೆ. ‘ಆ್ಯಪಲ್ ಬಾಕ್ಸ್’ ಹೆಸರಿನ ಸ್ವಂತ ನಿರ್ಮಾಣ ಸಂಸ್ಥೆ ಪ್ರಾರಂಭಿಸಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಅವರೇ ನಾಯಕಿ ಎಂದು ಮೊದಲು ಹೇಳಲಾಗಿತ್ತು. ಆದರೆ, ನಂತರ ಅವರ ಸ್ಥಾನಕ್ಕೆ ನಟಿ ಸಿರಿ ರವಿಕುಮಾರ್‌ ಆಯ್ಕೆಯಾಗಿದ್ದರು. ಇದಕ್ಕೂ ಮೊದಲು ‘ಹಾಸ್ಟೆಲ್ ಹುಡುಗರು’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿಯೂ ನಟಿಸಿದ್ದರು. ಇದೀಗ ಡಾಲಿ ಧನಂಜಯ್ ನಟನೆಯ ‘ಉತ್ತರಕಾಂಡ’ ಸಿನಿಮಾದಲ್ಲಿಯೂ ರಮ್ಯಾ ನಟಿಸಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕಿರುತೆರೆ

BBK SEASON 10: ಸ್ಪರ್ಧಿಗಳ ಕಾಲಿಗೆ ಹಗ್ಗ; ಕಣ್ಣೀರಿಟ್ಟ ಸಿರಿ

BBK SEASON 10: ಬಿಗ್‌ ಬಾಸ್‌ ಮನೆಯೊಳಗೆ ಸಿರಿ ಕಣ್ಣೀರು ಸುರಿಸಿದ್ದಾರೆ. ಟಾಸ್ಕ್‌ ವೇಳೆ ಅವರಿಗೆ ನೋವಾಗಿದ್ದು, ನೋಡಿಕೊಂಡು ಆಡಿ ಎಂದು ಇತರ ಸ್ಪರ್ಧಿಗಳಿಗೆ ಹೇಳಿದ್ದಾರೆ.

VISTARANEWS.COM


on

siri bbk
Koo

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 (BBK SEASON 10) ಶೋ ದಿನದಿಂದ ದಿನಕ್ಕೆ ರೋಚಕವಾಗುತ್ತ ಸಾಗುತ್ತಿದೆ. ಇತ್ತೀಚೆಗಷ್ಟೇ 50 ದಿನ ಪೂರೈಸಿರುವ ಶೋಗೆ ವೈಲ್ಡ್‌ ಕಾರ್ಡ್‌ ಮೂಲಕ ಇಬ್ಬರು ಸ್ಪರ್ಧಿಗಳು ಸೇರ್ಪಡೆಯಾಗಿದ್ದಾರೆ. ಇತ್ತ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಇಂದು ನೀಡಿದ್ದ ಟಾಸ್ಕ್‌ ಸಖತ್‌ ಚಾಲೆಂಜಿಂಗ್ ಆಗಿದೆ. ಅದರ ಪರಿಣಾಮವೂ ಜೋರಾಗಿಯೇ ಕಂಡು ಬಂದಿದೆ. Jio Cinema ಬಿಡುಗಡೆ ಮಾಡಿರುವ ಹೊಸ ಪ್ರೋಮೊದಲ್ಲಿ ಈ ಆಟದ ರೂಪುರೇಷೆಗಳು ಜಾಹೀರಾಗಿವೆ.

ಎರಡೂ ಗುಂಪಿನ ಎಲ್ಲ ಸದಸ್ಯರು ಕಾಲಿಗೆ ಹಗ್ಗವನ್ನು ಕಟ್ಟಿಕೊಳ್ಳಬೇಕು. ಎದುರಿಗೆ ನಂಬರ್ ಹಾಕಿದ ಜಾಗದಲ್ಲಿ ಒಂದಿಷ್ಟು ಬಾಲ್‌ಗಳನ್ನು ಇಡಲಾಗಿದೆ. ಬಿಗ್‌ ಬಾಸ್ ಸೂಚಿಸಿದ ನಂಬರ್ ಇರುವ ಜಾಗಕ್ಕೆ ಎರಡೂ ಗುಂಪಿನ ಸದಸ್ಯರು ಜಿಗಿಯುತ್ತ ಓಡಿ ಹೋಗಿ ಬಾಲ್‌ ಎತ್ತಿಕೊಂಡು ಬಂದು ತಮ್ಮ ತಂಡದ ಜಾಲರಿಯಲ್ಲಿ ಹಾಕಬೇಕು. ಯಾವ ತಂಡದವರು ಹೆಚ್ಚು ಬಾಲ್‌ಗಳನ್ನು ಎತ್ತಿಕೊಂಡು ಬಂದು ಜಾಲರಿಯಲ್ಲಿ ಹಾಕುತ್ತಾರೋ ಅವರು ಗೆದ್ದಂತೆ.
ಈ ಟಾಸ್ಕ್‌ನಲ್ಲಿ ಬಾಲ್‌ ಎತ್ತುವಾಗ ಎರಡೂ ತಂಡದ ನಡುವೆ ಜಿದ್ದಾಜಿದ್ದಿಯಾಗಿದೆ. ಸ್ನೇಹಿತ್‌ ತಳ್ಳಿದ್ದರಿಂದ ಬಿದ್ದಿರುವ ಸಿರಿ, ‘ಇಷ್ಟೊಂದು ಫಿಜಿಕಲ್ ಆಗುವುದು ಬೇಕಾ?’ ಎಂದು ಪ್ರಶ್ನಿಸಿದ್ದಾರೆ. ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾರ್ತಿಕ್, ಎರಡೂ ತಂಡದ ಸದಸ್ಯರನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ಈ ಝಲಕ್‌ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಕಣ್ಣೀರಿಟ್ಟ ಸಿರಿ

ಈ ಟಾಸ್ಕ್​ ವೇಳೆ ಕೆಲವರು ನಡೆದುಕೊಂಡ ರೀತಿಯಿಂದ ಸಿರಿಗೆ ಕಷ್ಟ ಆಗಿದೆ. ಅವರು ನೋವಿನಿಂದ ಕಣ್ಣೀರು ಹಾಕಿರುವುದು ಪ್ರೋಮೊದಲ್ಲಿ ಕಂಡು ಬಂದಿದೆ. ಆಟ ಗೆಲ್ಲಲೇಬೇಕು ಎಂಬ ಜಿದ್ದಿನಿಂದ ಒಬ್ಬರ ಮೇಲೆ ಮತ್ತೊಬ್ಬರು ಬಿದ್ದಿದ್ದರಿಂದ ಸಿರಿ ಅವರಿಗೆ ನೋವಾಗಿದೆ. ಮಾತ್ರವಲ್ಲ ಕೆಲವು ಸ್ಪರ್ಧಿಗಳು ತೊಂದರೆ ಅನುಭವಿಸಿದ್ದಾರೆ. ಸ್ನೇಹಿತ್​, ಮೈಕೆಲ್​ ಮುಂತಾದವರು ಬಲ ಪ್ರಯೋಗಿಸಿ ಬೇರೆಯವರನ್ನು ತಳ್ಳಿದ್ದಾರೆ. ‘ಏನಿದು ರಾಕ್ಷಸರ ರೀತಿ?ʼ ಎಂದು ಮಹಿಳಾ ಸ್ಪರ್ಧಿಗಳು ಟೀಕಿಸಿದ್ದಾರೆ.

ಇದನ್ನೂ ಓದಿ: BBK SEASON 10: ಕನ್ನಡ ಪತ್ರವನ್ನು ಓದಿದ ಮೈಕಲ್‌; ದಂಗಾದ ಸ್ಪರ್ಧಿಗಳು

ಗಾಯಗೊಂಡ ತನಿಷಾ ಕುಪ್ಪಂಡ 

ಟಾಸ್ಕ್‌ ನಡುವೆ ಗಾಯಗೊಂಡ ತನಿಷಾ ಕುಪ್ಪಂಡ ಚಿಕಿತ್ಸೆಗಾಗಿ ಹೊರ ಬಂದಿದ್ದಾರೆ ಎನ್ನುವ ಸುದ್ದಿಯ ನಡುವೆಯೇ ಈ ಬೆಳವಣಿಗೆ ಕಂಡು ಬಂದಿದೆ. ಎರಡು ತಂಡಗಳು ಆಟ ಆಡುವಾಗ ತನಿಷಾ ಕಾಲಿಗೆ ಪೆಟ್ಟಾಗಿದ್ದು, ನೋವಿನಿಂದ ಒದ್ದಾಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗೆ ಕಳುಹಿಸಲಾಗಿದೆ. ಬಿಗ್ ಬಾಸ್ ಟೀಮ್ ಕಡೆಯವರು ತನಿಷಾ ಅವರನ್ನು ಚಿಕಿತ್ಸೆಗಾಗಿ ಹೊರ ಕರೆದುಕೊಂಡು ಹೋಗಿದ್ದಾರೆ. ಸಣ್ಣ ಪುಟ್ಟ ಏಟಾಗಿದ್ದರೆ ಆದಷ್ಟು ಬೇಗ ಬಿಗ್ ಬಾಸ್‌ಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಾರಿ ತನಿಷಾ ನಾಮಿನೇಟ್ ಆಗಿದ್ದರು. ಅವರನ್ನು ಸೇವ್ ಮಾಡುವಂತೆ ಕಾರ್ತಿಕ್ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿಯಾಗಿದ್ದ ಪವಿ ಪೂವಪ್ಪ, ಅವಿನಾಶ್ ಶೆಟ್ಟಿ ಬಳಿ ಮನವಿ ಮಾಡಿದ್ದರು. ಸದ್ಯ ತನಿಷಾ ಆರೋಗ್ಯ ಸ್ಥಿತಿ ಹೇಗಿದೆ ಎನ್ನುವುದು ತಿಳಿದು ಬಂದಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Continue Reading

ಕಿರುತೆರೆ

Mandya Ramesh: ಶೂಟಿಂಗ್ ವೇಳೆ ಮಂಡ್ಯ ರಮೇಶ್‌ಗೆ ಗಾಯ; ಆಸ್ಪತ್ರೆಗೆ ದಾಖಲು

Mandya Ramesh: ಕಾಲು ಜಾರಿ ಬಿದ್ದ ಹಿನ್ನೆಲೆಯಲ್ಲಿ ನಟ ಮಂಡ್ಯ ರಮೇಶ್‌ ಅವರ ಬಲಗಾಲು, ಬಲಗೈ ಮತ್ತು ಎಡಗೈಗೆ ಗಾಯಗಳಾಗಿವೆ. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

VISTARANEWS.COM


on

Mandya Ramesh
Koo

ಬೆಂಗಳೂರು: ಸೀರಿಯಲ್‌ ಶೂಟಿಂಗ್ ವೇಳೆ ನಟ ಮಂಡ್ಯ ರಮೇಶ್‌ (Mandya Ramesh) ಅವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಟ ರಮೇಶ್ ಅರವಿಂದ್ ನಿರ್ಮಾಣದ ಆಸೆ ಧಾರಾವಾಹಿ ಚಿತ್ರೀಕರಣದಲ್ಲಿ ನಟಿಸುತ್ತಿದ್ದಾಗ ಕಾಲು ಜಾರಿ ಬಿದ್ದು ಮಂಡ್ಯ ರಮೇಶ್‌ ಗಾಯಗೊಂಡಿದ್ದಾರೆ.

ಶೂಟಿಂಗ್ ಸೆಟ್‌ನಲ್ಲಿ ಸೋಮವಾರ ಘಟನೆ ನಡೆದಿದ್ದು, ಕಾಲು ಜಾರಿ ಬಿದ್ದ ಹಿನ್ನೆಲೆಯಲ್ಲಿ ಬಲಗಾಲು, ಬಲಗೈ ಮತ್ತು ಎಡಗೈಗೆ ಗಾಯಗಳಾಗಿವೆ. ಹೀಗಾಗಿ ಎಡಗಾಲಿನ ಮಂಡಿ ಭಾಗಕ್ಕೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸದ್ಯ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಬಳಿ ಇರುವ ಅಪೊಲೋ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ಸಂಜೆ ಡಿಸ್ಚಾರ್ಜ್‌ ಆಗಲಿದ್ದಾರೆ ಎಂದು ಮಂಡ್ಯ ರಮೇಶ್ ಪತ್ನಿ ಸರೋಜಮ್ಮ ತಿಳಿಸಿದ್ದಾರೆ.

ಇದನ್ನೂ ಓದಿ | Ravichandran: ಮಾತಿನ ಮನೆಯಲ್ಲಿ ‘ದ ಜಡ್ಜ್ ಮೆಂಟ್’; ಕ್ರೇಜಿಸ್ಟಾರ್‌ ಅಭಿನಯದ ಚಿತ್ರ ಶೀಘ್ರ ತೆರೆಗೆ

ಈ ಬಗ್ಗೆ ಮಂಡ್ಯ ರಮೇಶ್ ಅವರ ಪುತ್ರಿ ದಿಶಾ ಪ್ರತಿಕ್ರಿಯಿಸಿ, ಶೂಟಿಂಗ್‌ ಮಾಡುತ್ತಿದ್ದಾಗ ತಂದೆಯವರು ಎಡವಿ ಬಿದ್ದಾಗ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೀರಿಯಲ್‌ ಶೂಟಿಂಗ್‌ ವೇಳೆ ಘಟನೆ ನಡೆದಿದ್ದು, ಆಸ್ಪತ್ರೆಯ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಈಗ ಅವರಿಗೆ ಯಾವುದೇ ತೊಂದರೆ ಇಲ್ಲ, ಆರೋಗ್ಯವಾಗಿದ್ದಾರೆ ಎಂದು ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ.

ನಟಿ ಲೀಲಾವತಿ ಆರೋಗ್ಯ ವಿಚಾರಿಸಿ ಭಾವುಕರಾದ ಶಿವ ರಾಜ್‌ಕುಮಾರ್‌

shiv raj kumar
shiv raj kumar

ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿರುವ ಕನ್ನಡದ ಹಿರಿಯ ನಟಿ ಲೀಲಾವತಿ (Actress Leelavathi) ಅವರ ನೆಲಮಂಗಲ ತಾಲೂಕಿನಲ್ಲಿರುವ ಸೋಲದೇವನಹಳ್ಳಿಯ ನಿವಾಸಕ್ಕೆ ನಟ ಶಿವ ರಾಜ್‌ಕುಮಾರ್ (Shiva Rajkumar) ಹಾಗೂ ಅವರ ಪತ್ನಿ ಗೀತಾ ಶಿವ ರಾಜ್‌ಕುಮಾರ್ ಮಂಗಳವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

‘‘ಲೀಲಾವತಿ ಅವರಿಗೆ ಮೊದಲಿನಿಂದಲೂ ನಮ್ಮ ಬಗ್ಗೆ ಅಪಾರ ಪ್ರೀತಿ. ನಾವು ಅವರನ್ನು ಯಾವಾಗ ಕಂಡರೂ ಅದೇ ಆತ್ಮೀಯತೆ, ಅದೇ ಪ್ರೀತಿಯೊಂದ ಮಾತನಾಡಿಸುತ್ತಿದ್ದರು. ಅವರ ಆ ಪ್ರೀತಿಯನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಈಗ ವಿನೋದ್ ರಾಜ್‌ ಅವರನ್ನು ನೋಡಿದರೆ ಅವರ ತಾಯಿಯನ್ನೇ ನೋಡಿದಂತೆ ಆಗುತ್ತದೆ. ಲೀಲಾವತಿ ಅವರ ಆರೋಗ್ಯ ಕ್ಷೀಣಿಸಿರುವ ಬಗ್ಗೆ ಬೇಜಾರಾಗುತ್ತದೆ. ಆದರೆ ಅವರು ಇನ್ನೂ ನಮ್ಮೊಂದಿಗೆ ಇರುತ್ತಾರೆ ಎಂಬ ನಂಬಿಕೆ ಇದೆ. ಅವರಿಗೆ ದೇವರ ಆಶೀರ್ವಾದವಿದೆ. ಎಲ್ಲದಕ್ಕಿಂತಲೂ ಹೆಚ್ಚಿನದಾಗಿ ಅವರ ಮಗನ ಪ್ರೀತಿ ಇದೆ’’ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

‘ʼಅಮ್ಮ ನನ್ನ ಧ್ವನಿ ಕಂಡು ಹಿಡಿದರು. ಈ ವಯಸ್ಸಿನಲ್ಲಿಯೂ ಅವರು ನೋವನ್ನು ಸಹಿಸಿಕೊಂಡು ಇರುವ ಶಕ್ತಿ ಇದೆಯಲ್ಲ ಅದು ಸಾಮಾನ್ಯದ್ದಲ್ಲ. ಯೋಗ ಪುರುಷರು ಅನ್ನುತ್ತಾರಲ್ಲ ಹಾಗೆ. ಈಗಲೂ ಅವರು ಸ್ಟ್ರಾಂಗ್ ಆಗಿದ್ದಾರೆ. ಒಳ್ಳೆಯ ಮನಸ್ಸಿರುವವರು, ಒಳ್ಳೆಯ ವ್ಯಕ್ತಿತ್ವ ಉಳ್ಳವರು. ನಾವು ಅವರನ್ನು ಇಷ್ಟೊಂದು ಪ್ರೀತಿಸಲು ಅದೇ ಕಾರಣ’ʼ ಎಂದು ಶಿವಣ್ಣ ಭಾವುಕರಾದರು. ಜತೆಗೆ ವಿನೋದ್‌ ರಾಜ್‌ ಕೈ ಹಿಡಿದು ಸಾಂತ್ವಾನ ಹೇಳಿದರು.

ʼʼನೋವು ಎಲ್ಲರಿಗೂ ಆಗುತ್ತೆ. ನಾವು ತಾಳಿಕೊಂಡಿಲ್ಲವೇ ಹಾಗೆಯೇ ನೀವು ಧೈರ್ಯ ತಂದುಕೊಳ್ಳಿ. ನಿಮ್ಮ ತಾಯಿಯವರಿಗೆ ಮಗ ಚೆನ್ನಾಗಿರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅವರ ಆಸೆಯಂತೆ ನೀವು ಚೆನ್ನಾಗಿರಬೇಕು’’ ವಿನೋದ್ಎಂ‌ ರಾಜ್‌ ಅವರ ಕೈ ಹಿಡಿದು ಶಿವರಾಜ್ ಕುಮಾರ್ ಧೈರ್ಯ ತುಂಬಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
vijaypura accident
ಕರ್ನಾಟಕ57 seconds ago

Road Accident : ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

Task force committee meeting at Kottur
ವಿಜಯನಗರ12 mins ago

Vijayanagara News: ಮೂಲ ಸೌಕರ್ಯಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಿ: ಶಾಸಕ ನೇಮಿರಾಜ ನಾಯ್ಕ

Pooja Gandhi and Vijay Ghorpade
ಕರ್ನಾಟಕ16 mins ago

Pooja Gandhi: ಮಳೆ ಹುಡುಗಿಗೆ ಮಂತ್ರ ಮಾಂಗಲ್ಯ; ಹೊಸ ಬಾಳಿಗೆ ಕಾಲಿಟ್ಟ ಪೂಜಾ ಗಾಂಧಿ

Bombay High court orders to son to vacate his mother flat
ಕೋರ್ಟ್28 mins ago

ಆರೈಕೆ ಮಾಡದ ಮಗನಿಗೆ ತಾಯಿಯ ಫ್ಲ್ಯಾಟ್ ಖಾಲಿ ಮಾಡಲು ಬಾಂಬೆ ಹೈಕೋರ್ಟ್ ಆದೇಶ

TV Mohandas Pai Priyank Kharge
ಕರ್ನಾಟಕ38 mins ago

Mohandas Pai : ಐಟಿ ಸಿಟಿ ಗರಿ ಉದುರೀತು ಎಂದ ಮೋಹನ್‌ ದಾಸ್‌ ಪೈ, ಪ್ರಿಯಾಂಕ್‌ ತಿರುಗೇಟು

physical abuse
ದೇಶ55 mins ago

Physical Abuse : ನೀಚ ಕೃತ್ಯ; ನರ್ಸರಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸ್ಕೂಲ್ ವ್ಯಾನ್ ಡ್ರೈವರ್​

peace accord between Manipur oldest armed group UNLF and Government
ದೇಶ1 hour ago

ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮಣಿಪುರದ ಹಳೆ ಬಂಡುಕೋರ ಗುಂಪು ಯುಎನ್ಎಲ್ಎಫ್!

Gauvarav Yatra
ದೇಶ1 hour ago

Indian Railways : ಭಾರತ ಗೌರವ ಯಾತ್ರಾ ರೈಲಿನಲ್ಲಿ ಕಲುಷಿತ ಆಹಾರ ಸೇವಿಸಿ 90 ಮಂದಿ ಅಸ್ವಸ್ಥ

Actress Ramya
ಕರ್ನಾಟಕ1 hour ago

Actress Ramya: ಹುಟ್ಟುಹಬ್ಬದಂದು ನಾಯಿಮರಿಗಳೊಂದಿಗೆ ಕಾಲಕಳೆದ ಮೋಹಕ ತಾರೆ ರಮ್ಯಾ

fight between Couple in air and Lufthansa flight was diverted to Delhi and Viral News
ದೇಶ2 hours ago

ಗಂಡ-ಹೆಂಡತಿ ಜಗಳ ವಿಮಾನ ಹತ್ತಿದ್ರೂ ಮುಗಿಲಿಲ್ಲ! ಆ ಮೇಲೆ ಏನಾಯ್ತು?

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ16 hours ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ2 days ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ2 days ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ3 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ3 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

ಟ್ರೆಂಡಿಂಗ್‌