ಬೆಂಗಳೂರು : ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ʻವಿಕ್ರಾಂತ್ ರೋಣʼ(Vikrant Rona) ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಹೀಗಿರುವಾಗ ಚಿತ್ರತಂಡ ಪ್ರೀ ರಿಲೀಸ್ ಇವೆಂಟ್‌ಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಮಂಗಳವಾರ (ಜು. 26) ನಡೆಯುವ ಕಿಚ್ಚನ ಇವೆಂಟ್‌ನಲ್ಲಿ ಹಲವಾರು ಗಣ್ಯರು ಭಾಗಿಯಾಗಲಿದ್ದಾರೆ.
ವಿಕ್ರಾಂತ್ ರೋಣ ಚಿತ್ರದ ಸುದ್ದಿಗೋಷ್ಠಿ ನಡೆದಿದ್ದು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ ನಿರ್ಮಾಪಕ ಜಾಕ್ ಮಂಜು. ʻವಿಶ್ವಾದ್ಯಂತ 3500 ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳುತ್ತಿದೆ. ಕರ್ನಾಟಕದಲ್ಲಿ 425ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ವಿಕ್ರಾಂತ್ ರೋಣ ರಿಲೀಸ್ ಆಗುತ್ತಿದೆ. ಬಾಲಿವುಡ್‌ನಲ್ಲಿ 900 ಥಿಯೇಟರ್, ವಿದೇಶದಲ್ಲಿ 800 ಸ್ಕ್ರೀನ್ ಹಾಗೂ ಟಾಲಿವುಡ್‌ನಲ್ಲಿ ಕರ್ನಾಟಕಕ್ಕಿಂತ ಹೆಚ್ಚು ಥಿಯೇಟರ್‌ಗಳಲ್ಲಿ ಅಂದರೆ 350ರ ಮೇಲೆ ಬಿಡುಗಡೆಗೊಳ್ಳುತ್ತಿದೆ ಎಂದರು.
ಇದನ್ನೂ ಓದಿ | ವಿಕ್ರಾಂತ್ ರೋಣ ಬಿಡುಗಡೆ ದಿನವೇ ಕನ್ನಡದಲ್ಲಿ ಬರುತ್ತಿದೆ ದಿ ಲೆಜೆಂಡ್ ಸಿನಿಮಾ : ಸರವಣನ್ ಪ್ರತಿಕ್ರಿಯೆ ಏನು?
ಸೋಮವಾರ (ಜು.25) ಮುಂಬೈನಲ್ಲಿ ವಿಕ್ರಾಂತ್ ರೋಣದ ಪ್ರೀ ರಿಲೀಸ್ ಇವೆಂಟ್ ಇದ್ದು, ಸಲ್ಮಾನ್ ಖಾನ್ ಭಾಗಿಯಾಗಲಿದ್ದಾರೆ ಎಂದು ಹೇಳಿದರು. ಮಂಗಳವಾರ (ಜು.26) ಹೈದರಾಬಾದ್‌ನಲ್ಲಿ ನಾಗಾರ್ಜುನ ಅತಿಥಿಯಾಗಿ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಭಾಗಿಯಾಗಲಿದ್ದು, ಅಂದೇ ದಿನ ಕರ್ನಾಟಕದಲ್ಲಿ ನಟ ಉಪೇಂದ್ರ ಅವರು ಪ್ರೀ ರಿಲೀಸ್ ಇವೆಂಟ್‌ನಲ್ಲಿ ಅತಿಥಿಯಾಗಿ ಭಾಗಿಯಾಗಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ವಿಕ್ರಾಂತ್ ರೋಣನ ಸ್ಪೆಷಲ್
ವಿಕ್ರಾಂತ್ ರೋಣ ಸಿನಿಮಾವನ್ನು ದೇಶದ ಯಾವ ಭಾಷೆಯ ಪ್ರೇಕ್ಷಕರು ಬೇಕಾದರೂ ನೋಡಬಹುದಾಗಿದೆ. ಈ ಸಿನಿಮಾವನ್ನು ಸಿನಿಮಾ ಡಬ್ಸ್ ಆಪ್‌ನಲ್ಲಿ ತಮಗೆ ಬೇಕಾದ ಭಾಷೆಯಲ್ಲಿ ನೋಡಬಹುದಾಗಿದೆ. ಮೆಟಾವರ್ಸ್ ಅಥವಾ ಬಹು ಆಯಾಮದ ಡಿಜಿಟಲ್ ಜಗತ್ತನ್ನು ‘ಕಿಚ್ಚ ವರ್ಸ್’ ಮೂಲಕ ವಿಕ್ರಾಂತ್ ರೋಣ ಸಿನಿಮಾ ಪ್ರವೇಶಿಸಲಿದೆ. ಈ ಮೂಲಕ ಸಿನಿಮಾ ಎನ್‌ಎಫ್‌ಟಿ (NFT) ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂಬ ಮಾಹಿತಿಯನ್ನು ಈಗಾಗಲೇ ಚಿತ್ರ ತಂಡ ಹಂಚಿಕೊಂಡಿದೆ.
ಈಗಾಗಲೇ ಹಲವಾರು ಚಿತ್ರಮಂದಿರಗಳಲ್ಲಿ ಕಿಚ್ಚನ 3ಡಿ ಕಟೌಟ್ ರಾರಾಜಿಸುತ್ತಿವೆ. ಊರ್ವಶಿ ಚಿತ್ರಮಂದಿರದಲ್ಲಿ 400 ಉದ್ದದ ಅಡಿ ಕಟೌಟ್ ನಿಲ್ಲಿಸಿ ರೋಣನ ಆಗಮನಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರ ಜು.28ಕ್ಕೆ ರಿಲೀಸ್ ಆಗುತ್ತಿದ್ದು ಅಭಿಮಾನಿಗಳನ್ನು ಹೇಗೆ ರಂಜಿಸಲಿದೆ ಎನ್ನುವುದು ಕಾದು ನೋಡಬೇಕಿದೆ.
ಇದನ್ನೂ ಓದಿ | Cinedubs Mobile App | ವಿಕ್ರಾಂತ್ ರೋಣ ಸಿನಿಮಾ ಮೂಲಕ ಬರುತ್ತಿದೆ ಸಿನಿಡಬ್ಸ್ ಆ್ಯಪ್; ಏನಿದರ ವಿಶೇಷತೆ?