ಬೆಂಗಳೂರು : ಟಾಲಿವುಡ್ ನಟ ಮಹೇಶ್ ಬಾಬು ಅವರ ಪತ್ನಿ ನಟಿ ಮತ್ತು ನಿರ್ಮಾಪಕಿ ನಮ್ರತಾ ಶಿರೋಡ್ಕರ್ (Namrata Shirodkar) ಅವರ ಜನುಮದಿನ. ಸಂದರ್ಶನವೊಂದರಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ನಮ್ರತಾ ಶಿರೋಡ್ಕರ್ ಅವರು 1998 ರಲ್ಲಿ ‘ಜಬ್ ಪ್ಯಾರ್ ಕಿಸಿ ಸೆ ಹೋತಾ ಹೈ’ ಚಿತ್ರದ ಮೂಲಕ ಹೀರೊಯಿನ್ ಆಗಿ ಮಿಂಚಿದ್ದಾರೆ. ವಿವಿಧ ಭಾಷೆಗಳಲ್ಲಿ ಸಿನಿಮಾಗಳನ್ನೂ ಮಾಡಿದರು. ತೆಲುಗು ಚಿತ್ರ ʻವಂಶಿ ʼಸೆಟ್‌ನಲ್ಲಿ ಮಹೇಶ್ ಬಾಬು ಅವರನ್ನು ಭೇಟಿ ಮಾಡಿದಾಗ, ಇಬ್ಬರ ಮಧ್ಯೆ ಪ್ರೀತಿ ಬೆಳೆದು ಮದುವೆಯೂ ಆಯಿತು. ಅಲ್ಲಿಂದ ಅವರ ಜೀವನವು ಹೊಸ ತಿರುವುಗಳನ್ನು ಪಡೆದುಕೊಂಡಿತು. ಮಹೇಶ್ ಅವರಿಗೆ ಕೆಲಸ ಮಾಡುವ ಹೆಂಡತಿ ಬೇಕಾಗಿಲ್ಲ ಎಂಬುದು ಎಲ್ಲರಿಗೂ ತಿಳಿದಿದ್ದರೂ, ಚಿತ್ರರಂಗವನ್ನು ಬಿಟ್ಟಿರುವುದಕ್ಕೆ ತನಗೆ ಯಾವುದೇ ವಿಷಾದವಿಲ್ಲ ಎಂದು ನಮ್ರತಾ ಹಂಚಿಕೊಂಡಿದ್ದಾರೆ.
ನಮ್ರತಾ ಮತ್ತು ಮಹೇಶ್ ಅವರು ʻವಂಶಿʼ ಚಿತ್ರೀಕರಣಕ್ಕಾಗಿ ನ್ಯೂಜಿಲೆಂಡ್‌ನಲ್ಲಿ 52 ದಿನಗಳ ಕಾಲ ಚಿತ್ರೀಕರಣ ಮಾಡಿದ್ದಾರೆ. ಆಗ ಅವರು ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳುವ ಅವಕಾಶವನ್ನು ಪಡೆದರು ಮತ್ತು ಅಂತಿಮವಾಗಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಅದು ಮದುವೆಯಲ್ಲಿ ಕೊನೆಗೊಂಡಿತು. ಸೆಲೆಬ್ರಿಟಿ ಪತ್ರಕರ್ತೆ ಪ್ರೇಮಾ ಅವರೊಂದಿಗಿನ ಸಂದರ್ಶನದಲ್ಲಿ, ನಮ್ರತಾ ಹಲವಾರು ವಿಚಾರಗಳನ್ನು ಕುರಿತು ಮಾತನಾಡಿದ್ದಾರೆ.
ಇದನ್ನೂ ಓದಿ: Mahesh Babu | ಮಹೇಶ್ ಬಾಬುಗೆ ತಾಯಿಯಾಗಿ ನಟಿಸಲಿದ್ದಾರಾ ರಾಣಿ ಮುಖರ್ಜಿ?
‘ಪುಕಾರ್’, ‘ವಾಸ್ತವ್’ ಮತ್ತು ‘ಅಸ್ತಿತ್ವ’ದಂತಹ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನಮ್ರತಾ ನೀಡಿದ್ದರು. ಬಾಲಿವುಡ್ನಲ್ಲಿ ಉತ್ತುಂಗದಲ್ಲಿ ಇರುವಾಗಲೇ ನಮ್ರತಾ ದಿಢೀರ್ ನಟನಾ ವೃತ್ತಿಯನ್ನು ಶಾಶ್ವತವಾಗಿ ತ್ಯಜಿಸುವುದಾಗಿ ಘೋಷಿಸಿದರು.
ನಮ್ರತಾ ಮಾತನಾಡಿ ʻʻನಾನು ಎಂದಿಗೂ ನನ್ನ ಜೀವನದಲ್ಲಿ ಪ್ಲ್ಯಾನ್ ಮಾಡಿರಲಿಲ್ಲ. ಮಹೇಶ್ ಅವರನ್ನು ಭೇಟಿಯಾದಾಗ, ಚಲನಚಿತ್ರಗಳು ಮತ್ತು ವೃತ್ತಿಜೀವನವು ಅಷ್ಟು ಮುಖ್ಯವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ ʻʻನನಗೆ ಯಾವದರ ಬಗ್ಗೆಯೂ ವಿಷಾದವಿಲ್ಲ. ಮಾಡೆಲಿಂಗ್ ಕ್ಷೇತ್ರಕ್ಕೆ ನಂತರ ಕಾಲಿಟ್ಟೆ. ಅದರಲ್ಲಿ ಯಶಸ್ವಿಯಾಗಿದ್ದೇನೆ. ನಂತರ ನಟನೆಗೆ ಕಾಲಿಟ್ಟೆ. ಅಲ್ಲಿಂದ ನಾನು ಮಹೇಶ್ ಅವರನ್ನು ಭೇಟಿಯಾದೆ ಮತ್ತು ನಮ್ಮ ಸಂಬಂಧವು ಮದುವೆಯಲ್ಲಿ ಕೊನೆಗೊಂಡಿತು. ಇದು ನನ್ನ ಪ್ರಯಾಣದ ಅತ್ಯಂತ ಸುಂದರವಾದ ಭಾಗವಾಗಿದೆ ಎಂದು ನಾನು ಭಾವಿಸುತ್ತೇನೆ. ಸಿನಿಮಾಗಳು ಮುಖ್ಯ ಎಂದು ಅಂದುಕೊಂಡಿರಲಿಲ್ಲ. ಆ ಸಮಯದಲ್ಲಿ ಕೆರಿಯರ್ ಮುಖ್ಯ ಎಂದು ಅನ್ನಿಸಿರಲಿಲ್ಲʼʼ ಎಂದರು.
ಇದನ್ನೂ ಓದಿ: Mahesh Babu | ಸಿನಿಮಾದಿಂದ ದೂರ ಉಳಿಯಲು ಕಾರಣ ಮಹೇಶ್ ಬಾಬು ಎಂದ ಪತ್ನಿ ನಮ್ರತಾ
1993ರಲ್ಲಿ ಮಿಸ್ ಫೆಮಿನಾ ಪ್ರಶಸ್ತಿಯನ್ನೂ ಗೆದ್ದಿರುವ ನಮ್ರತಾ ಈಗ ನಿರ್ಮಾಪಕಿ. ಒಂದು ವೇಳೆ ಈಗ ಸಿನಿಮಾ ಆಫರ್ ಬಂದರೆ ಮಾಡಲು ಇಚ್ಚೀಸುತ್ತೀರಾ ಎಂದು ಸಂದರ್ಶನಕಾರರು ಕೇಳಿದಾಗ ನಟಿ ಮಾತನಾಡಿ, ʻʻಎಂದಿಗೂ ಇಲ್ಲ. ಒಂದು ಸೆಕೆಂಡ್ ಕೂಡ ಅದರ ಬಗ್ಗೆ ಯೋಚಿಸುವುದಿಲ್ಲ. ನನ್ನ ಕುಟುಂಬವನ್ನು ಬಿಟ್ಟು ಸೆಟ್‌ನಲ್ಲಿ ಹೋಗಿ ಕುಳಿತುಕೊಳ್ಳುವಷ್ಟು ತಾಳ್ಮೆ ನನಗಿಲ್ಲ. ಮಹೇಶ್ ಅವರ ಶೂಟಿಂಗ್‌ಗಳು, ಯೂನಿಟ್‌ನೊಂದಿಗೆ ಬೆರೆಯುವುದು ಇವೆಲ್ಲವೂ ಇಷ್ಟ. ನಾನು ಕ್ಯಾಮೆರಾ ಮುಂದೆ ಬರುವುದಕ್ಕಿಂತ ಕುಟುಂಬಕ್ಕೆ ಪ್ರಾಮುಖ್ಯತೆ ನೀಡಲು ಆನಂದಿಸುತ್ತೇನೆʼʼಎಂದಿದ್ದಾರೆ.
ವಯಸ್ಸಿನಲ್ಲಿ ಮಹೇಶ್ ಬಾಬುಗಿಂತ ನಮ್ರತಾ 3 ವರ್ಷ ದೊಡ್ಡವರು. ಈ ಜೋಡಿಗೆ 2006ರಲ್ಲಿ ಗೌತಮ್ ಎಂಬ ಮಗ ಹುಟ್ಟಿದ. 2012ರಲ್ಲಿ ಮಗಳು ಸಿತಾರಾ ಜನಿಸಿದಳು.