Namrata Shirodkar: ಪ್ರಿನ್ಸ್ ಮಹೇಶ್‌ಗಾಗಿ ಚಿತ್ರರಂಗವನ್ನು ಬಿಟ್ಟಿರುವುದಕ್ಕೆ ನನಗೆ ಬೇಸರವಿಲ್ಲ: ನಮ್ರತಾ ಶಿರೋಡ್ಕರ್ - Vistara News

ಟಾಲಿವುಡ್

Namrata Shirodkar: ಪ್ರಿನ್ಸ್ ಮಹೇಶ್‌ಗಾಗಿ ಚಿತ್ರರಂಗವನ್ನು ಬಿಟ್ಟಿರುವುದಕ್ಕೆ ನನಗೆ ಬೇಸರವಿಲ್ಲ: ನಮ್ರತಾ ಶಿರೋಡ್ಕರ್

ನಮ್ರತಾ ಶಿರೋಡ್ಕರ್ (Namrata Shirodkar) ಅವರು 1998 ರಲ್ಲಿ ‘ಜಬ್ ಪ್ಯಾರ್ ಕಿಸಿ ಸೆ ಹೋತಾ ಹೈ’ ಚಿತ್ರದ ಮೂಲಕ ಹೀರೊಯಿನ್​ ಆಗಿ ಮಿಂಚಿದ್ದಾರೆ. ಮಹೇಶ್‌ ಅವರಿಗೆ ಕೆಲಸ ಮಾಡುವ ಹೆಂಡತಿ ಬೇಕಾಗಿಲ್ಲ ಎಂಬುದು ಎಲ್ಲರಿಗೂ ತಿಳಿದಿದ್ದರೂ, ಚಿತ್ರರಂಗವನ್ನು ಬಿಟ್ಟಿರುವುದಕ್ಕೆ ತನಗೆ ಯಾವುದೇ ವಿಷಾದವಿಲ್ಲ ಎಂದು ನಮ್ರತಾ ಹಂಚಿಕೊಂಡಿದ್ದಾರೆ.

VISTARANEWS.COM


on

Namrata Shirodkar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಟಾಲಿವುಡ್‌ ನಟ ಮಹೇಶ್‌ ಬಾಬು ಅವರ ಪತ್ನಿ ನಟಿ ಮತ್ತು ನಿರ್ಮಾಪಕಿ ನಮ್ರತಾ ಶಿರೋಡ್ಕರ್ (Namrata Shirodkar) ಅವರ ಜನುಮದಿನ. ಸಂದರ್ಶನವೊಂದರಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ನಮ್ರತಾ ಶಿರೋಡ್ಕರ್ ಅವರು 1998 ರಲ್ಲಿ ‘ಜಬ್ ಪ್ಯಾರ್ ಕಿಸಿ ಸೆ ಹೋತಾ ಹೈ’ ಚಿತ್ರದ ಮೂಲಕ ಹೀರೊಯಿನ್​ ಆಗಿ ಮಿಂಚಿದ್ದಾರೆ. ವಿವಿಧ ಭಾಷೆಗಳಲ್ಲಿ ಸಿನಿಮಾಗಳನ್ನೂ ಮಾಡಿದರು. ತೆಲುಗು ಚಿತ್ರ ʻವಂಶಿ ʼಸೆಟ್‌ನಲ್ಲಿ ಮಹೇಶ್‌ ಬಾಬು ಅವರನ್ನು ಭೇಟಿ ಮಾಡಿದಾಗ, ಇಬ್ಬರ ಮಧ್ಯೆ ಪ್ರೀತಿ ಬೆಳೆದು ಮದುವೆಯೂ ಆಯಿತು. ಅಲ್ಲಿಂದ ಅವರ ಜೀವನವು ಹೊಸ ತಿರುವುಗಳನ್ನು ಪಡೆದುಕೊಂಡಿತು. ಮಹೇಶ್‌ ಅವರಿಗೆ ಕೆಲಸ ಮಾಡುವ ಹೆಂಡತಿ ಬೇಕಾಗಿಲ್ಲ ಎಂಬುದು ಎಲ್ಲರಿಗೂ ತಿಳಿದಿದ್ದರೂ, ಚಿತ್ರರಂಗವನ್ನು ಬಿಟ್ಟಿರುವುದಕ್ಕೆ ತನಗೆ ಯಾವುದೇ ವಿಷಾದವಿಲ್ಲ ಎಂದು ನಮ್ರತಾ ಹಂಚಿಕೊಂಡಿದ್ದಾರೆ.

ನಮ್ರತಾ ಮತ್ತು ಮಹೇಶ್ ಅವರು ʻವಂಶಿʼ ಚಿತ್ರೀಕರಣಕ್ಕಾಗಿ ನ್ಯೂಜಿಲೆಂಡ್‌ನಲ್ಲಿ 52 ದಿನಗಳ ಕಾಲ ಚಿತ್ರೀಕರಣ ಮಾಡಿದ್ದಾರೆ. ಆಗ ಅವರು ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದುಕೊಳ್ಳುವ ಅವಕಾಶವನ್ನು ಪಡೆದರು ಮತ್ತು ಅಂತಿಮವಾಗಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಅದು ಮದುವೆಯಲ್ಲಿ ಕೊನೆಗೊಂಡಿತು. ಸೆಲೆಬ್ರಿಟಿ ಪತ್ರಕರ್ತೆ ಪ್ರೇಮಾ ಅವರೊಂದಿಗಿನ ಸಂದರ್ಶನದಲ್ಲಿ, ನಮ್ರತಾ ಹಲವಾರು ವಿಚಾರಗಳನ್ನು ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ: Mahesh Babu | ಮಹೇಶ್‌ ಬಾಬುಗೆ ತಾಯಿಯಾಗಿ ನಟಿಸಲಿದ್ದಾರಾ ರಾಣಿ ಮುಖರ್ಜಿ?

‘ಪುಕಾರ್’, ‘ವಾಸ್ತವ್’ ಮತ್ತು ‘ಅಸ್ತಿತ್ವ’ದಂತಹ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನಮ್ರತಾ ನೀಡಿದ್ದರು. ಬಾಲಿವುಡ್​ನಲ್ಲಿ ಉತ್ತುಂಗದಲ್ಲಿ ಇರುವಾಗಲೇ ನಮ್ರತಾ ದಿಢೀರ್​ ನಟನಾ ವೃತ್ತಿಯನ್ನು ಶಾಶ್ವತವಾಗಿ ತ್ಯಜಿಸುವುದಾಗಿ ಘೋಷಿಸಿದರು. 

ನಮ್ರತಾ ಮಾತನಾಡಿ ʻʻನಾನು ಎಂದಿಗೂ ನನ್ನ ಜೀವನದಲ್ಲಿ ಪ್ಲ್ಯಾನ್‌ ಮಾಡಿರಲಿಲ್ಲ. ಮಹೇಶ್ ಅವರನ್ನು ಭೇಟಿಯಾದಾಗ, ಚಲನಚಿತ್ರಗಳು ಮತ್ತು ವೃತ್ತಿಜೀವನವು ಅಷ್ಟು ಮುಖ್ಯವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ ʻʻನನಗೆ ಯಾವದರ ಬಗ್ಗೆಯೂ ವಿಷಾದವಿಲ್ಲ. ಮಾಡೆಲಿಂಗ್ ಕ್ಷೇತ್ರಕ್ಕೆ ನಂತರ ಕಾಲಿಟ್ಟೆ. ಅದರಲ್ಲಿ ಯಶಸ್ವಿಯಾಗಿದ್ದೇನೆ. ನಂತರ ನಟನೆಗೆ ಕಾಲಿಟ್ಟೆ. ಅಲ್ಲಿಂದ ನಾನು ಮಹೇಶ್‌ ಅವರನ್ನು ಭೇಟಿಯಾದೆ ಮತ್ತು ನಮ್ಮ ಸಂಬಂಧವು ಮದುವೆಯಲ್ಲಿ ಕೊನೆಗೊಂಡಿತು. ಇದು ನನ್ನ ಪ್ರಯಾಣದ ಅತ್ಯಂತ ಸುಂದರವಾದ ಭಾಗವಾಗಿದೆ ಎಂದು ನಾನು ಭಾವಿಸುತ್ತೇನೆ. ಸಿನಿಮಾಗಳು ಮುಖ್ಯ ಎಂದು ಅಂದುಕೊಂಡಿರಲಿಲ್ಲ. ಆ ಸಮಯದಲ್ಲಿ ಕೆರಿಯರ್ ಮುಖ್ಯ ಎಂದು ಅನ್ನಿಸಿರಲಿಲ್ಲʼʼ ಎಂದರು.

ಇದನ್ನೂ ಓದಿ: Mahesh Babu | ಸಿನಿಮಾದಿಂದ ದೂರ ಉಳಿಯಲು ಕಾರಣ ಮಹೇಶ್‌ ಬಾಬು ಎಂದ ಪತ್ನಿ ನಮ್ರತಾ

1993ರಲ್ಲಿ ಮಿಸ್ ಫೆಮಿನಾ ಪ್ರಶಸ್ತಿಯನ್ನೂ ಗೆದ್ದಿರುವ ನಮ್ರತಾ ಈಗ ನಿರ್ಮಾಪಕಿ. ಒಂದು ವೇಳೆ ಈಗ ಸಿನಿಮಾ ಆಫರ್‌ ಬಂದರೆ ಮಾಡಲು ಇಚ್ಚೀಸುತ್ತೀರಾ ಎಂದು ಸಂದರ್ಶನಕಾರರು ಕೇಳಿದಾಗ ನಟಿ ಮಾತನಾಡಿ, ʻʻಎಂದಿಗೂ ಇಲ್ಲ. ಒಂದು ಸೆಕೆಂಡ್ ಕೂಡ ಅದರ ಬಗ್ಗೆ ಯೋಚಿಸುವುದಿಲ್ಲ. ನನ್ನ ಕುಟುಂಬವನ್ನು ಬಿಟ್ಟು ಸೆಟ್‌ನಲ್ಲಿ ಹೋಗಿ ಕುಳಿತುಕೊಳ್ಳುವಷ್ಟು ತಾಳ್ಮೆ ನನಗಿಲ್ಲ. ಮಹೇಶ್ ಅವರ ಶೂಟಿಂಗ್‌ಗಳು, ಯೂನಿಟ್‌ನೊಂದಿಗೆ ಬೆರೆಯುವುದು ಇವೆಲ್ಲವೂ ಇಷ್ಟ. ನಾನು ಕ್ಯಾಮೆರಾ ಮುಂದೆ ಬರುವುದಕ್ಕಿಂತ ಕುಟುಂಬಕ್ಕೆ ಪ್ರಾಮುಖ್ಯತೆ ನೀಡಲು ಆನಂದಿಸುತ್ತೇನೆʼʼಎಂದಿದ್ದಾರೆ.

ವಯಸ್ಸಿನಲ್ಲಿ ಮಹೇಶ್‌ ಬಾಬುಗಿಂತ ನಮ್ರತಾ 3 ವರ್ಷ ದೊಡ್ಡವರು. ಈ ಜೋಡಿಗೆ 2006ರಲ್ಲಿ ಗೌತಮ್ ಎಂಬ ಮಗ ಹುಟ್ಟಿದ. 2012ರಲ್ಲಿ ಮಗಳು ಸಿತಾರಾ ಜನಿಸಿದಳು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಟಾಲಿವುಡ್

Sowmya Janu: ಟ್ರಾಫಿಕ್ ಪೊಲೀಸ್‌ ಬಟ್ಟೆ ಹರಿದು ರಂಪಾಟ ಮಾಡಿದ ತೆಲುಗು ನಟಿ: ಕೇಸ್‌ ದಾಖಲು!

Sowmya Janu: ನಟಿ ಸೌಮ್ಯಾ ಜಾನು ತಪ್ಪು ಮಾಡಿದ್ದಲ್ಲದೇ ಟ್ರಾಫಿಕ್ ಹೋಮ್ ಗಾರ್ಡ್ ಮೇಲೆ ಅವಾಚ್ಯ ಪದ ಬಳಿಸಿ ನಿಂದಿಸಿದ್ದಾರೆ. ನಟಿಯ ಈ ನಡವಳಿಕೆಗೆ ಜನರು ಖಂಡಿಸಿದ್ದಾರೆ.

VISTARANEWS.COM


on

Sowmya Janu Assaults Traffic Home Guard Taking Wrong Route
Koo

ಹೈದರಾಬಾದ್‌: ಹೈದರಾಬಾದ್‌ನ ಬಂಜಾರ ಹಿಲ್ಸ್ ಪ್ರದೇಶದಲ್ಲಿ ತೆಲುಗು ನಟಿ ಸೌಮ್ಯಾ ಜಾನು (Sowmya Janu) ಅವರು ರಾಂಗ್ ರೂಟ್‌ನಲ್ಲಿ ಕಾರು ಚಾಲಾಯಿಸಿದಲ್ಲದೇ ಟ್ರಾಫಿಕ್ ಪೊಲೀಸರ ಜತೆ ಕಿರಿಕ್ ಮಾಡಿಕೊಂಡಿದ್ದಾರೆ. ಕರ್ತವ್ಯದಲ್ಲಿದ್ದ ಟ್ರಾಫಿಕ್ ಹೋಮ್ ಗಾರ್ಡ್‌ನ ಮೇಲೆ ನಟಿ ಹಲ್ಲೆ ನಡೆಸಿರುವ ವಿಡಿಯೊ ವೈರಲ್‌ ಆಗಿದೆ. ನಟಿ ತಪ್ಪು ಮಾಡಿದ್ದಲ್ಲದೇ ಟ್ರಾಫಿಕ್ ಹೋಮ್ ಗಾರ್ಡ್ ಮೇಲೆ ಅವಾಚ್ಯ ಪದ ಬಳಸಿ ನಿಂದಿಸಿದ್ದಾರೆ. ಇದೀಗ ನಟಿಯ ಈ ನಡವಳಿಕೆಗೆ ಜನರು ಖಂಡಿಸಿದ್ದಾರೆ.

ಬಂಜಾರ ಹಿಲ್ಸ್‌ನಲ್ಲಿ ಜಾಗ್ವಾರ್ ಕಾರನ್ನು ರಾಂಗ್ ರೂಟ್‌ನಲ್ಲಿ ನಟಿ ಚಲಾಯಿಸಿದ್ದರು. ಶನಿವಾರ ಸುಮಾರು 8.24 ಗಂಟೆಗೆ ಈ ಗಲಾಟೆ ನಡೆದಿದೆ ಎಂದು ವರದಿಯಾಗಿದೆ. ನಟಿ ರಾಂಗ್ ರೂಟ್‌ನಲ್ಲಿ ಕಾರು ಚಲಾಯಿಸಿದ್ದಕ್ಕೆ ಟ್ರಾಫಿಕ್ ಹೋಮ್ ಗಾರ್ಡ್ ಕಾರು ತಡೆದಿದ್ದಾರೆ. ದಂಡ ಕಟ್ಟುವಂತೆ ಹೇಳಿದ್ದಾರೆ. ಆಗ ಸೌಮ್ಯಾ ಕಾರನ್ನು ರಾಂಗ್‌ ರೂಟ್‌ನಲ್ಲಿ ಚಲಾಯಿಸಿದ್ದು ಯಾಕೆ ಎಂದು ವಿವರಣೆ ನೀಡಬೇಕು, ಅಥವಾ ದಂಡ ಕಟ್ಟಬೇಕಿತ್ತು. ಆದರೆ ನಟಿ ಏಕಾಏಕಿ ಟ್ರಾಫಿಕ್ ಹೋಮ್ ಗಾರ್ಡ್ ಮೇಲೆ ಕೂಗಲು ಶುರು ಮಾಡಿದ್ದಾರೆ. ಇಷ್ಟೇ ಅಲ್ಲ ಆತನ ಸಮವಸ್ತ್ರ ಹರಿದಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಜಾರ ಹಿಲ್ಸ್ ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಲ್ಲಿ ನೆರೆದಿದ್ದ ಜನರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರೂ, ನಟಿ ಮಾತ್ರ ಸುಮ್ಮನಾಗಿರಲಿಲ್ಲ. ಹಲ್ಲೆಯ ನಂತರ, ಟ್ರಾಫಿಕ್ ಹೋಮ್ ಗಾರ್ಡ್ ಟ್ರಾಫಿಕ್ ಹೋಮ್ ಗಾರ್ಡ್ ಬಂಜಾರಾಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಲ್ಲೆಯ ವಿವರಗಳನ್ನು ಮತ್ತು ಘಟನೆಯ ವೈರಲ್ ವೀಡಿಯೊ ಮೂಲಕ ಸಾಕ್ಷ್ಯವನ್ನು ಒದಗಿಸಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: Dhanya Ramkumar: ಧನ್ಯಾ ರಾಮ್‌ಕುಮಾರ್ ನಟನೆಯ ʻಹೈಡ್ ಆ್ಯಂಡ್ ಸೀಕ್ʼ ಸಿನಿಮಾ ಟ್ರೈಲರ್‌ ಔಟ್‌!

ವೈರಲ್‌ ವಿಡಿಯೊ

ಈ ಘಟನೆ ವಿಡಿಯೊ ವೈರಲ್ ಆಗುತ್ತಿದ್ದಂತೆ ತನ್ನ ತಪ್ಪನ್ನು ಮುಚ್ಚಿ ಹಾಕಲು ನಟಿ ಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ತಾಯಿಗೆ ಮೆಡಿಸಿನ್ ತರಬೇಕಿತ್ತು. ಅದಕ್ಕೆ ರಾಂಗ್ ರೂಟ್‌ನಲ್ಲಿ ಕಾರು ಚಲಾಯಿಸಿದೆ ಎಂದು ಸೌಮ್ಯ ಜಾನು ಹೇಳುತ್ತಿದ್ದಾರೆ. ಟ್ರಾಫಿಕ್ ಹೋಮ್ ಗಾರ್ಡ್ ನನ್ನನ್ನು ಕೆಟ್ಟದಾಗಿ ನಿಂದಿಸಿದರು. ಹಾಗಾಗಿ ನಾನು ಗರಂ ಆಗಿದ್ದೆ ಎಂದು ಸ್ಪಷ್ಟನೆ ಕೊಡಲು ಮುಂದಾಗಿದ್ದಾರೆ. ಸೌಮ್ಯ ಜಾನು ‘ತಡಾಕ’, ‘ಚಂದಮಾನ ಕಥಲು’ ಹಾಗೂ ‘ಲಯನ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸೌಮ್ಯಾ ಜಾನು ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಇದೀಗ ನಟಿಯ ವಿಎಇಯೊ ವೈರಲ್‌ ಆಗುತ್ತಿದ್ದಂತೆ ಸಾರ್ವಜನಿಕರು ನಟಿಯ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸೌಮ್ಯಾ ಜಾನು ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಕಮೆಂಟ್‌ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

Continue Reading

ಕ್ರೈಂ

Director Krish: ಡ್ರಗ್ಸ್ ಪ್ರಕರಣ: ಕೇಳಿ ಬಂತು ಖ್ಯಾತ ನಿರ್ದೇಶಕನ ಹೆಸರು!

ಡ್ರಗ್ಸ್‌ ಪ್ರಕರಣದಲ್ಲಿ ಪವನ್ ಕಲ್ಯಾಣ್ ಅವರಂತಹ ನಟರಿಗೆ ನಿರ್ದೇಶನ ಮಾಡಿರುವ ಖ್ಯಾತ ನಿರ್ದೇಶಕನ (Director Krish) ಹೆಸರು ಕೇಳಿ ಬಂದಿದೆ. 10 ವಿಐಪಿಗಳಲ್ಲಿ ನಿರ್ದೇಶಕ ಕ್ರಿಶ್, ನಟ ಲಿಶಿ ಗಣೇಶ್ (Lishi Ganesh) ಮತ್ತು ನಿರ್ಮಾಪಕ ಕೇದಾರ್ ಸೆಲಗಂಸೆಟ್ಟಿ (Kedar Selagamsetty) ಹೆಸರಿದೆ ಎಂದು ವರದಿಯಾಗಿದೆ.

VISTARANEWS.COM


on

Director Krish among 10 VIPs named in drug case
Koo

ಬೆಂಗಳೂರು: ಸಿನಿರಂಗದಲ್ಲಿ ಡ್ರಗ್ಸ್‌ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಸದ್ಯದ ಮಟ್ಟಿಗೆ ತೆಲುಗು ಮತ್ತು ಮಲಯಾಳಂ ಸಿನಿಮಾ ರಂಗದಲ್ಲಿ ಸ್ವತಃ ಪೊಲೀಸರೇ ಕಾರ್ಯಾಚರಣೆಗೆ ಇಳಿದಿದ್ದಾರೆ. ಇದೀಗ ಡ್ರಗ್ಸ್‌ ಪ್ರಕರಣದಲ್ಲಿ ಪವನ್ ಕಲ್ಯಾಣ್ ಅವರಂತಹ ನಟರಿಗೆ ನಿರ್ದೇಶನ ಮಾಡಿರುವ ಖ್ಯಾತ ನಿರ್ದೇಶಕನ (Director Krish) ಹೆಸರು ಕೇಳಿ ಬಂದಿದೆ. 10 ವಿಐಪಿಗಳಲ್ಲಿ ನಿರ್ದೇಶಕ ಕ್ರಿಶ್, ನಟ ಲಿಶಿ ಗಣೇಶ್ (Lishi Ganesh) ಮತ್ತು ನಿರ್ಮಾಪಕ ಕೇದಾರ್ ಸೆಲಗಂಸೆಟ್ಟಿ (Kedar Selagamsetty) ಹೆಸರಿದೆ ಎಂದು ವರದಿಯಾಗಿದೆ.

ಆಂಧ್ರದ ಗಚಿಬೌಲಿಯ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್‍ ಸೇವಿಸಿದ್ದಾರೆ ಎನ್ನುವ ಆರೋಪದಡಿ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ. ಈ ಒಂಬತ್ತು ಜನರಲ್ಲಿ ಖ್ಯಾತ ನಿರ್ದೇಶಕ ಕ್ರಿಶ್ ಕೂಡ ಇದ್ದಾರೆ ಎಂದು ಹೇಳಲಾಗುತ್ತಿದೆ. ಎಫ್‌ಐಆರ್ ದಾಖಲಾಗಿದ್ದರೂ ಕ್ರಿಶ್ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ ನಿರ್ದೇಶಕ ಕ್ರಿಶ್‌ ಅವರು ಪೊಲೀಸರ ಮುಂದೆ ʻʻಹೊಟೇಲ್‌ನಲ್ಲಿ ನಾನು 30 ನಿಮಿಷಗಳ ಕಾಲ ಇದ್ದೆ. ಸ್ನೇಹಿತರನ್ನು ಭೇಟಿಯಾಗಲು ಬಂದಿದ್ದೆ. ಸಂಜೆ 6:45ರ ಸುಮಾರಿಗೆ ಅಲ್ಲಿಂದ ಹೊರಟೆʼʼ ಎಂದು ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ. ಕ್ರಿಶ್ ಹೆಸರಾಂತ ಚಿತ್ರಗಳ ನಿರ್ದೇಶಕರು. ಪವನ್ ಕಲ್ಯಾಣ್ ನಟನೆಯ ʻಹರಿ ಹರ ವೀರ ಮಲ್ಲುʼ ಚಿತ್ರವನ್ನು ಸದ್ಯ ನಿರ್ದೇಶನ ಮಾಡುತ್ತಿದ್ದಾರೆ. 

ಇದನ್ನೂ ಓದಿ: Rashmika Mandanna: ವಿಜಯ್‌ ದೇವರಕೊಂಡ ಜತೆಗಿನ ಸಂಬಂಧ ಒಪ್ಪಿಕೊಂಡ್ರಾ ರಶ್ಮಿಕಾ ಮಂದಣ್ಣ?

ಈ ಕುರಿತಂತೆ ಸ್ವತಃ ತೆಲಂಗಾಣದ ಡಿಸಿಪಿ ವಿನೀತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ʻʻಈಗಾಗಲೇ ಪೆಡ್ಲರ್ ಅಬ್ಬಾಸ್ ಎನ್ನುವವನನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಶ್ವೇತಾ, ಸಂದೀಪ್ ಸೇರಿದಂತೆ ಹಲವರು ತಪ್ಪಿಸಿಕೊಂಡಿದ್ದಾರೆ. ನಿರ್ದೇಶಕ ಕ್ರಿಶ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಅವರು ಡ್ರಗ್ಸ್ ತೆಗೆದುಕೊಂಡಿದ್ದಾರೋ ಎಲ್ಲವೋ ಎನ್ನುವುದು ತನಿಖೆ ಆಗುತ್ತಿದೆʼʼ ಎಂದಿದ್ದಾರೆ ಡಿಸಿಪಿ.

ಸೈಬರಾಬಾದ್ ಸಿಪಿ ಅವಿನಾಶ್ ಮೊಹಂತಿ ಅವರು ನಿರ್ಮಾಪಕ ಕೇದಾರ್ ಡ್ರಗ್ಸ್ ಸೇವಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಬಂಧಿತರಲ್ಲಿ ಒಬ್ಬರಾದ ಬಿಜೆಪಿ ಮುಖಂಡ ಯೋಗಾನಂದ್ ಅವರ ಪುತ್ರ ಗಜ್ಜಲ ವಿವೇಕಾನಂದ ಹೆಸರು ಕೂಡ ಕೇಳಿ ಬಂದಿದೆ. 2022ರಲ್ಲಿ ಅದೇ ಹೋಟೆಲ್‌ನಲ್ಲಿ ಮಿಂಕ್ ಪಬ್ ಡ್ರಗ್ ಪ್ರಕರಣದಲ್ಲಿ ಲಿಶಿ ಮತ್ತು ಅವರ ಸಹೋದರಿ ಕುಶಿತಾ ಅವರ ಹೆಸರೂ ಇತ್ತು. ಹೈದರಾಬಾದ್‌ನಲ್ಲಿ ಡ್ರಗ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಟಾಲಿವುಡ್‌ನಲ್ಲಿ ಖ್ಯಾತರು ಇರುವುದು ಇದೇನು ಮೊದಲಲ್ಲ. ಇತ್ತೀಚೆಗಷ್ಟೆ ಬಿಗ್‌ಬಾಸ್‌ ಷಣ್ಮುಖ್ ಜಸ್ವಂತ್ ಗಾಂಜಾ ಸೇವೆನೆಯಲ್ಲಿ ಸಿಲುಕಿಕೊಂಡಿದ್ದಾರೆ.

Continue Reading

ಟಾಲಿವುಡ್

Samantha Ruth Prabhu:  ಸ್ವಿಮ್ ಸೂಟ್ ನಲ್ಲಿ ಹಾಟ್‌ ಪೋಸ್‌ ಕೊಟ್ಟ ಸಮಂತಾ; ಇಲ್ಲಿವೆ ಚಿತ್ರಗಳು

Samantha Ruth Prabhu:  ನಟಿ ಮಲೇಷ್ಯಾದ ಕೆಲವು ಅದ್ಭುತ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಮಂತಾ ಸ್ವಿಮ್ ಸೂಟ್ ಧರಿಸಿ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಫೋಟೊಗಳನ್ನು ನಟಿ ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

VISTARANEWS.COM


on

Samantha Ruth Prabhu In A Swimsuit
Koo

ಬೆಂಗಳೂರು: ಟಾಲಿವುಡ್‌ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ವಕೇಶನ್‌ ಮೂಡ್‌ನಲ್ಲಿದ್ದಾರೆ. ಅಲ್ಲಿಯ ಸುಂದರ ಪ್ರವಾಸಿ ತಾಣವನ್ನು ಅಣುಭವಿಸುತ್ತಿದ್ದಾರೆ. ಇದೀಗ ನಟಿ ಮಲೇಷ್ಯಾದ ಕೆಲವು ಅದ್ಭುತ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಮಂತಾ ಸ್ವಿಮ್ ಸೂಟ್ ಧರಿಸಿ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಫೋಟೊಗಳನ್ನು ನಟಿ ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಇನ್‌ಸ್ಟಾದ ಮೊದಲ ಚಿತ್ರದಲ್ಲಿ, ಸಮಂತಾ, ನೀರಿನಲ್ಲಿ ಇಳಿದು ಆಕಾಶವನ್ನು ನೋಡುವುದು ಕಾಣಬಹುದು. ಮತ್ತೊಂದು ಪೋಟೊದಲ್ಲಿ , ಸಮಂತಾ ನೀರನಲ್ಲಿ ಈಜಾಡಿ ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದಾರೆ. ಧ್ಯಾನ ಮಾಡುತ್ತಿರುವ, ಹಚ್ಚ ಹಸಿರಿನಿಂದ ಕೂಡಿದ ಸುತ್ತಮುತ್ತಲಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳಿಗೆ ʻಹೈಯೆಸ್ಟ್‌ ಲವ್‌ʼ ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ.

ನಟಿ ಸಮಂತಾ ಎಷ್ಟು ಕೆ.ಜಿ ಇರಬಹುದು?

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಆಗಾಗ ತಮ್ಮ ಫಿಟ್ನೆಸ್‌ ಜರ್ನಿ ಬಗ್ಗೆ ಪೋಸ್ಟ್‌ ಮಾಡುತ್ತಲೇ ಇರುತ್ತಾರೆ. ಈ ಹಿಂದೆ ನಟಿ ತಮ್ಮ ತೂಕದ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಅವರ ದೇಹದ ತೂಕ ಈಗ 50.1 ಕೆಜಿಯಂತೆ. 36 ವರ್ಷದ ಅವರ ಮೆಟಾಬಾಲಿಕ್​ ಏಜ್​ 23 ಎಂಬುದನ್ನು ಕೂಡ ಅವರು ಬಹಿರಂಗಪಡಿಸಿದ್ದಾರೆ. ಅಲ್ಲದೇ ಅವರ ದೇಹದಲ್ಲಿ 12 ಕೆಜಿ ಫ್ಯಾಟ್​ ಮಾಸ್​ ಇದೆಯಂತೆ. ಮಸಲ್​ ಮಾಸ್​ 35.9 ಕೆಜಿ, ಬೋನ್​ ಮಾಸ್​ 2.2 ಕೆಜಿ ಎಂಬುದನ್ನು ಸಮಂತಾ ವಿವರಿಸಿದ್ದರು.

ಇದನ್ನೂ ಓದಿ: Samantha Ruth Prabhu: ನಟಿ ಸಮಂತಾ ಎಷ್ಟು ಕೆ.ಜಿ ಇರಬಹುದು ಊಹಿಸಿ!

ಸಿನಿಮಾ ವಿಚಾರಕ್ಕೆ ಬಂದರೆ, ಸಮಂತಾ ಕೊನೆಯ ಬಾರಿಗೆ ʼಖುಷಿʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಹಿಂದಿಯ ರ್‍ಯಾಪ್ ರಿಯಾಲಿಟಿ ಶೋ ಜಡ್ಜ್ ಹನಿ ಸಿಂಗ್​ ಜತೆ ಸಮಂತಾ ವೇದಿಕೆ ಹಂಚಿಕೊಂಡಿದ್ದರು. MTV ರಿಯಾಲಿಟಿ ಶೋನಲ್ಲಿ ಸಮಂತಾ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದರು. ತಮ್ಮ ಬ್ಯಾನರ್ ‘ತ್ರಲಾಲಾ ಮೂವಿಂಗ್ ಪಿಕ್ಚರ್ಸ್’ ಪ್ರಾರಂಭಿಸುವುದರೊಂದಿಗೆ, ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸುವ ಮುಂಬರುವ ಚಿತ್ರದಲ್ಲಿ ಸಮಂತಾ ರುತ್ ಪ್ರಭು ಮತ್ತು ಸಲ್ಮಾನ್ ಖಾನ್ ರೊಮ್ಯಾನ್ಸ್ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಚಿತ್ರಕ್ಕಾಗಿ ನಿರ್ದೇಶಕ ವಿಷ್ಣುವರ್ಧನ್ ಅವರೊಂದಿಗೆ ಸಮಂತಾ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ವರದಿಯ ಪ್ರಕಾರ ಈ ಸಿನಿಮಾಗೆ ಸಮಂತಾ ಜತೆಗೆ ತ್ರಿಶಾ ಮತ್ತು ಅನುಷ್ಕಾ ಶೆಟ್ಟಿ ಕೂಡ ಇರಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಕುರಿತು ಸದ್ಯಕ್ಕೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

Continue Reading

ಸಿನಿಮಾ

For Registration Movie: ರಿಲೀಸ್‌ಗೂ ಮೊದ್ಲೇ ’ಫಾರ್ ರಿಜಿಸ್ಟ್ರೇಷನ್’ಗೆ ಡಿಮ್ಯಾಂಡ್! ತೆಲುಗಿಗೂ ಹೊರಟ ಪೃಥ್ವಿ-ಮಿಲನಾ

For Registration Movie: ರಿಲೀಸ್‌ಗೂ ಮುನ್ನವೇ ಫಾರ್ ರಿಜಿಸ್ಟ್ರೇಷನ್ ಚಿತ್ರದ ತೆಲುಗು ಡಬ್ಬಿಂಗ್ ರೈಟ್ಸ್ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಈ ಚಿತ್ರದಲ್ಲಿ ಪೃಥ್ವಿ ಮತ್ತು ಮಿಲನಾ ಅಭಿನಯಿಸಿದ್ದಾರೆ.

VISTARANEWS.COM


on

For Registration Movie Telugu Dubbing Rights sold for huge amount
Koo

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎದ್ದಿದೆ. ಪ್ರತಿಭಾವಂತ ಹೊಸಬರು ಮಾಡುತ್ತಿರುವ ಹೊಸ ಹೊಸ ಪ್ರಯೋಗಗಳಿಗೆ ಕನ್ನಡ ಪ್ರೇಕ್ಷಕರು ಮಾತ್ರ ಅಲ್ಲ, ಪಕ್ಕದ ರಾಜ್ಯದವರೂ ಫಿದಾ ಆಗುತ್ತಿದ್ದಾರೆ. ಬಾಲಿವುಡ್ ಮಂದಿ ಕೂಡ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತಾಗಿದೆ. ನಾವು ಇಷ್ಟೆಲ್ಲಾ ಪೀಠಿಕೆ ಹಾಕುತ್ತಿರುವುದಕ್ಕೆ ಕಾರಣ ಫಾರ್ ರಿಜಿಸ್ಟ್ರೇಷನ್ ಸಿನಿಮಾ(For Registration Movie). ಯುವ ಪ್ರತಿಭೆ ನವೀನ್ ದ್ವಾರಕಾನಾಥ್ ನಿರ್ದೇಶನದ, ನವೀನ್ ರಾವ್ ನಿರ್ಮಾಣದ, ಪೃಥ್ವಿ ಅಂಬಾರ್ (Pruthvi Ambaar) ಹಾಗೂ ಮಿಲನಾ ನಾಗರಾಜ್ (Milana Nagaraj) ಅಭಿನಯದ, ಫಾರ್ ರಿಜಿಸ್ಟ್ರೇಷನ್ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕರೊಬ್ಬರು ಭಾರೀ ಮೊತ್ತಕ್ಕೆ ಡಬ್ಬಿಂಗ್ ರೈಟ್ಸ್ (Dubbing Rights) ಪಡೆದುಕೊಂಡಿದ್ದಾರೆ.

ಶಿವಣ್ಣ ನಟನೆಯ 125ನೇ ಸಿನಿಮಾದ ವೇದವನ್ನು ಅಖಂಡ ತೆಲುಗು ಪ್ರೇಕ್ಷಕರ ಎದುರು ಪ್ರಸ್ತುತಪಡಿಸಿದ್ದ ಎಂವಿಆರ್ ಕೃಷ್ಣ ಫಾರ್ ರಿಜಿಸ್ಟ್ರೇಷನ್ ಚಿತ್ರದ ಡಬ್ಬಿಂಗ್ ಹಕ್ಕು ಖರೀದಿ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಡಬ್ಬಿಂಗ್ ರೈಟ್ಸ್ ಸೇಲ್ ಆಗಿರುವುದು ಚಿತ್ರತಂಡ ಖುಷಿಯನ್ನು ದುಪ್ಪಟ್ಟು ಮಾಡಿದೆ.

ಟ್ರೇಲರ್ ಹಾಗೂ ಹಾಡಿನ ಮೂಲಕ ಆಮಂತ್ರಣ ಕೊಟ್ಟಿರುವ ಫಾರ್ ರಿಜಿಸ್ಟ್ರೇಷನ್ ಸಿನಿಮಾ ನಾಳೆ ತೆರೆಗೆ ಬರ್ತಿದೆ. ಸಂಬಂಧ ಮಹತ್ವ ಸಾರುವ ಈ ಚಿತ್ರದಲ್ಲಿ ರವಿಶಂಕರ್, ತಬಲಾ ನಾಣಿ, ಸುಧಾ ಬೆಳವಾಡಿ, ಬಾಬು ಹಿರಣಯ್ಯ, ಸ್ವಾತಿ, ರಮೇಶ್ ಭಟ್, ಉಮೇಶ್ ಸೇರಿದಂತೆ ಹಲವರು ತಾರಾ ಬಳಗದಲ್ಲಿದ್ದಾರೆ. ಚಿತ್ರಕಥೆ, ನಿರ್ದೇಶನ ನವೀನ್ ದ್ವಾರಕನಾಥ್ ನಿರ್ವಹಿಸಿದ್ದು, ಸಂಗೀತ ಸಂಯೋಜನೆ ಆರ್.ಕೆ ಹರೀಶ್, ಅಭಿಲಾಷ್ ಕಲಾತಿ, ಅಭಿಷೇಕ್ ಜಿ.ಕಾಸರಗೋಡು ಛಾಯಾಗ್ರಹಣ, ಮನು ಶೇಡ್ಗರ್ ಸಂಕಲನ ಚಿತ್ರಕ್ಕಿದೆ. ನಿಶ್ಚಲ್ ಫಿಲಂಸ್ ಬ್ಯಾನರ್ನಲ್ಲಿ ನವೀನ್ ರಾವ್ ಬಂಡವಾಳ ಹೂಡಿದ್ದಾರೆ. ಬಹಳ ದಿನಗಳ ನಂತರ ಮತ್ತೆ ವಿತರಣೆ ಅಖಾಡಕ್ಕೆ ಇಳಿದಿರುವ ದೀಪಕ್ ಗಂಗಾಧರ್ ಫಿಲಂಸ್ ಫಾರ್ ರಿಜಿಸ್ಟ್ರೇಷನ್ ಸಿನಿಮಾವನ್ನು ಫೆಬ್ರವರಿ 23ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ.

ಈ ಸುದ್ದಿಯನ್ನೂ ಓದಿ: For Registration Movie : ಸಂಬಂಧಗಳು ರಿಜಿಸ್ಟರ್ ಆಗುವಂತಹ ಸಿನಿಮಾ ʻFor Regn’ ಟ್ರೈಲರ್‌ ಔಟ್‌!

Continue Reading
Advertisement
Matrimony Couple
ದೇಶ13 mins ago

Matrimony Apps: ಮ್ಯಾಟ್ರಿಮೋನಿ ಆ್ಯಪ್ ಇನ್ನಿಲ್ಲ; ಆನ್‌ಲೈನ್‌ನಲ್ಲಿ ಇನ್ನು ಸಂಗಾತಿ ಸಿಗಲ್ಲ!

supreme
ದೇಶ28 mins ago

Gyanvapi Case: ಜ್ಞಾನವಾಪಿ ಮಸೀದಿ ವಿವಾದ: ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ವಿಚಾರಣೆಗೆ ಸುಪ್ರೀಂ ಸಮ್ಮತಿ

Blast-in-Bangalore-Rameshwaram-Cafe-cc-tv
ಬೆಂಗಳೂರು33 mins ago

Blast in Bengaluru : ರಾಮೇಶ್ವರಂ ಕೆಫೆಯಲ್ಲಿ ನಿಜಕ್ಕೂ ಆಗಿದ್ದೇನು?; ಸ್ಫೋಟದ EXCLUSIVE ಸಿಸಿ ಟಿವಿ ಫೂಟೇಜ್‌ ಇದು

Kalaburgi has recorded the highest maximum temperature
ಮಳೆ36 mins ago

Karnataka Weather : ವಾರಾಂತ್ಯದಲ್ಲಿ ಇಲ್ಲೆಲ್ಲ ತಾಪಮಾನ ದುಪ್ಪಟ್ಟು

nathan lyon
ಕ್ರೀಡೆ41 mins ago

Nathan Lyon: ವಿಂಡೀಸ್​ ದಿಗ್ಗಜ ವಾಲ್ಶ್ ದಾಖಲೆ ಮುರಿದ ನಥಾನ್​ ಲಿಯೋನ್

500 notes
ಮನಿ-ಗೈಡ್41 mins ago

Money Guide: ಆಧಾರ್‌ ಕಾರ್ಡ್‌ ಅಪ್‌ಡೇಟ್‌ನಿಂದ ಐಡಿಬಿಐ ಬ್ಯಾಂಕ್‌ನ ವಿಶೇಷ ಎಫ್‌ಡಿವರೆಗೆ; ಈ ತಿಂಗಳಿನಿಂದ ಏನೆಲ್ಲ ಬದಲಾವಣೆ?

nbcc
ಉದ್ಯೋಗ47 mins ago

Job Alert: ಎನ್‌ಬಿಸಿಸಿಯಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Blast in Bengaluru Time bomb planted in rameshwaram cafe Important evidence found
ಬೆಂಗಳೂರು54 mins ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

Tarang Mela 1
ಬೆಂಗಳೂರು1 hour ago

TARANG Mela: ಬೆಂಗಳೂರಿನಲ್ಲಿ ತರಂಗ್ ಮೇಳಕ್ಕೆ ಚಾಲನೆ; ಕೃಷಿ ಉತ್ಪನ್ನ, ಕರಕುಶಲ ವಸ್ತು ಪ್ರದರ್ಶನ, ಮಾರಾಟ

Live In Couple
ದೇಶ1 hour ago

ಲಿವ್‌ ಇನ್‌ ಪಾರ್ಟ್‌ನರ್‌ನನ್ನೇ ಕೊಂದು ಪೊಲೀಸರಿಗೆ ಕರೆ ಮಾಡಿದಳು ಕೊಲೆಗಾತಿ! ಮುಂದೇನಾಯ್ತು?

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Blast in Bengaluru Time bomb planted in rameshwaram cafe Important evidence found
ಬೆಂಗಳೂರು54 mins ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು3 hours ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 hours ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ14 hours ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

dina bhavishya read your daily horoscope predictions for February 28 2024
ಭವಿಷ್ಯ2 days ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ3 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ3 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ3 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ4 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

ಟ್ರೆಂಡಿಂಗ್‌