Site icon Vistara News

Intimacy Coordinator: ಬಿಸಿಬಿಸಿ ದೃಶ್ಯಗಳಿಗೆ ಹೊಸ ಟ್ರೇನರ್!

intimate scene

ಚಲನಚಿತ್ರಗಳಲ್ಲಿ ಡ್ಯಾನ್ಸ್‌, ಫೈಟ್, ಆಕ್ಷನ್‌ ಸೀನ್‌ಗಳನ್ನು‌ ಮಾಡುವಂತೆ ಕಲಾವಿದರಿಗೆ ಟ್ರೇನಿಂಗ್ ಕೊಡುವವರಿದ್ದಾರೆ. ಆದರೆ, ಲೈಂಗಿಕ ದೃಶ್ಯಗಳನ್ನೂ ರಿಹರ್ಸಲ್‌ ಮಾಡುತ್ತಾರೆ, ಅದಕ್ಕೂ ಒಬ್ಬರು ಕೊಆರ್ಡಿನೇಟರ್‌ ಇರ್ತಾರೆ ಎಂದರೆ ನಂಬುತ್ತೀರಾ? ಹಾಲಿವುಡ್‌ ಸೇರಿದಂತೆ ಹಲವು ವಿದೇಶಿ ಚಿತ್ರರಂಗದಲ್ಲಿ ಹೀಗೊಂದು intimacy coordinator ಎಂಬ ಪರಿಕಲ್ಪನೆ ಹೊಸತೇನಲ್ಲ. ಆದರೆ ಭಾರತದಲ್ಲಿ ಇದು ಇತ್ತೀಚೆಗೆ ಪ್ರಚಲಿತಗೊಳ್ಳುತ್ತಿದೆ. ಒಂದು ಲೈಂಗಿಕ ದೃಶ್ಯ ಚಿತ್ರೀಕರಣಗೊಳ್ಳುವಾಗ ತೆರೆಯ ಹಿಂದಿನ ಕೆಲಸಗಳು ಹೇಗಿರಬಹುದು ಎಂಬುದನ್ನು ತಿಳಿಯುವ ಕುತೂಹಲ ನಿಮಗಿರಬಹುದು ಅಲ್ವಾ?

ಲೈಂಗಿಕ ದೃಶ್ಯಗಳನ್ನು ಚಿತ್ರೀಕರಿಸಲು ಪೂರ್ವಸಿದ್ಧತೆ ಹೇಗಿರುತ್ತದೆ ಎಂದು ಆಸ್ತಾ ಖನ್ನಾ ಮುಕ್ತವಾಗಿ ಹಂಚಿಕೊಂಡಿದ್ದಾರೆ.‌ ಆಸ್ತಾ ಖನ್ನಾ ಎಂಬ ಯುವತಿ ಭಾರತದ ಮೊದಲ ಇಂಟಿಮಸಿ ಕೊಆರ್ಡಿನೇಟರ್‌. ಅವರ ಮಾತುಗಳು ಹೀಗಿವೆ:

ಆಸ್ಥಾ ಖನ್ನಾ

ಇತ್ತೀಚೆಗೆ ಚಾಲ್ತಿಯಲ್ಲಿರುವ, ಓಟಿಟಿಯಲ್ಲಿ ಬರುವ ಸಿನಿಮಾ ಅಥವಾ ವೆಬ್‌ ಸೀರೀಸ್‌ಗಳಲ್ಲಿ ಲೈಂಗಿಕ ದೃಶ್ಯಗಳು ಹೆಚ್ಚಿವೆ. ಉಳಿದ ದೃಶ್ಯಗಳಂತೆ ಇವೂ ಕೂಡ ಕೂಡ ನಟನೆಯೇ ಆಗಿರುತ್ತವೆ. ಆದರೆ ಅದು ನೈಜವಾಗಿ ಕಾಣುವಂತೆ ಮಾಡುವ ಕಾರ್ಯ ಇಂಟಿಮಸಿ ಕೊಆರ್ಡಿನೇಟರದ್ದು.

ಲೈಂಗಿಕ ಉದ್ರೇಕ ಉಂಟಾದರೆ?

ಲೈಂಗಿಕ ದೃಶ್ಯವನ್ನು ಚಿತ್ರಿಸುವಾಗ ಅಥವಾ ರಿಹರ್ಸಲ್‌ ವೇಳೆಯಲ್ಲಿ ಯಾರೂ ಕಾಮೋದ್ರೇಕಕ್ಕೆ ಒಳಗಾಗುವುದಿಲ್ಲವೇ? ಈವರೆಗೆ ಆ ರೀತಿಯ ಸಂದರ್ಭ ಎದುರಾಗಿಲ್ಲವಂತೆ. ರಿಹರ್ಸಲ್‌ ಹಾಗೂ ಚಿತ್ರೀಕರಣದ ಸಮಯದಲ್ಲಿ ಜನರು ಅವರನ್ನು ನೋಡುತ್ತಿರುತ್ತಾರೆ. ಇದನ್ನು ಅವರು ಅರಿತುಕೊಂಡಿರುತ್ತಾರೆ. ಹಾಗಾಗಿ ಪ್ರಚೋದನೆಗೆ ಅವಕಾಶ ಇರುವುದಿಲ್ಲ. ಇಂಟಿಮಸಿ ಕೊಆರ್ಡಿನೇಟರ್ ಮೊದಲೇ ಅವರ ಬಳಿ ಮಾತನಾಡಿರುತ್ತಾರೆ.‌ ಪ್ರಚೋದನೆಗೆ ಪೂರಕವಲ್ಲದ ವಿಷಯಗಳನ್ನು ಮಾತನಾಡಿರುತ್ತಾರೆ.

ಆಸ್ತಾ ಖನ್ನಾ ತಮ್ಮ ಬ್ಯಾಗಿನಲ್ಲಿ ಮಿಂಟ್‌, ಮೌತ್‌ ವಾಶ್‌, ಬಾಡಿ ಟೇಪ್‌, ಸಿಲಿಕಾನ್‌ ಒಳಉಡುಪುಗಳನ್ನು ಇಟ್ಟಿರುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಟನಟಿಯರ ಜನನಾಂಗಗಳು ಟಚ್‌ ಆಗುವದನ್ನು ತಡೆಯಲು ಸೈಕಲ್‌ ಸೀಟ್‌ ಕವರ್‌ ರೀತಿಯ ಒಂದು ಕವರ್‌ ಹಾಗೂ 9 ಇಂಚಿನ ಪೈಲೆಟ್ಸ್‌ ಬಾಲ್‌ನ್ನು ಬಳಸಲಾಗುತ್ತದೆ. ಇದರಿಂದಾಗಿ, ಕಾಮೋದ್ರೇಕದ ಭಯ ಇರುವುದಿಲ್ಲ. ಸಿನಿಮಾ ಎಂಬ ಮಾಯಾಲೋಕದಲ್ಲಿ ಎಷ್ಟೊಂದು ವಿಚಿತ್ರಗಳಿರುತ್ತವೆ ಅಲ್ಲವೇ? ತೆರೆಯ ಮೇಲೆ ಕಾಣುವ 3 ಗಂಟೆಯ ಸಿನಿಮಾದ ಹಿಂದೆ ಎಷ್ಟೋ ಕೆಲಸಗಳು ನಡೆಯುತ್ತವೆ. ಇದನ್ನು ಊಹಿಸುವುದು ಕಷ್ಟ.

ಹೆಚ್ಚಿನ ಓದಿಗಾಗಿ: ಕೆಜಿಎಫ್‌ ಸ್ಟಾರ್‌ ಯಶ್‌ ಲಕ್ಷುರಿ ಲೈಫ್‌ಸ್ಟೈಲ್‌ ಹೇಗಿದೆ ನಿಮಗೆ ಗೊತ್ತೆ?

Exit mobile version