Site icon Vistara News

ʼಹ್ಯಾಪಿ ಬರ್ತಡೇʼ ದಿನವೇ ʼಹ್ಯಾಪಿ ಡೇಸ್‌ʼ ನಿಖಿಲ್‌ ಕೊಟ್ಟ ಗುಡ್‌ ನ್ಯೂಸ್‌?

ʼಹ್ಯಾಪಿ ಡೇಸ್‌ʼ

ಬೆಂಗಳೂರು : ನಿಖಿಲ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸುದ್ದಿಯೊಂದನ್ನು ಫ್ಯಾನ್ಸ್‌ಗೆ ನೀಡಿದ್ದಾರೆ. 37 ವರ್ಷಕ್ಕೆ ಕಾಲಿಟ್ಟ ನಟ ನಿಖಿಲ್‌ ತೆಲುಗು ಚಿತ್ರರಂಗದಲ್ಲಿ ‘ಹ್ಯಾಪಿ ಡೇಸ್‌’ ಚಿತ್ರದ ರಾಜೇಶ್‌ ಪಾತ್ರದ ಮೂಲಕ ಹೆಸರನ್ನು ಪಡೆದುಕೊಂಡವರು. ಸಹಾಯಕ ನಿರ್ದೇಶನದಿಂದ, ಹ್ಯಾಪಿ ಡೇಸ್‌ ಸಿನಿಮಾ ಮೂಲಕ ನಟನಾಗಿ ಎಂಟ್ರಿ ಕೊಟ್ಟ ನಿಖಿಲ್‌ ಒಂದರ ಮೇಲೆ ಒಂದು ಸಿನಿಮಾ ಮಾಡುತ್ತಲೇ ಬಂದಿದ್ದಾರೆ.

ಇದೀಗ ನಿಖಿಲ್‌ ಅಭಿನಯದ ಕಾರ್ತಿಕೇಯ-2 ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದೆ. ಮುಂದುವರೆದ ಭಾಗ ಕಾರ್ತಿಕೇಯ -2 ಮೋಷನ್‌ ಪೋಸ್ಟ್‌ರ್‌ ಸೋಷಿಯಲ್‌ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಧ್ವನಿ ಮತ್ತು ಉತ್ತಮ ಸಂಭಾಷಣೆಯೊಂದಿಗೆ ಜನರನ್ನು ಆಕರ್ಷಿಸಿದ್ದು, ಕಮೆಂಟ್‌ ಬಾಕ್ಸ್‌ ಮೂಲಕ ಜನರು ಉತಮ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ | Queen 2 Web Series : ಶೂಟಿಂಗ್‌ ಫೋಟೊ ಹಂಚಿಕೊಂಡ ರಮ್ಯಾ ಕೃಷ್ಣನ್ 

ಪೀಪಲ್‌ ಮಿಡಿಯಾ ಫ್ಯಾಕ್ಟರಿ ಮತ್ತು ಅಭಿಷೇಕ್‌ ಅಗ್ರವಾಲ್‌ ಆರ್ಟ್‌ ಬ್ಯಾನರ್‌ ಮೂಲಕ, ವಿಶ್ವಪ್ರಸಾದ್‌ ಮತ್ತು ಅಭಿಷೇಕ್‌ ಅಗ್ರವಾಲ್‌ ನಿರ್ಮಾಣ ಮಾಡಲಿದ್ದು, ಈ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್ ಮುಗ್ಧ ಪಾತ್ರದಲ್ಲಿ ನಟಿಸುತ್ತಿದ್ದು, ಬಾಲಿವುಡ್‌ನ ಪ್ರಮುಖ ನಟ ಅನುಪಮ್ ಖೇರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮೋಷನ್‌ ಪೋಸ್ಟರ್‌ ಅಲ್ಲಿ ಧ್ವನಿಯನ್ನು ಸ್ವತಃ ನಿಖಿಲ್‌ ತೆಲುಗು ಮತ್ತು ಹಿಂದಿಯಲ್ಲಿ ನೀಡಿದ್ದಾರೆ. ಜುಲೈ 22 ರಂದು ಪಂಚ ಭಾಷೆಗಳಲ್ಲಿ ರಿಲೀಸ್‌ ಆಗುತ್ತಿರುವುದು ವಿಶೇಷ.

ಇದೀಗ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್ ನಲ್ಲಿ ಕುತೂಹಲಕಾರಿ ಅಂಶವೆಂದರೆ ಕಾರ್ತಿಕೇಯ ಅವರ ಪಯಣ. ಕಾಲ ಬೈರವ ಸಂಗೀತ ನಿರ್ದೇಶನ ಮಾಡಲಿದ್ದು, ಕಾರ್ತಿಕ್ ಘಟ್ಟಾಮನೇನಿ ಛಾಯಾಗ್ರಹಣ ಮಾಡಲಿದ್ದಾರೆ.

ನಟ ನಿಖಿಲ್‌ ಅವರ ಹಿಟ್‌ ಸಿನಿಮಾ :

ಹ್ಯಾಪಿ ಡೇಸ್‌ : 2007

ಶೇಖರ್‌ ಕುಮ್ಮುಲ ಅವರ ಹ್ಯಾಪಿ ಡೇಸ್‌ ಸಿನಿಮಾದಲ್ಲಿ ಕಾಲೇಜ್‌ ಕಥೆಯನ್ನು ಹೊಂದಿದ್ದು, ಸ್ನೇಹದ ಕುರಿತ ಕಥಾ ಹಂದರವನ್ನು ಸಿನಿಮಾ ಒಳಗೊಂಡಿದೆ. ಚಿತ್ರ ಭಾರಿ ಹಿಟ್‌ ಆಗಿದ್ದು, ವರುಣ್‌ ಸಂದೇಶ್‌, ತಮನ್ನಾ, ರಾಹುಲ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಸ್ವಾಮಿ ರಾರಾ : 2013

ಸಿನಿಮಾದಲ್ಲಿ ಮೂರು ಸ್ನೇಹಿತರ ಮಧ್ಯೆ ನಡೆಯುವ ಕಥೆಯಾಗಿದ್ದು, ಕ್ರೈಂ ಜತೆ ಕಾಮಿಡಿ ಕಂಟೆಂಟ್‌ ಒಳಗೊಂಡಿದೆ. ನಿಖಿಲ್ ಜೊತೆಗೆ ಸ್ವಾತಿ ರೆಡ್ಡಿ, ಸತ್ಯ, ರವಿಬಾಬು, ಪೂಜಾ ರಾಮಚಂದ್ರನ್, ಜೀವಾ, ರವಿವರ್ಮ ಮತ್ತು ಪ್ರವೀಣ್ ಚಿತ್ರದ ಭಾಗವಾಗಿದ್ದರು.

ಇದನ್ನೂ ಓದಿ | ರಕ್ಷಿತ್‌ ಶೆಟ್ಟಿ ನಿರ್ಮಾಣದ ಹೊಸ ಸಿನಿಮಾದಲ್ಲಿ ನಮ್ಮನೆ ಯುವರಾಣಿ ಅಂಕಿತಾ ಅಮರ್‌

ಕಾರ್ತೀಕೇಯ : 2014

ಮೊದಲ ಭಾಗದಲ್ಲಿ ವೈದ್ಯ ಶಿಬಿರಕ್ಕಾಗಿ ಗ್ರಾಮಕ್ಕೆ ಭೇಟಿ ನೀಡಿ ರಹಸ್ಯವನ್ನು ತಿಳಿದು ಪರಿಹರಿಸುವ ಒಂದು ಕಥಾ ವಸ್ತುವಾಗಿದ್ದು, ಹ್ಯಾಂಡೂ ಮೊಂಡೇಟಿ ನಿರ್ದೇಶಿಸಿದ್ದಾರೆ.

ಎಕ್ಕಡಿಕಿ ಪೊತಾವು ಚಿನ್ನವಾದ (2016)

ಅಲೌಕಿಕ-ರೊಮ್ಯಾಂಟಿಕ್ ಥ್ರಿಲ್ಲರ್ ತನ್ನ ಮಾಜಿ ಗೆಳತಿಯನ್ನು ನೆನಪಿಸುವ ಮಹಿಳೆಯೊಂದಿಗೆ ಪ್ರೀತಿಯಲ್ಲಿ ಬೀಳುವ ಯುವಕನ ಕಥೆಯ ಸುತ್ತ ಸುತ್ತುತ್ತದೆ. ಚಿತ್ರವು ಪ್ರೇಕ್ಷಕರಿಂದ ಅಪಾರ ಪ್ರೀತಿಯನ್ನು ಪಡೆಯಿತು ಮತ್ತು ತಮಿಳಿನಲ್ಲಿ ʼಆಯಿರಂ ಜೆನಮಂಗಲ್ʼ ಎಂದು ಮರುನಿರ್ಮಾಣವಾಯಿತು. ಚಿತ್ರವನ್ನು ವಿ ಆನಂದ್ ನಿರ್ದೇಶಿಸಿದ್ದಾರೆ. ನಿಖಿಲ್ ಜತೆಗೆ ಹೆಬ್ಬಾ ಪಟೇಲ್, ನಂದಿತಾ ಶ್ವೇತಾ, ಅವಿಕಾ ಗೋರ್ ಮತ್ತು ವೆನ್ನೆಲಾ ಕಿಶೋರ್ ಕೂಡ ಕಾಣಿಸಿಕೊಂಡಿದ್ದಾರೆ.

ಅರ್ಜುನ್ ಸುರವರಂ (2019)

ಹಗರಣದ ಹಿಂದೆ ಅಪರಾಧವನ್ನು ಕಂಡುಹಿಡಿದು ಮತ್ತು ಅದನ್ನು ಸ್ವತಃ ತನಿಖೆ ಮಾಡಲು ನಿರ್ಧರಿಸುವ ತನಿಖಾ ಪತ್ರಕರ್ತನ ಕಥೆಯನ್ನು ಕಥೆಯು ವಿವರಿಸುತ್ತದೆ. ಈ ಚಿತ್ರವನ್ನು ಟಿ ಸಂತೋಷ್ ಬರೆದು ನಿರ್ದೇಶಿಸಿದ್ದಾರೆ ಮತ್ತು ಲಾವಣ್ಯ ತ್ರಿಪಾಠಿ, ಸತ್ಯ ಅಕ್ಕಲಾ, ತರುಣ್ ಅರೋರಾ, ವೆನ್ನೆಲಾ ಕಿಶೋರ್, ಕೃಷ್ಣ ಮುರಳಿ ಪಸೋನಿ ಮತ್ತು ಪ್ರಗತಿ ನಟಿಸಿದ್ದಾರೆ.

ಇದನ್ನೂ ಓದಿ | ಟ್ರೇಲರ್‌ ರಿಲೀಸ್‌ ಬೆನ್ನಲ್ಲೇ ಟ್ರೆಂಡ್‌ ಆಗ್ತಿದೆ Boycott LaalSingh Chaddha; ಆಮಿರ್‌ ಮಾತು ಮರೆತಿಲ್ಲ ಜನ

Exit mobile version