ಟಾಲಿವುಡ್
ʼಹ್ಯಾಪಿ ಬರ್ತಡೇʼ ದಿನವೇ ʼಹ್ಯಾಪಿ ಡೇಸ್ʼ ನಿಖಿಲ್ ಕೊಟ್ಟ ಗುಡ್ ನ್ಯೂಸ್?
ನಿಖಿಲ್ ಇದೀಗ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್ ನಲ್ಲಿ ಕುತೂಹಲಕಾರಿ ಅಂಶವೊಂದನ್ನು ರಿವೀಲ್ ಮಾಡಿದ್ದಾರೆ.
ಬೆಂಗಳೂರು : ನಿಖಿಲ್ ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸುದ್ದಿಯೊಂದನ್ನು ಫ್ಯಾನ್ಸ್‌ಗೆ ನೀಡಿದ್ದಾರೆ. 37 ವರ್ಷಕ್ಕೆ ಕಾಲಿಟ್ಟ ನಟ ನಿಖಿಲ್ ತೆಲುಗು ಚಿತ್ರರಂಗದಲ್ಲಿ ‘ಹ್ಯಾಪಿ ಡೇಸ್’ ಚಿತ್ರದ ರಾಜೇಶ್ ಪಾತ್ರದ ಮೂಲಕ ಹೆಸರನ್ನು ಪಡೆದುಕೊಂಡವರು. ಸಹಾಯಕ ನಿರ್ದೇಶನದಿಂದ, ಹ್ಯಾಪಿ ಡೇಸ್ ಸಿನಿಮಾ ಮೂಲಕ ನಟನಾಗಿ ಎಂಟ್ರಿ ಕೊಟ್ಟ ನಿಖಿಲ್ ಒಂದರ ಮೇಲೆ ಒಂದು ಸಿನಿಮಾ ಮಾಡುತ್ತಲೇ ಬಂದಿದ್ದಾರೆ.
ಇದೀಗ ನಿಖಿಲ್ ಅಭಿನಯದ ಕಾರ್ತಿಕೇಯ-2 ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಮುಂದುವರೆದ ಭಾಗ ಕಾರ್ತಿಕೇಯ -2 ಮೋಷನ್ ಪೋಸ್ಟ್‌ರ್ ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಧ್ವನಿ ಮತ್ತು ಉತ್ತಮ ಸಂಭಾಷಣೆಯೊಂದಿಗೆ ಜನರನ್ನು ಆಕರ್ಷಿಸಿದ್ದು, ಕಮೆಂಟ್ ಬಾಕ್ಸ್ ಮೂಲಕ ಜನರು ಉತಮ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ | Queen 2 Web Series : ಶೂಟಿಂಗ್ ಫೋಟೊ ಹಂಚಿಕೊಂಡ ರಮ್ಯಾ ಕೃಷ್ಣನ್
ಪೀಪಲ್ ಮಿಡಿಯಾ ಫ್ಯಾಕ್ಟರಿ ಮತ್ತು ಅಭಿಷೇಕ್ ಅಗ್ರವಾಲ್ ಆರ್ಟ್ ಬ್ಯಾನರ್ ಮೂಲಕ, ವಿಶ್ವಪ್ರಸಾದ್ ಮತ್ತು ಅಭಿಷೇಕ್ ಅಗ್ರವಾಲ್ ನಿರ್ಮಾಣ ಮಾಡಲಿದ್ದು, ಈ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್ ಮುಗ್ಧ ಪಾತ್ರದಲ್ಲಿ ನಟಿಸುತ್ತಿದ್ದು, ಬಾಲಿವುಡ್‌ನ ಪ್ರಮುಖ ನಟ ಅನುಪಮ್ ಖೇರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮೋಷನ್ ಪೋಸ್ಟರ್ ಅಲ್ಲಿ ಧ್ವನಿಯನ್ನು ಸ್ವತಃ ನಿಖಿಲ್ ತೆಲುಗು ಮತ್ತು ಹಿಂದಿಯಲ್ಲಿ ನೀಡಿದ್ದಾರೆ. ಜುಲೈ 22 ರಂದು ಪಂಚ ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವುದು ವಿಶೇಷ.
ಇದೀಗ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್ ನಲ್ಲಿ ಕುತೂಹಲಕಾರಿ ಅಂಶವೆಂದರೆ ಕಾರ್ತಿಕೇಯ ಅವರ ಪಯಣ. ಕಾಲ ಬೈರವ ಸಂಗೀತ ನಿರ್ದೇಶನ ಮಾಡಲಿದ್ದು, ಕಾರ್ತಿಕ್ ಘಟ್ಟಾಮನೇನಿ ಛಾಯಾಗ್ರಹಣ ಮಾಡಲಿದ್ದಾರೆ.
ನಟ ನಿಖಿಲ್ ಅವರ ಹಿಟ್ ಸಿನಿಮಾ :
ಹ್ಯಾಪಿ ಡೇಸ್ : 2007
ಶೇಖರ್ ಕುಮ್ಮುಲ ಅವರ ಹ್ಯಾಪಿ ಡೇಸ್ ಸಿನಿಮಾದಲ್ಲಿ ಕಾಲೇಜ್ ಕಥೆಯನ್ನು ಹೊಂದಿದ್ದು, ಸ್ನೇಹದ ಕುರಿತ ಕಥಾ ಹಂದರವನ್ನು ಸಿನಿಮಾ ಒಳಗೊಂಡಿದೆ. ಚಿತ್ರ ಭಾರಿ ಹಿಟ್ ಆಗಿದ್ದು, ವರುಣ್ ಸಂದೇಶ್, ತಮನ್ನಾ, ರಾಹುಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.
ಸ್ವಾಮಿ ರಾರಾ : 2013
ಸಿನಿಮಾದಲ್ಲಿ ಮೂರು ಸ್ನೇಹಿತರ ಮಧ್ಯೆ ನಡೆಯುವ ಕಥೆಯಾಗಿದ್ದು, ಕ್ರೈಂ ಜತೆ ಕಾಮಿಡಿ ಕಂಟೆಂಟ್ ಒಳಗೊಂಡಿದೆ. ನಿಖಿಲ್ ಜೊತೆಗೆ ಸ್ವಾತಿ ರೆಡ್ಡಿ, ಸತ್ಯ, ರವಿಬಾಬು, ಪೂಜಾ ರಾಮಚಂದ್ರನ್, ಜೀವಾ, ರವಿವರ್ಮ ಮತ್ತು ಪ್ರವೀಣ್ ಚಿತ್ರದ ಭಾಗವಾಗಿದ್ದರು.
ಇದನ್ನೂ ಓದಿ | ರಕ್ಷಿತ್ ಶೆಟ್ಟಿ ನಿರ್ಮಾಣದ ಹೊಸ ಸಿನಿಮಾದಲ್ಲಿ ನಮ್ಮನೆ ಯುವರಾಣಿ ಅಂಕಿತಾ ಅಮರ್
ಕಾರ್ತೀಕೇಯ : 2014
ಮೊದಲ ಭಾಗದಲ್ಲಿ ವೈದ್ಯ ಶಿಬಿರಕ್ಕಾಗಿ ಗ್ರಾಮಕ್ಕೆ ಭೇಟಿ ನೀಡಿ ರಹಸ್ಯವನ್ನು ತಿಳಿದು ಪರಿಹರಿಸುವ ಒಂದು ಕಥಾ ವಸ್ತುವಾಗಿದ್ದು, ಹ್ಯಾಂಡೂ ಮೊಂಡೇಟಿ ನಿರ್ದೇಶಿಸಿದ್ದಾರೆ.
ಎಕ್ಕಡಿಕಿ ಪೊತಾವು ಚಿನ್ನವಾದ (2016)
ಅಲೌಕಿಕ-ರೊಮ್ಯಾಂಟಿಕ್ ಥ್ರಿಲ್ಲರ್ ತನ್ನ ಮಾಜಿ ಗೆಳತಿಯನ್ನು ನೆನಪಿಸುವ ಮಹಿಳೆಯೊಂದಿಗೆ ಪ್ರೀತಿಯಲ್ಲಿ ಬೀಳುವ ಯುವಕನ ಕಥೆಯ ಸುತ್ತ ಸುತ್ತುತ್ತದೆ. ಚಿತ್ರವು ಪ್ರೇಕ್ಷಕರಿಂದ ಅಪಾರ ಪ್ರೀತಿಯನ್ನು ಪಡೆಯಿತು ಮತ್ತು ತಮಿಳಿನಲ್ಲಿ ʼಆಯಿರಂ ಜೆನಮಂಗಲ್ʼ ಎಂದು ಮರುನಿರ್ಮಾಣವಾಯಿತು. ಚಿತ್ರವನ್ನು ವಿ ಆನಂದ್ ನಿರ್ದೇಶಿಸಿದ್ದಾರೆ. ನಿಖಿಲ್ ಜತೆಗೆ ಹೆಬ್ಬಾ ಪಟೇಲ್, ನಂದಿತಾ ಶ್ವೇತಾ, ಅವಿಕಾ ಗೋರ್ ಮತ್ತು ವೆನ್ನೆಲಾ ಕಿಶೋರ್ ಕೂಡ ಕಾಣಿಸಿಕೊಂಡಿದ್ದಾರೆ.
ಅರ್ಜುನ್ ಸುರವರಂ (2019)
ಹಗರಣದ ಹಿಂದೆ ಅಪರಾಧವನ್ನು ಕಂಡುಹಿಡಿದು ಮತ್ತು ಅದನ್ನು ಸ್ವತಃ ತನಿಖೆ ಮಾಡಲು ನಿರ್ಧರಿಸುವ ತನಿಖಾ ಪತ್ರಕರ್ತನ ಕಥೆಯನ್ನು ಕಥೆಯು ವಿವರಿಸುತ್ತದೆ. ಈ ಚಿತ್ರವನ್ನು ಟಿ ಸಂತೋಷ್ ಬರೆದು ನಿರ್ದೇಶಿಸಿದ್ದಾರೆ ಮತ್ತು ಲಾವಣ್ಯ ತ್ರಿಪಾಠಿ, ಸತ್ಯ ಅಕ್ಕಲಾ, ತರುಣ್ ಅರೋರಾ, ವೆನ್ನೆಲಾ ಕಿಶೋರ್, ಕೃಷ್ಣ ಮುರಳಿ ಪಸೋನಿ ಮತ್ತು ಪ್ರಗತಿ ನಟಿಸಿದ್ದಾರೆ.
ಇದನ್ನೂ ಓದಿ | ಟ್ರೇಲರ್ ರಿಲೀಸ್ ಬೆನ್ನಲ್ಲೇ ಟ್ರೆಂಡ್ ಆಗ್ತಿದೆ Boycott LaalSingh Chaddha; ಆಮಿರ್ ಮಾತು ಮರೆತಿಲ್ಲ ಜನ
South Cinema
Ram Charan: ವೀರ್ ಸಾವರ್ಕರ್ ಜನುಮದಿನದಂದೇ ʻವಿ ಮೆಗಾ ಪಿಕ್ಚರ್ಸ್ʼ ಹೊಸ ಸಿನಿಮಾ ಅನೌನ್ಸ್; ವಿಡಿಯೊ ಹಂಚಿಕೊಂಡ ರಾಮ್‌ಚರಣ್!
Ram Charan: ರಾಮ್ ಚರಣ್ ಅವರು ತಮ್ಮ ಪ್ರೊಡಕ್ಷನ್ ಬ್ಯಾನರ್ ʻವಿ ಮೆಗಾ ಪಿಕ್ಚರ್ಸ್ʼ ತಮ್ಮ ಸ್ನೇಹಿತ ಯುವಿ ಕ್ರಿಯೇಷನ್ಸ್‌ನ ವಿಕ್ರಮ್ ರೆಡ್ಡಿ ಅವರ ಸಹಯೋಗದೊಂದಿಗೆ ಪ್ರಾರಂಭಿಸುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಬೆಂಗಳೂರು: ಗ್ಲೋಬಲ್ ಸ್ಟಾರ್ ರಾಮ್ ಚರಣ್ (Ram Charan), ಹಾಗೂ ಅವರ ಸ್ನೇಹಿತ ವಿಕ್ರಮ್ ಮತ್ತು ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಇದೀಗ ಹೊಸ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ವಿ ಮೆಗಾ ಪಿಕ್ಚರ್ಸ್ ಮತ್ತು ಅಭಿಷೇಕ್ ಅಗರ್ವಾಲ್ ಅವರ ಆರ್ಟ್ ಬ್ಯಾನರ್ ಸಹಯೋಗದಲ್ಲಿ ಮೊದಲ ಸಿನಿಮಾವನ್ನು ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರ ಜನ್ಮದಿನದ ಸಂದರ್ಭದಲ್ಲಿ ಅನೌನ್ಸ್ ಮಾಡಿದ್ದಾರೆ. ರಾಮ್ ವಂಶಿ ಕೃಷ್ಣ ನಿರ್ದೇಶನದ ʻದಿ ಇಂಡಿಯಾ ಹೌಸ್ʼ ಶೀರ್ಷಿಕೆಯ ಚಿತ್ರದಲ್ಲಿ ನಿಖಿಲ್ ಸಿದ್ಧಾರ್ಥ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ರಾಮ್ ಚರಣ್ ಪ್ರಸ್ತುತಪಡಿಸಿದ್ದಾರೆ.
ರಾಮ್ ಚರಣ್ ಅವರು ತಮ್ಮ ಪ್ರೊಡಕ್ಷನ್ ಬ್ಯಾನರ್ ʻವಿ ಮೆಗಾ ಪಿಕ್ಚರ್ಸ್ʼ ತಮ್ಮ ಸ್ನೇಹಿತ ಯುವಿ ಕ್ರಿಯೇಷನ್ಸ್‌ನ ವಿಕ್ರಮ್ ರೆಡ್ಡಿ ಅವರ ಸಹಯೋಗದೊಂದಿಗೆ ಪ್ರಾರಂಭಿಸುವ ಮೂಲಕ ತಮ್ಮ ವೃತ್ತಿಜೀವನದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಇದೀಗ ಪ್ಯಾನ್ ಇಂಡಿಯಾ ಸಿನಿಮಾವಾದ ʻದಿ ಇಂಡಿಯಾ ಹೌಸ್ʼನಲ್ಲಿ ನಿಖಿಲ್ ಸಿದ್ಧಾರ್ಥ ಶಿವನಾಗಿ ಮತ್ತು ಅನುಪಮ್ ಖೇರ್ ಶ್ಯಾಮ್ಜಿ ಕೃಷ್ಣ ವರ್ಮಾ ಆಗಿ ಕಾಣಿಸಿಕೊಳ್ಳಲಿದ್ದಾರೆ. ರಾಮ್ ಚರಣ್ ಅವರ ವಿ ಮೆಗಾ ಪಿಕ್ಚರ್ಸ್ ಮತ್ತು ಅಭಿಷೇಕ್ ಅಗರ್ವಾಲ್ ಅವರ ಸೋಷಿಯಲ್ ಮೀಡಿಯಾಗಳ ಅಧಿಕೃತ ಖಾತೆಯಲ್ಲಿ ಪವರ್-ಪ್ಯಾಕ್ಡ್ ವಿಡಿಯೊದೊಂದಿಗೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾರ್ವಕರ್ ಅವರ ಜನ್ಮದಿನದ ಈ ಸಿನಿಮಾದ ಶೀರ್ಷಿಕೆ ಅನಾವರಣಗೊಳಿಸಿದ್ದಾರೆ.
ಇದನ್ನೂ ಓದಿ: Ram Charan : ಹಾಲಿವುಡ್ ಎಂಟ್ರಿ ಬಗ್ಗೆ ನಟ ರಾಮ್ ಚರಣ್ ಹೇಳಿದ್ದೇನು? ವಿಡಿಯೊ ವೈರಲ್
ರಾಮ್ ಚರಣ್ ಪೋಸ್ಟ್
“ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ 140ನೇ ಜನ್ಮದಿನದ ಸಂದರ್ಭದಲ್ಲಿ ನಾವು ನಮ್ಮ ಪ್ಯಾನ್ ಇಂಡಿಯಾ ಚಲನಚಿತ್ರವನ್ನು ಘೋಷಿಸಲು ಹೆಮ್ಮೆಪಡುತ್ತೇವೆ. `ದಿ ಇಂಡಿಯಾ ಹೌಸ್’ ಸಿನಿಮಾ.
ನಿಖಿಲ್ ಸಿದ್ಧಾರ್ಥ, ಅನುಪಮ್ ಖೇರ್ ಜಿ ಮತ್ತು ನಿರ್ದೇಶಕ ರಾಮ್ ವಂಶಿ ಕೃಷ್ಣ ತಂಡದೊಂದಿಗೆʼʼ ಎಂದು ರಾಮ್ ಚರಣ್ ಟ್ವೀಟ್ ಮಾಡಿದ್ದಾರೆ.
On the occasion of the 140th birth anniversary of our great freedom fighter Veer Savarkar Garu we are proud to announce our pan India film – THE INDIA HOUSE
— Ram Charan (@AlwaysRamCharan) May 28, 2023
headlined by Nikhil Siddhartha, Anupam Kher ji & director Ram Vamsi Krishna!
Jai Hind!@actor_Nikhil @AnupamPKher… pic.twitter.com/YYOTOjmgkV
ಕ್ಯಾಮರೂನ್ ಬ್ರೈಸನ್ ಅವರ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಅನುಪಮ್ ಖೇರ್ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಚಲನಚಿತ್ರವನ್ನು ಪ್ರಮುಖ ಭಾರತೀಯ ಭಾಷೆಗಳಲ್ಲಿ ಮತ್ತು ವಿದೇಶಿ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಯಾರಕರು ಘೋಷಿಸಿದ್ದಾರೆ. ಉಳಿದ ಪಾತ್ರವರ್ಗ ಮತ್ತು ತಂಡದ ಬಗ್ಗೆ ಹೆಚ್ಚಿನ ವಿವರಗಳನ್ನು ಮುಂಬರುವ ದಿನಗಳಲ್ಲಿ ಹಂಚಿಕೊಳ್ಳುವುದಾಗಿ ಚಿತ್ರತಂಡ ಹೇಳಿಕೊಂಡಿದೆ.
ರಾಮ್ ಚರಣ್ ಜತೆ ಕೈ ಜೋಡಿಸಿದ ʻದಿ ಕಾಶ್ಮೀರ್ ಫೈಲ್ಸ್ʼ ನಿರ್ಮಾಪಕ
ಟಾಲಿವುಡ್ ನಟ ರಾಮ್‌ಚರಣ್ (Ram Charan) ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ವಿ ಮೆಗಾ ಪಿಕ್ಚರ್ಸ್’ (V Mega Pictures) ನಿರ್ಮಾಣ ಸಂಸ್ಥೆಯ ಜತೆ ಕೈ ಜೋಡಿಸಿದ್ದಾರೆ. ವಿ ಮೆಗಾ ಪಿಕ್ಚರ್ಸ್ ಮೂಲಕ ನಿರ್ಮಾಣಕ್ಕಿಳಿದಿರುವ ರಾಮ್ ಚರಣ್ ಸ್ನೇಹಿತ ಯುವಿ ಕ್ರಿಯೇಷನ್‌ನ ವಿಕ್ರನ್ ರೆಡ್ಡಿ ಸಾಥ್ ಕೊಟ್ಟಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಹಾಗೂ ಕಾರ್ತಿಕೇಯ-2 ನಂತಹ ಬ್ಲಾಕ್ ಬಸ್ಟರ್ ಸಿನಿಮಾ ನೀಡಿರುವ ಅಭಿಷೇಕ್ ಅಗರ್ವಾಲ್ ಆರ್ಟ್ ಬ್ಯಾನರ್ ಹಾಗೂ ವಿ ಮೆಗಾ ಪಿಕ್ಚರ್ಸ್ ಜಂಟಿಯಾಗಿ ನಿರ್ಮಾಣಕ್ಕಿಳಿದಿದ್ದಾರೆ. ಚಿತ್ರರಂಗದಲ್ಲಿ ಹೊಸಬರಿಗೆ ಅವಕಾಶ ನೀಡವುದರಿಂದ ರಾಮ್ ಚರಣ್ ಅವರ ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
South Cinema
Telugu star Naresh: ಮಕ್ಕಳು ಮಾಡಿಕೊಳ್ಳುವ ಆಲೋಚನೆ ಬಗ್ಗೆ ನರೇಶ್, ಪವಿತ್ರಾ ಲೋಕೇಶ್ ಹೇಳಿದ್ದೇನು?
Telugu star Naresh: ಜೋಡಿ ಸಿನಿಮಾ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ಮಕ್ಕಳು ಮಾಡಿಕೊಳ್ಳುವ ಆಲೋಚನೆ ಬಗ್ಗೆ ಜೋಡಿ ಅಭಿಪ್ರಾಯ ವ್ತಕ್ತಪಡಿಸಿದೆ.
ಬೆಂಗಳೂರು: ನರೇಶ್ ಹಾಗೂ ಪವಿತ್ರಾ ಲೋಕೇಶ್ (Telugu star Naresh) ಅಭಿನಯದ ‘ಮಳ್ಳಿ ಪೆಳ್ಳಿ’ ಸಿನಿಮಾ ಥಿಯೇಟರ್‌ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆಂಧ್ರ, ತೆಲಂಗಾಣದಲ್ಲಿ ಬಿಡುಗಡೆಯಾಗಿರುವ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ನರೇಶ್- ಪವಿತ್ರಾ ಲವ್‌ಸ್ಟೋರಿಯಲ್ಲಿ ನಿರ್ದೇಶಕ ಎಂ. ಎಸ್ ರಾಜು ತೆರೆಗೆ ತಂದಿದ್ದಾರೆ. 15 ಕೋಟಿ ರೂ. ವೆಚ್ಚದಲ್ಲಿ ಈ ಚಿತ್ರ ನಿರ್ಮಾಣ ಮಾಡಿರುವುದಾಗಿ ನರೇಶ್ ಹೇಳಿದ್ದಾರೆ. ಇದೀಗ ಜೋಡಿ ಸಿನಿಮಾ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ಮಕ್ಕಳು ಮಾಡಿಕೊಳ್ಳುವ ಆಲೋಚನೆ ಬಗ್ಗೆ ಜೋಡಿ ಅಭಿಪ್ರಾಯ ವ್ತಕ್ತಪಡಿಸಿದೆ.
ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ನಿಮಗೆ ಮಕ್ಕಳು ಮಾಡಿಕೊಳ್ಳುವ ಆಲೋಚನೆ ಇದೆಯಾ? ಎನ್ನುವ ಪ್ರಶ್ನೆಗೆ ಪವಿತ್ರಾ ಲೋಕೇಶ್ ಮಾತನಾಡಿ ʻʻಸಾಕಷ್ಟು ಮಕ್ಕಳಿಗೆ ಪ್ರಪಂಚದಲ್ಲಿ ತಂದೆ ತಾಯಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಮಕ್ಕಳನ್ನು ಪಡೆಯುವ, ಸಮಾಜಕ್ಕೆ ನೀಡುವ ಅವಶ್ಯಕತೆ ಏನಿದೆ? ಎಂದಿದ್ದಾರೆ. ನಾವು ಜೋಡಿಯಾಗಿ ಮಾಡೋಕೆ ಸಾಕಷ್ಟು ವಿಷಯಗಳಿವೆʼʼಎಂದರು.
ನರೇಶ್ ಮಾತನಾಡಿ ʻʻರಕ್ತ ಸಂಬಂಧಕ್ಕಿಂತ ಭಾವನಾತ್ಮಕ ಸಂಬಂಧ ಬಹಳ ದೊಡ್ಡದು. ನನಗೆ ಪವಿತ್ರಾ ಮಗು, ನಾನು ಪವಿತ್ರಾಗೆ ಮಗು. ನಮಗೆ ಮಕ್ಕಳಿದ್ದಾರೆ. ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಮಗು ಪಡೆಯಲು ನಾವು ದೈಹಿಕವಾಗಿ ಅರ್ಹರಾಗಿದ್ದೇವೆ. ನಾವು ಈಗ ಮಕ್ಕಳನ್ನು ಪಡೆದು ಬೆಳೆಸಿದರೆ, ಅವರಿಗೆ 20 ವರ್ಷ ಆಗುವಷ್ಟರಲ್ಲಿ ನಮಗೆ 60 ವರ್ಷ ವಯಸ್ಸಾಗಿರುತ್ತದೆ. ನನಗೆ ಪವಿತ್ರಾ ದೇವತೆಯಂತೆ, ತಾಯಿಯಂತೆ, ಮಡದಿಯಂತೆ, ಮಗಳಂತೆ, ಸ್ನೇಹಿತೆಯಂತೆ ಕಾಣಿಸುತ್ತಾರೆ. ಆಕೆ ಬಂದ ಮೇಲೆ ನನ್ನ ಜೀವನ ಸಂಪೂರ್ಣವಾಗಿ ಬದಲಾಗಿದೆʼʼ ಎಂದರು.
ಇದನ್ನೂ ಓದಿ: Pavitra Naresh: ನನ್ನ ತಾಯಿಯ ಬಳಿಕ ಇನ್ನೊಬ್ಬ ತಾಯಿಯನ್ನು ಭೇಟಿಯಾದೆ: ನರೇಶ್ ಭಾವುಕ!
Audience made #MALLIPELLI their own 😍
— MS Raju (@MSRajuOfficial) May 27, 2023
Enjoy the BOLDEST BLOCKBUSTER in Theaters near you ❤️🔥💥
Book Ur Tickets for this Intense Melodrama Now!
🎟️ https://t.co/PFyBXV2kGK@ItsActorNaresh #PavitraLokesh @MSRajuOfficial @VKMovies_ @adityamusic pic.twitter.com/4WQ12ZAWm0
ಮೇ 26ಕ್ಕೆ ʻಮಳ್ಳಿ ಪೆಳ್ಳಿʼ ಎಂಬ ಟೈಟಲ್ ನಡಿ ತೆಲುಗಿನಲ್ಲಿ ಸಿನಿಮಾ ತೆರೆ ಕಂಡಿದೆ. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದೆ. ಜಯಸುಧಾ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.
South Cinema
Ram Charan: ರಾಮ್ ಚರಣ್ ಜತೆ ಕೈ ಜೋಡಿಸಿದ ʻದಿ ಕಾಶ್ಮೀರ್ ಫೈಲ್ಸ್ʼ ನಿರ್ಮಾಪಕ
Ram Charan: ವಿ ಮೆಗಾ ಪಿಕ್ಚರ್ಸ್ ಮೂಲಕ ನಿರ್ಮಾಣಕ್ಕಿಳಿದಿರುವ ರಾಮ್ ಚರಣ್ ಸ್ನೇಹಿತ ಯುವಿ ಕ್ರಿಯೇಷನ್‌ನ ವಿಕ್ರನ್ ರೆಡ್ಡಿ ಸಾಥ್ ಕೊಟ್ಟಿದ್ದಾರೆ.
ಬೆಂಗಳೂರು: ಟಾಲಿವುಡ್ ನಟ ರಾಮ್‌ಚರಣ್ (Ram Charan) ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ‘ವಿ ಮೆಗಾ ಪಿಕ್ಚರ್ಸ್’ (V Mega Pictures) ನಿರ್ಮಾಣ ಸಂಸ್ಥೆಯ ಜತೆ ಕೈ ಜೋಡಿಸಿದ್ದಾರೆ. ವಿ ಮೆಗಾ ಪಿಕ್ಚರ್ಸ್ ಮೂಲಕ ನಿರ್ಮಾಣಕ್ಕಿಳಿದಿರುವ ರಾಮ್ ಚರಣ್ ಸ್ನೇಹಿತ ಯುವಿ ಕ್ರಿಯೇಷನ್‌ನ ವಿಕ್ರನ್ ರೆಡ್ಡಿ ಸಾಥ್ ಕೊಟ್ಟಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಹಾಗೂ ಕಾರ್ತಿಕೇಯ-2 ನಂತಹ ಬ್ಲಾಕ್ ಬಸ್ಟರ್ ಸಿನಿಮಾ ನೀಡಿರುವ ಅಭಿಷೇಕ್ ಅಗರ್ವಾಲ್ ಆರ್ಟ್ ಬ್ಯಾನರ್ ಹಾಗೂ ವಿ ಮೆಗಾ ಪಿಕ್ಚರ್ಸ್ ಜಂಟಿಯಾಗಿ ನಿರ್ಮಾಣಕ್ಕಿಳಿದಿದ್ದಾರೆ.
ಈ ಎರಡು ಸಂಸ್ಥೆಗಳ ಮೂಲಕ ಪ್ಯಾನ್ ಇಂಡಿಯಾ ಚಿತ್ರ ನಿರ್ಮಾಣ ತಯಾರಿ ನಡೆಯುತ್ತಿದೆ. ಅಭಿಷೇಕ್ ಅಗರ್ವಾಲ್ ಆರ್ಟ್ ಬ್ಯಾನರ್ ಹಾಗೂ ವಿ ಮೆಗಾ ಪಿಕ್ಚರ್ಸ್ ಜಂಟಿಯಾಗಿ ಮೂಡಿ ಬರುತ್ತಿರುವ ಚೊಚ್ಚಲ ಸಿನಿಮಾಗೆ ಯುವ ನಾಯಕ ಹಾಗೂ ಹೊಸ ನಿರ್ದೇಶಕರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಶೀಘ್ರದಲ್ಲಿ ಈ ಪ್ರಾಜೆಕ್ಟ್ ಅನೌನ್ಸ್ ಆಗಲಿದೆ. ವಿಭಿನ್ನ ಕಂಟೆಂಟ್ ಪ್ರೇಕ್ಷಕರಿಗೆ ಅರ್ಪಿಸಲು ಈ ಎರಡು ಸಂಸ್ಥೆಗಳು ಕೈ ಜೋಡಿಸಿವೆ. ಚಿತ್ರರಂಗದಲ್ಲಿ ಹೊಸಬರಿಗೆ ಅವಕಾಶ ನೀಡವುದರಿಂದ ರಾಮ್ ಚರಣ್ ಅವರ ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
ಗೇಮ್ ಚೇಂಜರ್ ಸಿನಿಮಾದಲ್ಲಿ ಬ್ಯುಸಿಯಾದ ರಾಮ್‌ಚರಣ್
ರಾಮ್‌ಚರಣ್ ಸದ್ಯ ಗೇಮ್ ಚೇಂಜರ್ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. 2019ರಲ್ಲಿ ಬಿಡುಗಡೆಯಾದ ವಿನಯ ವಿಧೇಯ ರಾಮ ಚಿತ್ರದ ನಂತರ ರಾಮ್ ಚರಣ್ ಮತ್ತು ಕಿಯಾರಾ ಆಡ್ವಾಣಿ ಈ ಸಿನಿಮಾದಲ್ಲಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಜಯರಾಮ್, ಅಂಜಲಿ ಸುನೀಲ್, ಶ್ರೀಕಾಂತ್, ನವೀನ್ ಚಂದ್ರ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Ram Charan : ಹಾಲಿವುಡ್ ಎಂಟ್ರಿ ಬಗ್ಗೆ ನಟ ರಾಮ್ ಚರಣ್ ಹೇಳಿದ್ದೇನು? ವಿಡಿಯೊ ವೈರಲ್
ಎಸ್ ಥಮನ್ ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ತಿರು ಮತ್ತು ಆರ್.ರತ್ನವೇಲು ಛಾಯಾಗ್ರಹಣ, ಶಮೀರ್ ಮಹಮ್ಮದ್ ಸಂಕಲನ ಚಿತ್ರಕ್ಕಿದೆ.ಈ ಪ್ರಾಜೆಕ್ಟ್ ಅನ್ನು ಪ್ಯಾನ್-ಇಂಡಿಯಾ ಬಿಡುಗಡೆಗಾಗಿ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಮತ್ತು ಶಿರೀಶ್ ಗಾರು ಜಂಟಿಯಾಗಿ ನಿರ್ಮಿಸಿದ್ದಾರೆ. ಗೇಮ್ ಚೇಂಜರ್ ತೆಲುಗು, ತಮಿಳು ಮತ್ತು ಹಿಂದಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
South Cinema
Devara Movie: ಜ್ಯೂನಿಯರ್ ಎನ್ಟಿಆರ್ ʻದೇವರʼ ಸಿನಿಮಾದಲ್ಲಿ ಕನ್ನಡಿಗ ತಾರಕ್ ಪೊನ್ನಪ್ಪ
‘Devara Movie: ಕೆಜಿಎಫ್’ ಚಿತ್ರದಲ್ಲಿ ದಯಾ ಪಾತ್ರ ಮಾಡಿದ್ದ ತಾರಕ್ ಪೊನ್ನಪ್ಪ ಈಗ ʻದೇವರ’ ಸಿನಿಮಾದಲ್ಲಿ (Devara Movie) ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ಬೆಂಗಳೂರು: ಜ್ಯೂನಿಯರ್ ಎನ್ಟಿಆರ್ ಅವರ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾ ʻದೇವರʼ (Devara Movie) ಅಧಿಕೃತ ಶೀರ್ಷಿಕೆ ಮತ್ತು ಲುಕ್ ಈಗಾಗಲೇ ಬಿಡುಗಡೆಯಾಗಿದೆ. ಇದೀಗ ಮತ್ತೆ ಈ ಸಿನಿಮಾ ಹೊಸ ಅಪ್‌ಡೇಟ್ ಹಂಚಿಕೊಂಡಿದೆ. ‘ಕೆಜಿಎಫ್’ ಚಿತ್ರದಲ್ಲಿ ದಯಾ ಪಾತ್ರ ಮಾಡಿದ್ದ ತಾರಕ್ ಪೊನ್ನಪ್ಪ ಈಗ ʻದೇವರ’ ಸಿನಿಮಾದಲ್ಲಿ (Devara Movie) ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ʻದೇವರʼ ಸಿನಿಮಾಕ್ಕೆ ಎನ್ಟಿಆರ್ 30 ಎಂದು ತಾತ್ಕಾಲಿಕವಾಗಿ ಒಂದು ಶೀರ್ಷಿಕೆಯನ್ನಿಟ್ಟುಕೊಂಡು, ಇಷ್ಟು ದಿನ ಚಿತ್ರೀಕರಣ ಮಾಡಲಾಗುತ್ತಿತ್ತು. ಬಳಿಕ ಚಿತ್ರತಂಡ ದೇವರ ಎಂದು ಅಧಿಕೃತ ಟೈಟಲ್ ನೀಡಿತು. ಈಗಾಗಲೇ ಒಂದು ವಾರಗಳ ಕಾಲ ಶೂಟಿಂಗ್ ನಡೆದಿದ್ದು, ಅದರಲ್ಲಿ ತಾರಕ್ ಭಾಗಿ ಆಗಿದ್ದರು. ಹೈದರಾಬಾದ್ನಲ್ಲಿ ಶೂಟಿಂಗ್ ನಡೆದಿದೆ. ಮುಂದಿನ ಹಂತದ ಶೂಟಿಂಗ್ ಶೀಘ್ರವೇ ಆರಂಭ ಆಗಲಿದ್ದು, ಅದರಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ. ಸಂದರ್ಶನದಲ್ಲಿ ತಾರಕ್ ಪೊನ್ನಪ್ಪ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ.
‘ನಾನು ದೇವರ ಚಿತ್ರಕ್ಕೆ ಆಡಿಷನ್ ಕೊಟ್ಟೆ. ನನ್ನದು ಪ್ರಮುಖ ಪಾತ್ರ. ಸಿನಿಮಾದ ಸೆಟ್ಗಳು ಅದ್ಭುತವಾಗಿವೆ. ಪ್ರೀ-ಪ್ರೊಡಕ್ಷನ್ ಕೆಲಸಕ್ಕೆ ಅವರು ಹೆಚ್ಚು ಸಮಯ ಮೀಸಲಿಟ್ಟಿದ್ದಾರೆ. ಸೆಟ್ಗಳ ನಿರ್ಮಾಣಕ್ಕೆ ಸಾಕಷ್ಟು ಶ್ರಮ ಹಾಕಲಾಗಿದೆ’ ಎಂದು ಹೇಳಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಕೊರಟಾಲ ಶಿವ ಅವರು ಪ್ರಮುಖ ಪಾತ್ರಗಳಿಗಾಗಿ ಜಾನ್ವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರನ್ನು ಈಗಾಗಲೇ ಲಾಕ್ ಮಾಡಿರುವುದಾಗಿಯೂ ವರದಿಯಾಗಿದೆ. ಇದೀಗ ಕೆಜಿಎಫ್ ಖ್ಯಾತಿಯ ತಾರಕ್ ಪೊನ್ನಪ್ಪ ಅವರಿಗೆ ಪವರ್ ಫುಲ್ ಪಾತ್ರವೊಂದಕ್ಕೆ ಅವಕಾಶ ಸಿಕ್ಕಿದೆ.
ಜ್ಯೂ.ಎನ್ಟಿಆರ್ ಅಭಿನಯದ ಈ ದೇವರ ಸಿನಿಮಾವನ್ನು ಕೊರಟಾಲ ಶಿವ ಅವರು ನಿರ್ದೇಶನ ಮಾಡಿದ್ದಾರೆ. 2016ರಲ್ಲಿ ಇವರು ಜನತಾ ಗ್ಯಾರೇಜ್ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಅದರಲ್ಲಿ ಕೂಡ ಜ್ಯೂನಿಯರ್ ಎನ್ಟಿಆರ್ ನಾಯಕನಾಗಿದ್ದರು. ಅದಾದ ಮೇಲೆ ಕೊರಟಾಲ ಶಿವ ಅವರೊಟ್ಟಿಗೆ ಜ್ಯೂ.ಎನ್ಟಿಆರ್ ಯಾವುದೇ ಸಿನಿಮಾವನ್ನೂ ಮಾಡಿರಲಿಲ್ಲ. ಇದೀಗ ‘ದೇವರ’ ಮೂಲಕ ಒಂದಾಗಿದ್ದಾರೆ.
Wishing our sea of love, #DEVARA @tarak9999, a very Happy Birthday!
— Devara (@DevaraMovie) May 19, 2023
Fans, let’s celebrate today and every day. Can’t wait for all of you to witness the mass madness. ❤️🗡️🌊 #HappyBirthdayNTR https://t.co/oq1R7GrWKq
ಇದನ್ನೂ ಓದಿ: Devara Movie : ಜ್ಯೂ. ಎನ್ಟಿಆರ್ ಹುಟ್ಟುಹಬ್ಬಕ್ಕೆ ‘ದೇವರಾ’ ಫಸ್ಟ್ ಲುಕ್ ಪೋಸ್ಟರ್ ರಿಲೀಸ್
ಇನ್ನು ದೇವರ ಸಿನಿಮಾದಲ್ಲಿ ಜ್ಯೂನಿಯರ್ ಎನ್ಟಿಆರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಯೂ ಇದೆ. ಅಪ್ಪ-ಮಗ ಎರಡೂ ಪಾತ್ರದಲ್ಲಿ ಇವರೇ ಅಭಿನಯ ಮಾಡಲಿದ್ದಾರಂತೆ. ಇದೊಂದು ಪಕ್ಕಾ ಆ್ಯಕ್ಷನ್ ಚಿತ್ರದಂತೆ ಕಾಣಿಸುತ್ತಿದೆ. ಈ ಸಿನಿಮಾ 2024ರ ಏಪ್ರಿಲ್ 5ರಂದು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂಗಳಲ್ಲಿ ಬಿಡುಗಡೆಯಾಗಲಿದೆ.
-
ಕರ್ನಾಟಕ23 hours ago
ವಿಸ್ತಾರ ಯುಗಾದಿ ಕಥಾ ಸ್ಪರ್ಧೆ ಬಹುಮಾನ: ಚಂದ್ರಶೇಖರ್ ಡಿ.ಆರ್ ಪ್ರಥಮ, ದಾದಾಪೀರ್ ಜೈಮನ್ ದ್ವಿತೀಯ, ಪೂರ್ಣಿಮಾ ಮಾಳಗಿಮನಿ ತೃತೀಯ
-
ಕರ್ನಾಟಕ23 hours ago
Karnataka Cabinet Expansion: ಪ್ರಮಾಣ ವಚನ ಸಮಾರಂಭ ಬಹಿಷ್ಕಾರ; ಊರಿಗೆ ಹೊರಟ ಒಂದೇ ಜಿಲ್ಲೆಯ 5 ಶಾಸಕರು!
-
ಕಿರುತೆರೆ22 hours ago
Deepak Gowda: ‘ಶ್ರೀರಸ್ತು ಶುಭಮಸ್ತು’ಧಾರಾವಾಹಿಯಿಂದ ಹೊರನಡೆದ ದೀಪಕ್ ಗೌಡ; ಪಾತ್ರಕ್ಕೆ ಬಂದವರು ಕಿರುತೆರೆಗೆ ಹೊಸಬರಲ್ಲ!
-
ಕರ್ನಾಟಕ17 hours ago
Karnataka Cabinet: ತಾತನನ್ನು ಮಿನಿಸ್ಟರ್ ಮಾಡಿ ಪ್ಲೀಸ್: ರಾಹುಲ್ ಗಾಂಧಿಗೆ ಪತ್ರ ಬರೆದ ಟಿ.ಬಿ. ಜಯಚಂದ್ರ ಮೊಮ್ಮಗಳು
-
ಕ್ರಿಕೆಟ್13 hours ago
World Cup 2023 : ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ವೇಳೆ ವಿಶ್ವಕಪ್ ವೇಳಾಪಟ್ಟಿ ಪ್ರಕಟ
-
ದೇಶ6 hours ago
New Parliament Building: ಇಂದು ಹೊಸ ಸಂಸತ್ ಭವನ ಉದ್ಘಾಟನೆ; ಹೇಗೆ ನಡೆಯಲಿದೆ ಕಾರ್ಯಕ್ರಮ?
-
ಕರ್ನಾಟಕ14 hours ago
Tumkur News: ಹೆಜ್ಜೇನು ದಾಳಿ; ಮೂವರು ಮಕ್ಕಳು ಸೇರಿ 9 ಮಂದಿಗೆ ಗಾಯ
-
EXPLAINER4 hours ago
ವಿಸ್ತಾರ Explainer: ಹೊಸ ಸಂಸತ್ ಭವನದಲ್ಲಿ ಸ್ಥಾಪಿತಗೊಂಡ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದರ ಮಹತ್ವ?