ಬೆಂಗಳೂರು: ಜೈಲರ್ (Jailer Box Office) ಬಿಡುಗಡೆಯಾದ ಆರು ದಿನಗಳ ನಂತರವೂ, ರಜನಿಕಾಂತ್ ಹವಾ ಮುಂದುವರಿಯುತ್ತಲೇ ಇದೆ. ವಿಶ್ವಾದ್ಯಂತ 400 ಕೋಟಿ ರೂ. ಗಡಿಯನ್ನು ದಾಟುತ್ತಿದೆ ಎಂದು ವರದಿಯಾಗಿದೆ. ಭಾರತದಲ್ಲಿ ಜೈಲರ್ ಆಗಸ್ಟ್ 15ರಂದು 33 ಕೋಟಿ ರೂ. ಸಂಗ್ರಹಿಸಿದೆ. ಇದರೊಂದಿಗೆ ಚಿತ್ರದ ಒಟ್ಟು ದೇಶೀಯ ಕಲೆಕ್ಷನ್ 207 ಕೋಟಿ ರೂ. ತಮಿಳುನಾಡಿನಲ್ಲಿ ಅತ್ಯಧಿಕ ಅಕ್ಯುಪೆನ್ಸಿ ರೇಟ್ 81.59% ದಾಖಲಾಗಿದೆ. ಜೈಲರ್ ಸಿನಿಮಾದ ವೇಗವನ್ನು ನೋಡಿದರೆ ಈ ಸಿನಿಮಾ ಮಣಿರತ್ನಂ ಅವರ ʼಪೊನ್ನಿಯಿನ್ ಸೆಲ್ವನ್ʼ ಗಳಿಕೆಯನ್ನು ಮೀರಿಸುವುದರಲ್ಲಿ ಸಂದೇಹವೇ ಇಲ್ಲ. ಹೀಗಾದರೆ ʼಜೈಲರ್ʼ ತಮಿಳುನಾಡಿನಲ್ಲಿ ಅತ್ಯಧಿಕ ಗಳಿಸಿದ ಸಿನಿಮಾ ಆಗಿ ಹೊರಹೊಮ್ಮಲಿದೆ.
ದಕ್ಷಿಣದಲ್ಲಿ ಸಿನಿಮಾ ಕಲೆಕ್ಷನ್ ಚೆನ್ನಾಗಿದೆ. ಚಿರಂಜೀವಿ ಅವರ ʼಭೋಲಾ ಶಂಕರ್ʼ ಸಿನಿಮಾ ಥಿಯೇಟರ್ನಲ್ಲಿ ಪರದಾಡುವಂತಾಗಿದೆ. ಜೈಲರ್ ಹವಾ ತೆಲುಗು ರಾಜ್ಯಗಳಲ್ಲಿಯೂ ಜೋರಾಗಿದ್ದು ಇದು ಚಿರಂಜೀವಿ ಸಿನಿಮಾಗೆ ಸಣ್ಣ ಹೊಡೆತ ಕೊಟ್ಟಿದೆ.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ʼಜೈಲರ್ʼನಲ್ಲಿ ಮೋಹನ್ ಲಾಲ್, ಜಾಕಿ ಶ್ರಾಫ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ವಿನಾಯಕನ್, ಶಿವರಾಜಕುಮಾರ್, ನಾಗೇಂದ್ರ ಬಾಬು ಮತ್ತಿತರರು ನಟಿಸಿದ್ದಾರೆ. ಸಿನಿಮಾ ವಹಿವಾಟು ವಿಶ್ಲೇಷಕ ರಮೇಶ್ ಬಾಲಾ ಅವರು ಈ ಕುರಿತು ಟ್ವೀಟ್ ಮಾಡಿ, ಮಣಿರತ್ನಮ್ ನಿರ್ದೇಶನದ ಪೊನ್ನಿಯನ್ ಸೆಲ್ವನ್-2 ಚಿತ್ರದ ಗಳಿಕೆಯನ್ನು ಜೈಲರ್ ಸಿನಿಮಾ ಮುರಿದಿದೆ. 2023ನೇ ವರ್ಷದಲ್ಲಿ ಪಿಎಸ್-2 ಗಳಿಕೆಯನ್ನು ಮೀರಿ ಜೈಲರ್ ಮುಂದೆ ಸಾಗಿದೆ. ತಮಿಳುನಾಡು ಬಾಕ್ಸ್ ಆಫೀಸ್‌ನಲ್ಲಿ ಜೈಲರ್ ನಂಬರ್ 1 ಸಿನಿಮಾವಾಗಿ ಹೊರ ಹೊಮ್ಮಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Jailer Movie: ‘ಪೊನ್ನಿಯನ್ ಸೆಲ್ವನ್-2’ ದಾಖಲೆ ಧೂಳಿಪಟ, ಅತಿ ಹೆಚ್ಚು ಗಳಿಕೆ ಮಾಡಿದ ‘ಜೈಲರ್’!
ಭಾರತದಲ್ಲಿ ಜೈಲರ್ ಗಳಿಕೆ
ದಿನಗಳು | ಗಳಿಕೆ |
1 | 48.35 ಕೋಟಿ ರೂ. |
2 | 25.72 ಕೋಟಿ ರೂ. |
3 | 34.30 ಕೋಟಿ ರೂ. |
4 | 42.20 ಕೋಟಿ ರೂ. |
5 | 23.55 ಕೋಟಿ ರೂ. |
6 | 33 ಕೋಟಿ ರೂ. |
ಐಶ್ವರ್ಯ ರೈ ಬಚ್ಚನ್-ವಿಕ್ರಮ್-ತ್ರಿಶಾ ಅಭಿನಯದ ಪೊನ್ನಿಯಿನ್ ಸೆಲ್ವನ್ -2 ಚಿತ್ರದ ಗಳಿಕೆಯನ್ನು ಮೀರಿದ ಜೈಲರ್ 2023ರ ಸಾಲಿನ ಮೂರನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿದೆ. ಈ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿ ಶಾರುಖ್ ಖಾನ್ ಅವರ ಪಠಾಣ್ ಮತ್ತು ಪ್ರಭಾಸ್ ಅವರ ಆದಿಪುರುಷ ಚಿತ್ರಗಳಿವೆ.
ತಮಿಳುನಾಡಿನಲ್ಲೇ 100 ಕೋಟಿ ರೂ. ಬಾಚಿದ ಜೈಲರ್
ವಿಶೇಷ ಎಂದರೆ, ರಜನಿಕಾಂತ್ ಅವರ ಜೈಲರ್ ತಮಿಳುನಾಡಿನಲ್ಲೇ 100 ಕೋಟಿ ರೂ. ಗಳಿಕೆ ಮಾಡಿದೆ. ಜತೆಗೆ ಎಲ್ಲ ಭಾಷೆಗಳ ಮಾರುಕಟ್ಟೆಯನ್ನು ಸೇರಿ 174 ಕೋಟಿ ರೂ. ಗಳಿಕೆಯಾಗಿದೆ. ಐದು ದಿನದಲ್ಲಿ ತಮಿಳು ಆವೃತ್ತಿಯಲ್ಲಿ 139 ಕೋಟಿ ರೂ. ಆದಾಯ ಬಂದಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ತೆಲುಗು ವರ್ಷನ್ 32.25 ಕೋಟಿ ರೂ, ಹಿಂದಿ ವರ್ಷನ್ 1.25 ಕೋಟಿ ರೂ. ಗಳಿಕೆ ಮಾಡಿದೆ.