Site icon Vistara News

Jailer Movie: ʻವಿಕ್ರಮ್‌ʼ ಲೈಫ್‌ಟೈಮ್‌ ಕಲೆಕ್ಷನ್‌ ಮೀರಿಸಿದ ʻಜೈಲರ್‌ʼ; ಅಲ್ಲಿ ಮಾತ್ರ 2 ಕೋಟಿ ರೂ. ಗಳಿಸಿಲ್ಲ!

Jailer Movie Collection

ಬೆಂಗಳೂರು: ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನ, ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾ (Jailer Movie) ಕಲೆಕ್ಷನ್‌ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂ. ದಾಟಿದೆ ಎಂದು ವರದಿಯಾಗಿದೆ. ಭಾರತದಲ್ಲಿ ಆಗಸ್ಟ್ 16ರಂದು 15 ಕೋಟಿ ರೂ. ಗಳಿಕೆ ಕಂಡಿದೆ. ಕೇವಲ ಏಳು ದಿನಗಳಲ್ಲಿ ‘ವಿಕ್ರಮ್’ (Vikram lifetime collection) ಸಿನಿಮಾದ ಒಟ್ಟೂ ಕಲೆಕ್ಷನ್‌ ಮೀರಿಸಿದೆ. ಆದರೆ ಹಿಂದಿ ಬೆಲ್ಟ್‌ನಲ್ಲಿ ಜೈಲರ್ (failed in hindi belts) ಸಿನಿಮಾದ ಗಳಿಕೆ 6 ದಿನಗಳು ಕಳೆದರೂ ಸಹ 2 ಕೋಟಿ ರೂ. ಮುಟ್ಟಿಲ್ಲ.

ಆಗಸ್ಟ್ 10 ರಂದು ‘ಜೈಲರ್’ ವಿಶ್ವಾದ್ಯಂತ ತೆರೆಗೆ ಅಪ್ಪಳಿಸಿತು. ಟ್ರೇಡ್ ವರದಿಗಳ ಪ್ರಕಾರ, ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂ ಗಳಿಕೆ (400 crore at the box office) ಕಂಡಿದ್ದು, . ಭಾರತದಲ್ಲಿ, 225.65 ಕೋಟಿ ರೂ. ನಿವ್ವಳ ಗಳಿಸಿದೆ. ಆಗಸ್ಟ್ 16 ರಂದು, ಇದು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 15 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಅಂದಾಜಿಸಲಾಗಿದೆ. ಭಾರತದ ಹೊರತಾಗಿ, ಅಮೆರಿಕ, ಯುಎಇ, ಸಿಂಗಾಪುರ ಮತ್ತು ಮಲೇಷ್ಯಾದಲ್ಲೂ ‘ಜೈಲರ್’ ಒಳ್ಳೆಯ ಪ್ರದರ್ಶನ ನೀಡುತ್ತಿದೆ. ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಈ ಚಿತ್ರ ಯುಎಸ್ಎಯಲ್ಲಿ ‘ಕಬಾಲಿ’ ಕಲೆಕ್ಷನ್ ಮೀರಿಸಲಿದೆ ಎಂದು ಹೇಳಿದ್ದಾರೆ.

ಹಿಂದಿ ಬೆಲ್ಟ್‌ನಲ್ಲಿ ಜೈಲರ್ 2 ಕೋಟಿ ರೂ. ಮುಟ್ಟಿಲ್ಲ

ಜೈಲರ್ ಹಿಂದಿ ಬೆಲ್ಟ್ ನಲ್ಲಿ 6 ದಿನಕ್ಕೆ 1.65 ಕೋಟಿ ರೂ. ನೆಟ್ ಕಲೆಕ್ಷನ್ಮಾಡಿದೆ‌.

ಇದನ್ನೂ ಓದಿ: Jailer Movie: ‘ಜೈಲರ್’ ಸಿನಿಮಾ ಒಟಿಟಿ ರಿಲೀಸ್‌ ಪಕ್ಕಾ! ಯಾವ ಒಟಿಟಿಗೆ ಬರಲಿದೆ?

ತಮ್ಮ ಎರಡು ವರ್ಷಗಳ ವಿರಾಮದ ನಂತರ ಸೂಪರ್‌ಸ್ಟಾರ್ ರಜನಿಕಾಂತ್ ಬೆಳ್ಳಿ ಪರದೆಯ ಮೇಲೆ ಜೈಲರ್‌ ಮೂಲಕ ಮರಳಿದ್ದಾರೆ. ಅವರು ಕೊನೆಯದಾಗಿ ಕಾಣಿಸಿಕೊಂಡದ್ದು ʼಅಣ್ಣಾತ್ತೆʼಯಲ್ಲಿ. ಜೈಲರ್‌ನ ಪಾತ್ರವರ್ಗದಲ್ಲಿ ಶಿವ ರಾಜ್‌ಕುಮಾರ್‌, ಮೋಹನ್‌ಲಾಲ್‌, ರಮ್ಯಾ ಕೃಷ್ಣನ್, ಜಾಕಿ ಶ್ರಾಫ್, ವಸಂತ್ ರವಿ, ಯೋಗಿ ಬಾಬು ಮತ್ತು ರೆಡಿಂಗ್ ಕಿಂಗ್ಸ್‌ಲಿ ಕೂಡ ಇದ್ದಾರೆ.

ರಜನಿಕಾಂತ್ ಮತ್ತು ಮೋಹನ್ ಲಾಲ್ ಕಾಂಬಿನೇಷನ್ ಸಿನಿಮಾ ಇದಾಗಿದ್ದು ಇದೇ ಮೊದಲ ಬಾರಿಗೆ ಇಬ್ಬರು ನಟರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರ 169ನೇ ಚಿತ್ರ ಇದಾಗಿದೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿದ್ದಾರೆ. ಕೇರಳದಲ್ಲಿ ಚಿತ್ರದ ವಿತರಣಾ ಹಕ್ಕುಗಳನ್ನು ಶ್ರೀ ಗೋಕುಲಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಗೋಕುಲಂ ಗೋಪಾಲನ್ ಪಡೆದುಕೊಂಡಿದ್ದಾರೆ.

Exit mobile version