ಬೆಂಗಳೂರು: ಆಗಸ್ಟ್ 10ರಂದು ‘ಜೈಲರ್’ ಸಿನಿಮಾ (Jailer Movie) ವಿಶ್ವಾದ್ಯಂತ ತೆರೆ ಕಾಣುತ್ತಿದೆ. ರಜನಿಕಾಂತ್, ಶಿವರಾಜ್ಕುಮಾರ್ (Shivarajkumar), ಮೋಹನ್ಲಾಲ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಆನ್ಲೈನ್ಲ್ಲಿ ಟಿಕೆಟ್ ಬುಕಿಂಗ್ ಶುರು ಆಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ತಮಿಳು ಮಾತ್ರವಲ್ಲದೆ, ಕನ್ನಡ ಮೊದಲಾದ ಭಾಷೆಗಳಲ್ಲಿ ‘ಜೈಲರ್’ ಸಿನಿಮಾ ಮೂಡಿ ಬರುತ್ತಿದೆ. ಬೆಂಗಳೂರಿನಲ್ಲಿ ಈ ಚಿತ್ರಕ್ಕೆ ಮೊದಲ ದಿನ 800ಕ್ಕೂ ಅಧಿಕ ಶೋ ಸಿಕ್ಕಿದೆ. ಆ ಪೈಕಿ ತಮಿಳು ವರ್ಷನ್ಗೆ 806 ಶೋ ಹಾಗೂ ಕನ್ನಡಕ್ಕೆ ಕೇವಲ ನಾಲ್ಕು ಶೋ ಸಿಕ್ಕಿದೆ. ಇದು ಅನೇಕರಿಗೆ ಬೇಸರ ಮೂಡಿಸಿದೆ.
‘ಜೈಲರ್’ ಸಿನಿಮಾ ಆಗಸ್ಟ್ 10ರಂದು ರಿಲೀಸ್ ಆಗುತ್ತಿದ್ದು, ಈಗಾಗಲೇ ಆನ್ಲೈನ್ಲ್ಲಿ ಟಿಕೆಟ್ ಬುಕಿಂಗ್ ಶುರು ಆಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ತಮಿಳು ಮಾತ್ರವಲ್ಲದೆ, ಕನ್ನಡ ಮೊದಲಾದ ಭಾಷೆಗಳಲ್ಲಿ ‘ಜೈಲರ್’ ಸಿನಿಮಾ ಮೂಡಿ ಬರುತ್ತಿದೆ. ರಿಲೀಸ್ಗೆ ಇನ್ನೂ ನಾಲ್ಕೈದು ದಿನ ಬಾಕಿ ಇದೆ. ಕನ್ನಡಕ್ಕೆ ಇನ್ನೂ ಹೆಚ್ಚಿನ ಶೋ ಸೇರ್ಪಡೆ ಆಗಬಹುದು. ಆದರೆ, ತಮಿಳು ವರ್ಷನ್ಗೆ ಕೊಟ್ಟಷ್ಟು ಶೋಗಳನ್ನು ಕನ್ನಡಕ್ಕೆ ನೀಡುವುದಿಲ್ಲ. ಹೀಗಾಗಿ, ಅನೇಕರು ಶಿವರಾಜ್ಕುಮಾರ್ ಬಗ್ಗೆ ಬೇಸರಗೊಂಡಿದ್ದಾರೆ. ಅವರು ಕರ್ನಾಟಕದಲ್ಲಿ ಕನ್ನಡಕ್ಕೆ ಹೆಚ್ಚಿನ ಶೋ ಕೊಡಿಸಬಹುದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Jailer Movie: ಬೆಂಗಳೂರಿನಲ್ಲಿ ಜೈಲರ್ ಬುಕ್ಕಿಂಗ್ ಭರ್ಜರಿ; 480 ತಮಿಳು, ಕನ್ನಡದಲ್ಲಿ ಒಂದೇ ಶೋ!
ಜಯಣ್ಣ ಫಿಲ್ಮ್ಸ್ ಮೂಲಕ ಎವಿ ಮೀಡಿಯಾ ಕನ್ಸಲ್ಟೆನ್ಸಿ ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡುತ್ತಿದೆ. ಕನ್ನಡದಲ್ಲಿ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್ ಆಗದೇ ಇರುವುದು ‘ಜೈಲರ್’ ಚಿತ್ರಕ್ಕೆ ಪ್ಲಸ್ ಆಗಿದೆ. ಈಗಾಗಲೇ ರಿಲೀಸ್ ಆಗಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’, ‘ಕೌಸಲ್ಯ ಸುಪ್ರಜಾ ರಾಮ’ ಹಾಗೂ ‘ಆಚಾರ್ ಅಂಡ್ ಕೋ’ ಸಿನಿಮಾಗಳ ಆರ್ಭಟ ಕೊಂಚ ಕಮ್ಮಿ ಆಗುತ್ತಿದ್ದು, ‘ಟೋಬಿ’ ಬರುವುದಕ್ಕೂ ಮೊದಲು ‘ಜೈಲರ್’ ಬಾಕ್ಸಾಫೀಸ್ ದೋಚುವ ಸುಳಿವು ಸಿಗುತ್ತಿದೆ.
ಇದನ್ನೂ ಓದಿ: Jailer Movie: ರಜನಿಕಾಂತ್ ನಟನೆಯ ‘ಜೈಲರ್‘ ಸಿನಿಮಾ ಟ್ರೈಲರ್ ಔಟ್; ಶಿವಣ್ಣ ನಾಪತ್ತೆ!
ರಜನಿಕಾಂತ್ ಮತ್ತು ಮೋಹನ್ ಲಾಲ್ ಕಾಂಬಿನೇಷನ್ ಸಿನಿಮಾ ಇದಾಗಿದ್ದು ಇದೇ ಮೊದಲ ಬಾರಿಗೆ ಇಬ್ಬರು ನಟರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರ 169ನೇ ಚಿತ್ರ ಇದಾಗಿದೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿದ್ದಾರೆ. ಚಿತ್ರವು ಆಗಸ್ಟ್ 10 ರಂದು ಥಿಯೇಟರ್‌ಗಳಲ್ಲಿ ಬರುತ್ತಿದೆ.
ಕೇರಳದಲ್ಲಿ ಚಿತ್ರದ ವಿತರಣಾ ಹಕ್ಕುಗಳನ್ನು ಶ್ರೀ ಗೋಕುಲಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಗೋಕುಲಂ ಗೋಪಾಲನ್ ಪಡೆದುಕೊಂಡಿದ್ದಾರೆ.