Site icon Vistara News

Jailer Movie: ರಜನಿ- ಶಿವಣ್ಣ ಸೀನ್‌ಗೆ ಕತ್ತರಿ; 11 ಸೀನ್‌ಗಳನ್ನು ಬದಲಾಯಿಸಲು ಸೆನ್ಸಾರ್‌ ಮಂಡಳಿ ಸೂಚನೆ!

Jailer Rajinikanth Mohanlal Shivarajkumar

ಬೆಂಗಳೂರು: ಸೂಪರ್‌ ಸ್ಟಾರ್‌ ರಜನಿಕಾಂತ್ ಅವರ ‘ಜೈಲರ್‘ (Jailer Movie) ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಇದೀಗ 2 ಗಂಟೆ 48 ನಿಮಿಷ 47 ಸೆಕೆಂಡ್‌ಗಳ ರನ್ನಿಂಗ್ ಟೈಮ್ ಹೊಂದಿರುವ ಚಿತ್ರಕ್ಕೆ ʻಯು ಎʼ ಪ್ರಮಾಣ ಪತ್ರ ನೀಡಲಾಗಿದೆ ಎಂದು ವರದಿಯಾಗಿದೆ. ಈ ಸಿನಿಮಾದಲ್ಲಿ ಶಿವರಾಜ್‌ ಕುಮಾರ್‌ (Jailer Censor) ಕೂಡ ನಟಿಸಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ರಜನಿಕಾಂತ್‌ ಮತ್ತು ಶಿವರಾಜ್‌ ಕುಮಾರ್‌ ಸಿಗರೇಟು ಸೇದುವ ದೃಶ್ಯವಿದೆ ಎಂದು ಹೇಳಲಾಗಿದೆ. ಈ ದೃಶ್ಯದ ಕುರಿತು ಸೆನ್ಸಾರ್‌ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದ್ದು, ಕ್ಲೋಸ್‌ಅಪ್‌ನಲ್ಲಿ ದೃಶ್ಯ ತೋರಿಸಬಾರದೆಂದು ಸೂಚಿಸಿದೆ ಎನ್ನಲಾಗಿದೆ. ಸೆನ್ಸಾರ್‌ ಮಂಡಳಿಯು ಸುಮಾರು 11 ಸೀನ್‌ಗಳನ್ನು ಬದಲಾಯಿಸಲು ಸೂಚಿಸಿದೆ ಎನ್ನಲಾಗಿದೆ.

ಕೆಲವೊಂದು ದೃಶ್ಯಗಳ ಉದ್ದವನ್ನು ಕಡಿಮೆ ಮಾಡುವಂತೆ ಮತ್ತು ಸಿನಿಮಾದಲ್ಲಿರುವ ಕ್ರೌರ್ಯವನ್ನು ಕಡಿಮೆ ಮಾಡುವಂತೆ ಸೆನ್ಸಾರ್‌ ಮಂಡಳಿ ಸಲಹೆ ನೀಡಿದೆ ಎಂದು ವರದಿಗಳು ತಿಳಿಸಿವೆ. ಕೆಲವು ಪದಗಳನ್ನು ಮ್ಯೂಟ್ ಮಾಡಲು ಸೂಚಿಸಿದೆ ಎನ್ನಲಾಗಿದೆ.

ಈ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಸಿನಿಮಾದಲ್ಲಿ ಮೋಹನ್‌ ಲಾಲ್‌ ಕೂಡ ನಟಿಸಿದ್ದು, ಅವರ ಡೈಲಾಗ್‌ನ ಮಲಯಾಳಂ ಪದವೊಂದನ್ನು ಮ್ಯೂಟ್‌ ಮಾಡಲು ಕೂಡ ತಿಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ವರದಿಯ ಪ್ರಕಾರ, ರಜನಿಕಾಂತ್ ಮುತ್ತುವೇಲ್ ಪಾಂಡಿಯನ್ ಪಾತ್ರವನ್ನು ನಿರ್ವಹಿಸಿದರೆ, ಮೋಹನ್ ಲಾಲ್ ಚಿತ್ರದಲ್ಲಿ ಮ್ಯಾಥ್ಯೂ ಪಾತ್ರವನ್ನು ನಿಭಾಯಿಸಲಿದ್ದಾರೆ. ನರಸಿಂಹ ಎಂಬ ಪಾತ್ರದಲ್ಲಿ ಶಿವರಾಜ್ ಕುಮಾರ್ ನಟಿಸಲಿದ್ದಾರೆ.

ಇದನ್ನೂ ಓದಿ: Jailer Movie : ಆ. 10ರಂದು ಬಿಡುಗಡೆಯಾಗುವುದು ಒಂದು ಜೈಲರ್‌ ಅಲ್ಲ, ಎರಡೆರೆಡು ಜೈಲರ್‌ ಸಿನಿಮಾಗಳು!

ರಜನಿಕಾಂತ್ ಮತ್ತು ಮೋಹನ್ ಲಾಲ್ ಕಾಂಬಿನೇಷನ್ ಸಿನಿಮಾ ಇದಾಗಿದ್ದು ಇದೇ ಮೊದಲ ಬಾರಿಗೆ ಇಬ್ಬರು ನಟರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರ 169ನೇ ಚಿತ್ರ ಇದಾಗಿದೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿದ್ದಾರೆ. ಚಿತ್ರವು ಆಗಸ್ಟ್ 10 ರಂದು ಥಿಯೇಟರ್‌ಗಳಲ್ಲಿ ಬರುವ ನಿರೀಕ್ಷೆಯಿದೆ.
ಕೇರಳದಲ್ಲಿ ಚಿತ್ರದ ವಿತರಣಾ ಹಕ್ಕುಗಳನ್ನು ಶ್ರೀ ಗೋಕುಲಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಗೋಕುಲಂ ಗೋಪಾಲನ್ ಪಡೆದುಕೊಂಡಿದ್ದಾರೆ.

ಸಿನಿಮಾದಲ್ಲಿ ಕನ್ನಡದ ಹ್ಯಾಟ್ರಿಕ್‌ ಹೀರೊ ಶಿವರಾಜ್‌ ಕುಮಾರ್‌, ತಮನ್ನಾ ಭಾಟಿಯಾ, ಮೋಹನ್‌ಲಾಲ್‌, ಜಾಕಿ ಶಾರ್ಫ್‌ ಕೂಡ ನಟಿಸಿದ್ದಾರೆ.

Exit mobile version