Site icon Vistara News

Jailer Movie: ಗದರ್‌ 2, OMG 2ಗೆ ʻಜೈಲರ್‌ʼ ಪೈಪೋಟಿ; ಕೆಜಿಎಫ್ 2 ದಾಖಲೆ ಉಡೀಸ್‌, ಫಸ್ಟ್‌ ಡೇ ಕಲೆಕ್ಷನ್‌ ಎಷ್ಟಾಗಬಹುದು?

Jailer Movie KGF 2

ಬೆಂಗಳೂರು: ಸೂಪರ್ ಸ್ಟಾರ್ ರಜನಿಕಾಂತ್ ‘ಜೈಲರ್’ ಸಿನಿಮಾ (Jailer Movie) ಗ್ರ್ಯಾಂಡ್‌ ಓಪ್‌ನಿಂಗ್‌ ಪಡೆದುಕೊಂಡಿದೆ. ಅಭಿಮಾನಿಗಳು ಬೆಳಗ್ಗೆಯಿಂದಲೇ ತಮ್ಮ ನೆಚ್ಚಿನ ನಟನನ್ನು ನೋಡಲು ಚಿತ್ರಮಂದಿರಗಳ ಹೊರಗೆ ಸಾಲುಗಟ್ಟಿ ನಿಂತಿದ್ದಾರೆ. ಆಗಸ್ಟ್ ಆರಂಭಿಕ ವಹಿವಾಟಿನ ವರದಿಗಳ ಪ್ರಕಾರ ‘ಜೈಲರ್’ ತನ್ನ ಆರಂಭಿಕ ದಿನದಲ್ಲಿ ಭಾರತದಲ್ಲಿ 50 ಕೋಟಿ ರೂ. ಕಲೆಕ್ಷನ್‌ ಮೀರಿಸಬಹುದು ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ವ್ಯಾಪಾರ ತಜ್ಞರು ಕೂಡ ‘ಜೈಲರ್’ ತಮಿಳು ಚಿತ್ರರಂಗದಲ್ಲಿ ದೊಡ್ಡ ಓಪನಿಂಗ್ ಪಡೆದುಕೊಳ್ಳಲಿದೆ ಎಂದು ಹೇಳಿದ್ದಾರೆ. ‘ಗದರ್ 2’ ಮತ್ತು ‘OMG 2’ ಸಿನಿಮಾಗಳಿಗಿಂತ ‘ಜೈಲರ್’ ಸಕ್ಸೆಸ್‌ ಆಗಲಿದೆ ಎಂದು ವ್ಯಾಪಾರ ತಜ್ಞ ರಮೇಶ್ ಬಾಲಾ ಈ ಹಿಂದೆಯೇ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದರು. ಅಷ್ಟೇ ಅಲ್ಲದೇ ಬಿಡುಗಡೆಯ ದಿನ ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಚಿತ್ರಗಳ‌ ಪಟ್ಟಿಯಲ್ಲಿ ಜೈಲರ್‌ ಸೇರಿದೆ.

ಈ ಬಗ್ಗೆ ರಮೇಶ್ ಬಾಲಾ ಮಾತನಾಡಿ ʻʻಜೈಲರ್’ ಚಿತ್ರದ ಹೆಚ್ಚು ಪ್ರೇಕ್ಷಕರು ಇರುವುದು ದಕ್ಷಿಣ ಭಾಗದಲ್ಲಿ. ಹಿಂದಿಗಿಂತ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಮುಂಬೈ, ದೆಹಲಿ ಮತ್ತು ಇತರ ದೊಡ್ಡ ನಗರಗಳಲ್ಲಿ ನೆಲೆಸಿರುವ ತಮಿಳು ಮತ್ತು ತೆಲುಗರು ಹೋಗಿ ನೋಡುತ್ತಾರೆ. ‘ಗದರ್ ‘2 ಮತ್ತು ‘OMG 2’ ಭಾರತದ ಉತ್ತರ, ಮಹಾರಾಷ್ಟ್ರದಲ್ಲಿ ಗೆಲ್ಲಬಹುದು. ಖಂಡಿತವಾಗಿಯೂ, ದಕ್ಷಿಣದವರು ‘ಜೈಲರ್’ಗೆ ಆದ್ಯತೆ ನೀಡುತ್ತಾರೆ. ಅದನ್ನು ವೀಕ್ಷಿಸಿದ ನಂತರ ಅವರು ‘ಗದರ್ 2’ ಸಿನಿಮಾ ವೀಕ್ಷಿಸಬಹುದು. ‘ಗದರ್ 2’ ಮತ್ತು ‘ಓಎಂಜಿ 2’ ನಡುವೆ ಸ್ಪರ್ಧೆ ಇರುತ್ತದೆ,” ಎಂದರು.

ಇದನ್ನೂ ಓದಿ: Jailer Movie: ʻಜೈಲರ್‌ʼ ಫೀವರ್;‌ ತಲೈವಾ ಸಿನಿಮಾ ನೋಡಲು ಚೆನ್ನೈಗೆ ಬಂದ ಜಪಾನ್‌ ದಂಪತಿ!

`ಅಣ್ಣಾತ್ತೆ’ ಸೋಲಿನ ರುಚಿ ಕಂಡಿದ್ದ ರಜನಿಕಾಂತ್

ಈ ಹಿಂದೆ `ಅಣ್ಣಾತ್ತೆ’ ಎಂಬ ಚಿತ್ರದಲ್ಲಿ ನಟಿಸಿ ಸೋಲಿನ ರುಚಿಯನ್ನು ಕಂಡಿದ್ದ ರಜನಿಕಾಂತ್ ಈ ಬಾರಿ ಜೈಲರ್ ಅವತಾರವನ್ನೆತ್ತಿ‌ ಸಿನಿ ರಸಿಕರ ಮುಂದೆ ಭರ್ಜರಿ ಅವತಾರ ತಾಳಿದ್ದಾರೆ. ಬಹು ದಿನಗಳ ಬಳಿಕ ಬೆಳ್ಳಿ ತೆರೆ ಮೇಲೆ ತಲೈವಾ ದರ್ಶನ ಪಡೆಯಲು ಸಿನಿ ರಸಿಕರು ಹಾಗೂ ರಜನಿ ಫ್ಯಾನ್ಸ್ ಸೂರ್ಯ ಉದಯಿಸುವ ಮುನ್ನವೇ ಚಿತ್ರಮಂದಿರಗಳನ್ನು ಪ್ರವೇಶಿಸಿದ್ದಾರೆ‌.

ಕೆಜಿಎಫ್ ಚಾಪ್ಟರ್ 2 ಮೀರಿಸಿದ ಜೈಲರ್‌

ಬಿಡುಗಡೆಯ ದಿನ ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಚಿತ್ರಗಳ‌ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಹಿಂದಿಕ್ಕಿರುವ ಜೈಲರ್ ಹೊಸ ದಾಖಲೆಯನ್ನು ಬರೆದಿದೆ. ಬೆಂಗಳೂರಿನಲ್ಲಿ ಮೊದಲ ದಿನ ಜೈಲರ್ ಚಿತ್ರಕ್ಕೆ ತಮಿಳು, ಕನ್ನಡ ಹಾಗೂ ತೆಲುಗು ಈ ಮೂರೂ ಅವತರಣಿಕೆಗಳು ಸೇರಿದಂತೆ 1,092 ಶೋ ಲಭಿಸಿದ್ದು, ಇದು ನಗರದಲ್ಲಿ ಚಿತ್ರವೊಂದಕ್ಕೆ ಬಿಡುಗಡೆ ದಿನ ಲಭಿಸಿದ ಅತಿಹೆಚ್ಚು ಪ್ರದರ್ಶನಗಳ ಸಂಖ್ಯೆಯಾಗಿದೆ.

ಇದನ್ನೂ ಓದಿ: Jailer Movie : ರಜನಿಕಾಂತ್‌ ನಟನೆಯ ʼಜೈಲರ್‌ʼ ಸಿನಿಮಾ ಬಿಡುಗಡೆ ದಿನ ಕಚೇರಿಗಳಿಗೆ ರಜೆ! ಉಚಿತ ಟಿಕೆಟ್‌!!

ಬೆಂಗಳೂರಿನಲ್ಲಿ ಬಿಡುಗಡೆ ದಿನ ಅತಿಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಟಾಪ್ 3 ಚಿತ್ರಗಳು ಈ ಕೆಳಕಂಡಂತಿವೆ. ಜೈಲರ್ – 1092 ಪ್ರದರ್ಶನಗಳು, ಕೆಜಿಎಫ್ ಚಾಪ್ಟರ್ 2 – 1037 ಪ್ರದರ್ಶನಗಳು, ಅವತಾರ್ ದ ವೇ ಆಫ್ ವಾಟರ್ – 1014 ಪ್ರದರ್ಶನಗಳು. ಕನ್ನಡಕ್ಕಿಂತ ತೆಲುಗಿಗೆ ಹೆಚ್ಚು ಶೋಸ್: ಇನ್ನು ಬೆಂಗಳೂರಿನಲ್ಲಿ ಜೈಲರ್ ತಮಿಳು, ತೆಲುಗು ಹಾಗೂ ಕನ್ನಡ ಈ ಮೂರೂ ಭಾಷೆಗಳಲ್ಲಿಯೂ ಸಹ ಬಿಡುಗಡೆಯಾಗಿದ್ದು, ಮೊದಲ ದಿನ ತಮಿಳು ವರ್ಷನ್ 1,021 ಶೋಗಳನ್ನು ಪಡೆದುಕೊಂಡಿದ್ದರೆ, ತೆಲುಗು ವರ್ಷನ್ 41 ಶೋಗಳನ್ನು ಪಡೆದುಕೊಂಡಿದೆ ಹಾಗೂ ಕನ್ನಡ ವರ್ಷನ್ ಕೇವಲ‌ 30 ಪ್ರದರ್ಶನಗಳನ್ನು ಪಡೆದುಕೊಂಡಿದೆ.

Exit mobile version