ಬೆಂಗಳೂರು: ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ (Jailer Movie) ಮೊದಲ 4 ದಿನಗಳಲ್ಲಿ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂ. ಗ್ರಾಸ್ ಕಲೆಕ್ಷನ್ (Jailer box office collection Day 4) ಮಾಡಿ ಗೆದ್ದು ಬೀಗಿದೆ. ಈಗ ‘ಜೈಲರ್’ ಸಿನಿಮಾ ಒಟಿಟಿ ದಿನಾಂಕದ ಬಗ್ಗೆ ಚರ್ಚೆ ಶುರುವಾಗಿದೆ. ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿರುವಾಗಲೇ ಈ ಚಿತ್ರದ ಒಟಿಟಿ ರಿಲೀಸ್ ದಿನಾಂಕದ ಬಗ್ಗೆ ಸುದ್ದಿ ಹಬ್ಬಿದೆ. ‘ಜೈಲರ್’ ಸಿನಿಮಾನ ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಹೀಗಾಗಿ, ಇದು ‘ಸನ್ ನೆಕ್ಸ್ಟ್’ ಒಟಿಟಿ ಮೂಲಕ ಪ್ರಸಾರ ಕಾಣಲಿದೆ. ದಸರಾ ಸಂದರ್ಭದಲ್ಲಿ ಈ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ ಎಂಬ ಸುದ್ದಿ ಇದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.
ಜೈಲರ್ ತಮಿಳಿನಾಡಿನಲ್ಲಿ ಮಾತ್ರವಲ್ಲದೇ ಕರ್ನಾಟಕ, ತೆಲುಗು ರಾಜ್ಯಗಳು ಹಾಗೂ ಕೇರಳದಲ್ಲಿಯೂ ಅಬ್ಬರದ ಪ್ರದರ್ಶನವನ್ನು ಕಾಣುತ್ತಿದೆ. ಇನ್ನೂ ವಿಶೇಷ ಅಂದರೆ ಬೆಂಗಳೂರಿನಲ್ಲಿ ಜೈಲರ್ ಸಿಕ್ಕಾಪಟ್ಟೆ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ.
ಮೊದಲ ದಿನ 91.10 ಕೋಟಿ ರೂ. ಗ್ರಾಸ್ ಕಲೆಕ್ಷನ್ ಅನ್ನು ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಮಾಡಿದ್ದ ಜೈಲರ್ ಎರಡನೇ ದಿನ 52.80 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು ಮತ್ತು ಮೂರನೇ ದಿನ 80.15 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಹೀಗೆ ಮೊದಲ 3 ದಿನಗಳಲ್ಲಿ 224.15 ಕೋಟಿ ರೂ. ಗ್ರಾಸ್ ಕಲೆಕ್ಷನ್ ಅನ್ನು ಮಾಡಿದ್ದ ಜೈಲರ್ ನಾಲ್ಕನೇ ದಿನ ಭಾನುವಾರ (ಆಗಸ್ಟ್ 13) ಜೈಲರ್ ಚಿತ್ರ ವಿಶ್ವಾದ್ಯಂತ 89 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಜೈಲರ್ ಮೊದಲ 4 ದಿನಗಳಲ್ಲಿಯೇ 313 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿ ಅಬ್ಬರಿಸಿದೆ.
ಇದನ್ನೂ ಓದಿ: Jailer Movie: ಗೆದ್ದು ಬೀಗಿದ ʻತಲೈವಾʼ; ಬೆಂಗಳೂರಿನಲ್ಲಿ ‘ಜೈಲರ್’ಗೆ ಡಿಮ್ಯಾಂಡೋ ಡಿಮ್ಯಾಂಡ್!
ರಾಜ್ಯದಲ್ಲಿಯೂ ಜೈಲರ್ ಚಿತ್ರದ ಅಬ್ಬರ ಜೋರಾಗಿದ್ದು, ಅದರಲ್ಲಿಯೂ ಎಲ್ಲಾ ಭಾಷೆಯ ಸಿನಿಮಾಗಳನ್ನು ವೀಕ್ಷಿಸುವ ಸಿನಿ ರಸಿಕರಿಂದ ಕೂಡಿರುವ ಬೆಂಗಳೂರಿನಲ್ಲಿ ಜೈಲರ್ ಸಿಕ್ಕಾಪಟ್ಟೆ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ. ಆಗಸ್ಟ್ 14 ರಂದು ಜೈಲರ್ : 620 ಪ್ರದರ್ಶನಗಳು ಭೋಳ ಶಂಕರ್ : 207 ಪ್ರದರ್ಶನಗಳು ಗದರ್ 2 : 198 ಪ್ರದರ್ಶನಗಳು ಓ ಮೈ ಗಾಡ್ 2 : 176 ಪ್ರದರ್ಶನಗಳು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ : 89 ಪ್ರದರ್ಶನಗಳು ಇರಲಿವೆ.
ರಜನಿಕಾಂತ್ ಮತ್ತು ಮೋಹನ್ ಲಾಲ್ ಕಾಂಬಿನೇಷನ್ ಸಿನಿಮಾ ಇದಾಗಿದ್ದು ಇದೇ ಮೊದಲ ಬಾರಿಗೆ ಇಬ್ಬರು ನಟರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರ 169ನೇ ಚಿತ್ರ ಇದಾಗಿದೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿದ್ದಾರೆ. ಕೇರಳದಲ್ಲಿ ಚಿತ್ರದ ವಿತರಣಾ ಹಕ್ಕುಗಳನ್ನು ಶ್ರೀ ಗೋಕುಲಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಗೋಕುಲಂ ಗೋಪಾಲನ್ ಪಡೆದುಕೊಂಡಿದ್ದಾರೆ.