Site icon Vistara News

Jailer Movie: ಶೂಟಿಂಗ್‌ ಸೆಟ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ರಜನಿಕಾಂತ್‌-ಮೋಹನ್‌ಲಾಲ್‌

Jailer Movie Rajinikanth and Mohanlal clicked together

ಬೆಂಗಳೂರು: ಕಾಲಿವುಡ್‌ ಸೂಪರ್‌ಸ್ಟಾರ್‌ ರಜನಿಕಾಂತ್‌ (Jailer Movie) ಅವರ ಜೈಲರ್‌ ಸಿನಿಮಾಗೆ ಅವರ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಚಿತ್ರದಲ್ಲಿ ಮೋಹನ್ ಲಾಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಜೈಲರ್‌ ಸಿನಿಮಾದ ಚಿತ್ರೀಕರಣದ ಫೋಟೊವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಫೋಟೊದಲ್ಲಿ ರಜನಿಕಾಂತ್‌ ಹಾಗೂ ಮೋಹನ್‌ಲಾಲ್‌ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಮೋಹನ್‌ಲಾಲ್‌ಗೆ ಈ ಹಿಂದೆ ಶಿವಾಜಿಯಲ್ಲಿ ಪಾತ್ರ ಮಾಡಲು ಆಫರ್ ಬಂದಿತ್ತು. ಆದರೆ ಅದನ್ನು ತಿರಸ್ಕರಿಸಿದರು. ಈ ಚಿತ್ರ ಮಾಸ್ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ. ತಾರಾಗಣದಲ್ಲಿ ರಮ್ಯಾ ಕೃಷ್ಣನ್, ತಮನ್ನಾ, ಯೋಗಿ ಬಾಬು ಮತ್ತು ಮಲಯಾಳಂ ನಟ ವಿನಾಯಕನ್ ಸೇರಿದಂತೆ ಇತರರು ಇದ್ದಾರೆ.

ಇದನ್ನೂ ಓದಿ: Jailer Movie | ಸೂಪರ್‌ ಸ್ಟಾರ್‌ ರಜನಿಕಾಂತ್‌ ಜೈಲರ್ ಪೋಸ್ಟರ್ ರಿವೀಲ್; ಶಿವಣ್ಣನ ಲುಕ್‌ಗೆ ಫ್ಯಾನ್ಸ್‌ ಕಾತುರ!

ʼಜೈಲರ್‌ʼ ಸಿನಿಮಾದಲ್ಲಿ ರಜನಿಕಾಂತ್‌ ಜೈಲಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರೊಂದಿಗೆ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌, ಜಾಕಿ ಶ್ರಾಫ್, ತಮನ್ನಾ ಭಾಟಿಯಾ, ರಮ್ಯ ಕೃಷ್ಣನ್‌ ಕೂಡ ನಟಿಸುತ್ತಿದ್ದಾರೆ. ʼಉತ್ತರ ದಕ್ಷಿಣ್‌ʼ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದ ರಜನಿ ಮತ್ತು ಜಾಕಿ ಶ್ರಾಫ್ ಜೋಡಿ ಇದೀಗ 36 ವರ್ಷಗಳ ನಂತರ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಇದೇ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Rajinikanth | ಜೈಲರ್ ಸಿನಿಮಾದಲ್ಲಿ ರಜನಿಕಾಂತ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ ಮೋಹನ್‌ಲಾಲ್!

ರಜನಿಕಾಂತ್‌ ಜೈಲರ್‌ ನಂತರ ಮಗಳು ಐಶ್ವರ್ಯ ರಜನಿಕಾಂತ್‌ ನಿರ್ದೇಶನದ ʼಲಾಲ್‌ ಸಲಾಮ್‌ʼ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಸಿನಿಮಾದ ಮೂಲಕ ಐಶ್ವರ್ಯ ಹಲವು ವರ್ಷಗಳ ಅವರು ನಂತರ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಇದರಲ್ಲಿ ವಿಷ್ಣು ವಿಶಾಲ್‌ ಮತ್ತು ವಿಕ್ರಾಂತ್‌ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Exit mobile version