Site icon Vistara News

Jailer Movie | ಸೂಪರ್‌ ಸ್ಟಾರ್‌ ರಜನಿಕಾಂತ್‌ ಜೈಲರ್ ಪೋಸ್ಟರ್ ರಿವೀಲ್; ಶಿವಣ್ಣನ ಲುಕ್‌ಗೆ ಫ್ಯಾನ್ಸ್‌ ಕಾತುರ!

Jailer Movie

ಬೆಂಗಳೂರು: ʻʻಅಣ್ಣಾಥೇʼʼ ಸಿನಿಮಾ ನಂತರ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸುತ್ತಿರುವ ಜೈಲರ್ ಸಿನಿಮಾದ (Jailer Movie) ಫಸ್ಟ್‌ ಲುಕ್ ಪೋಸ್ಟರ್‌ ಬಿಡುಗಡೆಯಾಗಿದೆ. ʻʻಬೀಸ್ಟ್‌ʼʼ, ʻʻಡಾಕ್ಟರ್‌ʼ ಸಿನಿಮಾ ಖ್ಯಾತಿಯ ನಿರ್ದೇಶಕ ನೆಲ್ಸನ್‌ ನಿರ್ದೇಶನ ಮಾಡುತ್ತಿದ್ದಾರೆ.

ರಜನಿಕಾಂತ್‌ ಸಾಲ್ಟ್‌ ಮತ್ತು ಪೆಪ್ಪರ್‌ ಲುಕ್‌ನಲ್ಲಿ ಮಿಂಚಿದ್ದಾರೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಾಗುತ್ತಿದೆ. ಆಗಸ್ಟ್‌ 22ರಿಂದಲೇ ಚಿತ್ರೀಕರಣ ಆರಂಭವಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಚಿತ್ರದ ಶೂಟಿಂಗ್‌ ಹೈದರಾಬಾದ್‌ನಲ್ಲಿ ನಡೆಯಲಿದೆ. ಇದಕ್ಕಾಗಿ ಬೃಹತ್ ಸೆಟ್‌ಗಳನ್ನು ಹಾಕಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ | ತಮಿಳುನಾಡಿನಲ್ಲೇ ರಜನಿಕಾಂತ್‌ Top Tax payer, ಹಾಗಿದ್ದರೆ ಅವರ ವಾರ್ಷಿಕ ಆದಾಯ ಎಷ್ಟು?

ಈ ಸಿನಿಮಾದಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ ಕೂಡ ನಟಿಸುತ್ತಿರುವುದು ವಿಶೇಷ. ಆ್ಯಕ್ಷನ್‌ ಥ್ರಿಲರ್‌ ಸಿನಿಮಾ ಇದಾಗಿದೆ. ಮೊದಲ ಬಾರಿಗೆ ಶಿವಣ್ಣ ಮತ್ತು ರಜನಿಕಾಂತ್‌ ಒಟ್ಟಿಗೆ ಸ್ಕ್ರೀನ್‌ ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ಶಿವರಾಜ್‌ ಕುಮಾರ್‌ ಅವರ ಪಾತ್ರದ ಬಗ್ಗೆ ಇನ್ನೂ ರಿವೀಲ್‌ ಆಗಿಲ್ಲ. ಇದೀಗ ಶಿವಣ್ಣ ಅವರ ಪಾತ್ರ ಯಾವುದಿರಬಹುದೆಂಬ ಕುತೂಹಲ ಪ್ರೇಕ್ಷಕರಿಗೆ ಮೂಡಿದೆ.

ಈ ಬಗ್ಗೆ ಶಿವಣ್ಣ ʻʻನಾನು 10 ವರ್ಷದ ಹುಡುಗನಾಗಿದ್ದಾಗಿನಿಂದಲೂ ರಜನಿಕಾಂತ್‌ ಅವರನ್ನು ನೋಡಿದ್ದೇನೆ. ಅವರ ಮೇಲೆ ದೊಡ್ಡ ಗೌರವವಿದೆ. ಅಪ್ಪಾಜಿಗೂ ಅವರು ಬಹಳ ಆತ್ಮೀಯರು. ನಾನು ಚಿತ್ರದ ಭಾಗವಾಗಿರುವುದಕ್ಕೆ ಖುಷಿ ಇದೆʼʼ ಎಂದಿದ್ದಾರೆ. ಈ ಸಿನಿಮಾಗೆ ಅನಿರುದ್ಧ್‌ ರವಿಚಂದರ್‌ ಸಂಗೀತವಿದ್ದು, ಈ ಹಿಂದೆ ರಜನಿಕಾಂತ್‌ ಅವರ ʻಪೆಟ್ಟಾʼ, ʻದರ್ಬಾರ್‌ʼಗೂ ಸಂಗೀತ ನೀಡಿದ್ದರು.

ಇದನ್ನೂ ಓದಿ | ದಸರಾ ಉದ್ಘಾಟನೆಗೆ ರಜನಿಕಾಂತ್‌, ಇಳಯರಾಜ ಹೆಸರು ಪ್ರಸ್ತಾಪ

Exit mobile version