Site icon Vistara News

Jailer Twitter Review: ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯುತ್ತಮ ಕ್ಲೈಮ್ಯಾಕ್ಸ್ ಅಂದ್ರು ಫ್ಯಾನ್ಸ್‌!

Jailer Rajanikanth

ಬೆಂಗಳೂರು: ಸೂಪರ್‌ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷಿತ ಚಿತ್ರ, ‘ಜೈಲರ್‘ (Jailer Twitter review) ಆಗಸ್ಟ್ 10ರಂದು ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಿದೆ. ಈಗಾಗಲೇ ಸಿನಿಮಾ ನೋಡಿ ಸಿನಿರಸಿಕರು ʻಜೈಲರ್‌ ಬ್ಲಾಕ್‌ಬಸ್ಟರ್‌ʼʼ ಎಂದು ಟ್ವೀಟ್‌ ಮಾಡಲು ಶುರು ಮಾಡಿದ್ದಾರೆ. ಹೆಚ್ಚಾಗಿ ಟ್ವಿಟರ್‌ನಲ್ಲಿ ಪ್ರತಿಕ್ರಿಯೆಗಳು ಪಾಸಿಟಿವ್‌ ಆಗಿವೆ.

ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಇದು ಎಲ್ಲೆಡೆ ಅಭಿಮಾನಿಗಳ ಉನ್ಮಾದವನ್ನು ಸೃಷ್ಟಿಸಿದೆ. ಈ ಚಿತ್ರವು ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರೊಂದಿಗೆ ಅವರ ಮೊದಲ ಸಹಯೋಗವನ್ನು ಗುರುತಿಸುತ್ತದೆ. ಇದರಲ್ಲಿ ಮೋಹನ್ ಲಾಲ್ ಮತ್ತು ಶಿವರಾಜ್ ಕುಮಾರ್ ಕೂಡ ನಟಿಸಿದ್ದಾರೆ. ಪ್ರತಿಕ್ರಿಯೆಗಳು ಹೆಚ್ಚಾಗಿ ಸಕಾರಾತ್ಮಕವಾಗಿವೆ. ಅಭಿಮಾನಿಯೊಬ್ಬರು “ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯುತ್ತಮ ಕ್ಲೈಮ್ಯಾಕ್ಸ್ ” ಎಂದು ಟ್ವೀಟ್ ಮಾಡಿದ್ದಾರೆ.

ʻʻಜೈಲರ್‌ ಒಂದು ಆ್ಯವರೇಜ್‌ ಸಿನಿಮಾ. ಸುಖಾಸುಮ್ಮನೆ ಸೆಂಟಿಮೆಂಟ್‌ಗಳು, ವೀಕ್‌ ಖಳನಾಯಕ ಪಾತ್ರ. ಆದರೆ ರಜನಿಕಾಂತ್‌ ನಟನೆ ಅದ್ಭುತʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Jailer Movie: ಕರ್ನಾಟಕದಲ್ಲೂ ಹಬ್ಬಿದೆ ಸೂಪರ್ ಸ್ಟಾರ್ ರಜನಿಕಾಂತ್ ‘ಜೈಲರ್’ ಫೀವರ್!

ʻʻಆಕ್ಷನ್, ಹಾಸ್ಯ ಸುಗಮ ರೀತಿಯಲ್ಲಿ ಸಿಂಕ್ ಆಗುತ್ತದೆ. ರಜನಿ ಅವರ ಸ್ಕ್ರೀನ್ ಪ್ರೆಸೆನ್ಸ್ ಇನ್ ಬೆಂಕಿ!ʼʼ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

ಪ್ರಪಂಚದಾದ್ಯಂತ 3,000ಕ್ಕೂ ಹೆಚ್ಚು ಸ್ಕ್ರಿನ್‌ಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಕರ್ನಾಟಕದಲ್ಲಿ 300 ಸ್ಕ್ರಿನ್‌ಗಳು, ತಮಿಳುನಾಡಿನಲ್ಲಿ 900ಕ್ಕೂ ಹೆಚ್ವು ಸ್ಕ್ರಿನ್‌ಗಳಲ್ಲಿ ಬಿಡುಗಡೆಯಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಬೆಂಗಳೂರಿನಲ್ಲಿ ರಜಿನಿ ದರ್ಶನ ಶುರುವಾಗಿದೆ. ಈಗಾಗಲೇ ಮಾರ್ನಿಂಗ್‌ ಶೋ ಗಳು ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿವೆ.

ರಜನಿಕಾಂತ್ ಮತ್ತು ಮೋಹನ್ ಲಾಲ್ ಕಾಂಬಿನೇಷನ್ ಸಿನಿಮಾ ಇದಾಗಿದ್ದು ಇದೇ ಮೊದಲ ಬಾರಿಗೆ ಇಬ್ಬರು ನಟರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರ 169ನೇ ಚಿತ್ರ ಇದಾಗಿದೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿದ್ದಾರೆ. ಕೇರಳದಲ್ಲಿ ಚಿತ್ರದ ವಿತರಣಾ ಹಕ್ಕುಗಳನ್ನು ಶ್ರೀ ಗೋಕುಲಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಗೋಕುಲಂ ಗೋಪಾಲನ್ ಪಡೆದುಕೊಂಡಿದ್ದಾರೆ.

Exit mobile version