Site icon Vistara News

Jailer Movie: ʻಜೈಲರ್‌ʼ ಫೀವರ್;‌ ತಲೈವಾ ಸಿನಿಮಾ ನೋಡಲು ಚೆನ್ನೈಗೆ ಬಂದ ಜಪಾನ್‌ ದಂಪತಿ!

Japanese couple

ಬೆಂಗಳೂರು: ರಜನಿಕಾಂತ್ ಅವರಿಗೆ ದೇಶವಲ್ಲದೇ ವಿದೇಶಗಳಲ್ಲಿಯೂ ತಮ್ಮದೇ ಆದ ಫ್ಯಾನ್ಸ್‌ ಹೊಂದಿದ್ದಾರೆ. ಈಗಾಗಲೇ ಅವರ ಬಹು ನಿರೀಕ್ಷಿತ ಚಿತ್ರ ಜೈಲರ್‌ (Jailer Movie) ಆಗಸ್ಟ್‌ 10ರಂದು ಬಿಡುಗಡೆಯಾಗಿದ್ದು, ಪಾಸಿಟಿವ್‌ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ಪಟಾಕಿ ಸಿಡಿಸಿ ಸಂಭ್ರಮಿಸಿದರೆ ಇನ್ನೂ ಕೆಲವರು ಮೆಚ್ಚಿನ ಸೂಪರ್‌ಸ್ಟಾರ್‌ ಕಟೌಟ್‌ಗೆ ಹೂ ಚೆಲ್ಲಿ ಸಂಭ್ರಮಿಸಿದ್ದಾರೆ. ಆದರೆ ಇಲ್ಲೊಂದು ಜಪಾನ್‌ ಜೋಡಿ ಚೆನ್ನೈಗೆ ಬಂದು ಸಿನಿಮಾ ನೋಡಿರುವ ವಿಡಿಯೊ ಹಾಗಗೂ ಫೋಟೊ ವೈರಲ್‌ ಆಗಿದೆ.

ಮೆಚ್ಚಿನ ನಟನನ್ನು ತೆರೆ ಮೂಲಕ ಕಣ್ತುಂಬಿಸಿಕೊಳ್ಳಲು ಜಪಾನ್‌ ದಂಪತಿ ಒಸಾಕಾದಿಂದ ಚೆನ್ನೈಗೆ ಪ್ರಯಾಣಿಸುವ ವಿಡಿಯೊ ವೈರಲ್ ಆಗಿದೆ. ಪಿಟಿಐ ಟ್ವಿಟರ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡಿದೆ. ʻʻಜಪಾನಿನ ದಂಪತಿ ಇತರ ಅಭಿಮಾನಿಗಳೊಂದಿಗೆ ಥಿಯೇಟರ್‌ನಲ್ಲಿ ರಜನಿಕಾಂತ್ ಅವರ ಚಿತ್ರವನ್ನು ವೀಕ್ಷಿಸಿದ ಬಳಿಕ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಯಸುದಾ ಹಿಡೆತೋಶಿ ತಮಿಳಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. “ಜೈಲರ್ ಚಿತ್ರವನ್ನು ನೋಡಲು, ನಾವು ಜಪಾನ್‌ನಿಂದ ಚೆನ್ನೈಗೆ ಬಂದಿದ್ದೇವೆ” ಎಂದು ಜಪಾನ್‌ನಲ್ಲಿರುವ ರಜನಿಕಾಂತ್ ಅಭಿಮಾನಿಗಳ ಸಂಘದ ನಾಯಕಿ ಯಸುದಾ ಹಿಡೆತೋಶಿ ಹೇಳಿದ್ದಾರೆ.

ಇದನ್ನೂ ಓದಿ: Jailer Twitter Review: ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯುತ್ತಮ ಕ್ಲೈಮ್ಯಾಕ್ಸ್ ಅಂದ್ರು ಫ್ಯಾನ್ಸ್‌!

ಈಗಾಗಲೇ ಜೈಲರ್‌ ಸಿನಿಮಾ ಬಗ್ಗೆ ಟ್ವಿಟರ್‌ನಲ್ಲಿ ಪಾಸಿಟಿವ್‌ ಪ್ರತಿಕ್ರಿಯೆ ನೀಡುತ್ತಿದ್ದಾರೆ ಫ್ಯಾನ್ಸ್‌ . ಯೋಗಿ ಬಾಬು ಕಾಮಿಡಿ ಪಂಚ್, ರಜನಿಕಾಂತ್ ಸಹ ಅಲ್ಲಲ್ಲಿ ಕಾಮಿಡಿ ಮಾಡುತ್ತಾರೆ. ಒಟ್ಟಿನಲ್ಲಿ ಅದ್ಭುತ ಎನ್ನುತ್ತಿದ್ದಾರೆ. ಸಖತ್ ಸೆನ್ಸೇಷನ್ ಸೃಷ್ಟಿ ಮಾಡಿದ್ದ ‘ಕಾವಾಲಾ..’ ಹಾಡು ಮೊದಲಾರ್ಧದಲ್ಲಿ ಇಲ್ಲ. ಈ ಹಾಡಿಗಾಗಿ ದ್ವಿತೀಯಾರ್ಧದ ವರೆಗೆ ಕಾಯಬೇಕು. ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ ಗಮನ ಸೆಳೆದಿದೆ ಎಂತಲೂ ವರದಿಯಾಗಿದೆ.

ರಜನಿಕಾಂತ್ ಮತ್ತು ಮೋಹನ್ ಲಾಲ್ ಕಾಂಬಿನೇಷನ್ ಸಿನಿಮಾ ಇದಾಗಿದ್ದು ಇದೇ ಮೊದಲ ಬಾರಿಗೆ ಇಬ್ಬರು ನಟರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರ 169ನೇ ಚಿತ್ರ ಇದಾಗಿದೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿದ್ದಾರೆ. ಕೇರಳದಲ್ಲಿ ಚಿತ್ರದ ವಿತರಣಾ ಹಕ್ಕುಗಳನ್ನು ಶ್ರೀ ಗೋಕುಲಂ ಮೂವೀಸ್ ಬ್ಯಾನರ್ ಅಡಿಯಲ್ಲಿ ಗೋಕುಲಂ ಗೋಪಾಲನ್ ಪಡೆದುಕೊಂಡಿದ್ದಾರೆ.

Exit mobile version