ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ (Jawan box office collection) ಸೆಪ್ಟೆಂಬರ್ 7ರಂದು ವಿಶ್ವಾದ್ಯಂತ ತೆರೆ ಕಂಡಿದೆ. ಮೊದಲ ದಿನವೇ ಹಿಂದಿ, ತೆಲುಗು, ತಮಿಳು ಭಾಷೆಗಳಿಂದ ಈ ಸಿನಿಮಾಗೆ ಅಂದಾಜು 75 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. ಇದೀಗ 2ನೇ ದಿನ 50ರಿಂದ 53 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಅಂದರೆ, ಎರಡೇ ದಿನಕ್ಕೆ ‘ಜವಾನ್’ ಸಿನಿಮಾದ ಕಲೆಕ್ಷನ್ 120 ಕೋಟಿ ರೂಪಾಯಿ ದಾಟಿದಂತಾಗುತ್ತದೆ.
ಟ್ರೇಡ್ ವರದಿಗಳ ಪ್ರಕಾರ, ಮೊದಲ ದಿನದಂದು, ‘ಜವಾನ್’ ಭಾರತದ ಎಲ್ಲಾ ಭಾಷೆಗಳಲ್ಲಿ 74.50 ರೂ ಗಳಿಸಿದೆ. ಗುರುವಾರ ಹಿಂದಿ ಆವೃತ್ತಿಯಲ್ಲಿ ಚಿತ್ರವು ಒಟ್ಟಾರೆ ಶೇಕಡಾ 58.67ರಷ್ಟು ಆಕ್ಯುಪೆನ್ಸಿಯನ್ನು ಕಂಡಿದೆ. ನಂತರ, ಶಾರುಖ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ 1ನೇ ದಿನದ ಕಲೆಕ್ಷನ್ ಬಗ್ಗೆ ಹಂಚಿಕೊಂಡರು. ಚಿತ್ರವು ಮೊದಲ ದಿನವೇ 129.06 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಆರಂಭಿಕ ದಿನವಾಯಿತು ಎಂದು ಪೋಸ್ಟ್ ಹಂಚಿಕೊಂಡರು.
ಎರಡನೇ ದಿನ ‘ಜವಾನ್’ 53 ಕೋಟಿ ರೂಪಾಯಿ ಗಳಿಸಿದೆ. ಹಿಂದಿ ಬೆಲ್ಟ್ನಲ್ಲಿ ಒಟ್ಟಾರೆ ಶೇ42.51 ಆಕ್ಯುಪೆನ್ಸಿಗೆ ಸಾಕ್ಷಿಯಾಗಿದೆ. ಈ ಚಿತ್ರದ ಒಟ್ಟು ಕಲೆಕ್ಷನ್ ಇಲ್ಲಿಯವರೆಗೆ 127.50 ಕೋಟಿ ರೂ. ಆಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರ 200 ಕೋಟಿ ರೂ. ದಾಟಿದೆ ಎಂದು ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಟ್ವೀಟ್ ಮಾಡಿದ್ದಾರೆ.
ಶಾರುಖ್ ಮತ್ತು ನಯನತಾರಾ ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಇವರಿಬ್ಬರ ಕ್ಯೂಟ್ ಜೋಡಿಯನ್ನು ಜನ ಹಾಡಿ ಹೊಗಳುತ್ತಿದ್ದಾರೆ. ದೀಪಿಕಾ ಪಡುಕೋಣೆ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಸೇತುಪತಿ ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Jawan box office collection: ‘ಪಠಾಣ್’ ರೆಕಾರ್ಡ್ ಉಡೀಸ್; ಬಾಲಿವುಡ್ನಲ್ಲಿ ‘ಜವಾನ್’ ಹಿಸ್ಟರಿ
‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್ ಸಂಸ್ಥೆಯಡಿ ಗೌರಿ ಖಾನ್ ನಿರ್ಮಿಸುತ್ತಿದ್ದು, ಅಟ್ಲೀ ನಿರ್ದೇಶನದಲ್ಲಿ ಮೂಡಿಬಂದಿದೆ. ಚಿತ್ರದ ಮ್ಯೂಸಿಕ್ ರೈಟ್ಸ್ ಈಗಾಗಲೇ 36 ಕೋಟಿ ರೂ.ಗೆ ಮಾರಾಟವಾಗಿದೆ ಎಂದು ವರದಿಯಾಗಿದೆ.