Jawan Movie: ಬಿಡುಗಡೆಯಾದ ಬೆನ್ನಲ್ಲೇ ಆನ್‌ಲೈನ್‌ನಲ್ಲಿ 'ಜವಾನ್' ಸಿನಿಮಾ ಲೀಕ್! ಶಾರುಖ್ ಫ್ಯಾನ್ಸ್ ಆಕ್ರೋಶ - Vistara News

ದೇಶ

Jawan Movie: ಬಿಡುಗಡೆಯಾದ ಬೆನ್ನಲ್ಲೇ ಆನ್‌ಲೈನ್‌ನಲ್ಲಿ ‘ಜವಾನ್’ ಸಿನಿಮಾ ಲೀಕ್! ಶಾರುಖ್ ಫ್ಯಾನ್ಸ್ ಆಕ್ರೋಶ

Jawan Movie: ಗುರುವಾರ ತೆರೆ ಕಂಡಿರುವ, ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

VISTARANEWS.COM


on

Shah Rukh Khan high budget movie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರೀ ನಿರೀಕ್ಷೆ ಮೂಡಿಸಿದ್ದ ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್’ (Jawan Movie) ಚಿತ್ರವು ಗುರುವಾರ ತೆರೆಗೆ ಅಪ್ಪಳಿಸಿದ್ದು, ಜನರಿಂದಲೂ ಭಾರೀ ಪ್ರತಿಕ್ರಿಯೆ ದೊರೆಯುತ್ತಿದೆ. ಮೊದಲನೇ ದಿನವೇ ಚಿತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ. ಆದರೆ, ಜವಾನ್ ಬಿಡುಗಡೆಯಾದ ದಿನವೇ, ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ (Jawan Leaked online) ಆಗಿದ್ದು, ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಟೆಲಿಗ್ರಾಮ್ ಮತ್ತು ಟೊರೆಂಟ್ ಆ್ಯಪ್‌ಗಳಲ್ಲಿ ಜವಾನ್ ಪೈರಸಿ ಆಗಿರುವ ಕುರಿತು ಶಾರುಖ್ ಅಭಿಮಾನಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜವಾನ್ ಸಿನಿಮಾವನ್ನು ಹಲವಾರು ವೆಬ್‌ಸೈಟ್‌ಗಳಲ್ಲಿ ಮಧ್ಯಮ ಗುಣಮಟ್ಟದಲ್ಲಿ ಸ್ಟ್ರೀಮ್ ಮಾಡಬಹುದು ಎಂದು ಶಾರುಖ್ ಖಾನ್ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಚಿತ್ರದ ಸೋರಿಕೆಯು ಅದರ ಗಲ್ಲಾಪೆಟ್ಟಿಗೆ ಗಳಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕೆಲವರು ಚಿಂತಿತರಾಗಿದ್ದಾರೆ. ಅಭಿಮಾನಿಯೊಬ್ಬರು ಟ್ವೀಟ್ ಮಾಡಿ, “ಶಾರುಖ್ ಖಾನ್, ಇದು ತುಂಬಾ ಕೆಟ್ಟದಾಗಿದೆ. ಯಾರೋ ನಿಮ್ಮ ಹೊಸ ಚಲನಚಿತ್ರ ಜವಾನ್ ಅನ್ನು ಇಂದು ಲೀಕ್ ಮಾಡಿದ್ದಾರೆ. ಇದು ಕಲೆಕ್ಷನ್ ಮೇಲೆ ಪರಿಣಾಮ ಬೀರಲಿದೆ. ದಯವಿಟ್ಟು ಏನಾದರೂ ಮಾಡಿ. ಜವಾನ್ ಚಲನಚಿತ್ರ ಇಂಟರ್ನೆಟ್‌ನಲ್ಲಿ ಲಭ್ಯವಿದೆ.” ಹೇಳಿದ್ದಾನೆ.

ಟ್ವಿಟರ್‌ನಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಮತ್ತು ಶಾರುಖ್ ಖಾನ್ ಅವರನ್ನು ಟ್ಯಾಗ್ ಮಾಡಿರುವ ಮತ್ತೊಬ್ಬರು, “ನೀವು ಯಾವ ಕಾನೂನನ್ನು ಮಾಡಿದ್ದೀರಿ? ಈಗ ಯಾರೂ ಆ ಕಾನೂನನ್ನು ಪಾಲಿಸುತ್ತಿಲ್ಲ. ಜವಾನ್ ಇಂದು ಬಿಡುಗಡೆಯಾಗಿದ್ದು, ಸ್ವಲ್ಪ ಸಮಯದ ನಂತರ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ. ಆನ್‌ಲೈನ್‌ನಲ್ಲಿ ಚಲನಚಿತ್ರಗಳು ಸೋರಿಕೆಯಾಗುವುದರಿಂದ ಚಿತ್ರರಂಗವು ದೊಡ್ಡ ನಷ್ಟವನ್ನು ಅನುಭವಿಸುತ್ತದೆ” ಎಂದು ಹೇಳಿದ್ದಾರೆ.

ಸೌತ್‌ ಮಾಸ್‌, ನಾರ್ತ್ ಕ್ಲಾಸ್‌ ಮಿಕ್ಸ್‌; ʻಜವಾನ್‌ʼಗೆ ಫ್ಯಾನ್ಸ್‌ಗಳ ಜೈಕಾರ!

ಶಾರುಖ್ ಖಾನ್ ಅಭಿನಯದ (Jawan First Reviews) ʼಜವಾನ್ʼ ಚಿತ್ರ ಸೆಪ್ಟೆಂಬರ್‌ 7ರಂದು ವಿಶ್ವಾದ್ಯಂತ ತೆರೆ ಕಂಡಿದೆ. ಮುಂಜಾನೆ 5 ಗಂಟೆಗೆ ಪ್ರಥಮ ಪ್ರದರ್ಶನಗೊಂಡಿದೆ. ಬಿಡುಗಡೆಗೂ ಮುನ್ನವೇ ದಾಖಲೆಗಳನ್ನು ಉಡೀಸ್‌ ಮಾಡಿದ್ದ ಜವಾನ್‌ ಇದೀಗ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆಗೆ ವ್ಯಕ್ತವಾಗಿದೆ. ಸಿನಿಮಾ ಬಿಡುಗಡೆ ಆದ ಕೂಡಲೇ ಶಾರುಖ್‌ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಹುಚ್ಚೆದ್ದು ಕುಣಿದಿದ್ದಾರೆ. “ಜವಾನ್ ಒಂದು ಭಾವನಾತ್ಮಕ ರೋಲರ್ ಕೋಸ್ಟರ್ʼʼ ಎಂದು ಅಭಿಮಾನಿಯೊಬ್ಬರು ಹೊಗಳಿದ್ದಾರೆ.

ಕೆಲವು ಅಭಿಮಾನಿಗಳು ಮುಂಜಾನೆ ಹೌಸ್‌ಫುಲ್ ಶೋಗಳನ್ನು ತೋರಿಸುವ ವಿಡಿಯೊ ತುಣುಕುಗಳನ್ನು ಹಂಚಿಕೊಂಡಿದ್ದಾರೆ. ತುಂಬಿದ ಚಿತ್ರಮಂದಿರಗಳ ಮುಂದೆ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಿದ್ದರು. ಟ್ವಿಟರ್‌ನಲ್ಲಿ ಅಭಿಮಾನಿಯೊಬ್ಬರು ʻʻಜವಾನ್ ಒಂದು ಭಾವನಾತ್ಮಕ ಪ್ಯಾಕೇಜ್‌ ಹೊಂದಿದೆ. ನಾನು ನೋಡಿದ ಅತ್ಯುತ್ತಮ ಬಾಲಿವುಡ್ ಮತ್ತು ಪ್ಯಾನ್ ಇಂಡಿಯಾ ಚಲನಚಿತ್ರಗಳಲ್ಲಿ ಇದು ಒಂದಾಗಿದೆ. ಯಾವುದೇ ಬಾಲಿವುಡ್ ಸ್ಟಾರ್ ಕ್ರೇಜ್ ಈ ರೀತಿ ಇದುವರೆಗೆ ನೋಡಿಲ್ಲ. ಜವಾನ್ ಬಾಕ್ಸ್ ಆಫೀಸ್ ನಲ್ಲಿ ಇತಿಹಾಸ ಸೃಷ್ಟಿಸುವುದು ಪಕ್ಕಾʼʼ ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬರು ʻ ಇಲ್ಲಿಯವರೆಗೆ ಜವಾನ್ ಚಿತ್ರವು ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರಿಗಾಗಿ ಎಂದಾಗಿತ್ತು. ದಕ್ಷಿಣ ಭಾರತದ ಮಾಸ್ಸಿ ಫ್ಲೇವರ್ ಮತ್ತು ನಾರ್ತ್ ಇಂಡಿಯನ್ ಕ್ಲಾಸಿ ಫ್ಲೇವರ್ ಇದರಲ್ಲಿದೆʼʼ ಎಂದು ಬಣ್ಣಿಸಿದ್ದಾರೆ. ʻʻಚಿತ್ರಕಥೆ ಅತ್ಯುತ್ತಮವಾಗಿದೆ. ಭಾವನೆಗಳು ಮತ್ತು ಪಾತ್ರಗಳನ್ನು ಕಟ್ಟಿಕೊಟ್ಟಿರುವುದು ಅದ್ಭುತ. ಇದು ನಿರ್ದೇಶಕ ಅಟ್ಲೀ ಮಾಸ್ಟರ್ ಪೀಸ್ʼʼ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

ಸಿನಿಮಾದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Rain Tragedy: ಪ್ರವಾಸಿಗರ ಕಣ್ಣಮುಂದೆಯೇ ಜಲಪಾತದಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ 7 ಮಂದಿ; ಇಲ್ಲಿದೆ ವಿಡಿಯೊ

Rain Tragedy: ರಾಪ್ಸೋಡಿಕ್ ಜಲಪಾತದ ಮಧ್ಯದಲ್ಲಿರುವ ಬಂಡೆಯ ಮೇಲೆ ನಿಂತಿದ್ದರು. ಮುಂಜಾನೆಯಿಂದ ಈ ಪ್ರದೇಶದಲ್ಲಿ ಭಾರಿ ಮಳೆ ಬಂದಿದ್ದ ಕಾರಣ ಅಣೆಕಟ್ಟು ಉಕ್ಕಿ ಹರಿದಿತ್ತು. ಇದು ಜಲಪಾತದಲ್ಲಿ ನೀರಿನ ಹರಿವನ್ನು ಹೆಚ್ಚಿಸಿತು. ಕುಟುಂಬದ ಸದಸ್ಯರು ಕೊಚ್ಚಿ ಹೋಗುತ್ತಿದ್ದ ಕ್ಷಣಗಳು ಬೇರೆ ಪ್ರವಾಸಿಗ ಕ್ಯಾಮೆರಾದದಲ್ಲಿ ದಾಖಲಾಗಿದೆ.

VISTARANEWS.COM


on

Rain Tragedy
Koo

ಮುಂಬೈ: ಮುಂಬೈ ಸಮೀಪದ ಲೋನಾವಾಲಾದಲ್ಲಿ ಉಕ್ಕಿ ಹರಿಯುತ್ತಿದ್ದ ಜಲಪಾತದ ಮಧ್ಯದಲ್ಲಿ ನಿಂತಿದ್ದ ಪುರುಷ, ಮಹಿಳೆ ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಮಂದಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. (Rain Tragedy) ಅವರಲ್ಲಿ ಇಬ್ಬರು ಮಾತ್ರ ಈಜಿ ಬಚಾವಾಗಿದ್ದಾರೆ. ಮುಂಬೈನಿಂದ ಕೇವಲ 80 ಕಿ.ಮೀ ದೂರದಲ್ಲಿರುವ ಗಿರಿಧಾಮದಲ್ಲಿ ಏಳು ಜನರ ಕುಟುಂಬವು ರಜಾದಿನಗಳನ್ನು ಕಳೆಯಲು ಬಂದಿದ್ದರು. ಅವರು ಪ್ರವಾಹದ ನಡುವೆ ಸಿಲುಕಿದ್ದರು. ಐವರಲ್ಲಿ ಮೂರು ಶವಗಳು ಪತ್ತೆಯಾಗಿವೆ. ಸೋಮವಾರ ಮುಂಜಾನೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪುನರಾರಂಭಗೊಳ್ಳಲಿದೆ.

ಮಳೆಗಾಲದಲ್ಲಿ ಈ ಗಿರಿಧಾಮಕ್ಕೆ ಭೇಟಿ ನೀಡುವ ಪ್ರವಾಸಿಗರಂತೆ, ಈ ಕುಟುಂಬವು ಇಂದು ಮಧ್ಯಾಹ್ನ ಭುಸಿ ಅಣೆಕಟ್ಟಿನ ಹಿನ್ನೀರಿನ ಬಳಿಯ ಜಲಪಾತದಲ್ಲಿ ಪಿಕ್ನಿಕ್ ಗೆ ಹೋಗಿತ್ತು. ರಾಪ್ಸೋಡಿಕ್ ಜಲಪಾತದ ಮಧ್ಯದಲ್ಲಿರುವ ಬಂಡೆಯ ಮೇಲೆ ನಿಂತಿದ್ದರು. ಮುಂಜಾನೆಯಿಂದ ಈ ಪ್ರದೇಶದಲ್ಲಿ ಭಾರಿ ಮಳೆ ಬಂದಿದ್ದ ಕಾರಣ ಅಣೆಕಟ್ಟು ಉಕ್ಕಿ ಹರಿದಿತ್ತು. ಇದು ಜಲಪಾತದಲ್ಲಿ ನೀರಿನ ಹರಿವನ್ನು ಹೆಚ್ಚಿಸಿತು. ಕುಟುಂಬದ ಸದಸ್ಯರು ಕೊಚ್ಚಿ ಹೋಗುತ್ತಿದ್ದ ಕ್ಷಣಗಳು ಬೇರೆ ಪ್ರವಾಸಿಗ ಕ್ಯಾಮೆರಾದದಲ್ಲಿ ದಾಖಲಾಗಿದೆ.

ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ, ರಭಸವಾಗಿ ಹರಿಯುವ ನೀರಿನಲ್ಲಿ ಅವರೆಲ್ಲರೂ ಕೊಚ್ಚಿ ಹೋಗಿದ್ದರು. ಅವರು ಸಹಾಯಕ್ಕಾಗಿ ಕಿರುಚಿದರೂ ಅಲ್ಲಿದ್ದವರಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಇತರ ಪ್ರವಾಸಿಗರು ಸಹ ದಡದಲ್ಲಿ ಜಮಾಯಿಸಿ ಸಹಾಯಕ್ಕಾಗಿ ಕೂಗಿದ್ದರು. ರಭಸವಾಗಿ ಹರಿಯುವ ನೀರಿನಿಂದಿಆಗ ಅವರ ರಕ್ಷಣೆಗೆ ಹೋಗಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ: NIA Raid: ಹಿಜ್ಬು-ಉತ್‌-ತಹ್ರೀರ್‌ ಉಗ್ರ ಸಂಘಟನೆ ಜೊತೆ ನಂಟು-10 ಕಡೆಗಳಲ್ಲಿ NIA ರೇಡ್‌; ಶಂಕಿತ ಉಗ್ರರು ಅರೆಸ್ಟ್‌

ಭಾನುವಾರ ಮಧ್ಯಾಹ್ನ 1:30 ರ ಸುಮಾರಿಗೆ ಈ ಘಟನೆ ನಡೆದಿದೆ. ಸ್ಥಳೀಯರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಹಗ್ಗಗಳು ಮತ್ತು ಚಾರಣ ಸಾಧನಗಳೊಂದಿಗೆ ಬದುಕುಳಿದವರನ್ನು ಹುಡುಕಲು ಪ್ರಾರಂಭಿಸಿದ್ದಾರೆ..

ಪೊಲೀಸರ ಪ್ರಕಾರ, ಪ್ರವಾಸಿಗರು ಜಲಪಾತಕ್ಕೆ ಜಾರಿ ಕೆಳಭಾಗದ ಜಲಾಶಯದಲ್ಲಿ ಮುಳುಗಿದ್ದಾರೆ. ಜಲಪಾತದ ತಳದಲ್ಲಿ ಅವರು ನಿಂತಿದ್ದ ಪಾಚಿ ಬಂಡೆಗಳ ಮೇಲೆ ನಿಂತಿದ್ದ ಕಾರಣ ಅವರಿಗೆ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ.

ಈ ಅಪಘಾತವು ಜಲಪಾತ ಮತ್ತು ಕೆಳಭಾಗದ ಅಣೆಕಟ್ಟಿನ ಭದ್ರತಾ ವ್ಯವಸ್ಥೆಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಅದೇ ಸ್ಥಳದಿಂದ ಬಂದ ಮತ್ತೊಂದು ವೀಡಿಯೊದಲ್ಲಿ ನೂರಾರು ಜನರು ಅಣೆಕಟ್ಟಿನ ಅಂಚಿನಲ್ಲಿ ಮತ್ತು ಅದರ ಗೋಡೆಯ ಮೇಲೆ ನಿಂತಿರುವುದು ಕಾಣಬಹುದು. ಪ್ರವಾಸಿಗರು ಪ್ರವಾಹದ ನೀರಿನಲ್ಲಿ ಯಾವುದೇ ಸುರಕ್ಷತೆ ಇಲ್ಲದೆ ಸಂಭ್ರಮಿಸುತ್ತಿರುವುದು ಕಂಡು ಬಂದಿದೆ. ಈ ಪ್ರದೇಶದಲ್ಲಿ ಯಾವುದೇ ಭದ್ರತಾ ವ್ಯವಸ್ಥೆ ಕಂಡುಬಂದಿಲ್ಲ.

Continue Reading

ದೇಶ

NIA Raid: ಹಿಜ್ಬು-ಉತ್‌-ತಹ್ರೀರ್‌ ಉಗ್ರ ಸಂಘಟನೆ ಜೊತೆ ನಂಟು-10 ಕಡೆಗಳಲ್ಲಿ NIA ರೇಡ್‌; ಶಂಕಿತ ಉಗ್ರರು ಅರೆಸ್ಟ್‌

NIA Raid:ಬಂಧಿತ ಉಗ್ರರನ್ನು ಅಬ್ದುಲ್‌ ರೆಹಮಾನ್‌ ಮತ್ತು ಮುಜಿಬುಲ್‌ ರೆಹಮಾನ್‌ ಅಲಿಯಾಸ್‌ ಮುಜಿಬುಲ್‌ ರೆಹಮಾನ್‌ ಅಲ್ತಾಮ್‌ ಸಾಹೀಬ್‌ ಎಂದು ಗುರುತಿಸಲಾಗಿದೆ. ಇವರಿಬ್ಬರೂ ತಂಜಾವೂರ್‌ ಜಿಲ್ಲೆಯವರಾಗಿದ್ದು, ಇವರಿಬ್ಬರೂ ಯುವಕರನ್ನು ಉಗ್ರ ಸಂಘಟನೆಗೆ ಪ್ರೇರೇಪಿಸಲು ಗುಪ್ತವಾಗಿ ತರಗತಿಗಳನ್ನು ನಡೆಸುತ್ತಿದ್ದಾರೆ. ಭಾರತ ಈಗ ನಾಸ್ತಿಕ ರಾಷ್ಟ್ರವಾಗಿ ಬೆಳೆಯುತ್ತಿದೆ. ದೇಶದಲ್ಲಿ ಹಿಂಸಾತ್ಮಕ ಜಿಹಾದ್‌ ಮೂಲಕ ಇಸ್ಲಾಂ ಮೇಲಿನ ನಂಬಿಕೆಯನ್ನು ಮೂಡಿಸಬೇಕಿದೆ ಎಂಬುದನ್ನು ಯುವಕರಿಗೆ ಬೋಧಿಸುತ್ತಿದ್ದರು ಎಂದು ಎನ್‌ಐಎ ಹೇಳಿದೆ.

VISTARANEWS.COM


on

NIA Raid
Koo

ಚೆನ್ನೈ: ತಮಿಳುನಾಡಿನ ಹತ್ತು ಸ್ಥಳಗಳಲ್ಲಿ ಎನ್‌ಐಎ ರೇಡ್‌(NIA Raid) ನಡೆಸಿದ್ದು, ಭಯೋತ್ಪಾದನಾ(Terrorism activities) ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಅರೆಸ್ಟ್‌ ಮಾಡಿದೆ. ತಮಿಳುನಾಡಿನ ಐದು ಜಿಲ್ಲೆಗಳಲ್ಲಿ ಈ ರೇಡ್‌ ನಡೆದಿದ್ದು, ಅಂತಾರಾಷ್ಟ್ರೀಯ ಭಯೋತ್ಪಾದನಾ ಸಂಘಟನೆ ಹಿಜ್ಬು-ಉತ್‌-ತಹ್ರೀರ್‌ನ ಇಬ್ಬರನ್ನು ಬಂಧಿಸಿದೆ. ಈ ಸಂಘಟನೆಯ ಸ್ಥಾಪಕ ತಾಖಿ ಅಲ್‌ ದಿನ್‌ ಅಲ್‌ ಅಬ್ಬಾನಿ ಬರೆದ ಸಂವಿಧಾನವನ್ನು ಪ್ರಪಂಚಾದ್ಯಂತ ಪಸರಿಸಲು ಪ್ರಯತ್ನ ನಡೆಸುತ್ತಿದ್ದಾರೆ.

ಇನ್ನು ಬಂಧಿತ ಉಗ್ರರನ್ನು ಅಬ್ದುಲ್‌ ರೆಹಮಾನ್‌ ಮತ್ತು ಮುಜಿಬುಲ್‌ ರೆಹಮಾನ್‌ ಅಲಿಯಾಸ್‌ ಮುಜಿಬುಲ್‌ ರೆಹಮಾನ್‌ ಅಲ್ತಾಮ್‌ ಸಾಹೀಬ್‌ ಎಂದು ಗುರುತಿಸಲಾಗಿದೆ. ಇವರಿಬ್ಬರೂ ತಂಜಾವೂರ್‌ ಜಿಲ್ಲೆಯವರಾಗಿದ್ದು, ಇವರಿಬ್ಬರೂ ಯುವಕರನ್ನು ಉಗ್ರ ಸಂಘಟನೆಗೆ ಪ್ರೇರೇಪಿಸಲು ಗುಪ್ತವಾಗಿ ತರಗತಿಗಳನ್ನು ನಡೆಸುತ್ತಿದ್ದಾರೆ. ಭಾರತ ಈಗ ನಾಸ್ತಿಕ ರಾಷ್ಟ್ರವಾಗಿ ಬೆಳೆಯುತ್ತಿದೆ. ದೇಶದಲ್ಲಿ ಹಿಂಸಾತ್ಮಕ ಜಿಹಾದ್‌ ಮೂಲಕ ಇಸ್ಲಾಂ ಮೇಲಿನ ನಂಬಿಕೆಯನ್ನು ಮೂಡಿಸಬೇಕಿದೆ ಎಂಬುದನ್ನು ಯುವಕರಿಗೆ ಬೋಧಿಸುತ್ತಿದ್ದರು ಎಂದು ಎನ್‌ಐಎ ಹೇಳಿದೆ.

ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್, ಸಿಮ್ ಮತ್ತು ಮೆಮೊರಿ ಕಾರ್ಡ್‌ಗಳು ಮತ್ತು ಹಿಜ್ಬ್-ಉತ್-ತಹ್ರೀರ್, ಖಿಲಾಫಾ, ಇಸ್ಲಾಮಿಕ್ ಸ್ಟೇಟ್‌ನ ಸಿದ್ಧಾಂತವನ್ನು ಒಳಗೊಂಡಿರುವ ಪುಸ್ತಕಗಳು ಮತ್ತು ಪ್ರಿಂಟ್‌ಔಟ್‌ಗಳು ಅನೇಕ ವಸ್ತುಗಳನ್ನು ಎನ್‌ಐಎ ವಶಪಡಿಸಿಕೊಂಡಿದೆ.

ಮತ್ತೊಂದೆಡೆ ಜಮ್ಮು-ಕಾಶ್ಮೀರದ ರಿಯಾಸಿ(Reasi Terror Attack) ಜಿಲ್ಲೆಯಲ್ಲಿ ಹಿಂದು ಯಾತ್ರಿಕರ ಮೇಲೆ ನಡೆದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA Raid) ವಿವಿಧ ಸ್ಥಳಗಳಲ್ಲಿ ರೇಡ್‌ ನಡೆಸಿದೆ. ಮಕ್ಕಳು ಸೇರಿದಂತೆ ಒಂಬತ್ತು ಮಂದಿಯನ್ನು ಉಗ್ರರ ದಾಳಿಯಲ್ಲಿ ಬಲಿಯಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ಕೇಂದ್ರ ಗೃಹ ಸಚಿವಾಲಯ ಪ್ರಕರಣವನ್ನು ಎನ್‌ಐಎ ತನಿಖೆಗೆ ಹಸ್ತಾಂತರಿಸಿತ್ತು.

ಇದೀಗ ತನಿಖಾ ಭಾಗವಾಗಿ ಜಮ್ಮು -ಕಾಶ್ಮೀರದ ವಿವಿಧ ಭಾಗಗಳಲ್ಲಿ ಎನ್‌ಐಎ ರೇಡ್‌ ನಡೆಸಿದೆ. ಉಗ್ರರಿಗೆ ಆಶ್ರಯ, ಸಹಾಯ ನೀಡಿದ ಶಂಕಿತರ ಮೇಲೆ ಈ ರೇಡ್‌ ನಡೆದಿದ್ದು, ಹಲವು ಮಹತ್ವದ ಮಾಹಿತಿಗಳನ್ನು ಕಳೆ ಹಾಕಿದ್ದಾರೆ. ಇತ್ತೀಚೆಗಷ್ಟೇ ರಿಯಾಸಿ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೌರಿ ಜಿಲ್ಲೆಯಲ್ಲಿ ಹಕೀಮ್‌ ದಿನ್‌ ಎಂಬ ಶಂಕಿತನನ್ನು ಪೊಲೀಸರು ಬಂಧಿಸಿದ್ದಾರೆ. ಈತನೇ ದಾಳಿಯ ರೂವಾರಿ ಆಗದಿದ್ದರೂ, ಉಗ್ರರ ದಾಳಿಗೆ ಅಗತ್ಯ ವಸ್ತುಗಳನ್ನು ಪೂರೈಸಿದ್ದಾನೆ. ಇದರಿಂದ ಉಗ್ರರು ಸುಲಭವಾಗಿ ದಾಳಿ ಮಾಡಲು ಸಾಧ್ಯವಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ

ದೆಹಲಿ ರಾಜಸ್ಥಾನ ಹಾಗೂ ಉತ್ತರ ಪ್ರದೇಶದ ಹಿಂದು ಯಾತ್ರಿಕರು ಜೂನ್‌ 9ರಂದು ಬಸ್‌ನಲ್ಲಿ ವೈಷ್ಣೋದೇವಿ ಯಾತ್ರೆಗೆ ಹೊರಟಿದ್ದರು. ರಿಯಾಸಿ ಜಿಲ್ಲೆಯ ತೆರ್ಯಾತ್‌ ಗ್ರಾಮದ ಬಳಿಯ ಮಾರ್ಗವಾಗಿ ಬಸ್‌ ಚಲಿಸುತ್ತಿತ್ತು. ಆದರೆ, ಉಗ್ರರು ಬಸ್‌ ಅನ್ನು ಹಿಂಬಾಲಿಸಿಕೊಂಡು ಬಂದು ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ದಾಳಿಯ ಹಿನ್ನೆಲೆಯಲ್ಲಿ ಬಸ್‌ ಕಣಿವೆಗೆ ಉರುಳಿತ್ತು. ಇದರಿಂದಾಗಿ 9 ಮಂದಿ ಮೃತಪಟ್ಟರೆ, 33 ಜನ ಗಾಯಗೊಂಡಿದ್ದರು. ದಾಳಿಯ ಹೊಣೆಯನ್ನು ಲಷ್ಕರೆ ತಯ್ಬಾ ಉಗ್ರ ಸಂಘಟನೆಯು ಹೊತ್ತುಕೊಂಡಿದೆ.

ಇದನ್ನೂ ಓದಿ:Indian Armed Forces: ಸಹಪಾಠಿಗಳು ಈ ಭಾರತೀಯ ಸೇನೆ ಮತ್ತು ನೌಕಾಪಡೆ ಮುಖ್ಯಸ್ಥರು; ಇದು ದೇಶದ ಇತಿಹಾಸದಲ್ಲೇ ಮೊದಲು!

Continue Reading

ವೈರಲ್ ನ್ಯೂಸ್

Goldman of Bihar: ಈತ ಬಂಗಾರದ ಮನುಷ್ಯ! ಕೊರಳಲ್ಲಿದೆ 5 ಕೆಜಿ ಚಿನ್ನ! ಬೈಕ್‌ನಲ್ಲೂ ಇದೆ ಬಂಗಾರ!

ಬಿಹಾರದ ಗೋಲ್ಡ್ ಮ್ಯಾನ್ (Goldman of Bihar) ಎಂದೇ ಕರೆಯಲ್ಪಡುವ ಪ್ರೇಮ್ ಸಿಂಗ್ ಅವರು ಚಿನ್ನವನ್ನು ಹೆಚ್ಚು ಇಷ್ಟ ಪಡುತ್ತಾರೆ. ಅವರು ಸುಮಾರು ಐದು ಕಿಲೋಗ್ರಾಂಗಳಷ್ಟು ಚಿನ್ನವನ್ನು ಧರಿಸಿಕೊಂಡೇ ಓಡಾಡುತ್ತಾರೆ. ಮಾತ್ರವಲ್ಲದೇ ಅವರು ಚಿನ್ನದ ಬೈಕ್ ಅನ್ನೂ ಹೊಂದಿದ್ದಾರೆ. ಇವರ ಕುರಿತ ಕುತೂಹಲಕಾರಿ ವರದಿ ಇಲ್ಲಿದೆ.

VISTARANEWS.COM


on

By

Goldman of Bihar
Koo

ಐದು ಕಿಲೋ ಗ್ರಾಂನಷ್ಟು ಚಿನ್ನವನ್ನು ಧರಿಸಿಕೊಂಡು ಚಿನ್ನದ ಬೈಕ್ ನಲ್ಲಿ ಆತ ಸವಾರಿ ಮಾಡುತ್ತಿದ್ದರೆ ಎಲ್ಲರೂ ಹುಬ್ಬೇರಿಸಿಕೊಂಡು ನೋಡುತ್ತಾರೆ. ಬಿಹಾರದ (bihar) ಗೋಲ್ಡ್ ಮ್ಯಾನ್ (Goldman of Bihar) ಎಂದೇ ಕರೆಯಲಾಗುವ ಆತನಿಗೆ ಚಿನ್ನದ ಮೇಲಿನ ಪ್ರೀತಿ ಈಗ ದೇಶಾದ್ಯಂತ ಚರ್ಚೆಯಲ್ಲಿದೆ. ಆತನ ಕುರಿತಾದ ವಿಡಿಯೋ, ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ (social media) ಭಾರೀ ವೈರಲ್ (viral video) ಆಗುತ್ತಿದೆ.

ಬಿಹಾರದ ಗೋಲ್ಡ್ ಮ್ಯಾನ್ ಎಂದೇ ಕರೆಯಲ್ಪಡುವ ಪ್ರೇಮ್ ಸಿಂಗ್ ಅವರು ಚಿನ್ನವನ್ನು ಹೆಚ್ಚು ಇಷ್ಟಪಡುತ್ತಾರೆ. ಅವರು ಸುಮಾರು ಐದು ಕಿಲೋಗ್ರಾಂಗಳಷ್ಟು ಚಿನ್ನವನ್ನು ಧರಿಸಿಕೊಂಡೇ ಓಡಾಡುತ್ತಾರೆ. ಮಾತ್ರವಲ್ಲದೇ ಅವರು ಚಿನ್ನದ ಬೈಕ್ ಅನ್ನೂ ಹೊಂದಿದ್ದಾರೆ. ಇದನ್ನು ಬೆಂಗಳೂರಿನಲ್ಲಿ ರಚಿಸಲಾಗಿದೆ. ಇದರ ನಿರ್ಮಾಣಕ್ಕೆ ಏಳರಿಂದ ಎಂಟು ತಿಂಗಳು ಬೇಕಾಯಿತು ಮತ್ತು 11 ರಿಂದ 12 ಲಕ್ಷ ರೂ. ಖರ್ಚಾಗಿದೆ ಎನ್ನಲಾಗಿದೆ.


ಬಿಹಾರದ ಬಂಗಾರದ ಮನುಷ್ಯ ಪ್ರೇಮ್ ಸಿಂಗ್ ಅವರಿಗೆ ತಾವು ಧರಿಸುವ ಚಿನ್ನದಿಂದಲೇ ಸುದ್ದಿಯಲ್ಲಿದ್ದಾರೆ. ಇವರ ಕುರಿತು ವಿಡಿಯೋ ಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಇದನ್ನೂ ಓದಿ: Viral Video: ರೀಲ್ಸ್‌ಗಾಗಿ ಸಿಗರೇಟ್‌ ದಂ ಹೊಡೆದ ಯುವತಿ; ಮನೇಲಿ ಹಿಗ್ಗಾಮುಗ್ಗಾ ಹೊಡೆದ ಅಪ್ಪ!

ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿದ್ದು, ಹೀಗಾಗಿ ಯಾವುದೇ ಕಳ್ಳರ ಭಯವಿಲ್ಲದೆ ಇಷ್ಟೊಂದು ಚಿನ್ನವನ್ನು ಧರಿಸಿಕೊಂಡು ಓಡಾಡುತ್ತೇನೆ. ಬೈಕ್‌ಗೂ 150 ರಿಂದ 200 ಗ್ರಾಂ ಚಿನ್ನವನ್ನು ಹಾಕಿದ್ದೇನೆ. ಇದು ಬಿಹಾರ ಸರ್ಕಾರ ಹಾಗೂ ಪೊಲೀಸರ ಪಾಲಿಗೆ ಗೌರವದ ವಿಷಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಾರುಖ್‌ ಖಾನ್‌ ನನ್ನು ಕಾಪಿ ಮಾಡಲು ಹೋಗಿ ಯೂಟ್ಯೂಬರ್‌ಗಳು ಜೈಲು ಪಾಲು

ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಲೈಕ್ಸ್ , ಕಾಮೆಂಟ್‌ ಪಡೆಯಲು ಯುವಕರು ಅನೇಕ ದುಸ್ಸಾಹಸಗಳಿಗೆ ಕೈ ಹಾಕಿ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಅದೇ ರೀತಿ ಇದೀಗ ಯುವಕರು ಸಿನಿಮಾವೊಂದರಲ್ಲಿ ಹೀರೊ ಲುಕ್‌ ಅನ್ನು ನಕಲು ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ.

ಉತ್ತರ ಪ್ರದೇಶದ ಬುಲಂದ್ ಶಹರ್‌ನ ದಿಬಾಯ್‌ನಲ್ಲಿ ಆರು ಯುಟ್ಯೂಬರ್‌ಗಳು ಜವಾನ್ ಚಿತ್ರದಲ್ಲಿ ನಟ ಶಾರುಖ್ ಖಾನ್ ಅವರು ಬ್ಯಾಂಡೇಜ್ ಧರಿಸಿದ ಲುಕ್ ಅನ್ನು ನಕಲು ಮಾಡಿ ಇಡೀ ಪಟ್ಟಣವನ್ನು ಸುತ್ತಿದ್ದಾರೆ. ಇವರನ್ನು ಕಂಡು ಸ್ಥಳೀಯರು ಗಾಬರಿಗೊಂಡಿದ್ದಾರೆ ಎನ್ನಲಾಗಿದೆ.

ಈ ವಿಡಿಯೋದಲ್ಲಿ ಆರು ಮಂದಿ ಯುವಕರು ರಕ್ತದಂತೆ ಕಾಣುವ ಬಣ್ಣವನ್ನು ಬ್ಯಾಂಡೇಜ್‌ಗೆ ಬಳಿದುಕೊಂಡು ಅದನ್ನು ಮುಖಕ್ಕೆ ಸುತ್ತಿಕೊಂಡು ಕೈಯಲ್ಲಿ ಕೋಲುಗಳನ್ನು ಹಿಡಿದು ಜವಾನ್ ಚಿತ್ರದಲ್ಲಿ ನಟ ಶಾರುಖ್ ಖಾನ್ ಅವರ ಲುಕ್ ಅನ್ನು ನಕಲು ಮಾಡಿ ಇಡೀ ಪಟ್ಟಣವನ್ನು ಸುತ್ತಿಹಾಕಿದ್ದಾರೆ. ಇವರಲ್ಲಿ ಒಬ್ಬ ಶರ್ಟ್ ಧರಿಸಿದೆ ತನ್ನ ಇಡೀ ದೇಹವನ್ನು ರಕ್ತದ ಕಲೆಯಂತೆ ಕಾಣುವ ಬ್ಯಾಂಡೇಜ್‌ನಿಂದ ಮುಚ್ಚಿಕೊಂಡಿದ್ದಾನೆ. ಇವರನ್ನು ಕಂಡು ಸ್ಥಳೀಯರು ಗಾಬರಿಗೊಂಡಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಈ ವಿಡಿಯೋ ಸೋಶಿಯಲ್ ವೀಡಿಯಾದಲ್ಲಿ ವೈರಲ್ ಆಗಿದ್ದು, ಮಾತ್ರವಲ್ಲ ಇದರಿಂದ ಪೊಲೀಸರು ಇವರನ್ನು ಹುಡುಕಿಕೊಂಡು ಬರುವಂತಾಗಿದೆ. ಈ ಆರು ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ವಿಡಿಯೋ 15 ನಿಮಿಷಗಳ ಕಾಲವಿದ್ದು, ಸಮಾಜದ ಜನತೆಗೆ ಉಪದ್ರವ ನೀಡುವಂತಹ ಈ ರೀಲ್ಸ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇದಕ್ಕೆ ಶೀರ್ಷಿಕೆ ನೀಡಲಾಗಿದೆ.

ಈ ಆರು ಮಂದಿ ಸ್ಥಳೀಯರನ್ನು ಹೆದರಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಮತ್ತು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಹಾಗೇ ಮುಂದೆ ಇಂತಹ ಕುಚೇಷ್ಠೆಗಳನ್ನು ಮಾಡದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

Continue Reading

ದೇಶ

Drown In Water: ಭೀಕರ ದುರಂತ; ನಾಲ್ವರು ಮಕ್ಕಳು ಸೇರಿ ಐವರು ನೀರುಪಾಲು

Drown In Water:ಪುಣೆ ಎಸ್ಪಿ ಪಂಕಜ್ ದೇಶ್‌ಮುಖ್‌ ಈ ಬಗ್ಗೆ ಮಾಹಿತಿ ನೀಡಿದ್ದು, 2 ಶವಗಳನ್ನು ಹೊರತೆಗೆಯಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಎಲ್ಲಾ ಐದು ಜನರು ಪುಣೆ ಸಯ್ಯದ್ ನಗರಕ್ಕೆ ಸೇರಿದ ಒಂದೇ ಕುಟುಂಬದವರು ಎಂದು ಹೇಳಿದ್ದಾರೆ. ನಾವು 40 ವರ್ಷದ ಮಹಿಳೆ ಮತ್ತು 13 ವರ್ಷದ ಬಾಲಕಿಯ ಶವಗಳನ್ನು ವಶಪಡಿಸಿಕೊಂಡಿದ್ದೇವೆ. ಘಟನೆಯಲ್ಲಿ 6 ವರ್ಷದ ಇಬ್ಬರು ಬಾಲಕಿಯರು ಹಾಗೂ 4 ವರ್ಷದ ಬಾಲಕ ನಾಪತ್ತೆಯಾಗಿದ್ದಾರೆ.

VISTARANEWS.COM


on

Drown In Water
Koo

ಮುಂಬೈ:ಮಹಾರಾಷ್ಟ್ರದ ಲೋನಾವಾಲಾದಲ್ಲಿ ಭಾನುವಾರ ಎಡೆಬಿಡದೆ ಸುರಿಯುತ್ತಿರುವ ಮಳೆ(Heavy Rain)ಯಿಂದಾಗಿ ಭೂಶಿ ಅಣೆಕಟ್ಟು(Bhushi Dam) ತುಂಬಿ ಹರಿದ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ ಐವರು ನೀರಿನಲ್ಲಿ ಮುಳುಗಿ(Drown In Water) ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 1:30ಕ್ಕೆ ಘಟನೆ ನಡೆದಿದ್ದು, ಶೋಧ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ.

ಪುಣೆ ಎಸ್ಪಿ ಪಂಕಜ್ ದೇಶ್‌ಮುಖ್‌ ಈ ಬಗ್ಗೆ ಮಾಹಿತಿ ನೀಡಿದ್ದು, 2 ಶವಗಳನ್ನು ಹೊರತೆಗೆಯಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಎಲ್ಲಾ ಐದು ಜನರು ಪುಣೆ ಸಯ್ಯದ್ ನಗರಕ್ಕೆ ಸೇರಿದ ಒಂದೇ ಕುಟುಂಬದವರು ಎಂದು ಹೇಳಿದ್ದಾರೆ. ನಾವು 40 ವರ್ಷದ ಮಹಿಳೆ ಮತ್ತು 13 ವರ್ಷದ ಬಾಲಕಿಯ ಶವಗಳನ್ನು ವಶಪಡಿಸಿಕೊಂಡಿದ್ದೇವೆ. ಘಟನೆಯಲ್ಲಿ 6 ವರ್ಷದ ಇಬ್ಬರು ಬಾಲಕಿಯರು ಹಾಗೂ 4 ವರ್ಷದ ಬಾಲಕ ನಾಪತ್ತೆಯಾಗಿದ್ದಾರೆ. ಅವರು ಭೂಶಿ ಅಣೆಕಟ್ಟಿನಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಜಲಪಾತದಿಂದ ಕೆಳಕ್ಕೆ ಬಿದ್ದು ನೀರುಪಾಲಾಗಿದ್ದಾರೆ ಎಂದು ದೇಶಮುಖ್ ಹೇಳಿದ್ದಾರೆ.

ಎರಡು ವಾರಗಳ ಹಿಂದೆ ಜಮೀನಿನಲ್ಲಿ ನೀರು ತುಂಬಿದ್ದ ಆಳವಾದ ಗುಂಡಿಗೆ ಬಿದ್ದು ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ನಡೆದಿತ್ತು.. ಗುಂಡಿಗೆ ಬಿದ್ದ ಬಾಲಕಿಯನ್ನು ರಕ್ಷಿಸಲು ಹೋಗಿ ಇನ್ನಿಬ್ಬರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ನೀಲಮ್ಮ ಖಿಲಾರಹಟ್ಟಿ (16), ಮುತ್ತಪ್ಪ ಖಿಲಾರಹಟ್ಟಿ (24) ಹಾಗೂ ಶಿವು ಯಾಳವಾರ (25) ಮೃತರು.

ಹಡಲಗೇರಿ ಗ್ರಾಮದ ಚಿನ್ನಪ್ಪ ತಳವಾರ ಎಂಬುವವರ ಜಮೀನಿನಲ್ಲಿ ಎಮ್ಮೆ ಮೇಯಿಸಲು ಬಾಲಕಿ ನೀಲಮ್ಮ ಹೋಗಿದ್ದಳು. ಈ ವೇಳೆ ಎಮ್ಮೆಗೆ ನೀರು ಕುಡಿಸಲು ಗುಂಡಿ ಬಳಿ ಬಂದಾಗ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ಇದನ್ನು ಕಂಡು ಆಕೆಯನ್ನು ರಕ್ಷಣೆ ಮಾಡಲು ಬಂದ ಸಂಬಂಧಿಕ ಮುತ್ತಪ್ಪ ಖಿಲಾರಹಟ್ಟಿ ನೀರಿನಲ್ಲಿ ಸಿಲುಕಿದ್ದಾನೆ. ಅವರಿಬ್ಬರೂ ಹೊರ ಬರಲಾರದೇ ಪರದಾಡುತ್ತಿದ್ದಾಗ ಅವರನ್ನು ಕಾಪಾಡಲು ಹೋದ ಶಿವು ಯಾಳವಾರ ಕೂಡ ನೀರು ಪಾಲಾಗಿದ್ದ.

ಇದನ್ನೂ ಓದಿ: Indian Armed Forces: ಸಹಪಾಠಿಗಳು ಈ ಭಾರತೀಯ ಸೇನೆ ಮತ್ತು ನೌಕಾಪಡೆ ಮುಖ್ಯಸ್ಥರು; ಇದು ದೇಶದ ಇತಿಹಾಸದಲ್ಲೇ ಮೊದಲು!

Continue Reading
Advertisement
Rain Tragedy
ಪ್ರಮುಖ ಸುದ್ದಿ5 hours ago

Rain Tragedy: ಪ್ರವಾಸಿಗರ ಕಣ್ಣಮುಂದೆಯೇ ಜಲಪಾತದಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ 7 ಮಂದಿ; ಇಲ್ಲಿದೆ ವಿಡಿಯೊ

T20 World Cup 2024
ಪ್ರಮುಖ ಸುದ್ದಿ5 hours ago

T20 World Cup 2024 : ವೆಸ್ಟ್​ ಇಂಡೀಸ್​ನಲ್ಲಿ ಅಪಾಯಕಾರಿ ಚಂಡಮಾರುತದಲ್ಲಿ ಸಿಲುಕಿಕೊಂಡ ಚಾಂಪಿಯನ್ ಭಾರತ ತಂಡ

Rohit Sharma
ಪ್ರಮುಖ ಸುದ್ದಿ6 hours ago

Rohit Sharma : ತಲೆ ಪಕ್ಕದಲ್ಲೇ ಟ್ರೋಫಿ ಇಟ್ಟುಕೊಂಡು ನಿದ್ದೆ ಮಾಡಿದ ರೋಹಿತ್ ಶರ್ಮಾ

VSK Media Awards 2024
ಬೆಂಗಳೂರು7 hours ago

VSK Media Awards 2024: ಲೋಕಹಿತಕ್ಕಾಗಿ ಪತ್ರಿಕೋದ್ಯಮ ಶ್ರಮಿಸಬೇಕು: ಪ್ರಫುಲ್ಲ ಕೇತ್ಕರ್

NIA Raid
ದೇಶ7 hours ago

NIA Raid: ಹಿಜ್ಬು-ಉತ್‌-ತಹ್ರೀರ್‌ ಉಗ್ರ ಸಂಘಟನೆ ಜೊತೆ ನಂಟು-10 ಕಡೆಗಳಲ್ಲಿ NIA ರೇಡ್‌; ಶಂಕಿತ ಉಗ್ರರು ಅರೆಸ್ಟ್‌

Basavakalyan News
ಬೀದರ್‌7 hours ago

Basavakalyan News: ರಾತ್ರಿ ಮಣ್ಣಲ್ಲಿ ಹೂತಿದ್ದ ಮಗು ಬೆಳಗ್ಗೆ ಜೋಕಾಲಿಯಲ್ಲಿ ಪ್ರತ್ಯಕ್ಷ!

T20 World Cup
ಪ್ರಮುಖ ಸುದ್ದಿ7 hours ago

T20 World Cup 2024 : ವಿಶ್ವ ಚಾಂಪಿಯನ್ ಭಾರತ ತಂಡಕ್ಕೆ ಸಿಗಲಿದೆ ಪ್ರಧಾನಿ ಮೋದಿಯ ಭರ್ಜರಿ ಆತಿಥ್ಯ

Goldman of Bihar
ವೈರಲ್ ನ್ಯೂಸ್8 hours ago

Goldman of Bihar: ಈತ ಬಂಗಾರದ ಮನುಷ್ಯ! ಕೊರಳಲ್ಲಿದೆ 5 ಕೆಜಿ ಚಿನ್ನ! ಬೈಕ್‌ನಲ್ಲೂ ಇದೆ ಬಂಗಾರ!

Lacchi Poojarthi
ಕರ್ನಾಟಕ8 hours ago

Lacchi Poojarthi: ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ತಾಯಿ ನಿಧನ

T20 World Cup 2024
ಪ್ರಮುಖ ಸುದ್ದಿ8 hours ago

T20 World Cup 2024 : ವಿಶ್ವ ಕಪ್​ ಗೆದ್ದ ಭಾರತ ತಂಡಕ್ಕೆ ಬರೋಬ್ಬರಿ 125 ಕೋಟಿ ರೂ. ಬಹುಮಾನ ಘೋಷಿಸಿದ ಬಿಸಿಸಿಐ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ10 hours ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು15 hours ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ1 day ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ2 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು3 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ4 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

ಟ್ರೆಂಡಿಂಗ್‌