ಬೆಂಗಳೂರು: ಅಧಿಕ್ ರವಿಚಂದ್ರನ್ ನಿರ್ದೇಶನದ ʻಮಾರ್ಕ್ ಆಂಟೋನಿʼ (Silk Smitha) ಚಿತ್ರದಲ್ಲಿ ವಿಶಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್‌ಜೆ ಸೂರ್ಯ ಮತ್ತು ಸೆಲ್ವರಾಘವನ್ ಮಹತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸೆಪ್ಟೆಂಬರ್ 15ರಂದು ಸಿನಿಮಾ (mark antony tamil movie) ತೆರೆಗೆ ಬಂದಿದೆ. ಈ ಸಿನಿಮಾ ಟ್ರೈಲರ್ ರಿಲೀಸ್ ಮಾಡಿದಾಗ ಇದರಲ್ಲಿ ಸಿಲ್ಕ್ ಸ್ಮಿತಾ ನೋಡಿ ಸಿನಿಮಾ (junior Silk Smitha) ಪ್ರೇಮಿಗಳು ಥ್ರಿಲ್ ಆಗಿದ್ದರು. ಸಿನಿಮಾ ತಂಡ ಎಐ (Artificial Intelligence) ಬಳಸಿ ಸಿಲ್ಮ್ ಸ್ಮಿತಾರನ್ನು ಕ್ರಿಯೇಟ್ ಮಾಡಿರಬಹುದು ಎಂದು ಊಹೆ (Gandhi Vishnu Priya) ಮಾಡಿದ್ದರು. ಆದರೆ, ಇದು ಎಐ ತಂತ್ರಜ್ಞಾನ ಬಳಸಿದ ಸಿಲ್ಕ್ ಸ್ಮಿತಾ ಅಲ್ಲ. ಯುವ ನಟಿ ವಿಷ್ಣು ಪ್ರಿಯ ಗಾಂಧಿ ಎಂದು ತಿಳಿದು ಬಂದಿದೆ.
“ಮಾರ್ಕ್ ಆಂಟೋನಿ” ಟ್ರೈಲರ್ ಸೆಪ್ಟೆಂಬರ್ 3ರಂದು ಅನಾವರಣಗೊಂಡಿತು. 80ರ ದಶಕದಲ್ಲಿ ಭಾರತೀಯ ಚಿತ್ರರಂಗದಲ್ಲಿ ಅಳಿಸಲಾಗದ ಛಾಪು ಮೂಡಿಸಿದ ದಿವಂಗತ ನಟಿ ಸಿಲ್ಕ್ ಸ್ಮಿತಾ ಅವರಂತೆ ಹೋಲುವ ಈ ಜ್ಯೂನಿಯರ್ ಸಿಲ್ಕ್ ಸ್ಮಿತಾ ಕಂಡು ಜನರು ಅಚ್ಚರಿಗೆ ಒಳಗಾಗಿದ್ದರು. ವಿಷ್ಣು ಪ್ರಿಯಾ ಗಾಂಧಿ ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ ಹಾಗೂ ನಟಿ. ಜ್ಯೂನಿಯರ್ ಸಿಲ್ಕ್ ಸ್ಮಿತಾ ಎಂದೇ ಖ್ಯಾತಿ ಪಡೆದಿದ್ದಾರೆ. ತಿರುಪತಿಯ ಎಸ್‌ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಸಿನಿಮಾರಂಗದಲ್ಲಿ ಜ್ಯೂನಿಯರ್ ಸಿಲ್ಕ್ ಸ್ಮಿತಾ ಅಂತಲೇ ಜನಪ್ರಿಯರಾಗಿದ್ದಾರೆ. ಈ ಸಿನಿಮಾದಲ್ಲಿ ಸಿಲ್ಮ್ ಸ್ಮಿತಾ ಎಷ್ಟು ನಿಮಿಷ ಕಾಣಿಸಿಕೊಳ್ಳುತ್ತಾರೆ ಎಂಬುದು ಸಿನಿಮಾ ನೋಡಿದ ಮೇಲೆ ಗೊತ್ತಾಗಲಿದೆ.
ಇದನ್ನೂ ಓದಿ: Naseeruddin Shah: ದೇಶಭಕ್ತಿ ಸಿನಿಮಾ ಬಗ್ಗೆ ನಾಸಿರುದ್ದೀನ್ ಶಾ ಕಟು ನುಡಿ; ನಟಿ ಪಲ್ಲವಿ ಜೋಶಿ ಮಾರ್ಮಿಕ ಪ್ರತಿಕ್ರಿಯೆ
ಸಿನಿಮಾ ಜಗತ್ತು ಆಳಿದ್ದ ನಟಿ!
ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡಿದ ಸಿಲ್ಕ್ ಸ್ಮಿತಾ ಮೂಲ ಹೆಸರು ವಿಜಯಲಕ್ಷ್ಮಿ. 1960ರ ಡಿಸೆಂಬರ್ 2ರಂದು ಜನಿಸಿದರು. ಆ ನಂತರದ ದಿನಗಳಲ್ಲಿ ಸಿಲ್ಕ್ ಸ್ಮಿತಾ ಎಂದೇ ಫೇಮಸ್ ಆದರು. ಸಿಲ್ಕ್ ಸ್ಮಿತಾ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ ಮತ್ತು ಅದಕ್ಕಾಗಿಯೇ ಸಿಲ್ಕ್ ಬಾಲ್ಯದಲ್ಲಿ ತಮ್ಮ ಓದನ್ನು ಬಿಡಬೇಕಾಯಿತು.
ವರದಿಗಳ ಪ್ರಕಾರ, ಸಿಲ್ಕ್ ಸ್ಮಿತಾ ಅವರು ಕೇವಲ 14 ವರ್ಷದವರಾಗಿದ್ದಾಗ ಮದುವೆಯಾಗಿದ್ದರು ಮತ್ತು ಅವರು ಸಾಕಷ್ಟು ಕೌಟುಂಬಿಕ ಹಿಂಸೆಯನ್ನು ಎದುರಿಸಿದರು. ಸಿಲ್ಕ್ ಸ್ಮಿತಾ ತಮ್ಮ ಗಂಡನ ಮನೆಯಿಂದ ಓಡಿಹೋದ ನಂತರ ಮೇಕಪ್ ಕಲಾವಿದನಾಗಿದ್ದ ತಮ್ಮ ಸ್ನೇಹಿತನ ಮನೆ ಸೇರಿಕೊಂಡಿದ್ದರು. ಮೇಕಪ್ ಕಲಾವಿದರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ತಮಿಳು ನಿರ್ದೇಶಕ ವಿನು ಚಕ್ರವರ್ತಿ ಅವರು ಸಿಲ್ಕ್ ಸ್ಮಿತಾಗೆ ದೊಡ್ಡ ಬ್ರೇಕ್ ನೀಡಿದರು. 1979ರಲ್ಲಿ ತಮಿಳು ಚಲನಚಿತ್ರ ‘ವಂದಿಚಕ್ಕರಂ’ನಲ್ಲಿನ ಅವರ ಅದ್ಭುತ ಅಭಿನಯಕ್ಕಾಗಿ ಮೊದಲ ಬಾರಿಗೆ ಗಮನ ಸೆಳೆದರು. ಸಿಲ್ಕ್ ಸ್ಮಿತಾ ಅವರು 17 ವರ್ಷಗಳ ಕಾಲ ನಟಿಯಾಗಿ, ನೃತ್ಯಗಾತಿಯಾಗಿ ಮಿಂಚಿದರು. 450ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಸೆಪ್ಟೆಂಬರ್ 23, 1996ರಂದು ತಮ್ಮ 35ನೇ ವಯಸ್ಸಿನಲ್ಲಿ ನಿಗೂಢವಾಗಿ ಮೃತಪಟ್ಟರು. ಪೊಲೀಸರಿಗೆ ಸೂಸೈಡ್ ನೋಟ್ ಸಿಕ್ಕಿದೆ ಎಂದು ಹೇಳಲಾಗಿತ್ತು.