Site icon Vistara News

K.G.F Movie | ಇನ್ಸ್ಟಾ ಲೈವ್‌ನಲ್ಲಿ ಕೆಜಿಎಫ್‌ 3 ಸುಳಿವು ಕೊಟ್ಟ ಅರ್ಚನಾ?

K.G.F Movie

ಬೆಂಗಳೂರು: ಭಾರತದ ಚಿತ್ರರಂಗದಲ್ಲಿ ಕೆಜಿಎಫ್-1 (K.G.F Movie) ಹಾಗೂ ಕೆಜಿಎಫ್‌-2 ಎಂಬ ಎರಡು ಹೆಸರು ಇತಿಹಾಸ ಸೃಷ್ಟಿಸಿದೆ. ಈ ಎರಡು ಸರಣಿ ಚಿತ್ರಗಳು ಜಗತ್ತಿನಾದ್ಯಂತ ಅಲೆ ಎಬ್ಬಿಸಿದ್ದು, ಕನ್ನಡದ ಹೆಸರನ್ನು ಪಸರಿಸುವಂತೆ ಮಾಡಿತು. ಕೆಜಿಎಫ್ 2 ತೆರೆ ಕಂಡ ಮೇಲೆ ಪಾರ್ಟ್-3 ಬರಲಿದೆಯೇ? ಬಂದರೆ ಯಾವಾಗ..? ಎಂಬ ಪ್ರಶ್ನೆಗಳು ಅಭಿಮಾನಿಗಳಿಂದ ಕೇಳಿ ಬರುತ್ತಿತ್ತು. ಈಗ ಅದಕ್ಕೊಂದು ಸುಳಿವು ಸಿಕ್ಕಿದೆ.

ಆಗಾಗ ಕೆಜಿಎಫ್‌ ೩ರ ಕುರಿತು ಉಹಾಪೋಹಗಳು ಹಬ್ಬುತ್ತಲೇ ಇರುತ್ತವೆ. ಸೋಷಿಯಲ್‌ ಮೀಡಿಯಾಗಳಲ್ಲೂ ಇದರ ಬಗ್ಗೆ ಸುಳ್ಳು ಸುದ್ದಿಗಳು ಬಿತ್ತರಗೊಳ್ಳುತ್ತಿರುತ್ತವೆ. ಆದರೆ, ಇದೀಗ ರಾಕಿ ಬಾಯ್‌ ತಾಯಿಯಾಗಿ ಬಣ್ಣ ಹಚ್ಚಿರುವ ಅರ್ಚನಾ ಜೋಯಿಸ್ ಈ ಕುರಿತು ಹಿಂಟ್‌ ಒಂದನ್ನು ಕೊಟ್ಟಿದ್ದಾರೆ. ಇನ್ಸ್ಟಾಗ್ರಾಮ್‌ ಲೈವ್‌ನಲ್ಲಿ ಕೆಜಿಎಫ್ 3ರಲ್ಲೂ ನೀವೇ ಇರ್ತೀರಾ..? ಎಂಬ ಅಭಿಮಾನಿಯ ಪ್ರಶ್ನೆಗೆ ಹೌದು ನಾನೇ ಇರುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಅರ್ಚನಾ ಅವರ ಈ ಹೇಳಿಕೆಗೆ ಫ್ಯಾನ್ಸ್ ಖುಷಿ ಆಗಿದ್ದಾರೆ.

ಇದನ್ನೂ ಓದಿ | ಕೋಬ್ರಾ ಚಿತ್ರಕ್ಕಾಗಿ ಶ್ರೀನಿಧಿ ಶೆಟ್ಟಿಗೆ ಸಿಕ್ಕಿದ ಸಂಭಾವನೆ ಎಷ್ಟು ಗೊತ್ತಾ? ಕೆಜಿಎಫ್‌ಗಿಂತ ಡಬಲ್‌!

ನಿರ್ದೇಶಕ ಪ್ರಶಾಂತ್‌ ನೀಲ್‌ ಅವರ ಚಿತ್ರ ಕೆಜಿಎಫ್‌-2 ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಈ ಸಿನಿಮಾದಲ್ಲಿ ಸಂಜಯ್‌ ದತ್‌ ಅಧೀರ ಪಾತ್ರದಲ್ಲಿ ಮಿಂಚಿದ್ದರು. ಪ್ಯಾನ್‌ ಇಂಡಿಯಾ ಸಿನಿಮಾ ಆಗಿದ್ದು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಗೊಂಡಿತ್ತು. ಇದರ IMDb ರೇಟಿಂಗ್‌ 8.5 ಪಡೆದುಕೊಂಡಿತ್ತು.

ಇದನ್ನೂ ಓದಿ | ಜೂ.3ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಕೆಜಿಎಫ್‌ -2 ಲಭ್ಯ; ಹೆಚ್ಚುವರಿ ಹಣ ಪಾವತಿಸಬೇಕಿಲ್ಲ!

Exit mobile version