ಬೆಂಗಳೂರು : ‘ಅನ್ಬೇ ಶಿವಂ’, ʻಪುದುಪೆಟ್ಟೈʼ ಹೀಗೆ ಹಲವಾರು ತಮಿಳು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ ಹಿರಿಯ ನಿರ್ಮಾಪಕ ಕೆ. ಮುರಳೀಧರನ್ (K Muralidharan) ತಮಿಳುನಾಡಿನ ಕುಂಭಕೋಣಂನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಡಿಸೆಂಬರ್ 2 ಶುಕ್ರವಾರ ನಿಧನರಾಗಿದ್ದಾರೆ. ಕೆ. ಮುರಳೀಧರನ್ ಅವರು ತಮಿಳು ನಿರ್ಮಾಪಕರ ಮಂಡಳಿಯ ಅಧ್ಯಕ್ಷರೂ ಆಗಿ ಕಾರ್ಯನಿರ್ವಹಿಸಿದ್ದರು.
ಮುರಳಿಧರನ್ ಅವರು 199ರಲ್ಲಿ ತಮ್ಮ ಮೊದಲ ಚಿತ್ರದೊಂದಿಗೆ ತಮ್ಮ ಚಲನಚಿತ್ರ ನಿರ್ಮಾಣ ವೃತ್ತಿಯನ್ನು ಪ್ರಾರಂಭಿಸಿದರು. ʻಅರಣ್ಮನೈ ಕವಲನ್ʼ ಅವರ ಮೊದಲ ನಿರ್ಮಾಣದ ಚಿತ್ರ. ಈ ಸಿನಿಮಾಗೆ ಆರ್. ಶರತ್ ಕುಮಾರ್ ನಾಯಕರಾಗಿದ್ದರು.
ಇದನ್ನೂ ಓದಿ | Sunil Shende | ʻಶಾಂತಿʼ ಧಾರಾವಾಹಿ ಖ್ಯಾತಿಯ ನಟ ಸುನೀಲ್ ಶೇಂಡೆ ವಿಧಿವಶ
ಕೆ. ಮುರಳೀಧರನ್ ಲಕ್ಷ್ಮಿ ಮೂವಿ ಮೇಕರ್ಸ್ ಎನ್ನುವ ಸಿನಿಮಾ ನಿರ್ಮಾಣ ಹುಟ್ಟುಹಾಕಿದ್ದರು. ಲಕ್ಷ್ಮೀ ಮೂವಿ ಮೇಕರ್ಸ್ ತಮಿಳು ಸಿನಿಮಾರಂಗದ ಪ್ರಸಿದ್ಧ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಬ್ಯಾನರ್ ಅಡಿಯಲ್ಲಿ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
ಲಕ್ಷ್ಮೀ ಮೂವಿ ಮೇಕರ್ಸ್ ಸಂಸ್ಥೆಯಡಿ ಕಮಲ್ ಹಾಸನ್ ಜತೆ ʻಅನ್ಬೇ ಶಿವಂʼ, ನಟ ಕಾರ್ತಿಕ್ ಜತೆ ʻಗೋಕುಲತಿಲ್ ಸೀತೈʼ, ನಟ ದಳಪತಿ ವಿಜಯ್ ಜತೆ ʻಪ್ರಿಯಾಮುದನ್ʼ, ನಟ ಧನುಷ್ ಜತೆ ʻಪುದುಪೆಟ್ಟೈʼ, ನಟ ಅಜೀತ್ ಜತೆ ʻಉನ್ನೈ ತೇಡಿʼ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ | Pandit Pacha Saab | ಶ್ರೀರಾಮ ಕೋಟಿ ಬರೆದಿದ್ದ ಮುಸ್ಲಿಂ ಪಂಡಿತ ವಿಧಿವಶ