ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ ಬಹು ನಿರೀಕ್ಷಿತ ಚಿತ್ರ ಕಬ್ಜ ಸಿನಿಮಾ (Kabzaa Movie) ವಿಶ್ವಾದ್ಯಂತ ತೆರೆ ಕಂಡಿದೆ. ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ಕೂಡ ಕಾಣಿಸಿಕೊಳ್ಳುವುದರಿಂದ ಪ್ರೇಕ್ಷಕರನ್ನು ಕುತೂಹಲವಿತ್ತು. ಅಲ್ಲದೆ ಬಹುಭಾಷಾ ನಟಿ ಶ್ರಿಯಾ ಶರಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರು ಇವರನ್ನು ರೆಟ್ರೋ ಲುಕ್‌ನಲ್ಲಿ ನೋಡುವುದಕ್ಕೆ ಕಾದು ಕೂತಿದ್ದರು. ಪುನೀತ್ ರಾಜ್‌ಕುಮಾರ್ ಅವರ ಜನುಮದಿನದಂದೇ ಸಿನಿಮಾ ಬಿಡುಗಡೆಗೊಂಡಿದ್ದು, ಸಿನಿರಸಿಕರಲ್ಲಿ ಕುತೂಹಲ ಹೆಚ್ಚಾಗಿದೆ.
ಇಲ್ಲಿ ಉಪೇಂದ್ರ ಅರ್ಕೇಶ್ವರನಾಗಿ, ವಾಯುಸೇನೆಯ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಾರೆ. ಟ್ವೀಟರ್‌ನಲ್ಲಿ ‘ಕಬ್ಜ’ ಬಗ್ಗೆ ನೋಡುಗರು ಹೇಳಿದ್ದೇನು? ಇಲ್ಲಿದೆ ಮಾಹಿತಿ!
ಒಬ್ಬರು ಸಿನಿಮಾ ಬಗ್ಗೆ ʻʻನಾನು ಚಿತ್ರದ ಬಗ್ಗೆ ಏನನ್ನೂ ಬರೆಯಲು ಬಯಸುವುದಿಲ್ಲ ಎಂದು ನಾನು ಹೇಳಬಲ್ಲೆ, ಈ ಉಪ್ಪಿ ಸರ್ ಮತ್ತು ಇತರರು ಚಿತ್ರ ಬಿಡುಗಡೆಯ ಬಗ್ಗೆ ಹೇಗೆ ವಿಶ್ವಾಸ ಹೊಂದಿದ್ದಾರೆಂದು ನನಗೆ ಅರ್ಥವಾಗಲಿಲ್ಲ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Kabzaa Movie: ಕಬ್ಜ ರಿಲೀಸ್‌ಗೆ ಒಂದು ದಿನ ಬಾಕಿ: ತಿರುಪತಿಯತ್ತ ಚಿತ್ರತಂಡ ಪಯಣ
ಇನ್ನೊಬ್ಬರು ʻʻಕಬ್ಜ ಕನ್ನಡ ಚಿತ್ರರಂಗದ ಹೆಮ್ಮೆಯ ಸಿನಿಮಾ. ಆರ್.ಚಂದ್ರು ಅವರ ನಿರ್ದೇಶನ ಅದ್ಭುತವಾಗಿದೆ. ಉಪೇಂದ್ರ ಅವರ ನಟನೆಯು ಸಖತ್. ಸುದೀಪ್ ಅವರ ಆನ್-ಸ್ಕ್ರೀನ್ ಉಪಸ್ಥಿತಿ ಚೆನ್ನಾಗಿದೆ. ಶಿವಣ್ಣನ ಅಚ್ಚರಿಯ ಪ್ರವೇಶ ನನಗೆ ಗೂಸ್‌ಬಂಪ್ಸ್ ನೀಡಿತು. ಖಂಡಿತವಾಗಿ ಇದು 202ರ ಮೊದಲ ಬ್ಲಾಕ್‌ಬಸ್ಟರ್ ಸಿನಿಮಾ ಆಗಿದೆʼʼಎಂದು ಬರೆದುಕೊಂಡಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಮ್ಮೆ ಹೆಮ್ಮೆ ಪಡುವಂತಹ ಸಿನಿಮಾ ಮತ್ತೆ ಬಂದಿದೆ ಎಂದು ಬರೆದುಕೊಂಡಿದ್ದಾರೆ.
ಮತ್ತೊಬ್ಬರು “ಕೆಜಿಎಫ್ 1 ಮತ್ತು 2 ಅನ್ನು ನೋಡಿದವರು ‘ಕಬ್ಜ’ ಸಿನಿಮಾ ನೋಡುವುದಿಲ್ಲ. ಅದೇ ಸ್ಕ್ರೀನ್ ಪ್ಲೇ.. ಅದೇ ಎಡಿಟಿಂಗ್” ಎಂದು ನೆಗೆಟಿವ್ ಆಗಿ ಕಮೆಂಟ್ ಮಾಡಿದ್ದಾರೆ.
ವಿಶ್ವಾದ್ಯಂತ ಒಟ್ಟು 4000 ತೆರೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ತೆರೆ ಕಂಡಿದೆ. ಕಬ್ಜ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ. ಚಿತ್ರದಲ್ಲಿ ಉಪೇಂದ್ರ, ಸುದೀಪ್, ಶಿವರಾಜ್‌ಕುಮಾರ್, ಶ್ರೀಯಾ ಶರಣ್, ಕಬೀರ್ ದುಹಾನ್ ಸಿಂಗ್, ಪ್ರಮೋದ್ ಶೆಟ್ಟಿ, ನವಾಬ್ ಷಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ವಿತರಣಾ ಹಕ್ಕನ್ನು ಲೈಕಾ ಪ್ರೊಡಕ್ಷನ್ ಸಂಸ್ಥೆ ಹಲವಾರು ಕೋಟಿ ರೂ. ಕೊಟ್ಟು ಖರೀದಿಸಿದೆ. ಕೆಜಿಎಫ್’ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಕೆಲಸ ಮಾಡಿದ್ದರೆ, ‘ಕೆಜಿಎಫ್’ ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.