Site icon Vistara News

Kajal Aggarwal: ಹುಟ್ಟುಹಬ್ಬದಂದು ಮಗನ ಕ್ಯೂಟ್‌ ಫೋಟೊ ಹಂಚಿಕೊಂಡ ಕಾಜಲ್ ಅಗರ್ವಾಲ್

Kajal Aggarwal shares cute pic of son Neil

ಬೆಂಗಳೂರು: ನಟಿ ಕಾಜಲ್ ಅಗರ್ವಾಲ್ (Kajal Aggarwal) ಮಗ ನೀಲ್ ಒಂದು ವರ್ಷಕ್ಕೆ ಕಾಲಿಟ್ಟಿದ್ದಾನೆ. ಮಗ ನೀಲ್‌ನ ಕ್ಯೂಟ್‌ ಫೋಟೊವನ್ನು ನಟಿ ಹಂಚಿಕೊಂಡಿದ್ದಾರೆ. ಹಳದಿ ಶರ್ಟ್‌ನಲ್ಲಿ, ಡ್ರಾಯರ್‌ನಲ್ಲಿ ಕುಳಿತು ಪಾರ್ಕ್‌ನ ಮಧ್ಯದಲ್ಲಿ ‘1’ ಎಂದು ಬರೆದಿರುವ ಬಲೂನ್‌ನೊಂದಿಗೆ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾನೆ ನೀಲ್‌.

ಇನ್‌ಸ್ಟಾಗ್ರಾಮ್‌ನಲ್ಲಿ ಮಗನ ಫೋಟೊವನ್ನು ಹಂಚಿಕೊಂಡ ಕಾಜಲ್, “ನಮ್ಮ ಸನ್‌ಶೈನ್ ಹುಡುಗ 1ನೇ ವಸಂತಕ್ಕೆ ಕಾಲಿಟ್ಟʼʼ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಸೇರಿದಂತೆ ಸಿನಿ ಗಣ್ಯರು ಮಗನಿಗೆ ವಿಶ್‌ ಮಾಡಿದ್ದಾರೆ. ನಟರಾದ ನೇಹಾ ಧೂಪಿಯಾ ಮತ್ತು ಹಂಸಿಕಾ ಮೋಟ್ವಾನಿ ಕೂಡ ನೀಲ್‌ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.

ಶೀಘ್ರವೇ ನಟಿ ಕಾಜಲ್ ಇಂಡಿಯನ್ 2 ಚಿತ್ರದ ಶೂಟಿಂಗ್​ಗೆ ಮರಳಲಿದ್ದಾರೆ. ಕಮಲ್ ಹಾಸನ್ ನಾಯಕ ನಟರಾಗಿರುವ ಇಂಡಿಯನ್ 2ಗಾಗಿ (Indian 2) ಕಾಜಲ್ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ನಟಿ ಕುದುರೆ ಸವಾರಿ ಕಲಿಯುತ್ತಿರುವ ದೃಶ್ಯ ಕೂಡ ವೈರಲ್ ಆಗಿತ್ತು. ಇತ್ತೀಚೆಗಷ್ಟೇ ಚಿತ್ರ ತನ್ನ ಮೊದಲ ಶೆಡ್ಯೂಲ್ ಮುಗಿಸಿದೆ. ವಡಿವೇಲು, ರಾಧಿಕಾ ಶರತ್ಕುಮಾರ್ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ

ಲೈಕಾ ಪ್ರೊಡಕ್ಷನ್ಸ್ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಎಂಎಂ ಕೀರವಾಣಿ ಸಂಗೀತ ನೀಡುತ್ತಿದ್ದಾರೆ. ಕಾಜಲ್ ಅಗರ್ವಾಲ್ ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಕಳೆದ 1 ವರ್ಷ ಬ್ರೇಕ್ ತೆಗೆದುಕೊಂಡಿದ್ದರು. ಕೊನೆಯದಾಗಿ ಆಚಾರ್ಯ ಚಿತ್ರದಲ್ಲಿ ನಟಿಸಿದ್ದರು. ಕಾರಣಾಂತರಗಳಿಂದ ಅವರ ಪಾತ್ರವನ್ನು ಆ ಸಿನಿಮಾದಿಂದ ನಿರ್ದೇಶಕ ಮತ್ತು ನಿರ್ಮಾಪಕರು ತೆಗೆದು ಹಾಕಿದ್ದಾರೆ. ಹೆಸರಿಡದ ಅನಿಲ್ ರವಿಪುಡಿ ಚಿತ್ರ, ಹಿಂದಿ ಚಿತ್ರ ಮತ್ತು ಇನ್ನೊಂದು ತಮಿಳು ಚಿತ್ರವೂ ಅವರ ಕೈಯಲ್ಲಿ ಇದೆ.

ಕಾಜಲ್ ಅಗರ್ವಾಲ್ ಪೋಸ್ಟ್‌

ಇದನ್ನೂ ಓದಿ: Kajal Aggarwal: ಹಿಂದಿ ಚಿತ್ರರಂಗದಲ್ಲಿ ‘ನೈತಿಕತೆ, ಮೌಲ್ಯಗಳು, ಶಿಸ್ತು’ ಇಲ್ಲ ಎಂದು ಕಾಜಲ್ ಅಗರ್ವಾಲ್ ಹೇಳಿದ್ದೇಕೆ?

ಕಾಜಲ್ 2007ರ ʻಲಕ್ಷ್ಮಿ ಕಲ್ಯಾಣಂʼ ಚಿತ್ರದ ಮೂಲಕ ತೆಲುಗು ಚಲನಚಿತ್ರಕ್ಕೆ ಪದಾರ್ಪಣೆ ಮಾಡಿದರು. ಮಗಧೀರ, ಆರ್ಯ-2 ನಂತಹ ಹಿಟ್‌ ಸಿನಿಮಾಗಳಲ್ಲಿ ಕಾಣಿಸಿಕೊಂಡಳು. ಹಿಂದಿಯಲ್ಲಿ, ಅಜಯ್ ದೇವಗನ್ ಜತೆಗೆ ರೋಹಿತ್ ಶೆಟ್ಟಿ ಅವರ ಸಿಂಗಮ್‌ನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಹೆಚ್ಚು ಖ್ಯಾತಿ ಗಳಿಸಿದರು.

Exit mobile version