Site icon Vistara News

Kamal Haasan: ಇಂಡಿಯನ್ 2 ಚಿತ್ರೀಕರಣಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಕಮಲ್‌ ಹಾಸನ್‌: ವಿಡಿಯೊ ವೈರಲ್‌!

Kamal Haasan ARRIVES AT INDIAN 2 SHOOTING

ಬೆಂಗಳೂರು: ಬಿಗ್ ಬಾಸ್ ತಮಿಳು ಸೀಸನ್ 6ರ ನಂತರ ಕಮಲ್‌ ಹಾಸನ್‌ (Kamal Haasan) ಇಂಡಿಯನ್ 2 ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಶಂಕರ್ ನಿರ್ದೇಶನದ ಈ ಚಿತ್ರ ತಿರುಪತಿ ಮತ್ತು ಗಂಡಿಕೋಟಾದಲ್ಲಿ ಚಿತ್ರೀಕರಣವಾಗುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ ಕಮಲ್ ಹಾಸನ್ ಅವರು ಶೂಟಿಂಗ್‌ಗಾಗಿ ತಿರುಪತಿಯಿಂದ ಗಂಡಿಕೋಟಾಗೆ ಹೆಲಿಕಾಪ್ಟರ ಮೂಲಕ ಬಂದಿಳಿದಿದ್ದಾರೆ ಎನ್ನಲಾಗುತ್ತಿದೆ. ಅದಕ್ಕೆ ಸಂಬಂಧಿಸಿದ ವಿಡಿಯೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಕಮಲ್ ಹಾಸನ್ ಇಂಡಿಯನ್‌- 2 ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ನಟ ಪ್ರತಿದಿನ ಇಂಡಿಯನ್ 2 ಶೂಟಿಂಗ್ ಸ್ಪಾಟ್‌ಗೆ ಆಗಮಿಸುತ್ತಿದ್ದಾರೆ. ವಿಕ್ರಮ್ ನಟ ಮತ್ತು ಅವರ ಸ್ಟೈಲಿಸ್ಟ್ ಅಮೃತಾ ರಾಮ್ ಹೆಲಿಕಾಪ್ಟರ್ ಹತ್ತುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ನಟ ಕಮಲ್‌ಗೆ ನಾಯಕಿಯಾಗಿ ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: Kamal Haasan : ಲೋಕಸಭೆ ಚುನಾವಣೆಯಲ್ಲಿ ನಾನೇ ಕಾಂಗ್ರೆಸ್ ಅಭ್ಯರ್ಥಿ ಯಾಕಾಗಬಾರದು? ಕಮಲ ಹಾಸನ್‌

ಇದನ್ನು ಓದಿ: Kamal Haasan | ಕಮಲ್‌ ಹಾಸನ್‌ ನಟನೆಯ ಇಂಡಿಯನ್‌-2 ಸಿನಿಮಾಗೆ ರಕುಲ್ ಪ್ರೀತ್ ಸಿಂಗ್ ನಾಯಕಿ

ಇಂಡಿಯನ್ 2ನಲ್ಲಿ ಸಿದ್ಧಾರ್ಥ್, ಗುಲ್ಶನ್ ಗ್ರೋವರ್, ದಿವಂಗತ ನೆಡುಮುಡಿ ವೇಣು, ದೆಹಲಿ ಗಣೇಶ್, ಸಮುದ್ರಕನಿ, ಬಾಬಿ ಸಿಂಹ, ಪ್ರಿಯಾ ಭವಾನಿ ಶಂಕರ್ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ಜಂಟಿಯಾಗಿ ನಿರ್ಮಿಸುತ್ತಿದೆ. ಚಿತ್ರದ ಹಾಡುಗಳು ಮತ್ತು ಮೂಲ ಸಂಗೀತವನ್ನು ಅನಿರುದ್ಧ್ ರವಿಚಂದರ್ ಸಂಯೋಜಿಸಿದ್ದಾರೆ.

Exit mobile version