Site icon Vistara News

Kamal Haasan: ಕಮಲ್‌ ಹಾಸನ್‌-ಮಣಿರತ್ನಂ ಕಾಂಬೋ ಸಿನಿಮಾ; ಫಸ್ಟ್‌ ಲುಕ್‌ ಔಟ್‌!

Kamal Haasan KH 234 1st look

ಬೆಂಗಳೂರು: ಕಮಲ್ ಹಾಸನ್ (Kamal Haasan) ಮತ್ತು ಮಣಿರತ್ನಂ 33 ವರ್ಷಗಳ ‘KH 234’ ಸಿನಿಮಾಗಾಗಿ ಕೈ ಜೋಡಿಸಿದ್ದಾರೆ. ಈ ಸಿನಿಮಾಗೆ ತಾತ್ಕಾಲಿಕವಾಗಿ ‘KH 234’ ಎಂದು ಶೀರ್ಷಿಕೆ ಇಡಲಾಗಿದ್ದು, ಚಿತ್ರದ ಶೀರ್ಷಿಕೆಯನ್ನು ನವೆಂಬರ್ 6ರಂದು ಸಂಜೆ 5 ಗಂಟೆಗೆ ಪ್ರಕಟಿಸಲಾಗುವುದು ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಅದಕ್ಕೂ ಮುನ್ನ, ಕಮಲ್ ಹಾಸನ್ ತಮ್ಮ ಸೋಷಿಯಲ್‌ ಮೀಡಿಯಾ ಮೂಲಕ ‘ಕೆಹೆಚ್ 234’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿದ್ದಾರೆ. ಎಆರ್ ರೆಹಮಾನ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಸದ್ಯಕ್ಕೆ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಸಂಪೂರ್ಣ ತಾರಾಗಣ ಮತ್ತು ಸಿಬ್ಬಂದಿಯನ್ನು ಪ್ರಕಟಿಸಲಾಗುವುದು ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಸದ್ಯ ನಿರ್ದೇಶಕ ಶಂಕರ್ ಅವರ ‘ಇಂಡಿಯನ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದಾರೆ ಕಮಲ್ ಹಾಸನ್. ಇತ್ತೀಚೆಗೆ ‘ಇಂಡಿಯನ್ 2’ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಕೂಡ ಔಟ್‌ ಆಗಿತ್ತು. ಕಮಲ್‌ ಅವರ ಜನುಮದಿನದ ಒಂದು ದಿನ ಮುಂಚಿತವಾಗಿ, ಮಣಿರತ್ನಂ ಅವರ ಮುಂಬರುವ ಚಿತ್ರದ ಫಸ್ಟ್-ಲುಕ್ ಪೋಸ್ಟರ್ ಅನಾವರಣಗೊಳಿಸಿದ್ದಾರೆ ಚಿತ್ರತಂಡ.

ಕಮಲ್ ಹಾಸನ್ ಮತ್ತು ಮಣಿರತ್ನಂ 33 ವರ್ಷಗಳ ಹಿಂದೆ ಐಕಾನಿಕ್ ಪ್ರಾಜೆಕ್ಟ್ ‘ನಾಯಕನ್’ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಎವರಿಗ್ರೀನ್ ಕ್ಲಾಸಿಕ್ ಸಿನಿಮಾ ಆಗಿತ್ತು. ಇದೀಗ ಮತ್ತೆ ಇಬ್ಬರು ಈ ಸಿನಿಮಾ ಮೂಲಕ ಕೈ ಜೋಡಿಸಿದ್ದಾರೆ. ‘ಕೆಎಚ್ 234’ ಸಿನಿಮಾವನ್ನು ರಾಜಕಮಲ್ ಫಿಲಂಸ್ ಇಂಟರ್‌ನ್ಯಾಶನಲ್, ಮದ್ರಾಸ್ ಟಾಕೀಸ್, ರೆಡ್ ಜೈಂಟ್ ಮೂವೀಸ್, ಆರ್ ಮಹೇಂದ್ರನ್ ಮತ್ತು ಶಿವ ಅನಂತ್ ಜಂಟಿಯಾಗಿ ನಿರ್ಮಿಸಿದ್ದಾರೆ. ಎ ಆರ್ ರೆಹಮಾನ್ ಸಂಗೀತ , ರವಿ ಕೆ ಚಂದ್ರನ್ ಛಾಯಾಗ್ರಹಣ, ಶ್ರೀಕರ್ ಪ್ರಸಾದ್ ಸಂಕಲನ ಚಿತ್ರಕ್ಕಿದೆ.

ಇದನ್ನೂ ಓದಿ: Kamal Haasan : ಇಂಡಿಯನ್-2ಗೆ ಕಿಚ್ಚನ ಸಾಥ್‌; ನಾಳೆ ರಿಲೀಸ್ ಆಗ್ತಿದೆ ಫಸ್ಟ್ ಗ್ಲಿಂಪ್ಸ್

ಇಂಡಿಯನ್‌ 2

ತಮಿಳಿನ ಖ್ಯಾತ ನಿರ್ದೇಶಕ ಎಸ್ ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ‘ಇಂಡಿಯನ್ 2’ (INDIAN 2) ಪ್ರೇಕ್ಷಕರಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಸಿದ್ಧಾರ್ಥ್, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ಪ್ರಿಯಾ ಭವಾನಿ ಶಂಕರ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ನೆಡುಮುಡಿ ವೇಣು, ವಿವೇಕ್, ಸಮುದ್ರಖನಿ, ಬಾಬಿ ಸಿಂಹ, ಗುರು ಸೋಮಸುಂದರಂ, ದೆಹಲಿ ಗಣೇಶ್, ಜಯಪ್ರಕಾಶ್‌ ಸೇರಿ ಮನೋಬಾಲಾ, ವೆನ್ನೆಲ ಕಿಶೋರ್, ದೀಪಾ ಶಂಕರ್ ಅವರ ದೊಡ್ಡ ತಾರಾಗಣವೇ ಇದೆ. ಅನಿರುದ್ಧ್ ರವಿಚಂದರ್ ಸಂಗೀತ, ರವಿವರ್ಮನ್ ಮತ್ತು ರತ್ನವೇಲು ಅವರ ಕ್ಯಾಮರಾ ವರ್ಕ್, ಎ. ಶ್ರೀಕರ್ ಪ್ರಸಾದ್ ಅವರ ಎಡಿಟಿಂಗ್ ಇರಲಿದೆ.ಇಂಡಿಯನ್ 2 ಲುಕ್‌ಗಾಗಿ ಕಮಲ್ ಸಾಕಷ್ಟು ಶ್ರಮ ವಹಿಸಿಸುತ್ತಿದ್ದಾರೆ. ಕಳೆದ ವರ್ಷ, ಬರಹಗಾರ ಜಯಮೋಹನ್ ಅವರು ಸೆಟ್‌ಗಳಲ್ಲಿ ಕಮಲ್ ಹಾಸನ್ ಇರುವ ಬಗೆಯನ್ನು ಬಣ್ಣಿಸಿದ್ದರು.ಈ ಸಿನಿಮಾದಲ್ಲಿ ಕಮಲ್ ಹಾಸನ್ ದ್ವಿಪಾತ್ರಗಳಲ್ಲಿ ನಟಿಸಲಿದ್ದಾರೆ ಎಂಬುದಾಗಿಯೂ ವರದಿಯಾಗಿದೆ. ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಮತ್ತು ರಾಕುಲ್ ಪ್ರೀತ್ ಸಿಂಗ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Exit mobile version