Site icon Vistara News

Kamal Haasan: ʻ233ನೇʼ ಸಿನಿಮಾದ ಅಪ್‌ಡೇಟ್‌ ಹಂಚಿಕೊಂಡ ಕಮಲ್‌ ಹಾಸನ್‌!

Kamal Haasan 'KH233' teaser Out

ಬೆಂಗಳೂರು: ಜುಲೈ 4 ರಂದು ಕಮಲ್ ಹಾಸನ್ (Kamal Haasan) ಹೊಸ ಸಿನಿಮಾ ಘೋಷಿಸಿದ್ದಾರೆ. ತಾತ್ಕಾಲಿಕವಾಗಿ ಈ ಸಿನಿಮಾಗೆ ‘HK233’ ಎಂಬ ಶೀರ್ಷಿಕೆಯನ್ನೂ ನೀಡಿದ್ದಾರೆ. ಖ್ಯಾತ ನಿರ್ದೇಶಕ ಎಚ್​. ವಿನೋದ್ ಜತೆ ನಟ ಕೈ ಜೋಡಿಸಿದ್ದಾರೆ. ಈ ಸಿನಿಮಾ ರಾಜಕೀಯ ವಿಷಯವನ್ನು ಆಧರಿಸಿದೆ. ಇದೀಗ ಈ ಸಿನಿಮಾ ಟೀಸರ್ ಮೂಲಕ ಅನೌನ್ಸ್‌ ಮಾಡಿದ್ದಾರೆ.

ಕಮಲ್‌ ಹಾಸನ್‌ ಅವರ 233 ನೇ ಸಿನಿಮಾದಲ್ಲಿ “ರೈಸ್ ಟು ರೂಲ್ʼʼ ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಕಮಲ್​ ಹಾಸನ್​ ಅವರು ಸದ್ಯ ನಿರ್ದೇಶಕ ಶಂಕರ್​ ಜತೆ ‘ಇಂಡಿಯನ್​ 2’ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರ ಪೂರ್ಣಗೊಂಡ ಬಳಿಕ ಅವರು ಸಂಪೂರ್ಣವಾಗಿ ರಾಜಕೀಯದ ಮೇಲೆ ಗಮನ ಹರಿಸಬಹುದು ಎಂದು ಹೇಳಲಾಗಿತ್ತು. ಆದರೀಗ ‘ಇಂಡಿಯನ್​ 2’ ಬಳಿಕ ಎಚ್​. ವಿನೋದ್​ ಜತೆಗಿನ ಸಿನಿಮಾದಲ್ಲಿ ಕಮಲ್​ ಹಾಸನ್​ ನಟಿಸುವುದು ಖಚಿತವಾಗಿದೆ.

ಈ ಚಿತ್ರವನ್ನು ಕಮಲ್ ಮತ್ತು ಆರ್ ಮಹೇಂದ್ರನ್ ತಮ್ಮ ರಾಜ್ ಕಮಲ್ ಫಿಲಂಸ್ ಇಂಟರ್ ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಇದಕ್ಕೂ ಮೊದಲು, ಎಚ್ ವಿನೋದ್ ಅವರು‌ ಕಮಲ್‌ ಹಾಸನ್ ಅವರೊಂದಿಗೆ ಸಂಭಾಷಣೆಯಲ್ಲಿ ತೊಡಗಿರುವ ಸೆಟ್‌ನಲ್ಲಿದ್ದ ಚಿತ್ರವನ್ನು ಹಂಚಿಕೊಂಡಿದ್ದರು. “ನಿಮ್ಮೊಂದಿಗೆ ಕೆಲಸ ಮಾಡಲು ನನಗೆ ಉತ್ತಮ ಅವಕಾಶವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಸರ್” ಎಂದು ಅವರು ಬರೆದುಕೊಂಡಿದ್ದರು.  ಈ ಸಿನಿಮಾದ ಬಳಿಕ ಕಮಲ್​ ಹಾಸನ್​ ಅವರು ಮಣಿರತ್ನಂ ಜತೆ ಒಂದು ಸಿನಿಮಾ ಮಾಡಲಿದ್ದಾರೆ. ಈ ಚಿತ್ರಕ್ಕೆ ಎ.ಆರ್​. ರೆಹಮಾನ್​ ಸಂಗೀತ ನೀಡಲಿದ್ದಾರೆ.

ಇದನ್ನೂ ಓದಿ: Kamal Haasan: ಕಮಲ್‌ ಹಾಸನ್‌ ಸುದ್ದಿ ಬೆನ್ನಲ್ಲೇ ಬ್ಯಾಡ್‌ ನ್ಯೂಸ್‌ ಕೊಟ್ಟ ʻಪ್ರಾಜೆಕ್ಟ್- ಕೆʼ ಸಿನಿಮಾ ತಂಡ!

ವರದಿಗಳ ಪ್ರಕಾರ, ಕಮಲ್ ಹಾಸನ್ ತಮ್ಮ ಮುಂದಿನ ಚಿತ್ರಕ್ಕಾಗಿ ಮಹೇಶ್ ನಾರಾಯಣನ್ ಅವರೊಂದಿಗೆ ಕೈಜೋಡಿಸಲಿದ್ದಾರೆ. ಈ ಹಿಂದೆ, ಹೊಸ ಯೋಜನೆಗಾಗಿ ನಿರ್ದೇಶಕ ಪಾ ರಂಜಿತ್ ಅವರೊಂದಿಗೆ ಕೈಜೋಡಿಸುವುದಾಗಿ ಅವರು ಬಹಿರಂಗಪಡಿಸಿದ್ದರು.

Exit mobile version