Site icon Vistara News

Kamal Haasan: ಕಮಲ್ ಹಾಸನ್ ಜನುಮದಿನಕ್ಕೆ ಮತ್ತೊಂದು ಸೂಪರ್‌ ಹಿಟ್‌ ಸಿನಿಮಾ ಮರು ಬಿಡುಗಡೆ!

Kamal Haasan Nayakan

ಬೆಂಗಳೂರು: ಮಣಿರತ್ನಂ ನಿರ್ದೇಶನದ ಕಮಲ್ ಹಾಸನ್ (Kamal Haasan starrer Nayakan) ಅಭಿನಯದ `ನಾಯಕನ್’ ನವೆಂಬರ್ 3ರಂದು ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಯಾಗಲಿದೆ. ಕಮಲ್ ಹಾಸನ್ ಜನುಮದಿನದ ಪ್ರಯುಕ್ತ ಈ ಸಿನಿಮಾ ರಿ ರಿಲೀಸ್‌ ಆಗುತ್ತಿದೆ. ಈ ಸಿನಿಮಾದಲ್ಲಿ ಶರಣ್ಯ ಮತ್ತು ಕಾರ್ತಿಕಾ ಕೂಡ ಕಾಣಿಸಿಕೊಂಡಿದ್ದರು. ಜನಗರಾಜ್, ವಿಜಯನ್, ಎಂ.ವಿ. ವಾಸುದೇವ ರಾವ್, ದೆಹಲಿ ಗಣೇಶ್, ನಿಜಲ್ಗಲ್ ರವಿ, ನಾಸರ್ ಮತ್ತು ತಾರಾ ಪೋಷಕ ಪಾತ್ರಗಳಲ್ಲಿದ್ದಾರೆ. ʻನಾಯಕನ್ʼ ಸಿನಿಮಾವು ಹಾಲಿವುಡ್ ಕ್ಲಾಸಿಕ್ ‘ದಿ ಗಾಡ್‌ಫಾದರ್’ ನಿಂದ ಪ್ರೇರಿತವಾಗಿದ್ದು, ಬಾಂಬೆ ಮೂಲದ ಭೂಗತ ಜಗತ್ತಿನ ಡಾನ್ ವರದರಾಜನ್ ಮುದಲೀರ್ ಅವರ ಜೀವನವನ್ನು ಆಧರಿಸಿದೆ. ‘ನಾಯಕನ್’ ಬಿಡುಗಡೆಯಾಗಿ 36 ವರ್ಷಗಳ ನಂತರ 4ಕೆ ರೂಪದಲ್ಲಿ ಮರು ಬಿಡುಗಡೆಗೆ ಸಿದ್ಧವಾಗಿದೆ ಎಂದು ಘೋಷಿಸಲಾಗಿದೆ.

ಚಲನಚಿತ್ರ ಮಂದಿರಗಳಲ್ಲಿ ಇತ್ತೀಚೆಗೆ ಹೀರೊಗಳ ಹಳೆಯ ಸೂಪರ್‌ ಹಿಟ್‌ ಸಿನಿಮಾಗಳನ್ನು ಮರು-ಬಿಡುಗಡೆ ಮಾಡುವುದು ಕಾಮನ್‌ ಆಗಿದೆ. ಹೊಸ ಚಲನಚಿತ್ರಗಳು ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗುತ್ತಿರುವ ಕಾರಣ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆತರಲು ಹಿಂದಿನ ಜನಪ್ರಿಯ ತಾರೆಯರ ಜನ್ಮ ವಾರ್ಷಿಕೋತ್ಸವದಂದು ವಿಶೇಷ ಪ್ರದರ್ಶನಗಳನ್ನು ನಡೆಸುತ್ತಿವೆ.

‘ನಾಯಕನ್’ ಸಿನಿಮಾ ವಿತರಕರು ಇತ್ತೀಚೆಗೆ ಚಿತ್ರದ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದಾರೆ. ಸಿನಿಮಾವನ್ನು ತಮಿಳುನಾಡು, ಕರ್ನಾಟಕ ಮತ್ತು ಕೇರಳದಾದ್ಯಂತ ಎಲ್ಲ ಪ್ರಮುಖ ನಗರಗಳಲ್ಲಿ ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ. ಸೂಪರ್ ಹಿಟ್ ಚಿತ್ರ ‘ನಾಯಕನ್’ ಮೂರು ರಾಷ್ಟ್ರೀಯ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ. 1988ರಲ್ಲಿ ಆಸ್ಕರ್ ಪ್ರಶಸ್ತಿಗಳಿಗಾಗಿ ನಾಮೀನೇಟ್ ಆಗಿತ್ತು.

“ನಾವು ಈ ಹಿಂದೆ ಹಳೆಯ ಹಿಟ್ ಚಿತ್ರಗಳ ಪ್ರದರ್ಶನವನ್ನು ಆಯೋಜಿಸಿದ್ದೇವೆ. ಆದರೆ ಅದು ಸೀಮಿತ ಪ್ರಮಾಣದಲ್ಲಿ ಇತ್ತು. ಆದ್ದರಿಂದ ಕಾರ್ಯಸಾಧ್ಯವಾಗಿರಲಿಲ್ಲ. ಅಮಿತಾಭ್‌ ಬಚ್ಚನ್ ಅವರ ಸಿನಿಮಾಗಳೂ ಮತ್ತೆ ಮರು ಬಿಡುಗಡೆಯಾದಾಗ ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದ್ದರಿಂದ ನಾವು ಸ್ಕ್ರೀನ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಿದೆವುʼʼ ಎಂದು INOX ಲೀಸರ್‌ನ ಮುಖ್ಯ ಪ್ರೋಗ್ರಾಮಿಂಗ್ ಅಧಿಕಾರಿ ರಾಜೇಂದ್ರ ಸಿಂಗ್ ಜ್ಯಾಲಾ ಹಿಂದಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಇದನ್ನೂ ಓದಿ: Kamal Haasan: ಸನಾತನ ಧರ್ಮದ ವಿಷಯದಲ್ಲಿ ‘ಮಗು’ ಉದಯನಿಧಿ ಮೇಲೆ ದಾಳಿ ಎಂದ ಕಮಲ್‌ ಹಾಸನ್

ಕಮಲ್‌ ಕೈಯಲ್ಲಿ ಸಾಲು ಸಾಲು ಸಿನಿಮಾಗಳು

ಸದ್ಯ ಕಮಲ್‌ ಅವರ ಕೈಯಲ್ಲಿ ನಾಲ್ಕು ಪ್ರಾಜೆಕ್ಟ್‌ಗಳಿವೆ. ಅವುಗಳಲ್ಲಿ ಯಾವುದೂ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ನಾಗ್ ಅಶ್ವಿನ್ ಅವರ ಮುಂದಿನ ಚಿತ್ರ ಕಲ್ಕಿಯಲ್ಲಿ (Kalki cinema) ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅಮಿತಾಭ್ ಬಚ್ಚನ್, ಪ್ರಭಾಸ್, ದೀಪಿಕಾ ಪಡುಕೋಣೆ ಇತರ ಪ್ರಮುಖ ತಾರೆಗಳು ಇದ್ದಾರೆ. ಎಸ್ ಶಂಕರ್ ಅವರ 1996ರ ಚಲನಚಿತ್ರದ ಮುಂದುವರಿದ ಭಾಗವಾದ ಇಂಡಿಯನ್-2 ಸಿನಿಮಾದಲ್ಲಿಯೂ ಕಮಲ್‌ ಇದ್ದಾರೆ. ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಸಹ ನಡೆಯುತ್ತಿದೆ. ಇವುಗಳ ಹೊರತಾಗಿ H. ವಿನೋದ್ ಅವರೊಂದಿಗೆ ಒಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ, ಇದು ತಾತ್ಕಾಲಿಕವಾಗಿ ʻKH233- ರೈಸ್ ಟು ರೂಲ್ʼ ಎಂದು ಹೆಸರಿಸಲಾಗಿದೆ. ಕಮಲ್ ಹಾಸನ್ ಅವರು KH234ಗಾಗಿ 37 ವರ್ಷಗಳ ನಂತರ ಮಣಿರತ್ನಂ ಅವರೊಂದಿಗೆ ಮತ್ತೆ ಒಂದಾಗುತ್ತಿದ್ದಾರೆ. ಇದರಲ್ಲಿ ದುಲ್ಕರ್ ಸಲ್ಮಾನ್, ತ್ರಿಷಾ ಮತ್ತು ಜಯಂ ರವಿ ಕೂಡ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

Exit mobile version