Site icon Vistara News

Kamal Haasan: ಕಮಲ್‌ ಹಾಸನ್‌ ʻಪುಷ್ಪಕ ವಿಮಾನʼ ಮರು ಬಿಡುಗಡೆ; ಕನ್ನಡ ಪೋಸ್ಟರ್‌ ಮಾಯ!

Kamal Haasan pushpak vimana

ಬೆಂಗಳೂರು: ಮೂಕಿ ಚಿತ್ರ, 80ರ ದಶಕದ ಎವರ್‌ಗ್ರೀನ್‌ ಕಮಲ್‌ ಹಾಸನ್‌ (Kamal Haasan) ಸಿನಿಮಾ ʻಪುಷ್ಪಕ ವಿಮಾನʼ (pushpak vimana) ಸಿನಿಮಾವನ್ನು ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್‌ ನಿರ್ದೇಶಿಸಿದ್ದರು. 1987ರಲ್ಲಿ ತೆರೆಕಂಡಿದ್ದ ‘ಪುಷ್ಪಕ ವಿಮಾನ’ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಅದ್ಭುತ ಯಶಸ್ಸು ಕಂಡಿತ್ತು. ಇದೀಗ ಕಮಲ್‌ ಹಾಸನ್‌ ಮತ್ತೊಮ್ಮೆ ಸಿನಿ ರಸಿಕರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆ, ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ (Raaj Kamal Films International ) ಈ ಸಿನಿಮಾವನ್ನು ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆ ಮಾಡುತ್ತಿದೆ. ಈ ಬಗ್ಗೆ ಕಮಲ್‌ ಹಾಸನ್‌ ಟ್ವೀಟ್‌ ಮಾಡಿದ್ದಾರೆ.

ಕಮಲ್ ಹಾಸನ್, ಅಮಲಾ ಅಕ್ಕಿನೇನಿ, ಪ್ರತಾಪ್ ಪೋಥೆನ್, ಟಿನು ಆನಂದ್ ಮತ್ತು ಸಮೀರ್ ಖಖ್ಖರ್‌ ಅವರಂತಹ ಕಲಾವಿದರು ಈ ಸಿನಿಮಾದಲ್ಲಿ ಇದ್ದರು. ಕನ್ನಡದಲ್ಲಿ ಪುಷ್ಪಕ ವಿಮಾನ ಎಂದು 80ರ ದಶಕಲ್ಲಿ ರಿಲೀಸ್‌ ಆಯಿತು. ಬೆಂಗಳೂರಿನ ವಿಂಡ್ಸರ್ ಮ್ಯಾನರ್‌ನಲ್ಲಿ ಬಹುತೇಕ ಸಿನಿಮಾ ಚಿತ್ರೀಕರಣ ಮಾಡಲಾಗಿತ್ತು. ಮೂಲತಃ ಕನ್ನಡ ಸಿನಿಮಾ ಆಗಿದ್ದು ಶೃಂಗಾರ ನಾಗರಾಜ್ ಈ ಸಿನಿಮಾ ನಿರ್ಮಿಸಿದ್ದರು. ಸುಮಾರು 35 ಲಕ್ಷ ರೂಪಾಯಿ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದರು.

ಪುಷ್ಪಕ ವಿಮಾನ ರೀ ರಿಲೀಸ್

ಕಮಲ್ ಹಾಸನ್ ನಿರ್ಮಾಣ ಸಂಸ್ಥೆ ‘ಪುಷ್ಪಕ ವಿಮಾನ’ ಸಿನಿಮಾವನ್ನು ರೀ ರಿಲೀಸ್ ಮಾಡಲು ಮುಂದಾಗಿದ್ದಾರೆ. ತಮಿಳಿನಲ್ಲಿ ‘ಪೇಸುಂ ಪದಂ’ (Pesum padam) ಹಾಗೂ ಹಿಂದಿಯಲ್ಲಿ ‘ಪುಷ್ಪಕ್’ ಎನ್ನುವ ಟೈಟಲ್ ಇಟ್ಟಿರುವ ಪೋಸ್ಟರ್‌ಗಳು ರಿವೀಲ್ ಆಗಿವೆ. ಕನ್ನಡ ಟೈಟಲ್ ಎಲ್ಲಿ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಕಮಲ್ ಹಾಸನ್ ‘ಪುಷ್ಪಕ ವಿಮಾನ’ ಸಿನಿಮಾವನ್ನು ಸುಮ್ಮನೆ ರೀ ರಿಲೀಸ್ ಮಾಡುತ್ತಿಲ್ಲ. ಈ ಸಿನಿಮಾಗೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ.

ಈ ವರ್ಷದ ಆರಂಭದಲ್ಲಿ, ಕಮಲ್ ಹಾಸನ್ ಅವರ 2006ರ ಆಕ್ಷನ್-ಥ್ರಿಲ್ಲರ್ ಚಲನಚಿತ್ರ, ಗೌತಮ್ ವಾಸುದೇವ್ ಮೆನನ್ ಅವರ ನಿರ್ದೇಶನದ ವೆಟ್ಟೈಯಾಡು ವಿಲೈಯಾಡು (Vettaiyaadu Vilaiyaadu) ಕೂಡ ಮರು-ಬಿಡುಗಡೆಯಾಯಿತು. ಚಿತ್ರದ ಮರು-ಬಿಡುಗಡೆಯು ಸಾರ್ವಜನಿಕರಿಂದ ಹೆಚ್ಚು ಪಾಸಿಟಿವ್‌ ಪ್ರತಿಕ್ರಿಯೆಯನ್ನು ಗಳಿಸಿತು.

ಇದನ್ನೂ ಓದಿ: Kamal Haasan: ಕಮಲ್ ಹಾಸನ್ ಆಪ್ತ, ತಮಿಳಿನ ಖ್ಯಾತ ಹ್ಯಾಸ ನಟ ಆರ್‌ಎಸ್ ಶಿವಾಜಿ ನಿಧನ

ಕಮಲ್‌ ಹಾಸನ್‌ ಟ್ವೀಟ್‌

ಕಮಲ್‌ ಕೈಯಲ್ಲಿ ಸಾಲು ಸಾಲು ಸಿನಿಮಾಗಳು

ಸದ್ಯ ಕಮಲ್‌ ಅವರ ಕೈಯಲ್ಲಿ ನಾಲ್ಕು ಪ್ರಾಜೆಕ್ಟ್‌ಗಳಿವೆ. ಅವುಗಳಲ್ಲಿ ಯಾವುದೂ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ. ನಾಗ್ ಅಶ್ವಿನ್ ಅವರ ಮುಂದಿನ ಚಿತ್ರ ಕಲ್ಕಿಯಲ್ಲಿ ( Kalki cinema) ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಅಮಿತಾಭ್ ಬಚ್ಚನ್, ಪ್ರಭಾಸ್, ದೀಪಿಕಾ ಪಡುಕೋಣೆ ಇತರ ಪ್ರಮುಖ ತಾರೆಗಳು ಇದ್ದಾರೆ. ಎಸ್ ಶಂಕರ್ ಅವರ 1996ರ ಚಲನಚಿತ್ರದ ಮುಂದುವರಿದ ಭಾಗವಾದ ಇಂಡಿಯನ್-2 ಸಿನಿಮಾದಲ್ಲಿಯೂ ಕಮಲ್‌ ಇದ್ದಾರೆ. ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಸಹ ನಡೆಯುತ್ತಿದೆ. ಇವುಗಳ ಹೊರತಾಗಿ H. ವಿನೋತ್ ಅವರೊಂದಿಗೆ ಒಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ, ಇದು ತಾತ್ಕಾಲಿಕವಾಗಿ ʻKH233- ರೈಸ್ ಟು ರೂಲ್ʼ ಎಂದು ಹೆಸರಿಸಲಾಗಿದೆ. ಕಮಲ್ ಹಾಸನ್ ಅವರು KH234ಗಾಗಿ 37 ವರ್ಷಗಳ ನಂತರ ಮಣಿರತ್ನಂ ಅವರೊಂದಿಗೆ ಮತ್ತೆ ಒಂದಾಗುತ್ತಿದ್ದಾರೆ. ಇದರಲ್ಲಿ ದುಲ್ಕರ್ ಸಲ್ಮಾನ್, ತ್ರಿಷಾ ಮತ್ತು ಜಯಂ ರವಿ ಕೂಡ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

Exit mobile version