Site icon Vistara News

ನಿರ್ದೇಶಕನಿಗೆ ʼಲೈಫ್‌ ಟೈಮ್‌ ಸೆಟಲ್‌ಮೆಂಟ್‌ʼ ಮಾಡಿದ ಕಮಲ್‌ ಹಾಸನ್‌

ಕಮಲ್‌ ಹಾಸನ್‌

ಬೆಂಗಳೂರು : ಕಮಲ್‌ ಹಾಸನ್‌ ಅವರ ಕಟ್ಟಾ ಅಭಿಮಾನಿ ನಿರ್ದೇಶಕ ಲೋಕೇಶ್‌ ಕನಕರಾಜ್‌ ʼವಿಕ್ರಮ್‌ʼ ಚಿತ್ರದ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಕಳೆದ ಶುಕ್ರವಾರ ಚಿತ್ರ ಬಿಡುಗಡೆಗೊಂಡಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿತ್ತು. ಕಮಲ್‌ ಹಾಸನ್‌ ಅವರ ನಟನೆಗೂ ಒಳ್ಳೆ ರೆಸ್ಪಾನ್ಸ್ ಬಂದಿತ್ತು. ಇದೀಗ ಕಮಲ್‌ ಹಾಸನ್‌ ಅವರು ಲೋಕೇಶ್‌ ಕನಕರಾಜ್‌ಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ | Vikram Film: ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ʼವಿಕ್ರಮ್‌ʼ ಸೋರಿಕೆ ಆಗಿದ್ದು ಹೇಗೆ?

ಇದೀಗ ಲೋಕೇಶ್‌ ಅವರು ಕಮಲ್‌ ಹಾಸನ್‌ ಅವರ ಕೈಬರಹದ ಪತ್ರವನ್ನು ಹಂಚಿಕೊಂಡಿದ್ದಾರೆ. ಮತ್ತು ಇದು ನನ್ನ ʼಲೈಪ್‌ ಟೈಮ್‌ ಸೆಟ್ಲ್‌ಮೆಂಟ್‌ ಪತ್ರʼ ಎಂದು ಬರೆದುಕೊಂಡಿದ್ದಾರೆ. ʼಇದನ್ನು ಓದುವಾಗ ನಾನು ಎಷ್ಟು ಭಾವುಕನಾಗಿದ್ದೇನೆ ಎಂಬುದನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ಟ್ವೀಟ್‌ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಕಮಲ್‌ ಹಾಸನ್‌ ʼಸದಾ ಯಶಸ್ಸನ್ನು ಸವಿಯುತ್ತಿರಿʼ ಎಂದು ಪತ್ರದ ಮೂಲಕ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಈಗಾಗಲೇ ʼವಿಕ್ರಮ್‌ʼ ಚಿತ್ರ 300 ಕೋಟಿ ರೂ.ಗಿಂತಲೂ ಹೆಚ್ಚು ಗಳಿಕೆ ದಾಟುವ ನಿರೀಕ್ಷೆ ಇದೆ.

ಇದನ್ನೂ ಓದಿ | ಕಮಲ್‌ ಹಾಸನ್‌ ನಟನೆಯ ವಿಕ್ರಮ್‌ ಚಿತ್ರಕ್ಕೆ ಸಿಕ್ಕಿತು ಪ್ರಮಾಣ ಪತ್ರ

Exit mobile version