Site icon Vistara News

Chandramukhi 2: ‘ಚಂದ್ರಮುಖಿ 2’ ಸಿನಿಮಾದ ಕಂಗನಾ ರಣಾವತ್ ಫಸ್ಟ್ ಲುಕ್ ರಿಲೀಸ್

Kangana Ranaut first look Chandramukhi 2

ಬೆಂಗಳೂರು: ತಮಿಳಿನ ಚಂದ್ರಮುಖಿ ಸಿನಿಮಾದ ಎರಡನೇ ಭಾಗವಾದ ಚಂದ್ರಮುಖಿ 2 (Chandramukhi 2) ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ರಾಘವ್‌ ಲಾರೆನ್ಸ್‌ ಮತ್ತು ನಟಿ ಕಂಗನಾ ರಣಾವತ್‌ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾದ ಕಂಗನಾ ಅವರ ಲುಕ್‌ಚಿತ್ರತಂಡ ಆಗಸ್ಟ್‌ 5ರಂದು ಬಿಡುಗಡೆ ಮಾಡಿದೆ. ಚಂದ್ರಮುಖಿ ಮೊದಲ ಭಾಗದಲ್ಲಿ ಜ್ಯೋತಿಕಾ ಅಭಿನಯಿಸಿದ್ದು, ಇದೇ ಪಾತ್ರವನ್ನೆ ಇದೀಗ ಕಂಗನಾ ರಣಾವತ್ ನಿರ್ವಹಿಸಿದ್ದಾರೆ.

ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು, ಚಿತ್ರದ ಪ್ರಚಾರವೂ ಶುರು ಆಗಿದೆ. ಕನ್ನಡ, ತಮಿಳು ,ತೆಲುಗು, ಹಿಂದಿ, ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ತೆರೆ ಕಾಣಲಿದೆ. ರಾಘವ್‌ ಅವರು ಸಿನಿಮಾದಲ್ಲಿ ರಾಜ ವೆಟ್ಟೈಯಾನ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ರಾಜನ ಲುಕ್‌ನಲ್ಲಿ ತಮ್ಮ ಅರಮನೆಯ ಮೆಟ್ಟಿಲನ್ನು ಇಳಿದು ಬರುತ್ತಿರುವ ಚಿತ್ರವನ್ನು ಫಸ್ಟ್‌ ಲುಕ್‌ನಲ್ಲಿ ಕಾಣಬಹುದಾಗಿದೆ.

ಕೆಲವು ದಿನಗಳ ಹಿಂದೆ ಫಸ್ಟ್‌ ಲುಕ್‌ ಹಂಚಿಕೊಂಡಿರುವ ನಟ ರಾಘವ್‌ ಅವರು ಹಿರಿಯ ನಟ ರಜನಿಕಾಂತ್‌ ಅವರಿಗೆ ಕೃತಜ್ಞತೆಯನ್ನು ತಿಳಿಸಿದ್ದರು. ಟ್ವಿಟರ್‌ನಲ್ಲಿ ಪೋಸ್ಟರ್‌ ಹಂಚಿಕೊಂಡಿರುವ ಅವರು, “ತಲೈವಾರ್‌ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರಿಗೆ ಧನ್ಯವಾದಗಳು. ವೆಟ್ಟೈಯಾನ್‌ನ ಮೊದಲ ನೋಟವನ್ನು ಪ್ರಸ್ತುತಪಡಿಸುತ್ತಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ನಮಗೆ ಬೇಕು. ಈ ಗಣೇಶ ಚತುರ್ಥಿಗೆ ಸಿನಿಮಾವನ್ನು ತಮಿಳು, ಕನ್ನಡ, ಹಿಂದಿ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ” ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: Chandramukhi 2 : ಚಂದ್ರಮುಖಿ 2 ಫಸ್ಟ್‌ ಲುಕ್‌ ರಿಲೀಸ್‌! ರಜನಿಕಾಂತ್‌ ನಟಿಸಬೇಕಿದ್ದ ಪಾತ್ರದಲ್ಲಿ ರಾಘವ್‌ ಲಾರೆನ್ಸ್‌!

ಪಿ ವಾಸು ಅವರು ನಿರ್ದೇಶನ ಮಾಡಿರುವ ಚಂದ್ರಮುಖಿ 2 ಸಿನಿಮಾ ಐದು ಭಾಷೆಗಳಲ್ಲಿ ಈ ಗಣೇಶ ಚತುರ್ಥಿ ಹಬ್ಬಕ್ಕೆ ಬಿಡುಗಡೆಯಾಗುತ್ತದೆ. ಚಂದ್ರಮುಖಿ ಸಿನಿಮಾದಲ್ಲಿ ರಜನಿಕಾಂತ್‌ ಮತ್ತು ನಟಿ ಜ್ಯೋತಿಕಾ ಅವರು ನಟಿಸಿದ್ದರು. ಕನ್ನಡದ ಆಪ್ತಮಿತ್ರ ಸಿನಿಮಾವನ್ನೇ ಚಂದ್ರಮುಖಿ ಸಿನಿಮಾವನ್ನಾಗಿ ರಿಮೇಕ್‌ ಮಾಡಲಾಗಿತ್ತು. ಇದೀಗ ಚಂದ್ರಮುಖಿ 2 ಸಿನಿಮಾದಲ್ಲಿ ರಜನಿಕಾಂತ್‌ ಅವರ ವೆಟ್ಟೈಯಾನ್‌ ಪಾತ್ರವನ್ನು ರಾಘವ್‌ ಅವರು ನಿಭಾಯಿಸಿದ್ದಾರೆ.

ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡಿನ ಮೂಲಕ ಆಸ್ಕರ್‌ ಪ್ರಶಸ್ತಿಯನ್ನು ಪಡೆದುಕೊಂಡಿರುವ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಅವರು ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

Exit mobile version