Site icon Vistara News

Kangana Ranaut: ‘ಎಮರ್ಜೆನ್ಸಿ’ ಚಿತ್ರ ಬಿಡುಗಡೆಗೂ ಮುನ್ನ ಶಿರಚ್ಛೇದದ ಬೆದರಿಕೆ; ಪೊಲೀಸರ ಸಹಾಯ ಕೇಳಿದ ಕಂಗನಾ

Kangana Ranaut

ಮುಂಬೈ: ಬಹುನಿರೀಕ್ಷಿತ ಬಾಲಿವುಡ್‌ನ ʼಎಮರ್ಜೆನ್ಸಿʼ ಚಿತ್ರ (Emergency Movie) ಬಿಡುಗಡೆಗೂ ಮುನ್ನ ಸಾಮಾಜಿಕ ಮಾಧ್ಯಮದ (Social media) ಮೂಲಕ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ನಟಿ (actress), ಬಿಜೆಪಿ ಸಂಸದೆ (BJP MP) ಕಂಗನಾ ರಣಾವತ್ (Kangana Ranaut) ಪೊಲೀಸರ ಸಹಾಯವನ್ನು ಕೋರಿದ್ದಾರೆ. ಸೆಪ್ಟೆಂಬರ್ 6ರಂದು ʼಎಮರ್ಜೆನ್ಸಿʼ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಎಂದರೆ ನಟಿಸುವ ಜತೆಗೆ ಅವರು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ, ಒಂದು ವೇಳೆ ಈ ಚಿತ್ರ ಬಿಡುಗಡೆಯಾದರೆ ನೀವು ಸರ್ದಾರರಿಂದ ಚಪ್ಪಲಿ ಏಟು ಪಡೆಯುತ್ತೀರಿ. ನಾನು ಅತ್ಯಂತ ಹೆಮ್ಮೆಯ ಭಾರತೀಯ. ನನ್ನ ದೇಶದಲ್ಲಿ, ನನ್ನ ಮಹಾರಾಷ್ಟ್ರದಲ್ಲಿ ನಾನು ಎಲ್ಲಿಯಾದರೂ ನಿಮ್ಮನ್ನು ಕಂಡರೆ ನಾನು ಸಿಖ್ ಮತ್ತು ಹೆಮ್ಮೆಯ ಮರಾಠಿ ಎಂದು ಹೇಳುತ್ತೇನೆ. ನನ್ನ ಎಲ್ಲ ಹಿಂದೂ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಹೋದರರು ಸಹ ಚಪ್ಪಲಿಗಳೊಂದಿಗೆ ನಿಮ್ಮನ್ನು ಸ್ವಾಗತಿಸುತ್ತಾರೆ ಎಂದು ಹೇಳಿದ್ದಾರೆ.

ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡ ಕಂಗನಾ, “ದಯವಿಟ್ಟು ಇದನ್ನು ನೋಡಿ” ಎಂದು ಬರೆದು ಹಿಮಾಚಲ, ಮಹಾರಾಷ್ಟ್ರ ಮತ್ತು ಪಂಜಾಬ್ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.


ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. ಅವರು ಚಿತ್ರದಲ್ಲಿ ಸಿಖ್ಖರನ್ನು ಭಯೋತ್ಪಾದಕರಂತೆ ಬಿಂಬಿಸಿದ್ದಾರೆ. ಚಿತ್ರದಲ್ಲಿ ತೋರಿಸಿರುವ ದೃಶ್ಯಗಳು ನಿಜವಾಗಿ ಆಗಿದೆಯೇ? ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಯಾರೆಂದು ನೆನಪಿಸಿಕೊಳ್ಳಿ. ಯಾರ ಮೇಲೆ ನಾವು ಬೆರಳು ತೋರಿಸುತ್ತೇವೆಯೋ ಉಳಿದ ಬೆರಳು ಗಳು ನಮ್ಮನ್ನು ತೋರಿಸುತ್ತವೆ. ನಮಗೆ ತಲೆಯ ಬಲಿ ನೀಡಲೂ ಗೊತ್ತಿದೆ, ತಲೆ ಕಡಿಯಲು ಗೊತ್ತಿದೆ ಎಂದು ಇನ್ನೊಬ್ಬ ವ್ಯಕ್ತಿ ಹೇಳಿರುವುದು ಈ ವಿಡಿಯೊದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Kannada New Movie: ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್‍’ ಚಿತ್ರ ನ.15ಕ್ಕೆ ರಿಲೀಸ್‌

ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಕೂಡಲೇ ಕಂಗನಾ ಸುರಕ್ಷತೆಯ ಬಗ್ಗೆ ಹಲವು ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ.

ಒಬ್ಬ ಬಳಕೆದಾರರು, ನಮ್ಮ ರಾಷ್ಟ್ರದಲ್ಲಿ ಏನಾಗುತ್ತಿದೆ? ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್‌ಗೆ ಜನರು ಬಹಿರಂಗವಾಗಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಸರಳವಾಗಿ ಭಾರತದ ಇತಿಹಾಸವನ್ನು ಚಿತ್ರಿಸಲು, ದೇಶದ ಬಲಿಷ್ಠ ಪ್ರಧಾನಮಂತ್ರಿಗಳಲ್ಲಿ ಒಬ್ಬರೆಂದು ಹೇಳಿಕೊಳ್ಳುವ ಭಾರತದ ಉಕ್ಕಿನ ಮಹಿಳೆಯ ಕಥೆಯನ್ನು ಹೇಳುವುದು ತಪ್ಪೇ? ದಯವಿಟ್ಟು ನಿಮ್ಮ ಭದ್ರತೆಯನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ಸುರಕ್ಷತೆಗಾಗಿ ನಾವು ನಿಜವಾಗಿಯೂ ಕಾಳಜಿ ವಹಿಸುತ್ತೇವೆ ಎಂದು ತಿಳಿಸಿದ್ದಾರೆ.

Exit mobile version