Site icon Vistara News

Kanguva Budget: ಭಾರಿ ಸದ್ದು ಮಾಡುತ್ತಿರುವ ಕಂಗುವ ಚಿತ್ರದ ಬಜೆಟ್ ಎಷ್ಟು ಗೊತ್ತೇ?

Kanguva Budget

ಚೆನ್ನೈ: ಹೊಸ ವರ್ಷದಂದು (new year) ಪೋಸ್ಟರ್ (poster) ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ (social media) ಸಾಕಷ್ಟು ಸದ್ದು ಮಾಡುತ್ತಿರುವ ಚಿತ್ರ ಕಂಗುವ (Kanguva). ತಮಿಳು (tamil) ನಟ (actor) ಸೂರ್ಯ (surya), ದಿಶಾ ಪಟಾನಿ (disha patani) ಅಭಿನಯದ ಈ ಚಿತ್ರ ಬಿಡುಗಡೆಗೆ ಮುನ್ನವೇ ಸಾಕಷ್ಟು ಮಂದಿಯ ಗಮನ ಸೆಳೆದಿದ್ದು, ಚಿತ್ರದ ಕುರಿತು ಹೊಸಹೊಸ ಮಾಹಿತಿಗಾಗಿ ವೀಕ್ಷಕರು ಕಾಯುವಂತೆ ಮಾಡಿದೆ.

ವರ್ಷದ ಅತಿ ದೊಡ್ಡ ಮತ್ತು ದುಬಾರಿ ಚಿತ್ರಗಳಲ್ಲಿ ಒಂದು ಎಂದು ಊಹಿಸಲಾಗಿರುವ ಕಂಗುವವನ್ನು (Kanguva Budget) ಸುಮಾರು 300 ಕೋಟಿಗೂ ಹೆಚ್ಚು ಬಜೆಟ್‌ ನಲ್ಲಿ ನಿರ್ಮಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಚಿತ್ರವೂ ಚಿತ್ರರಂಗದಲ್ಲಿ ಬಹು ದಾಖಲೆಗಳನ್ನು ಮುರಿಯಲಿದೆ ಎಂದು ಊಹಿಸಲಾಗಿದೆ.

ಕಂಗುವ ಬಗ್ಗೆ ಭಾರಿ ಚರ್ಚೆ

ಸ್ಟುಡಿಯೋ ಗ್ರೀನ್ ಮತ್ತು ಸೂರ್ಯ ಶಿವಕುಮಾರ್ ಅವರ ಬಹು ನಿರೀಕ್ಷಿತ ಚಿತ್ರ “ಕಂಗುವ” ದ ಟೀಸರ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಣ್ಣಿಗೆ ಹಬ್ಬದಂತಿರುವ ಚಿತ್ರದ ದೃಶ್ಯಗಳು, ಬೆರಗುಗೊಳಿಸುವ ವಿನ್ಯಾಸ, ವಿಶಿಷ್ಟ ಪರಿಕಲ್ಪನೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಗಮನ ಸೆಳೆದಿದ್ದು, ಅದ್ಬುತ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ದೇಶದಾದ್ಯಂತ ಸಾಕಷ್ಟು ಮಂದಿ ಇದನ್ನು ನೋಡಲು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ: Uttarakaanda Movie: ʼಉತ್ತರಕಾಂಡʼ ಚಿತ್ರಕ್ಕೆ ನಾಯಕಿ ಎಂಟ್ರಿ; ಮೋಹಕ ತಾರೆ ರಮ್ಯಾ ಜಾಗಕ್ಕೆ ಕಾಲಿವುಡ್‌ ನಟಿ


ಶಕ್ತಿಶಾಲಿ ನಾಯಕನಾಗಿ ಸೂರ್ಯ ಮತ್ತು ಖಳನಾಯಕನಾಗಿ ಬಾಬಿ ಡಿ’ಯೋಲ್‌ ಚಿತ್ರದ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚುವಂತೆ ಮಾಡಿದ್ದಾರೆ. ಟೀಸರ್ ಬಿಡುಗಡೆಯಾದಾಗಿನಿಂದ ಆನ್‌ಲೈನ್ ಚರ್ಚೆಯನ್ನು ಹುಟ್ಟುಹಾಕಿದೆ, ಎಲ್ಲರೂ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ದುಬಾರಿ ಚಿತ್ರ

ಕಂಗುವವರ ಮಹತ್ವಾಕಾಂಕ್ಷೆಯ ಕಥೆಯ ಹಂದರವನ್ನು ಒಳಗೊಂಡಿರುವ ಈ ಚಿತ್ರದ ಬಜೆಟ್ 350 ಕೋಟಿಗೂ ಮೀರಿದೆ ಎನ್ನಲಾಗಿದೆ. ಇದು ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಗಲಿದೆ.


ಚಿತ್ರದ ಪ್ಯಾನ್-ವರ್ಲ್ಡ್ ಪ್ರಾಜೆಕ್ಟ್ ಎಲ್ಲರನ್ನೂ ಬೆರಗುಗೊಳಿಸುವಂತಿದೆ. ಸುಂದರ ದೃಶ್ಯಗಳು, ಭವ್ಯವಾದ ಛಾಯಾಗ್ರಹಣ ಮತ್ತು ವಿಸ್ತಾರವಾದ ಈ ಚಿತ್ರ ಚಲನಚಿತ್ರ ನಿರ್ಮಾಪಕರು ಅದರ ಸೃಷ್ಟಿಗೆ ಸುರಿದ ಅಪಾರ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ.

ವೆಟ್ರಿ ಪಳನಿಸಾಮಿ ಅವರ ಅದ್ಭುತ ಛಾಯಾಗ್ರಹಣ ಮತ್ತು ಗಾಯಕ ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಸಂಯೋಜನೆಯಲ್ಲಿ ಈ ಚಿತ್ರವು ಹೆಚ್ಚು ಪ್ರದರ್ಶನವನ್ನು ಕಾಣುವ ನಿರೀಕ್ಷೆಯಿದೆ.

ಸ್ಟುಡಿಯೋ ಗ್ರೀನ್‌ ಬೆಂಬಲದಿಂದ ನಿರ್ದೇಶಕ ಶಿವ ಅವರ ವಿಶಿಷ್ಟ ಕಲ್ಪನೆಗೆ ಜೀವ ತುಂಬಿದೆ. ಹಾಲಿವುಡ್ ಶೈಲಿಯಲ್ಲಿ ಮೂಡಿ ಬಂದಿರುವ ಚಿತ್ರ ಸಿನಿರಸಿಕರ ಮನ ಗೆಲ್ಲುವುದರಲ್ಲಿ ಸಂದೇಹವಿಲ್ಲ.

ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಪ್ರಮುಖರಾಗಿರುವ ಸ್ಟುಡಿಯೋ ಗ್ರೀನ್ ಮಾಲಕ ಕೆ.ಇ. ಜ್ಞಾನವೇಲ್ ರಾಜಾ ಅವರು ಕಳೆದ 16 ವರ್ಷಗಳಲ್ಲಿ ಸತತವಾಗಿ “ಸಿಂಗಂ” ಸರಣಿ, “ಪರುತಿ ವೀರನ್,” “ಸಿರುತೈ,” “ಕೊಂಬನ್,” “ನಾನ್ ಮಹನ್ ಅಲ್ಲಾ,” “ಮದ್ರಾಸ್,” “ಟೆಡ್ಡಿ,” ಮತ್ತು ತೀರಾ ಇತ್ತೀಚೆಗೆ ಬ್ಲಾಕ್ಬಸ್ಟರ್ ಹಿಟ್ ಗಳನ್ನು ನೀಡಿದ್ದಾರೆ.

“ಪಾತು ತಾಲಾ.” ಅವರು “ಬಾಹುಬಲಿ: ದಿ ಬಿಗಿನಿಂಗ್” ನಂತಹ ಪ್ರಮುಖ ಬ್ಲಾಕ್‌ಬಸ್ಟರ್‌ಗಳನ್ನು ವಿತರಿಸಿದ ಕಾರಣ ಅವರಿಂದಲೇ ಚಿತ್ರ ಬಿಡುಗಡೆ ಮಾಡಿಸಬೇಕು ಎಂದು ಹಲವಾರು ಮಂದಿ ನಿರ್ದೇಶಕರು ಕಾಯುವಂತಾಗಿದೆ.
ಸ್ಟುಡಿಯೋ ಗ್ರೀನ್ ಕಂಗುವಕ್ಕಾಗಿ ವಿಶ್ವದಾದ್ಯಂತ ಇರುವ ಪ್ರಮುಖ ವಿತರಕರೊಂದಿಗೆ ಕೈಜೋಡಿಸಿದೆ. 2024 ರ ಕೊನೆಯಲ್ಲಿ ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

Exit mobile version