Site icon Vistara News

Kani Kusruti: ಹಿಂದಿ ಕಲಿಯುವಷ್ಟು ದೊಡ್ಡ ನಟಿ ನಾನಲ್ಲ ಎಂದ ಕಾನ್‌ ಪ್ರಶಸ್ತಿ ವಿಜೇತೆ!

Kani Kusruti she doesn't want to be in Bollywood, overcoming financial crunch

ಬೆಂಗಳೂರು: ಗ್ರ್ಯಾಂಡ್​ ಪ್ರಿಕ್ಸ್ ಪ್ರೈಜ್ ಪ್ರಶಸ್ತಿ ಕಾನ್ ಸಿನಿಮೋತ್ಸವದ ಎರಡನೇ ಅತ್ಯುತ್ತಮ ಪ್ರಶಸ್ತಿಯಾಗಿದೆ. ಪಾಯಲ್ ಕಪಾಡಿಯಾ ನಿರ್ದೇಶನದ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ (All We Imagine as Light) ಸಿನಿಮಾ ಕಾನ್​ನ ಗ್ರ್ಯಾಂಡ್​ ಪ್ರಿಕ್ಸ್ ಪ್ರೈಜ್ ಪಡೆದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿತ್ತು. ʻ ಆಲ್ ವಿ ಇಮ್ಯಾಜಿನ್ ಆಸ್ ಲೈಟ್‌ʼನಲ್ಲಿನ ಅಭಿನಯಕ್ಕಾಗಿ ಮಲಯಾಳಂ ನಟಿ ʻಕಣಿ ಕುಸರುತಿʼ (Kani Kusruti ) ಜಾಗತಿಕ ಮೆಚ್ಚುಗೆಯನ್ನು ಗಳಿಸಿದರು. ಇದೀಗ ನಟಿ ಸಂದರ್ಶನವೊಂದರಲ್ಲಿ ಹಿಂದಿ ಅಥವಾ ಪ್ಯಾನ್-ಇಂಡಿಯಾ ಚಿತ್ರದಲ್ಲಿ ಕೆಲಸ ಮಾಡುವ ಯಾವುದೇ ಆಕಾಂಕ್ಷೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

ಕಣಿ ಕುಸರುತಿ ಮಾತನಾಡಿ ʻʻನನಗೆ ಸದ್ಯಕ್ಕೆ ಸಿಕ್ಕಿರುವ ಯಾವುದೇ ಪಾತ್ರ ಮಲಯಾಳಂ ಆಗಿದೆ. ನಾನು ಹಿಂದಿ ಸಿನಿಮಾಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವಷ್ಟು ಭಾಷಾ ಸ್ಪಷ್ಟತೆ ನನ್ನಲಿಲ್ಲ. ಹಿಂದಿ ಕಲಿಯುವಷ್ಟು ದೊಡ್ಡ ನಟಿಯಲ್ಲ. ಮಲಯಾಳಂ ಚಿತ್ರಗಳನ್ನು ಮಾಡುವುದರಲ್ಲಿ ನನಗೆ ಸಂತೋಷವಾಗಿದೆʼʼ ಎಂದರು.

“ಯಾರೊಂದಿಗಾದರೂ ಕೆಲಸ ಮಾಡಲು ನನಗೆ ಅವಕಾಶ ಸಿಕ್ಕರೆ, ಶ್ರೀರಾಮ್ ರಾಘವನ್, ಕನು ಬಹ್ಲ್ ಮತ್ತು ದಿಬಾಕರ್ ಬ್ಯಾನರ್ಜಿ ಜತೆಗೆ ಕೆಲಸ ಮಾಡುತ್ತೇನೆ. ಹಿಂದಿ ಕಲಿಯಿರಿ ಎಂದರೂ ಕಲಿಯುತ್ತೇನೆʼʼ ಎಂದರು.

ಇದನ್ನೂ ಓದಿ: Kannada New Movie: ವಿಜಯ್‌ ರಾಘವೇಂದ್ರ “ಗ್ರೇ ಗೇಮ್ಸ್” ಸಿನಿಮಾ ಗೆಲುವು

ಕಣಿ ಕುಸರುತಿ ನೀಡಿದ ಸಂದರ್ಶನದಲ್ಲಿ, ʻʻಕಡಿಮೆ ಸಿನಿಮಾಗಳು ನನಗೆ ಆಫರ್‌ ಬಂದಿದ್ದವು. ಹಾಗೇ ನಿರ್ದೇಶಕ ಸುದೀಪ್ತೋ ಸೇನ್ ಅವರ ʻದಿ ಕೇರಳ ಸ್ಟೋರಿʼ ಸಿನಿಮಾ ಆಡಿಷನ್‌ ಕರೆ ಬಂದಿತ್ತು. ಅದನ್ನು ಕೂಡ ರಿಜೆಕ್ಟ್‌ ಮಾಡಿದ್ದೆʼʼಎಂದು ಈ ಹಿಂದೆ ಹೇಳಿಕೊಂಡಿದ್ದರು. ಈ ಹಿಂದೆ ʻಬಿರಿಯಾನಿʼ ಸಿನಿಮಾದಲ್ಲಿ ಕಣಿ ಕುಸರುತಿ ಸಾಕಷ್ಟು ವಿವಾದಗಳನ್ನು ಎದುರಿಸಿದ್ದರು. ಈ ಬಗ್ಗೆಯೂ ನಟಿ ಹೇಳಿಕೊಂಡಿದ್ದರು. ʻʻಬಿರಿಯಾನಿ ಸಿನಿಮಾ ವೇಳೆ ನಾನು ಆ ಸ್ಕ್ರಿಪ್ಟ್‌ಗೆ ಹೊಂದಿಕೆಯಾಗುವುದಿಲ್ಲ ಎಂದು ನಾನು ನಿರ್ದೇಶಕ ಸಜಿನ್‌ಗೆ ಹೇಳಿದ್ದೆ. ಸಜಿನ್ ಹಿಂದುಳಿದ ಮುಸ್ಲಿಂ ಸಮುದಾಯದಿಂದ ಬಂದವರು. ಅವರು ಅವರ ಸ್ಥಾನದಲ್ಲಿಯೇ ಯೋಚಿಸುತ್ತಿದ್ದರು. ಅವರ ರಾಜಕೀಯವನ್ನು ಮಾತ್ರ ಮಾತನಾಡುತ್ತಿದ್ದರುʼʼಎಂದಿದ್ದರು.

ಪಾಯಲ್ ನಿರ್ದೇಶನದ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ (All We Imagine as Light) ಸಿನಿಮಾ ಕಾನ್​ನ ಗ್ರ್ಯಾಂಡ್​ ಪ್ರಿಕ್ಸ್ ಪ್ರೈಜ್ ( Grand Prix At Cannes) ಪಡೆದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿದೆ .77ನೇ ಆವೃತ್ತಿಯ ಕಾನ್ ಫಿಲ್ಮ್ಸ್‌ ಫೆಸ್ಟಿವಲ್‌ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗಿತ್ತು. ಸಿನಿಮಾ ಕಾನ್​ನಲ್ಲಿ ಪ್ರದರ್ಶನವಾದಾಗ ಬರೋಬ್ಬರಿ ಎಂಟು ನಿಮಿಷಗಳ ಸ್ಟಾಂಡಿಂಗ್ ಓವಿಯೇಷನ್ ಈ ಸಿನಿಮಾಕ್ಕೆ ದೊರೆತಿತ್ತು.

ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸಿನಿಮಾವು ಮಲಯಾಳಂ-ಹಿಂದಿ ಸಿನಿಮಾ ಆಗಿದೆ. ಆಸ್ಪತ್ರೆಯಲ್ಲಿ ನರ್ಸ್‌ಗಳಾಗಿ ಸೇವೆ ಸಲ್ಲಿಸುವ ಇಬ್ಬರು ರೂಮ್‌ಮೇಟ್‌ಗಳ ಕಥೆ ಇದರಲ್ಲಿದೆ. ಚಿತ್ರವು ಮೂರು ವಿಭಿನ್ನ ಮಹಿಳೆಯರ ನಡುವಿನ ಸ್ನೇಹದ ಕತೆ ಕೂಡ ಇದೆ. ಕನಿ ಕುಸರುತಿ ಮುಂದೆ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ನಾಗೇಂದ್ರ ಅವರ ಮಲಯಾಳಂ ಸಿರೀಸ್‌ ಹನಿಮೂನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Exit mobile version