Site icon Vistara News

ಗುಣಮುಖರಾದ ನಟ ದಿಗಂತ್;‌ ಸೋಷಿಯಲ್‌ ಮೀಡಿಯಾದಲ್ಲಿ ಎಲ್ಲರಿಗೂ ಕೃತಜ್ಞತೆ ಸಲ್ಲಿಕೆ

ಬೆಂಗಳೂರು: ಗೋವಾ ಬೀಚ್‌ನಲ್ಲಿ ಸೊಮರ್‌ಸಾಲ್ಟ್‌ (Somersault) ಕಸರತ್ತು ನಡೆಸುವಾಗ ಗಾಯಗೊಂಡಿದ್ದ ಚಿತ್ರನಟ ದಿಗಂತ್‌ (Actor Diganth) ಚೇತರಿಸಿಕೊಂಡಿದ್ದು, ತಾವು ಗುಣಮುಖರಾಗಲು ಕಾರಣರಾದ ಸಮಸ್ತರಿಗೆ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ಅರ್ಪಿಸಿದ್ದಾರೆ.

ಇತ್ತೀಚೆಗೆ ಗೋವಾ ಬೀಚ್‌ನಲ್ಲಿ ಸೊಮರ್‌ಸಾಲ್ಟ್‌ ಮಾಡುವಾಗ ದಿಗಂತ್‌ ಬೆನ್ನುಮೂಳೆ, ಕುತ್ತಿಗೆಗೆ ತೀವ್ರ ಪೆಟ್ಟು ಬಿದ್ದಿತ್ತು. ತಕ್ಷಣ ಅವರನ್ನು ಗೋವಾದಲ್ಲಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಏರ್‌ಲಿಫ್ಟ್‌ ಮೂಲಕ ಬೆಂಗಳೂರಿನ ಹಳೇ ವಿಮಾನ ರಸ್ತೆಯಲ್ಲಿರುವ ಮಣಿಪಾಲ್‌ ಆಸ್ಪತ್ರೆಗೆ ಕರೆತರಲಾಗಿತ್ತು. ಇದೀಗ ನಟ ದಿಗಂತ್‌ ಸಂಪೂರ್ಣ ಗುಣಮುಖರಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ʼಐ ವಿಲ್‌ ಬಿ ಬ್ಯಾಕ್‌ ಇನ್‌ ಆ್ಯಕ್ಷನ್‌ʼ ಎಂದು ಹೇಳಿಕೊಂಡಿದ್ದಾರೆ.

ದೂದ್‌ಪೇಡ ಖ್ಯಾತಿಯ ದಿಗಂತ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಮೂಲಕ ಅವರ ಈ ಕಷ್ಟದ ದಿನಗಳಲ್ಲಿ ನೆರವಾದ ಹಾಗೂ ಅವರ ಚೇತರಿಕೆಗೆ ಕಾರಣರಾದ ಎಲ್ಲರನ್ನೂ ನೆನೆಪಿಸಿಕೊಂಡು ಕೃತಜ್ಞತೆ ಅರ್ಪಿಸಿದ್ದಾರೆ. ವೆಂಕಟ್‌ನಾರಾಯಣ್‌, ಗೋವಾದಿಂದ ಏರ್‌ಲಲಿಫ್ಟ್‌ ಮಾಡಲು ಸಹಕರಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ಗೋವಾ ಹಾಗೂ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯ ಮುಖ್ಯಸ್ಥರು, ಶಸ್ತ್ರಚಿಕಿತ್ಸೆ ನಡಸಿದ ಡಾ.ವಿದ್ಯಾಧರ್‌ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಅಲ್ಲದೆ, ತಮಗಾಗಿ ಪ್ರಾರ್ಥಿಸಿದ ಕುಟುಂಬದವರು, ಚಿತ್ರರಂಗದ ಸಮಸ್ತರು, ಸ್ನೇಹಿತರು, ಸಂಬಂಧಿಕರು ಎಲ್ಲರನ್ನೂ ಈ ವೇಳೆ ನೆನಪಿಸಿಕೊಂಡು ದಿಗಂತ ಧನ್ಯವಾದ ತಿಳಿಸಿದ್ದಾರೆ.

ವಿಶೇಷ ಪ್ರೀತಿ ತೋರಿ, ಗುಣಮುಖರಾಗಲು ಹಾರೈಸಿದ ಅಭಿಮಾನಿಗಳಿಗೆ ಹಾಗೂ ಸುದ್ದಿಯನ್ನು ಎಲ್ಲರಿಗೂ ತಲುಪಿಸಲು ನೆರವಾದ ಎಲ್ಲ ಮಾಧ್ಯಮ ಮಿತ್ರರಿಗೆ ದಿಗಂತ್‌ ವಿಶೇಷವಾದ ಕೃತಜ್ಞತೆ ಅರ್ಪಿಸಿದ್ದಾರೆ.

ಇದನ್ನೂ ಓದಿ: Actor Diganth | ‌ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಂಡು ಡಿಸ್ಚಾರ್ಜ್ ಆದ ನಟ ದಿಗಂತ್‌

Exit mobile version