Site icon Vistara News

Kannada Film Industry: 3 ವರ್ಷದಿಂದ ಬೇಡಿಕೆ ಈಡೇರಿಲ್ಲ! ಜೂನ್ 5ರಿಂದ ಸಿನಿಮಾ ಶೂಟಿಂಗ್‌ ಬಂದ್

Outoor shooting bandh from june 5

ಬೆಂಗಳೂರು: ಹೊರಾಂಗಣ ಚಿತ್ರೀಕರಣ ಕಾರ್ಮಿಕರು (Kannada Film Industry) ಕಳೆದ ಮೂರು ವರ್ಷಗಳಿಂದ ಬೇಡಿಕೆ ಇಡುತ್ತ ಬರುತ್ತಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹೊರಾಂಗಣ ಚಿತ್ರೀಕರಣ ಕಾರ್ಮಿಕರ ಸಂಘವು ಒತ್ತಾಯಿಸಿದ್ದು, ಈ ಬೇಡಿಕೆಗಳಿಗಾಗಿಯೇ ಚಿತ್ರೀಕರಣಕ್ಕೆ ಬ್ರೇಕ್ ಹಾಕುವುದಾಗಿ ಸಂಘದ ಅಧ್ಯಕ್ಷ ಎ.ಹೆಚ್. ಭಟ್ ಮಾಧ್ಯಮಗಳ ಜತೆ ಮಾತನಾಡಿದ್ದಾರೆ. ಈ ನಿಟ್ಟಿನಲ್ಲಿ ಜೂನ್ 5ರಿಂದ ಇಡೀ ಕನ್ನಡ ಸಿನಿಮಾರಂಗ ಶಟ್‌ಡೌನ್‌ ಆಗುತ್ತಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಒಂದು ವೇಳೆ ತಮ್ಮ ಬೇಡಿಕೆಯನ್ನು ಈಡೇರಿಸದೇ ಹೋದರೆ ಜೂನ್ 5ರಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳದಂತೆ ತನ್ನ ಸದಸ್ಯರಿಗೆ ಸಂಘ ಸೂಚಿಸಿದೆ. ನಿರ್ಮಾಪಕರಿಂದ ತಮಗೆ ಅನೇಕ ರೀತಿಯಲ್ಲಿ ಮೋಸವಾಗುತ್ತಿದೆ ಎಂತಲೂ ಸಂಘವು ಆರೋಪಿಸಿದೆ.

ಸಂಬಳ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಸಂಘವು ಚಿತ್ರೋದ್ಯಮದ ಮುಂದೆ ಇಟ್ಟಿದೆ. ಆ ಬೇಡಿಕೆ ಈಡೇರುವವರೆಗೂ ಚಿತ್ರೀಕರಣದಲ್ಲಿ ಭಾಗಿಯಾಗದಂತೆ ನಿರ್ಧರಿಸಲಾಗಿದೆ. ಕಳೆದ ಮೂರು ವರ್ಷಗಳಿಂದಲೂ ಈ ಬೇಡಿಕೆಗಳನ್ನು ಇಡುತ್ತಾ ಬಂದಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಬಂದ್ ಮಾಡುವಂತಹ ನಿರ್ಧಾರವನ್ನು ಸಂಘ ತಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Odisha Train Accident: ಕನ್ನಡಿಗರ ರಕ್ಷಣೆಗೆ 2013ರಲ್ಲಿದ್ದ ಸಚಿವರನ್ನೇ ನಿಯೋಜಿಸಿದ ಸಿದ್ದರಾಮಯ್ಯ: ಅಪಘಾತ ಸ್ಥಳಕ್ಕೆ ಹೊರಟ ಕರ್ನಾಟಕದ ತಂಡ

ಪ್ರತಿ ವರ್ಷ ಸುಮಾರು 200 ರಿಂದ 300 ಚಿತ್ರಗಳು ಬಿಡುಗಡೆಯಾಗುತ್ತಿದೆ. ಸರ್ಕಾರ 125 ಚಿತ್ರಗಳಿಗೆ ಸಬ್ಸಿಡಿ ಕೊಡುತ್ತಿದೆ. ಇದನ್ನು ಪಡೆಯಬೇಕಾದರೆ ಹೊರಾಂಗಣ ಚಿತ್ರೀಕರಣ ಸರಬರಾಜು ಮಾಡುವ ಮಾಲೀಕರ ಸಹಿ ಇರಬೇಕು. ಆದರೆ ಹಾಗೆ ನಡೆಯುತ್ತಿಲ್ಲ ಎಂದು ಎ ಹೆಚ್ ಭಟ್ ಆರೋಪಿಸಿದ್ದಾರೆ.

Exit mobile version