Site icon Vistara News

Kannada New Film | ʻಕಂಬ್ಳಿಹುಳʼ ಟ್ರೈಲರ್‌ ರಿಲೀಸ್‌ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ!

Kannada New Film

ಬೆಂಗಳೂರು : ‘ಕಂಬ್ಳಿಹುಳʼ ಸಿನಿಮಾ ಟೈಟಲ್ ಮೂಲಕವೇ ಚಂದನವನ (Kannada New Film) ಹಾಗೂ ಸಿನಿರಸಿಕರನ್ನು ಆಕರ್ಷಿಸಿತ್ತು. ಇದೀಗ ಈ ಚಿತ್ರದ ಟ್ರೈಲರ್‌ ಬಿಡುಗಡೆಗೊಂಡಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಟ್ರೈಲರ್‌ ಬಿಡುಗಡೆಗೊಳಿಸಿ, ಶುಭ ಹಾರೈಸಿದ್ದಾರೆ. ಕಾರ್ಯಕ್ರಮದಲ್ಲಿ ನಟ ಪ್ರವೀಣ್ ತೇಜ್, ನಿರ್ದೇಶಕ ಸತ್ಯ ಪ್ರಕಾಶ್ ಭಾಗಿಯಾಗಿ ಚಿತ್ರತಂಡಕ್ಕೆ ಪ್ರೋತ್ಸಾಹ ನೀಡಿದರು. ನವೆಂಬರ್ 4ರಂದು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಸಿನಿಮಾ ಕುರಿತು ಮಾತನಾಡಿ ʻʻಮಾಯಾಜಗತ್ತು ಸಿಹಿ ಕಹಿ ಎಲ್ಲವೂ ಇದರಲ್ಲಿರುತ್ತೆ. ಒಂದು ಹೋರಾಟದ ಮನೋಭಾವ ಇದ್ದಾಗ ಮಾತ್ರ ಸಿನಿಮಾ ಮಾಡಲು ಸಾಧ್ಯ. ಈ ಚಿತ್ರದ ನಿರ್ಮಾಪಕರಲ್ಲಿಯೂ ಅಂತಹದ್ದೊಂದು ಹೋರಾಟದ ಮನೋಭಾವ ಇದ್ದಿದ್ದರಿಂದ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮಲೆನಾಡಿನ ಯುವಕರು ತಾವು ಬೆಳೆದಂತಹ ಊರು, ಪರಿಸರ, ಬದುಕು ಇವುಗಳ ಆಧಾರ ಮೇಲೆ ಕಥೆ ಕಟ್ಟಿ ಸಿನಿಮಾ ಮಾಡುತ್ತಾರೆ. ನೈಜತೆಯಿಂದ ಕೂಡಿರುವ ‘ಕಂಬ್ಳಿಹುಳ’ ಸಿನಿಮಾಟ ಟ್ರೈಲರ್‌ ನೋಡಿದಾಗ ನನಗೂ ಅದೇ ಅನಿಸಿದ್ದು, ಖಂಡಿತಾ ಸಿನಿಮಾ ಯಶಸ್ಸು ಆಗುತ್ತೆಂದುʼʼ ಎಂದು ಹೇಳಿದರು.

ಇದನ್ನೂ ಓದಿ | Kannada New Film | ಪ್ರಮೋದ್‌ ನಟನೆಯ ಬಾಂಡ್‌ ರವಿ ಟೀಸರ್‌ ರಿಲೀಸ್‌!

ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ನಿರ್ದೇಶಕ ನವನ್ ಶ್ರೀನಿವಾಸ್ ನಿರ್ದೇಶನದ ಮೊದಲ ಸಿನಿಮಾ ಇದು. ಮಲೆನಾಡು ಭಾಗದಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಶೃಂಗೇರಿ, ಸಕಲೇಶಪುರ, ತೀರ್ಥಹಳ್ಳಿ, ಸುತ್ತಮುತ್ತ ‘ಕಂಬ್ಳಿಹುಳ’ ಚಿತ್ರೀಕರಣ ನಡೆಸಲಾಗಿದೆ. ಎಮೋಷನಲ್ ಜರ್ನಿ ಸಿನಿಮಾ ಇದಾಗಿದ್ದು ರಂಗಭೂಮಿ ಕಲಾವಿದ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್ ಹೆಗ್ಡೆ ಚಿತ್ರದ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.

ಮಲೆನಾಡ ಭಾಗದಲ್ಲಿ ಆಗುವ ಪ್ರೇಮ ಕಥೆ!
ಚಿತ್ರದ ನಿರ್ದೇಶಕ ನವನ್ ಶ್ರೀನಿವಾಸ್ ಮಾತನಾಡಿ ʻʻಇಡೀ ಸಿನಿಮಾ ತಂಡ ಹೊಸಬರಿಂದ ಕೂಡಿದ್ದರಿಂದ 90 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವು. ಇದೀಗ ಅಷ್ಟು ದಿನಗಳ ಶ್ರಮ ನವೆಂಬರ್ 4ರಂದು ತೆರೆ ಮೇಲೆ ಅನಾವರಣಗೊಳ್ಳುತ್ತಿದೆ. ಮಲೆನಾಡು ಭಾಗದಲ್ಲಿ ನಡೆಯುವ ಪ್ರೇಮಕಥೆ ಇದು. ನಾನು ಕೂಡ ಮಲೆನಾಡಿನವನಾದ್ದರಿಂದ ಸುಲಭವಾಗಿ ಹೇಳಬಹುದೆಂದು ಆ ಭಾಗದ ಕಥೆಯನ್ನೇ ಆಯ್ಕೆ ಮಾಡಿಕೊಂಡೆ. ಖಂಡಿತ ಸಿನಿಮಾ ಎಲ್ಲರಿಗೂ ಒಳ್ಳೆಯ ಫೀಲ್ ಕೊಡಲಿದೆʼʼ ಎಂದು ತಿಳಿಸಿದರು.

ಹೊಸ ಜೀವನ ಕೊಟ್ಟಂಥ ಸಿನಿಮಾ!
ನಾಯಕ ಅಂಜನ್ ನಾಗೇಂದ್ರ ಮಾತನಾಡಿ ʻʻಕಂಬ್ಳಿಹುಳ ನನಗೆ ಹೊಸ ಜೀವನ ಕೊಟ್ಟಂತ ಸಿನಿಮಾ. ನಿರ್ದೇಶಕರಿಗೆ ನನಗೆ ಯಾವುದಾದರೂ ಪಾತ್ರ ಕೊಡಿ ಮಾಡುತ್ತೇನೆ ಎಂದಿದ್ದೆ. ಒಂದಷ್ಟು ದಿನಗಳ ನಂತರ ಈ ಸಿನಿಮಾದಲ್ಲಿ ಹೀರೊ ಪಾತ್ರ ಮಾಡಬೇಕು ಎಂದರು. ನಾನು ರಂಗಭೂಮಿ ಕಲಾವಿದನಾದ್ದರಿಂದ ಸಿನಿಮಾ ನಟನೆಗೆ ಹೊಂದಿಕೊಳ್ಳಲು ಒಂದಿಷ್ಟು ವರ್ಕ್ ಶಾಪ್ ಮಾಡಿ ನಟಿಸಿದ್ದೇನೆ. ಇಲ್ಲಿವರೆಗೆ ನಮ್ಮ ಸಿನಿಮಾಗೆ ಹೇಗೆ ಸಪೋರ್ಟ್ ಮಾಡಿದ್ದೀರಾ ಹಾಗೆಯೇ ಬಿಡುಗಡೆಯಾದ ಮೇಲು ಪ್ರೀತಿ ತೋರಿಸಿ ಪ್ರೋತ್ಸಾಹಿಸಿʼʼ ಎಂದರು.

ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಈ ಚಿತ್ರ ನೈಜ ಘಟನೆಯಾಧಾರಿತ ಸಿನಿಮಾ. ಚಿತ್ರದಲ್ಲಿ ರೋಹಿತ್ ಕುಮಾರ್, ದೀಪಕ್ ರೈ ಪಣಜೆ, ಸಂಧ್ಯಾ ಅರಕೆರೆ, ಸಂಪತ್ ಶೆಟ್ಟಿ ಸೇರಿ ಹಲವು ಯುವ ಪ್ರತಿಭೆಗಳು ನಟಿಸಿದ್ದಾರೆ.

ಸತೀಶ್ ರಾಜೇಂದ್ರನ್ ಛಾಯಾಗ್ರಹಣ, ಜಿತೇಂದ್ರ ನಾಯಕ ಮತ್ತು ರಾಘವೇಂದ್ರ ಟಿಕೆ ಸಂಕಲನ, ಶಿವ ಪ್ರಸಾದ್ ಸಂಗೀತ ನಿರ್ದೇಶನ ‘ಕಂಬ್ಳಿಹುಳ’ ಚಿತ್ರಕ್ಕಿದೆ.

ಇದನ್ನೂ ಓದಿ | Kannada New Film | ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ನಟಿ ತಪಸ್ವಿನಿ ಪೂಣಚ್ಚ ಈಗ ಗಜರಾಮ ಸಿನಿಮಾಗೆ ನಾಯಕಿ

Exit mobile version