Kannada New Film | ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ನಟಿ ತಪಸ್ವಿನಿ ಪೂಣಚ್ಚ ಈಗ ಗಜರಾಮ ಸಿನಿಮಾಗೆ ನಾಯಕಿ - Vistara News

ಸಿನಿಮಾ

Kannada New Film | ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ನಟಿ ತಪಸ್ವಿನಿ ಪೂಣಚ್ಚ ಈಗ ಗಜರಾಮ ಸಿನಿಮಾಗೆ ನಾಯಕಿ

ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ನಟಿ (Kannada New Film) ತಪಸ್ವಿನಿ ಪೂಣಚ್ಚ ಗಜರಾಮ ಸಿನಿಮಾ ಮೂಲಕ ಮತ್ತೆ ತೆರೆಗೆ ಬರುತ್ತಿದ್ದಾರೆ.

VISTARANEWS.COM


on

Kannada New Film
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಚ್ಚುಗತ್ತಿಯ ಮೂಲಕ ಸ್ಯಾಂಡಲ್‌ವುಡ್‌ಗೆ (Kannada New Film) ಎಂಟ್ರಿ ಕೊಟ್ಟ ನಟ ರಾಜವರ್ಧನ್ ‘ಗಜರಾಮ’ನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಯುವ ನಿರ್ದೇಶಕ ಸುನೀಲ್ ಕುಮಾರ್ ಈ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ರಾಜವರ್ಧನ್ ಜತೆ ನಾಯಕಿಯಾಗಿ ಕೊಡಗಿನ ಬೆಡಗಿ ತಪಸ್ವಿನಿ ಪೂಣಚ್ಚ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹರಿಕಥೆ ಅಲ್ಲ ಗಿರಿಕಥೆ ಚಿತ್ರದಲ್ಲಿ ನಾಯಕಿಯಾಗಿ ಗಮನ ಸೆಳೆದಿದ್ದ ತಪಸ್ವಿನಿ ಪೂಣಚ್ಚ ಈಗ ‘ಗಜರಾಮ’ನ ಜೋಡಿಯಾಗಿದ್ದಾರೆ.

ನಟಿ ತಪಸ್ವಿನಿ ಮಾತನಾಡಿ ʻʻಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕೆ ನಾನು ಆಯ್ಕೆ ಆಗಿದ್ದೇ ಆಕಸ್ಮಿಕವಾಗಿ. ಸಿನಿಮಾ ಇಂಡಸ್ಟ್ರಿಗೆ ಬರಬೇಕು ಎನ್ನುವುದು ನನ್ನ ಉದ್ದೇಶ ಆಗಿರಲಿಲ್ಲ. ಆದರೆ ಇನ್ಸ್ಟಾಗ್ರಾಮ್‌ನಲ್ಲಿ ನನ್ನ ಒಂದು ಫೋಟೋ ನೋಡಿ ಚಿತ್ರತಂಡದವರು ನನ್ನನ್ನು ಸಂಪರ್ಕಿಸಿದರು. ನನಗೂ ಸಿನಿಮಾ ಕಥೆ ಕೇಳಿ ಇಷ್ಟ ಆಯ್ತು. ನಂತರ ಒಪ್ಪಿಕೊಂಡೆ. ಇದೀಗ ‘ಗಜರಾಮ’ ಸಿನಿಮಾ ಅವಕಾಶ ಸಿಕ್ಕಿದೆ. ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ನಂತರ ಸಾಕಷ್ಟು ಸಿನಿಮಾ ಆಫರ್ ಬರುತ್ತಿದೆ. ಆದರೆ ಗಜರಾಮ ಸಿನಿಮಾ ಪಾತ್ರ ಇಷ್ಟ ಆಯ್ತು. ಹಳ್ಳಿ ಹುಡುಗಿ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆʼʼ ಎಂದರು.

Kannada New Film

ಇದನ್ನೂ ಓದಿ | Dhamki vishwak | ಸ್ಯಾಂಡಲ್‌ವುಡ್‌ಗೆ ತೆಲುಗು ಸಿನಿಮಾ ಪ್ರತಿಭೆ: ದೀಪಾವಳಿಗೆ ‘ಧಮ್ಕಿ‘ ಫಸ್ಟ್‌ ಲುಕ್!

ನಿರ್ದೇಶಕ ಸುನೀಲ್ ಕುಮಾರ್ ‘ಗಜರಾಮ’ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಆ್ಯಕ್ಷನ್‌ ಮಾಸ್ ಎಂಟರ್‌ಟೈನರ್ ಒಳಗೊಂಡ ಈ ಚಿತ್ರ್ಕಕೆ ಮನೋಮೂರ್ತಿ ಸಂಗೀತ, ಕೆ.ಎಸ್.ಚಂದ್ರಶೇಖರ್ ಛಾಯಾಗ್ರಾಹಣ ಇದೆ. ಹಾಗೂ ಜ್ಞಾನೇಶ್ ಬಿ ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ.

Kannada New Film

ಲೈಫ್ ಲೈನ್ ಫಿಲ್ಮಂ ಪ್ರೊಡಕ್ಷನ್ ನಡಿ ನರಸಿಂಹ ಮೂರ್ತಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಕ್ಸೇವಿಯರ್ ಫರ್ನಾಂಡಿಸ್ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸೆಪ್ಟೆಂಬರ್‌ ತಿಂಗಳಾಂತ್ಯಕ್ಕೆ ಸಿನಿಮಾ ಸೆಟ್ಟೇರಲಿದೆ.

ಇದನ್ನೂ ಓದಿ | Nano Narayanappa | ಕೆಜಿಎಫ್ ಸಿನಿಮಾ ತಾತ ಈಗ ಫುಲ್ ಟೈಂ ಹೀರೋ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Chandu Champion: ಗುರುತೇ ಸಿಗದಂತೆ ಬದಲಾದ ಈ ಸ್ಟಾರ್‌ ನಟ ಯಾರು? ಪೋಸ್ಟರ್​ ವೈರಲ್​!

Chandu Champion: ಚಂದು ಚಾಂಪಿಯನ್ ಮೊದಲ ಪೋಸ್ಟರ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ನಟ, “ಚಾಂಪಿಯನ್ ಬರುತ್ತಿದ್ದಾನೆ. ನನ್ನ ವೃತ್ತಿಜೀವನದಲ್ಲೇ ಅತ್ಯಂತ ಸವಾಲಿನ ಮತ್ತು ವಿಶೇಷ ಚಿತ್ರದ ಮೊದಲ ಪೋಸ್ಟರ್ ಅನ್ನು ಹಂಚಿಕೊಳ್ಳಲು ಬಹಳ ಉತ್ಸುಕನಾಗಿದ್ದೇನೆ, ಹೆಮ್ಮೆಯಾಗುತ್ತಿದೆ. ಜೂನ್​​ 14ಕ್ಕೆ ಚಂದು ಚಾಂಪಿಯನ್​ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ” ಎಂದು ಬರೆದುಕೊಂಡಿದ್ದಾರೆ.

VISTARANEWS.COM


on

Chandu Champion Injured Kartik Aaryan looks intense
Koo

ಬೆಂಗಳೂರು: ಕಾರ್ತಿಕ್ ಆರ್ಯನ್ ( Kartik Aaryan) ಅವರು ತಮ್ಮ ಮುಂಬರುವ ಚಿತ್ರ ‘ಚಂದು ಚಾಂಪಿಯನ್’ ನ (Chandu Champion) ಎರಡನೇ ಪೋಸ್ಟರ್‌ ಬಿಡುಗಡೆಗೊಳಿಸಿದ್ದಾರೆ. ಬಾಕ್ಸಿಂಗ್ ರಿಂಗ್‌ನಲ್ಲಿ ಗಾಯಗೊಂಡ ಮುಖದೊಂದಿಗೆ ಕಂಡಿದ್ದಾರೆ. ಮೊದಲ ಪೋಸ್ಟರ್ ಅನ್ನು ಮೇ 15ರಂದು ಅನಾವರಣಗೊಳಿಸಲಾಯಿತು. ಕಬೀರ್ ಖಾನ್ ನಿರ್ದೇಶನದ ಚಿತ್ರದಲ್ಲಿನ ತನ್ನ ಪಾತ್ರಕ್ಕಾಗಿ ಕಾರ್ತಿಕ್​​ ಗಮನಾರ್ಹ ರೂಪಾಂತರಕ್ಕೆ ಒಳಗಾಗಿರುವುದು ಕಂಡಿದೆ. ಕಠಿಣ ತಯಾರಿ ನಡೆಸಿರುವುದಾಗಿ ಕಂಡು ಬರುತ್ತಿದೆ.

ʼಚಂದು ಚಾಂಪಿಯನ್ʼ ಮೊದಲ ಪೋಸ್ಟರ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ನಟ, “ಚಾಂಪಿಯನ್ ಬರುತ್ತಿದ್ದಾನೆ. ನನ್ನ ವೃತ್ತಿಜೀವನದಲ್ಲೇ ಅತ್ಯಂತ ಸವಾಲಿನ ಮತ್ತು ವಿಶೇಷ ಚಿತ್ರದ ಮೊದಲ ಪೋಸ್ಟರ್ ಅನ್ನು ಹಂಚಿಕೊಳ್ಳಲು ಬಹಳ ಉತ್ಸುಕನಾಗಿದ್ದೇನೆ, ಹೆಮ್ಮೆಯಾಗುತ್ತಿದೆ. ಜೂನ್​​ 14ಕ್ಕೆ ʼಚಂದು ಚಾಂಪಿಯನ್ʼ​ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Sara Ali Khan: ಬ್ರೇಕಪ್‌ ಕ್ಲ್ಯಾರಿಟಿ ಬೆನ್ನಲ್ಲೇ ಸಾರಾ ಆಯೋಜಿಸಿದ್ದ ಪಾರ್ಟಿಯಲ್ಲಿ ಕಾರ್ತಿಕ್ ಆರ್ಯನ್!

ಕಾರ್ತಿಕ್ ಆರ್ಯನ್ ಅವರ ಈ ಕಠಿಣ ಶ್ರಮಕ್ಕೆ ನಿರ್ದೇಶಕ ಕಬೀರ್ ಖಾನ್ ಟಿಪ್ಪಣಿಯನ್ನು ಬರೆದಿದ್ದಾರೆ. ʻʻಚಂದು ಚಾಂಪಿಯನ್‌ನ ಕಥೆಯು ನಂಬಲಾಗದಷ್ಟು ಸ್ಪೂರ್ತಿದಾಯಕ ನೈಜ ಕಥೆಯಾಗಿದೆ. ಆದರೆ ಈ ಚಾಂಪಿಯನ್ ಆಗಲು ಕಾರ್ತಿಕ್ ಮಾಡಿದ ಪ್ರಯಾಣವು ಸ್ಫೂರ್ತಿದಾಯಕವಾಗಿದೆ. ಶೇ. 39ರಷ್ಟು ಬಾಡಿ ಫ್ಯಾಟ್‌ ಕರಗಿಸಿದರುʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: A Movie Re-Release: ರೀ-ರಿಲೀಸ್ ಆಗ್ತಿದೆ ಉಪ್ಪಿಯ `A’ ಸಿನಿಮಾ : ನೆನಪುಗಳನ್ನು ಮೆಲುಕು ಹಾಕಿದ ನಟಿ ಚಾಂದಿನಿ!

ಕಬೀರ್ ಖಾನ್ ಆ್ಯಕ್ಷನ್​ ಕಟ್​ ಹೇಳಿರುವ ʻಈ ಚಂದು ಚಾಂಪಿಯನ್ʼ, ಓರ್ವ ಕ್ರೀಡಾಪಟುವಿನ ನೈಜ ಕಥೆಯನ್ನು ಬಿಚ್ಚಿಡಲಿದೆ. ಈ ಪಾತ್ರಕ್ಕಾಗಿ ಕಾರ್ತಿಕ್ ಅವರ ಪ್ರಯಾಣ ಗಮನಾರ್ಹವಾದದ್ದು. ಜೂನ್ 14 ರಂದು ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದೆ ಚಿತ್ರತಂಡ.

Continue Reading

ಕಿರುತೆರೆ

Amruthadhaare Serial: ಇಂದು ಭೂಮಿಕಾಗೆ ಹುಟ್ಟು ಹಬ್ಬ: ರೀಲ್‌ ಗಂಡ ಎಸ್ಟೇಟ್​ ಬರೆದು ಕೊಟ್ರು! ರಿಯಲ್‌ ಗಂಡ ಕೊಟ್ಟ ಗಿಫ್ಟ್‌ ಏನು?

Amruthadhaare Serial: ಅಮೃತಧಾರೆ ಧಾರಾವಾಹಿ ʻಬಢೇ ಅಚ್ಚೇ ಲಗತೇ ಹೈʼ(Bade Acche Lagte Hain) ಹಿಂದಿ ಧಾರಾವಾಹಿಯ ರಿಮೇಕ್‌ ಆಗಿದೆ. ನಟ ರಾಜೇಶ್ ಅವರು ಗೌತಮ್ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. . ಈ ಧಾರಾವಾಹಿ ಉತ್ತಮ ಟಿಆರ್​ಪಿ (Kannada Serials TRP) ಪಡೆದುಕೊಳ್ಳುತ್ತಿದೆ. ಸಾರಾ ಅಣ್ಣಯ್ಯ ಮೊದಲಾದವರು ನಟಿಸುತ್ತಿದ್ದಾರೆ.

VISTARANEWS.COM


on

Amruthadhaare Serial bhoomika in birthday chaya singh
Koo

ಇಂದು (ಮೇ 16) ಅಮೃತಧಾರೆ ಧಾರಾವಾಹಿ (Amruthadhaare Serial) ಖ್ಯಾತಿಯ ನಟಿ ಛಾಯಾ ಸಿಂಗ್ (Chaya Singh)​ ಅವರಿಗೆ ಜನುಮದಿನದ ಸಂಭ್ರಮ. ಧಾರಾವಾಹಿಯಿಂದ ಜನರಿಗೆ ಭೂಮಿಕಾ ಎಂದೇ ಪರಿಚಯ.

ನಟಿಯ ವಿಶೇಷ ದಿನದಂದು ಜೀ ಕನ್ನಡ ವಾಹಿನಿ ಛಾಯಾ ಸಿಂಗ್​ ಕುರಿತು ವಿಡಿಯೊ ಒಂದನ್ನು ರಿಲೀಸ್​ ಮಾಡಿದೆ. ವಯಸ್ಸಾದರೂ ಮದುವೆಯಾಗದೇ ಉಳಿದ ಮಧ್ಯಮ ಕುಟುಂಬದ ಹೆಣ್ಣುಮಗಳೊಬ್ಬಳು ಹೇಗೆ ಕೋಟ್ಯಧಿಪತಿ ಉದ್ಯಮಿ ಜತೆ ಜೀವನ ನಡೆಸುತ್ತಾಳೆ ಎಂಬುದೇ ಈ ಧಾರಾವಾಹಿಯ ಒನ್‌ಲೈನ್‌ ಸ್ಟೋರಿ.

ಧಾರಾವಾಹಿಯಲ್ಲಿ ಪತಿ ಗೌತಮ್‌ ಹೆಂಡತಿಯ ಹುಟ್ಟುಹಬ್ಬಕ್ಕೆಂದು ಚಿಕ್ಕಮಗಳೂರಿನ ಎಸ್ಟೇಟ್​ ಬರೆದು ಕೊಟ್ಟಿದ್ದಾನೆ. ಇದೀಗ ರಿಯಲ್‌ ಗಂಡ ಪತ್ನಿಗೆ ಏನು ಗಿಫ್ಟ್‌ ಕೊಟ್ಟಿದ್ದಾರೆ? ಎಂದು ನೆಟ್ಟಿಗರು ಪ್ರಶ್ನೆ ಮೂಲಕ ನಟಿಯ ಕಾಲೆಳೆಯುತ್ತಿದ್ದಾರೆ.

ಛಾಯಾ ಅವರ ರಿಯಲ್​ ಲೈಫ್​ ಪತಿಯ ಹೆಸರು ಕೃಷ್ಣ. ಇನ್​ಸ್ಟಾಗ್ರಾಮ್​ನಲ್ಲಿ ಅವರು ಪತಿಯ ಜತೆ ಆಗಾಗ ಫೋಟೋ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ: Kiccha Sudeep: ʻಮ್ಯಾಕ್ಸ್‌ʼ ಸಿನಿಮಾ ಶೂಟಿಂಗ್‌ ಮುಗಿಸಿದ ಕಿಚ್ಚ ಸುದೀಪ್‌: ರಿಲೀಸ್‌ ಯಾವಾಗ?

ಕೃಷ್ಣ ಮತ್ತು ಛಾಯಾ ಮದುವೆಯಾಗಿ 11 ವರ್ಷಗಳೇ ಕಳೆದಿವೆ. ಛಾಯಾ ಅವರಿಗೆ ಕೃಷ್ಣ ಅವರ ಪರಿಚಯವಾದದ್ದು, ತಮಿಳು ಚಿತ್ರದಲ್ಲಿ ನಟಿಸುವ ಸಮಯದಲ್ಲಿ.
ಕನ್ನಡ ಸಿನಿರಂಗದಲ್ಲಿಯೂ ಸಕ್ರಿಯರಾಗಿರುವ ಛಾಯಾ, 2000ನೇ ಇಸವಿಯಲ್ಲಿ ತೆರೆಕಂಡ ಪಿ ಶೇಷಾದ್ರಿ ನಿರ್ದೇಶನದ `ಮುನ್ನುಡಿ’ ಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. 
Continue Reading

ಕಿರುತೆರೆ

Bhavani Singh: ಮೊದಲ ಮಗುವಿನ ನಿರೀಕ್ಷೆಯಲ್ಲಿ ʻಸುಬ್ಬಲಕ್ಷ್ಮಿ ಸಂಸಾರʼ ಧಾರಾವಾಹಿ ನಟ!

Bhavani Singh: ಪಂಕಜ ಶಿವಣ್ಣ-ಭವಾನಿಸಿಂಗ್ ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ರೀಲ್ಸ್‌ ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಬೇಬಿ ಬಂಪ್‌ ಫೋಟೊ ಶೂಟ್‌ ಮಾಡಿಸಿಕೊಂಡಿದ್ದಾರೆ ಪಂಕಜ್‌. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಜೋಡಿಗೆ ವಿಶ್‌ ಮಾಡುತ್ತಿದ್ದಾರೆ ಫ್ಯಾನ್ಸ್‌.

VISTARANEWS.COM


on

Bhavani Singh pankaj shivanna couple expecting-their first child
Koo

‘ಚರಣದಾಸಿ’, ‘ಸುಬ್ಬಲಕ್ಷ್ಮಿ ಸಂಸಾರ’,’ರಕ್ಷಾ ಬಂಧನ’ ಖ್ಯಾತಿಯ ಕಿರುತೆರೆ ನಟ ಭವಾನಿ ಸಿಂಗ್ (Bhavani Singh) ಅವರು ತಂದೆಯಾಗುತ್ತಿದ್ದಾರೆ. ಪತ್ನಿ ಪಂಕಜ ಶಿವಣ್ಣ ಕೂಡ ನಟಿಯಾಗಿದ್ದು, ಇದೀಗ ಜೋಡಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದೆ.

ಭವಾನಿ ಸಿಂಗ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್‌ ಶೇರ್‌ ಮಾಡಿ ʻʻನಮ್ಮ ಸಂಸಾರ ದೊಡ್ಡದಾಗುತ್ತಿದೆʼʼ ಎಂದು ಬರೆದುಕೊಂಡಿದ್ದಾರೆ.

‘ಚರಣದಾಸಿ’ ಧಾರಾವಾಹಿ ಮೂಲಕ ನಟನೆಗೆ ಕಾಲಿಟ್ಟರು ನಟ ಭವಾನಿ ಸಿಂಗ್. ಪಂಕಜ ಶಿವಣ್ಣ ಅವರು ‘ಸುಬ್ಬಲಕ್ಷ್ಮಿ ಸಂಸಾರ’ ಧಾರಾವಾಹಿ ಮೂಲಕ ಭವಾನಿ ಸಿಂಗ್ ಅವರಿಗೆ ಪರಿಚಯವಾದರು.

ಇದನ್ನೂ ಓದಿ: A Movie Re-Release: ರೀ-ರಿಲೀಸ್ ಆಗ್ತಿದೆ ಉಪ್ಪಿಯ `A’ ಸಿನಿಮಾ : ನೆನಪುಗಳನ್ನು ಮೆಲುಕು ಹಾಕಿದ ನಟಿ ಚಾಂದಿನಿ!

2019ರಲ್ಲಿ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೀಗ ಐದು ವರ್ಷಗಳ ನಂತರ ಈ ಜೋಡಿ ಸಿಹಿಸುದ್ದಿಯನ್ನು ಹಂಚಿಕೊಂಡಿದೆ.
Continue Reading

ಸ್ಯಾಂಡಲ್ ವುಡ್

Kiccha Sudeep: ʻಮ್ಯಾಕ್ಸ್‌ʼ ಸಿನಿಮಾ ಶೂಟಿಂಗ್‌ ಮುಗಿಸಿದ ಕಿಚ್ಚ ಸುದೀಪ್‌: ರಿಲೀಸ್‌ ಯಾವಾಗ?

Kiccha Sudeep ಬಿಗ್‌ ಅಪ್‌ಡೇಟ್‌ ಕೊಟ್ಟಿದ್ದಾರೆ ಕಿಚ್ಚ. ಇದೀಗ ಕಿಚ್ಚ ಸುದೀಪ್‌ ʻಮ್ಯಾಕ್ಸ್‌ʼ ಸಿನಿಮಾ ಶೂಟಿಂಗ್‌ ಕಂಪ್ಲೀಟ್‌ ಆಗಿದೆ ಎಂದು ಎಕ್ಸ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಮ್ಯಾಕ್ಸ್‌ನ 10 ತಿಂಗಳ ಸುದೀರ್ಘ ಪ್ರಯಾಣ ಅಂತ್ಯವಾಗಿದೆ ಎಂದು ವಿಡಿಯೊ ಮೂಲಕ ಶೇರ್‌ ಮಾಡಿಕೊಂಡಿದ್ದಾರೆ. ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಪೊಲೀಸ್‌ ಪಾತ್ರದಲ್ಲಿ ಮಿಂಚಲಿದ್ದಾರೆ. ಪಾತ್ರದ ಹೆಸರು ವಿಭಿನ್ನವಾಗಿಯೇ ಇದೆ. ʻಅರ್ಜುನ್ ಮಹಾಕ್ಷಯ್ʼ ಹೆಸರಿನ ಸುದೀಪ್ ಪಾತ್ರ ಸ್ಪೆಷಲ್ ಆಗಿಯೇ ಇರಲಿದೆ ಎಂದು ವರದಿಯಾಗಿದೆ.

VISTARANEWS.COM


on

Kiccha Sudeep Max Cinema shooting completed
Koo

ಬೆಂಗಳೂರು: ‘ವಿಕ್ರಾಂತ್ ರೋಣ’ ಬಳಿಕ ಕಿಚ್ಚ ಸುದೀಪ್ (Kiccha Sudeep) ಒಪ್ಪಿಕೊಂಡಿರುವ ಸಿನಿಮಾ ಮ್ಯಾಕ್ಸ್ (MAX). ಹೀಗಾಗಿ ಈ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆಯಿದೆ. ‘ಮ್ಯಾಕ್ಸ್’ ಬಗ್ಗೆ ಏನಾದರೂ ಅಪ್‌ಡೇಟ್ ಕೊಡ್ತಾರ ಎಂದು ಕಿಚ್ಚ ಫ್ಯಾನ್ಸ್‌ ಕಾದಿದ್ದರು. ಇದೀಗ ಬಿಗ್‌ ಅಪ್‌ಡೇಟ್‌ ಕೊಟ್ಟಿದ್ದಾರೆ ಕಿಚ್ಚ. ಇದೀಗ ಕಿಚ್ಚ ಸುದೀಪ್‌ ʻಮ್ಯಾಕ್ಸ್‌ʼ ಸಿನಿಮಾ ಶೂಟಿಂಗ್‌ ಕಂಪ್ಲೀಟ್‌ ಆಗಿದೆ ಎಂದು ಎಕ್ಸ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಮ್ಯಾಕ್ಸ್‌ನ 10 ತಿಂಗಳ ಸುದೀರ್ಘ ಪ್ರಯಾಣ ಅಂತ್ಯವಾಗಿದೆ ಎಂದು ವಿಡಿಯೊ ಮೂಲಕ ಶೇರ್‌ ಮಾಡಿಕೊಂಡಿದ್ದಾರೆ.

ಕಿಚ್ಚ ಸುದೀಪ್‌ ಎಕ್ಸ್‌ನಲ್ಲಿ ʻʻಮಹಾಬಲಿಪುರಂನಲ್ಲಿ ʻಮ್ಯಾಕ್ಸ್‌ʼಗಾಗಿ ಒಂದು ಸುತ್ತು. ಸುದೀರ್ಘ 10 ತಿಂಗಳ ಪ್ರಯಾಣ. ನಾನು‌ ಪ್ರತಿ ಘಳಿಗೆಯನ್ನು ಆನಂದಿಸಿದೆ. ಸೆಟ್‌ನಲ್ಲಿ ಅದ್ಭುತ ತಂಡ ಮತ್ತು ಸುಂದರ ತಾರೆಯನ್ನು ಒಳಗೊಂಡಿತ್ತು. ಧನ್ಯವಾದಗಳು ಧನು ಸರ್. ನನ್ನನ್ನು ಚೆನ್ನಾಗಿ ಹೋಸ್ಟ್ ಮಾಡಿದ್ದಕ್ಕಾಗಿ ಧನ್ಯವಾದಗಳು, ವಿಜಯ್ ಮತ್ತು ಇಡೀ ತಂಡಕ್ಕೆ ಧನ್ಯವಾದʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kiccha Sudeep: ಕಿಚ್ಚ ಸುದೀಪ್ ಸಿನಿಮಾಗೆ ‘ಜೈಲರ್’ ಸ್ಟಂಟ್ ಮಾಸ್ಟರ್ ಎಂಟ್ರಿ!

ಇದಕ್ಕೂ ಕೆಲವು ದಿನಗಳ ಹಿಂದೆ ಟ್ರೈಲರ್ ರಫ್ ಕಟ್ ಆಗಿರುವ ಬಗ್ಗೆ ಸುದೀಪ್ ಮಾಹಿತಿ ಹಂಚಿಕೊಂಡಿದ್ದರು. ಸುದೀಪ್‌ ಎಕ್ಸ್‌ನಲ್ಲಿ ʻʻಮ್ಯಾಕ್ಸ್ (Max) ಕ್ಲೈಮ್ಯಾಕ್ಸ್‌ನ ಪ್ರಮುಖ ಭಾಗ ಪೂರ್ಣಗೊಳಿಸಲಾಗಿದೆ. ಇಲ್ಲಿಯವರೆಗೆ ಚಿತ್ರೀಕರಿಸಿದ ಅಷ್ಟೂ ಶಾಟ್‌ಗಳನ್ನು ನೋಡಿದೆ. ಚಿತ್ರದ ಪ್ರತಿ ಬಿಟ್ ನೋಡಿ, ತಂಡದ ಎಫರ್ಟ್‌ ಕಂಡು ಸಂತೋಷವಾಗಿದೆ. ಸ್ವಲ್ಪ ಭಾಗ ಚಿತ್ರೀಕರಣ ಬಾಕಿ ಇದೆ. ಟ್ರೈಲರ್ ವೇಳೆ ರಫ್ ಕಟ್ ಸಹ ನೋಡಿದೆ ಮತ್ತು ಅದು ನನ್ನನ್ನು ರೋಮಾಂಚನಗೊಳಿಸಿತುʼʼಎಂದು ಬರೆದುಕೊಂಡಿದ್ದರು.

ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಪೊಲೀಸ್‌ ಪಾತ್ರದಲ್ಲಿ ಮಿಂಚಲಿದ್ದಾರೆ. ಪಾತ್ರದ ಹೆಸರು ವಿಭಿನ್ನವಾಗಿಯೇ ಇದೆ. ʻಅರ್ಜುನ್ ಮಹಾಕ್ಷಯ್ʼ ಹೆಸರಿನ ಸುದೀಪ್ ಪಾತ್ರ ಸ್ಪೆಷಲ್ ಆಗಿಯೇ ಇರಲಿದೆ ಎಂದು ವರದಿಯಾಗಿದೆ. ʻಮ್ಯಾಕ್ಸ್ʼ ಸಿನಿಮಾದಲ್ಲಿ ಸುದೀಪ್ ಭರ್ಜರಿ ಸಾಹಸಗಳನ್ನ ಮಾಡಿದ್ದಾರೆ. ಸಾಹಸ ನಿರ್ದೇಶಕ ಚೇತನ್ ಡಿಸೋಜಾ ಈ ಸಾಹಗಳನ್ನ ಕಂಪೋಸ್ ಮಾಡಿದ್ದಾರೆ. ವಿಶೇಷವಾಗಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಭರ್ಜರಿ ಆ್ಯಕ್ಷನ್‌ಗಳೇ ಇವೆ ಎನ್ನಲಾಗಿದೆ.

ʻಮ್ಯಾಕ್ಸ್ʼ ಸಿನಿಮಾಕ್ಕೆ ಕನ್ನಡದ ತಾರೆಯರು ಇದ್ದಾರೆ. ಕನ್ನಡದ ಟೆಕ್ನಿಷನ್‌ಗಳೂ ಇದ್ದಾರೆ. ಹಾಗೆ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಶೇಖರ್ ಚಂದ್ರ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ ಕೂಡ ಈ ಸಿನಿಮಾದಲ್ಲಿ ಇದ್ದಾರೆ.

ವರಲಕ್ಷ್ಮಿ ಶರತ್ ಕುಮಾರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ವಿಜಯ್ ಕಾರ್ತಿಕೇಯ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಜೊತೆ ಸೇರಿ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

Continue Reading
Advertisement
Chandu Champion Injured Kartik Aaryan looks intense
ಸಿನಿಮಾ1 min ago

Chandu Champion: ಗುರುತೇ ಸಿಗದಂತೆ ಬದಲಾದ ಈ ಸ್ಟಾರ್‌ ನಟ ಯಾರು? ಪೋಸ್ಟರ್​ ವೈರಲ್​!

Money Guide
ಮನಿ-ಗೈಡ್10 mins ago

Money Guide: ಎನ್‌ಪಿಎಸ್‌ಗೆ 15 ವರ್ಷ; ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ

Hoarding Collapse
ದೇಶ16 mins ago

Hoarding Collapse: 16 ಜನರ ಸಾವಿಗೆ ಕಾರಣವಾದ ಯಮಸ್ವರೂಪಿ ಹೋರ್ಡಿಂಗ್‌ ಕುಸಿತದ ವಿಡಿಯೊ ಇಲ್ಲಿದೆ!

Covaxin
ದೇಶ22 mins ago

Covaxin: ಕೋವಾಕ್ಸಿನ್‌ ಲಸಿಕೆ ಪಡೆದವರಿಗೂ ಬಿಗ್‌ ಶಾಕ್‌! ಆಘಾತಕಾರಿ ವರದಿ ಔಟ್‌

T20 World Cup 2024
ಕ್ರೀಡೆ47 mins ago

T20 World Cup 2024: ಟಿ20 ವಿಶ್ವಕಪ್​ನಲ್ಲಿ ‘ನಂದಿನಿ’ ಲಾಂಛನ; ಹರ್ಷ ವ್ಯಕ್ತಪಡಿಸಿದ ಸಿದ್ದರಾಮಯ್ಯ

pm narendra modi yogi adityanath
ಪ್ರಮುಖ ಸುದ್ದಿ1 hour ago

PM Narendra Modi: ʼಗೂಂಡಾರಾಜ್‌ʼ ನೆನಪಿಸಿದ ಮೋದಿ, ಉ.ಪ್ರದಲ್ಲಿ ʼಯೋಗಿ ಸ್ವಚ್ಛತಾ ಅಭಿಯಾನʼಕ್ಕೆ ಮೆಚ್ಚುಗೆ

Viral video
ವೈರಲ್ ನ್ಯೂಸ್1 hour ago

Viral Video: ಪನೀರ್‌ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌.. ಜೊಮ್ಯಾಟೊದಿಂದ ಮತ್ತೊಂದು ಎಡವಟ್ಟು

Head Coach
ಕ್ರೀಡೆ1 hour ago

Head Coach: ದ್ರಾವಿಡ್ ಬಳಿಕ ಕೋಚ್ ಹುದ್ದೆ ನಿರಾಕರಿಸಿದ ಟೀಮ್​ ಇಂಡಿಯಾದ ಸ್ಟಾರ್​ ಮಾಜಿ ಆಟಗಾರ

Drowned in water
ಹಾಸನ2 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

HD DeveGowda Wont celebrate 92nd birthday
ರಾಜಕೀಯ2 hours ago

HD Devegowda: 92ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಎಂದ ಎಚ್‌ಡಿ ದೇವೇಗೌಡ; ಮೊಮ್ಮಗನ ಕೇಸ್‌ನಿಂದ ಈ ತೀರ್ಮಾನ?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ3 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌